Lance Naik Meenatchi Sundaram A was awarded Kirti Chakra for his indomitable spirit and exceptional braveryಲ್ಯಾನ್ಸ್ ನಾಯಕ್ ಮೀನಾಕ್ಷಿ ಸುಂದರಂ ಎ

ಅದು 2024ರ ಡಿಸೆಂಬರ್‌ ತಿಂಗಳು, ಕಾಶ್ಮೀರದಲ್ಲಿ ಮೈಕೊರೆಯುವ ಚಳಿ. ಹಿಮ ಬೀಳುತ್ತಿರುತ್ತದೆ. ಬೇರೆ ಋತುಗಳಲ್ಲೇ ಮೈನಸ್‌ಗೆ ಹೋಗುವ ತಾಪಮಾನ, ಇನ್ನು ಚಳಿಗಾಲದಲ್ಲಿ ಕೇಳಬೇಕೆ, ರಕ್ತ ಹೆಪ್ಪುಗಟ್ಟುತ್ತದೆ. ಇಂತಹ ಚಳಿಯಲ್ಲಿ, ಮುಖದಿಂದ ರಕ್ತ ಸುರಿಯುತ್ತಿದ್ದರೂ, ಉಸಿರು ಕಟ್ಟುತ್ತಿದ್ದರೂ ಪರಾಕ್ರಮ ಮೆರೆದ ಲ್ಯಾನ್ಸ್ ನಾಯಕ್ ಮೀನಾಕ್ಷಿ ಸುಂದರಂ ಎ ಅವರ ಸಾಹಸಗಾಥೆ.  

ಕಾಶ್ಮೀರದ ಕುಲ್ಗಾಂನಲ್ಲಿ ಕತ್ತಲ ರಾತ್ರಿಯಲ್ಲಿ ಸಾವಿಗೆ ಎದುರಾಗಿ ನಿಂತವರು ನಮ್ಮ ಲ್ಯಾನ್ಸ್ ನಾಯಕ್ ಮೀನಾಕ್ಷಿ ಸುಂದರಂ. 2024 ಡಿಸೆಂಬರ್ 19, ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರು ಅಡಗಿ ಕೂತಿರುವ ಪಕ್ಕಾ ಇನ್ಫಾರ್ಮೇಶನ್ ಪಡೆದ ನಮ್ಮ 34ನೇ ರಾಷ್ಟ್ರೀಯ ರೈಫಲ್ಸ್ (ಕುಲ್ಗಮ್‌ನ ಕಾವಲುಗಾರರು ಎಂದು ಕರೆಯಲ್ಪಡುವ 34 ರಾಷ್ಟ್ರೀಯ ರೈಫಲ್ಸ್ (34 RR) ಭಾರತೀಯ ಭಯೋತ್ಪಾದನಾ ನಿಗ್ರಹ ಬೆಟಾಲಿಯನ್ ಆಗಿದೆ.) ಯೋಧರು ಆ ಜಾಗವನ್ನು ರೌಂಡಪ್ ಮಾಡಿದರು.

ಆ ಕಿರಿದಾದ ಜಾಗದಲ್ಲಿ ಉಗ್ರರು ಎಲ್ಲಿ ಅಡಗಿ ಕೂತಿದ್ದಾರೆ, ಗುಂಡು ಎಲ್ಲಿಂದ ಬರುತ್ತೆ ಅಂತ ಗೆಸ್ ಮಾಡೋದು ತುಂಬಾ ಕಷ್ಟ. ಆದರೂ ನಮ್ಮ ವೀರರು ಜೀವದ ಆಸೆ ಬಿಟ್ಟು ನುಗ್ಗೇ ಬಿಟ್ರು. ಅದೇ ಗ್ಯಾಪಲ್ಲಿ ಆ ಕ್ಲೋಸ್ ಕ್ವಾರ್ಟರ್ ಬ್ಯಾಟಲ್, ಅಂದ್ರೆ ಬರೀ ಐದತ್ತು ಅಡಿ ದೂರದಿಂದ ಫೇಸ್ ಟು ಫೇಸ್ ಫೈರಿಂಗ್‌ ಶುರುವಾಯ್ತು.

ಆಗಲೇ, ಕತ್ತಲನ್ನು ಸೀಳಿಕೊಂಡು ಬಂದ ಒಂದು ಗುಂಡು ನೇರವಾಗಿ ಸುಂದರಂ ಅವರ ಮುಖಕ್ಕೆ ನುಗ್ಗಿತು. ಇನ್ನೊಂದು ಗುಂಡು ಬಲ ಭುಜವನ್ನು ಸೀಳಿಕೊಂಡು ಹೋಯ್ತು. ನೀವೇ ಒಂದ್ಸಲ ಯೋಚನೆ ಮಾಡಿ, ಮುಖಕ್ಕೆ ಗುಂಡು ಬಿದ್ದಾಗ ಏನಾಗುತ್ತೆ ಗೊತ್ತಾ? ಗನ್ ಪೌಡರ್ ನ ಆ ಬಿಸಿ, ಮುಖದಿಂದ ಚಿಮ್ಮೋ ರಕ್ತ, ಕಿವಿ ಒಡೆದು ಹೋಗುವಷ್ಟು ಕೇಳೋ ಆ ಗುಂಡಿನ ಸೌಂಡು ಮೆದುಳನ್ನೇ ಒಂದ್ ಸೆಕೆಂಡ್ ಬ್ಲ್ಯಾಕ್ ಔಟ್ ಮಾಡಿಬಿಡುತ್ತೆ.

ಮೆಡಿಕಲ್ ಸೈನ್ಸ್ ಪ್ರಕಾರ ಎಂಥಾ ಗಟ್ಟಿಮುಟ್ಟಾದವನಾದ್ರೂ ಆ ಶಾಕ್‌ಗೆ ಅಲ್ಲೇ ಕುಸಿದು ಬೀಳಬೇಕು, ಪ್ರಜ್ಞೆ ತಪ್ಪಬೇಕು. ಆದರೆ, ಸುಂದರಂ ಕೆಳಗೆ ಬಿದ್ದರೂ, ಅವರ ಒಳಗಿದ್ದ ಯೋಧನಿಗೆ ಪ್ರಜ್ಞೆ ಇತ್ತು. ರಕ್ತದ ಮಡುವಿನಲ್ಲೂ ಅವರ ಕಣ್ಣಿಗೆ ಕಾಣಿಸುತ್ತಿದ್ದದ್ದು, ಆ ಉಗ್ರನ ನೆರಳು ಮಾತ್ರ. ಬಲ ಭುಜದಲ್ಲಿ ಶಕ್ತಿ ಹೋಗುತ್ತಿದ್ದರೂ, ಪ್ರಾಣ ಹೋಗೋವಷ್ಟು ನೋವಿದ್ದರು ಆ ಹುಲಿ ಒಂದು ಹೆಜ್ಜೆ ಕೂಡ ಹಿಂದೆ ಇಡಲಿಲ್ಲ.

ಸಾಮಾನ್ಯವಾಗಿ ಇಂಥಾ ಸಮಯದಲ್ಲಿ ಯಾರು ಬೇಕಾದರೂ ಕವರ್ ತಗೊಂಡು ಚಿಕಿತ್ಸೆ ಪಡೆದುಕೊಳ್ಳಲು ಮುಂದಾಗುತ್ತಾರೆ. ಆದರೆ, ಸುಂದರಂ ಮಾಡಿದ್ದೇ ಬೇರೆ. ಮುಖದಿಂದ ರಕ್ತ ದಡ ದಡ ಅಂತ ಸುರಿಯುತ್ತಿದ್ದರೂ, ಉಸಿರಾಡಲು ಕಷ್ಟ ಆಗುತ್ತಿದ್ದರೂ, ಕೈಯಲ್ಲಿದ್ದ ಆ ಭಾರವಾದ ಅಸಾಲ್ಟ್ ರೈಫಲ್‌ ಅನ್ನು ಗಟ್ಟಿಯಾಗಿ ಹಿಡಿದು ಉಗ್ರನ ಕಣ್ಣಲ್ಲಿ ಕಣ್ಣಿಟ್ಟು ನುಗ್ಗೇ ಬಿಟ್ಟ. ತನ್ನ ಉಸಿರು ಆ ಉಗ್ರನಿಗೆ ತಾಗುವಷ್ಟು ಹತ್ತಿರ ಹೋಗಿ ಬೇಟೆಯಾಡಿದರು. ಆ ಹಾರ್ಡ್-ಕೋರ್ ಉಗ್ರನ ಕಥೆ ಮುಗಿಸಿದ ಮೇಲೆಯೇ ಸುಂದರಂ ಆಸ್ಪತ್ರೆ ಕಡೆ ಮುಖ ಮಾಡಿದರು.

ಆ ಟೈಮಲ್ಲಿ ಸುಂದರಂ ಅವರಿಗೆ ತಮ್ಮ ಪ್ರಾಣಕ್ಕಿಂತ ದೇಶ ದೊಡ್ಡದಾಗಿ ಕಂಡಿತ್ತು. ಇದೇ ನೋಡಿ ನಮ್ಮ ಭಾರತೀಯ ಯೋಧರ ಖದರ್, ಅವರ ಮೈಯಲ್ಲಿ ಹರಿಯುವ ರಕ್ತದ ಮುಂದೆ  ಮುಂದೆ ಸಾವೂ ಕೂಡ ತಲೆಬಾಗಬೇಕು. ಇವರ ಈ ಹುಚ್ಚು ಧೈರ್ಯ, ಉಕ್ಕಿನಂತ ಮನಸ್ಸಿಗೆ ಕನ್ನಡಿಯಾಗಿ ಜೂನ್ 8 ರಂದು ರಾಷ್ಟ್ರಪತಿ ಭವನದಲ್ಲಿ ಕೀರ್ತಿ ಚಕ್ರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಂದರಂ ಬರೀ ಒಬ್ಬ ವ್ಯಕ್ತಿಯಲ್ಲ! ಭಾರತೀಯ ಸೇನೆಗೆ ಶಕ್ತಿ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *