“ತಾರಿಣೀಂ ದುರ್ಗಸಂಸಾರ ಸಾಗರಸ್ಯ ಕುಲೋದ್ಭವಾಮ್” ಎಂಬ ಶ್ಲೋಕದ ಅನ್ವರ್ಥ ಯಮುನಾಬಾಯಿ. ಸಾವರ್ಕರ್ ಅವರು ರಚಿಸಿದ ದೇಶಭಕ್ತಿ ಗೀತೆಗಳನ್ನು ಸಮಾಜಕ್ಕೆ ತಲುಪಿಸಿದ ಹಾಗೂ ಬ್ರಿಟಿಷ್ ವಿರೋಧಿ ಲೇಖನಗಳನ್ನು ಪ್ರಚಾರ ಪಡಿಸುವ ಕಾರ್ಯವನ್ನು ಯಮುನಾಬಾಯಿ ಅವರು “ಆತ್ಮನಿಷ್ಠ ಯುವತಿ” ಸಮಾಜದ ಸದಸ್ಯರೊಟ್ಟಿಗೆ ಮಾಡುತ್ತಿದ್ದರು. ಈ ಕಾಲಘಟ್ಟದಲ್ಲಿ ಭಾರತದ ಹಲವಾರು ಕಡೆಗಳಲ್ಲಿ ದೇಶಭಕ್ತಿಯ ಜ್ವಾಲೆ ವ್ಯಾಪಿಸತೊಡಗಿತು. ಬ್ರಿಟಿಷ್ ವಿರೋಧಿ ಬರಹಗಳು, ಸ್ವಾತಂತ್ರ್ಯ ಪಡೆಯಬೇಕೆಂಬ ಕೂಗು ಹೆಚ್ಚಾಯಿತು. ಸ್ವದೇಶಿ ಆಂದೋಲನ ಅದರ ಮಹತ್ವವನ್ನು ಸಾವರ್ಕರ್ ದಂಪತಿಗಳು ಹೆಚ್ಚು ಪ್ರಚಾತ ಮಾಡಬಯಸಿದರು. ಅದಾಗಲೇ ಕ್ರಿ.ಶ 1901 ರ ಡಿಸೆಂಬರ್ 19 ರಂದು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಾವರ್ಕರ್ ಮುಂದೆ 1902 ಜನವರಿ 24 ರಂದು ಪುಣೆಯ ಫರ್ಗುಸನ್ ಕಾಲೇಜಿಗೆ ಸೇರ್ಪಡೆಯಾದರು. ಇದೇ ವೇಳೆಗೆ “ಅಭಾ ಪಾಗಂಳೆ” ಎಂಬ ಯುವಕ ಸಾವರ್ಕರ್ ಅವರ ಸಂಪರ್ಕಕ್ಕೆ ಬರುತ್ತಾರೆ. ಉಡಾಫೆ ಹಾಗೂ ಆಲಸ್ಯದಿಂದ ಕೂಡಿದ್ದ ವ್ಯಕ್ತಿ ಅಭಾ ಪಾಂಗಳೆ, ಸಾವರ್ಕರ ಅವರ ದೇಶಭಕ್ತಿ ಹಾಗೂ ಸ್ವಾತಂತ್ರ್ಯದ ತುಡಿತದಿಂದಾಗಿ ಸ್ವಾತಂತ್ರ್ಯ ಆಂದೋಲನಕ್ಕೆ ದುಮುಕುತ್ತಾರೆ. ಮುಂದೆ ಅಭಾ ಪಾಗಂಳೆ ಸ್ವಾತಂತ್ರ್ಯ ಹೋರಾಟದ ಗೀತೆಗಳನ್ನು ರಚಿಸಿ ಹಲವಾರು ಸಾಮೂಹಿಕ ಕಾರ್ಯಕ್ರಮ, ಸಾರ್ವಜನಿಕ ಪ್ರದೇಶಗಳಲ್ಲಿ, ಗಣೇಶೋತ್ಸವಗಳಲ್ಲಿ ಗೀತೆಗಳನ್ನು ಹಾಡಲು ಆರಂಭಿಸುತ್ತಾರೆ. ಇವರ ಗಾಯನ ಮತ್ತು ಸಾಹಿತ್ಯಕ್ಕೆ ಮಾರೂಹೋದ ಜನರು ಇವರಿಗೆ “ಮಹಾರಾಷ್ಟ್ರದ ಸ್ವಾತಂತ್ರ್ಯ ಕವಿ” ಎಂಬ ಬಿರುದು ನೀಡುತ್ತಾರೆ. 1906ರ ವೇಳೆಗೆ ಸಾವರ್ಕರ ಅವರಲ್ಲಿನ ಸ್ವಾತಂತ್ರ್ಯದ ತುಡಿತ ಅರಿತ ಲೋಕಮಾನ್ಯ ಬಾಲಗಂಗಾಧರ ತಿಲಕರು ತಮ್ಮ ಶಿಫಾರಸ್ಸು ಪತ್ರದೊಂದಿಗೆ ಸಾವರ್ಕರ ಅವರನ್ನು ಲಂಡನ್‌ಗೆ ಕಳುಹಿಸುತ್ತಾರೆ. ವಾರ್ಷಿಕ 400 ರೂ. ವೇತನದೊಂದಿಗೆ ಸಾವರ್ಕರ್ ಅವರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಲಂಡನ್‌ನಲ್ಲಿ ಭಾರತದ ಸ್ವಾತಂತ್ರ್ಯ ಆಂದಲೋನಕ್ಕೆ ರೂಪು ರೇಷೆ ತಯಾರಿಸಿ ಲಂಡನ್‌ನಲ್ಲಿದ್ದ ಭಾರತದ ಕ್ರಾಂತಿಕಾರಿ ಶ್ಯಾಮ ಜಿ ಕೃಷ್ಣವರ್ಮರನ್ನು ಭೇಟಿಯಾಗುತ್ತಾರೆ. ಅವರ ನೆರವಿನೊಂದಿಗೆ ಸಾವರ್ಕರ್ ಅವರು ಇಂಡಿಯಾ ಹೌಸ್‌ನಲ್ಲಿ ವಾಸ್ತವ್ಯ ಹೂಡಿ ಕೀರ್ತಿಕರ ಇನ್‌ಸ್ಟಿಟ್ಯೂಟ್‌ನಲ್ಲಿ ಕಾನೂನು ಕೋರ್ಸ್‌ಗೆ ಪ್ರವೇಶ ಪಡೆಯುತ್ತಾರೆ. ಲಂಡನ್‌ನಲ್ಲಿ ಹಲವಾರು ಕ್ರಾಂತಿಕಾರಿಗಳನ್ನು ಭೇಟಿಯಾದ ಸಾವರ್ಕರ್, ಲಂಡನ್‌ನಲ್ಲಿದ್ದ ಭಾರತೀಯ ವಿದ್ಯಾರ್ಥಿಗಳನ್ನು ಒಟ್ಟುಗೂಡಿಸಿ ಅವರಲ್ಲಿ ದೇಶಭಕ್ತಿಯ ಜ್ವಾಲೆಯನ್ನು ಜಾಗೃತಗೊಳಿಸಿ ಎಲ್ಲಾ ಕ್ರಾಂತಿಕಾರಿಗಳ ಸಹಯೋಗದಲ್ಲಿ “ಫ್ರೀ ಇಂಡಿಯಾ ಸೊಸೈಟಿ” ಎಂಬ ಗುಂಪನ್ನು ಆರಂಭಿಸಿದರು. ಲಂಡನ್‌ನಲ್ಲಿ ಯಾವೆಲ್ಲ ಕ್ರಾಂತಿಕಾರ್ಯ ಮಾಡಿದರು ಮುಂದಿನ ಸಂಚಿಕೆಯಲ್ಲಿ…. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ವನವಾಸಕಾಲದಲ್ಲಿ ಶ್ರೀರಾಮನಿಗೆ ಮಾರ್ಗದರ್ಶಕರಾಗಿದ್ದ ಸುತೀಕ್ಷ ಮಹರ್ಷಿಗಳು ಸಮುದ್ರವನ್ನೇ ಬಂಜರು ಮಾಡಿದ್ದ ಉತಥ್ಯ ಮಹರ್ಷಿ