ವಿಜಯಪುರ, ಏಪ್ರಿಲ್ 09: ಜಿಲ್ಲೆಯ ಇಂಡಿ (Indi) ನಗರದ ರೈತ ಮಹಿಳೆ ರಾಜಶ್ರೀ ಅನಂತ ಜೈನ್ ಅವರು ತಮ್ಮ ಜಮೀನಿನಲ್ಲಿ ವಿಶ್ವದ ಅತ್ಯಂತ ಬೆಲೆಬಾಳುವ ‘ಮಿಯಾಝಕಿ’ ಮಾವು ಬೆಳೆದು ಕೃಷಿ ಲೋಕದ ಗಮನ ಸೆಳೆದಿದ್ದಾರೆ. ವಿದೇಶದಲ್ಲಿ ಕೆ.ಜಿಗೆ ಸುಮಾರು 2.5 ಲಕ್ಷ ರೂ. ಬೆಲೆಬಾಳುವ ಈ ಹಣ್ಣು ಸದ್ಯ ಇವರ ತೋಟದಲ್ಲಿ ಕೆಜಿಗೆ 1 ಲಕ್ಷ ರೂ.ನಂತೆ ಮಾರಾಟವಾಗುತ್ತಿದೆ. ಅಂಧ್ರದ ರಾಜಮಂಡ್ರಿಯಿಂದ ಹತ್ತು ಸಾವಿರ ರೂ.ಗೆ ಒಂದರಂತೆ ಒಟ್ಟು 25 ಮಿಯಾಝ ಸಸಿ ತಂದು ನೆಟ್ಟಿದ್ದಾರೆ. ಈಗ ಒಂದು ಗಿಡ 25 ರಿಂದ 30 ಹಣ್ಣು ನೀಡುತ್ತಿವೆ. ಮೂರು ಅಥವಾ ನಾಲ್ಕು ಹಣ್ಣು ಸೇರಿ ಒಂದು ಕೆ.ಜಿ ಆಗುತ್ತಿದೆ. ವಿದೇಶದಲ್ಲಿ ಒಂದು ಕೆ.ಜಿಗೆ ಎರಡೂದರೆ ಲಕ್ಷ ರೂ. ಇದೆ. ಸದ್ಯ ಒಂದು ಲಕ್ಷ ರೂ.ಗೆ ಒಂದು ಕೆ.ಜಿ ಹಣ್ಣು ಮಾರಾಟ ಮಾಡುತ್ತಿದ್ದಾರೆ. ಮುಂಬಯಿ, ಕೊಲ್ಕಾತ್ತಾ ಸೇರಿದಂತೆ ಹಲವಾರು ಕಡೆಗಳಿಂದ ದಲ್ಲಾಳಿಗಳು ಬಂದು ಖರೀದಿಸುತ್ತಿದ್ದಾರೆ. ಈ ಮಾವು ನಾಲ್ಕು ವರ್ಷಕ್ಕೆ ಫಸಲು ಕೊಡಲು ಆರಂಭಿಸುತ್ತದೆ. ರಾಜಶ್ರೀ ಅವರು 2 ವರ್ಷದ ಸಸಿ (ಅಗಿ) ತಂದು ಹಚ್ಚಿದ್ದರು. ಈಗ ಎರಡುವರ್ಷದ ಬಳಿಕ ಫಸಲು ನೀಡುತ್ತಿವೆ. ದೇಶ-ವಿದೇಶಿ ತಳಿಗಳ ಹಣ್ಣು 20 ವರ್ಷಗಳ ಹಿಂದೆ ಖರೀದಿಸಿದ್ದ 10 ಎಕರೆ ಬಂಜರು ಜಮೀನನ್ನು ರಾಜಶ್ರೀ ಅವರು ಇಂದು ನಂದನವನವನ್ನಾಗಿ ಮಾಡಿದ್ದಾರೆ. ಕೇವಲ ಮಿಯಾಝಕಿ ಮಾತ್ರವಲ್ಲದೆ, ಇವರ ತೋಟದಲ್ಲಿ ಹಲವು ವೈವಿಧ್ಯಮಯ ಮಾವು ತಳಿಗಳಿವೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಕಳೆದ 3 ವರ್ಷಗಳಲ್ಲಿ ಸರ್ಕಾರಿ ಶಾಲೆಯನ್ನು ತೊರೆದ 7 ಲಕ್ಷ ವಿದ್ಯಾರ್ಥಿಗಳು ಮಾನವ ಕಳ್ಳಸಾಗಣೆಯಲ್ಲಿ ತೊಡಗಿದ್ದ ಬೆಂಗಳೂರಿನಲ್ಲಿ ವಾಸವಿದ್ದ 4 ಬಾಂಗ್ಲಾದೇಶಿಯರು ದೋಷಿಗಳು: NIA ಕೋರ್ಟ್