Veer Savarkar Episode 3: Madan Lal Dingra killed Curzon Wyllie inspired by Veer Savarkarವೀರ ಸಾವರ್ಕರ್‌, ಮದನ್‌ ಲಾಲ ದಿಂಗ್ರಾ

ಸಾವರ್ಕರ್‌ ಅವರ ಯೋಚನೆ ಸರಿ ಇತ್ತು. ಹೇಗೆ ಬ್ರಿಟಿಷರು ಭಾರತಕ್ಕೆ ಬಂದು ಆಳ್ವಿಕೆ ನಡೆಸಿದರೋ ಹಾಗೆಯೇ ಭಾರತಕ್ಕೆ ಸ್ವಾತಂತ್ರ್ಯ ಪಡೆಯಲು ಸಾವರ್ಕರ್‌ ಅವರು ಲಂಡನ್‌ನಲ್ಲಿ ಕುಳಿತು ಕ್ರಾಂತಿಕಾರ್ಯ ಪ್ರಾರಂಭಿಸಿದರು. ಅದರಂತೆ ಲಂಡನ್‌ನ ಭಾರತ್‌ ಭವನದಲ್ಲಿ ಸಾವರ್ಕರ್‌ ಅವರು ಭಾರತೀಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಲಾರಂಭಿಸಿದರು.

ಇದರಿಂದ ಹಲವಾರು ಭಾರತೀಯ ವಿದ್ಯಾರ್ಥಿಗಳು ಪ್ರೇರಣೆಗೊಂಡರು. ಅದರಲ್ಲಿ ಮುಖ್ಯವಾಗಿ ಪ್ರೇರಣೆಗೊಂಡವರು “ಮದನ್‌ ಲಾಲ್‌ ದಿಂಗ್ರಾ”. ಮದನ್‌ ಲಾಲ್‌ ದಿಂಗ್ರಾ ಪಂಜಾಬ್‌ ಮೂಲದ ಆಗರ್ಭ ಶ್ರೀಮಂತ ಕುಟುಂಬಕ್ಕೆ ಸೇರಿದವರಾಗಿದ್ದರು. ಇವರು ಸಾವರ್ಕರ್‌ ಅವರ ಸಂಪರ್ಕಕ್ಕೆ ಬಂದು ಬ್ರಿಟಿಷರಿಂದ ತಾಯಿ ಭಾರತಾಂಬೆಯ ಮುಕ್ತಿಗಾಗಿ ಕೆಲಸ ಮಾಡಲಾರಂಭಿಸಿದರು.

ಅದರ ಭಾಗವಾಗಿ ಭಾರತೀಯ ಕ್ರಾಂತಿಕಾರಿಗಳನ್ನು ಕಾಲಾಪಾನಿ ಜೈಲಿಗೆ ಕಳುಹಿಸಿದ ಕರ್ಜನ್‌ ವೈಲಿಯ ಹತ್ಯೆಯ ಯೋಜನೆ ರೂಪಗೊಳ್ಳುತ್ತದೆ. ಲಂಡನ್‌ಗೆ ಬಂದಿದ್ದ ಕರ್ಜನ್‌ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುತ್ತಿದ್ದಾನೆ ಎಂಬ ಸೂಚನೆ ಮದನ್‌ ಲಾಲ್‌ ದಿಂಗ್ರಾರಿಗೆ ದೊರೆತಿತ್ತು.

ಇದೇ ಸಮಯಕ್ಕೆ ಕಾಯುತ್ತಿದ್ದ ಮದನ್‌ ಲಾಲ್‌ ದಿಂಗ್ರಾ ಕರ್ಜನ್‌ ವೈಲಿಯನ್ನು ಹತ್ಯೆ ಮಾಡಲು ಒಂದು ಪಿಸ್ತೂಲ್‌ ಅನ್ನು ಖರೀದಿಸಿ ತರಬೇತಿ ಪಡೆದರು. ಕೊನೆಗೂ ಕರ್ಜನ್‌ ವೈಲಿಯನ್ನು ಹತ್ಯೆ ಮಾಡುವ ಶುಭಗಳಿಗೆ ಬಂದೇ ಬಿಡ್ತು. ಪೂರ್ವ ನಿರ್ಧಾರದಂತೆ ಕರ್ಜನ್‌ ವೈಲಿ ಭಾಗಿಯಾಗಿದ್ದ ಕಾರ್ಯಕ್ರಮಕ್ಕೆ ಮದನ್‌ ಲಾಲ್‌ ದಿಂಗ್ರಾ ಕೂಡ ತೆರಳಿದ್ದರು.

ಕಾರ್ಯಕ್ರಮದಲ್ಲಿ ಮದನ್‌ ಲಾಲ್‌ ದಿಂಗ್ರಾರನ್ನು ಕಂಡ ಕರ್ಜನ್‌ ವೈಲಿ, ಈ ಹುಡುಗನನ್ನು ಬಳಸಿಕೊಂಡು ಭಾರತ ಭವನದಲ್ಲಿ ನಡೆಯುವ ವಿಷಯಗಳನ್ನು ತಿಳಿಯಬೇಕೆಂದು ಯೋಚಿಸಿದ್ದನು. ಅಷ್ಟರಲ್ಲಿ ಮದನ್‌ ಲಾಲ್‌ ದಿಂಗ್ರಾ ಕರ್ಜನ್‌ನ ಬಳಿ  ತೆರಳಿ, ನಿಮಗೆ ಒಂದು ರಹಸ್ಯ ತಿಳಿಸಬೇಕೆಂದು ಮಾತಿಗೆ ಎಳೆದವರಂತೆ ಮಾಡಿ, ಜೇಬಿನಿಂದ ಪಿಸ್ತೂಲ್‌ ತೆಗೆದು ಕರ್ಜನ್‌ ವೈಲಿ ಮೇಲೆ ಗುಂಡು ಹಾರಿ ರಾಕ್ಷಸ ಸಂಹಾರ ಮಾಡಿದರು.

ಒಂದು ಕ್ಷಣ ಕಾರ್ಯಕ್ರಮದಲ್ಲಿ ನೆರೆದಿದ್ದ ಜನ ಆವಕ್ಕಾಗಿದ್ದರು. ಆದರೆ, ಮದನ್‌ ಲಾಲ್‌ ದಿಂಗ್ರಾ ಶಾಂತವಾಗಿಯೇ ಇದ್ದರು. ಅಲ್ಲೇ ಇದ್ದ ಪೊಲೀಸರು ಮದನ್‌ ಲಾಲ್‌ ದಿಂಗ್ರಾರನ್ನು ಬಂಧಿಸಿ ಜೈಲಿಗಟ್ಟಿದರು.

ಜೈಲಿನಲ್ಲಿಂದ ಮದನ್‌ ಲಾಲ್‌ ದಿಂಗ್ರಾರನ್ನು ಸಾವರ್ಕರ್‌ ಅವರು ಭೇಟಿಯಾಗಿ ಮುಂದಿನ ಹೋರಾಟದ ರೂಪುರೇಷೆ ತಿಳಿಸಿ, ಧೈರ್ಯತುಂಬಿದರು. ಆದರೆ, ಈ ಹತ್ಯೆಯಿಂದ ಅವಮಾನಿತರಾಗಿದ್ದ ಬ್ರಿಟಿಷರು ಯಾವುದೇ ಕಾನೂನು ಕ್ರಮವನ್ನು ನ್ಯಾಯಿಯುತವಾಗಿ ನಡೆಸದೇ ಏಕಾಏಕಿ ಮದನ್‌ ಲಾಲ್‌ ದಿಂಗ್ರಾರನ್ನು ನೇಣಿಗೇರಿಸಿದರು.

ಹಿಂದಿನ ಸಂಚಿಕೆ: ವೀರ ಸಾವರ್ಕರ್‌ ಸ್ಮರಣ ಸಂಚಿಕೆ 2: ಸ್ವಾತಂತ್ರ್ಯ ಹೋರಾಟದ ಸಪ್ತಪದಿ ತುಳಿದ ದಂಪತಿ, ಲಂಡನ್‌ಗೆ ಜಿಗಿದ ಸಿಂಹ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *