Vande Matram 150: Vande Mataram history and significanceವಂದೇ ಮಾತರಂ 150


ಹಿಂದೆ ಪರಕೀಯರ ದಾಸ್ಯಕ್ಕೆ ಸೋತು ಸುಣ್ಣವಾಗಿ, ಸ್ವಾತಂತ್ರಕ್ಕಾಗಿ ಹಗಲಿರುಳು ಹಪಹಪಿಸಿತ್ತಿದ್ದ ಸ್ವದೇಶಿ ಮನಸ್ಸಿನ ಹೋರಾಟಗಾರರ ಕಂಠಗಳಿಗೆ ಅಕ್ಷರಶಃ ಧ್ವನಿಯಾಗಿ ಎಲ್ಲರನ್ನು ಒಗ್ಗೂಡಿಸಿ, ಹೋರಾಟಕ್ಕೆ ಶಕ್ತಿ ತುಂಬಿದ್ದು “ವಂದೇ ಮಾತರಂ” (Vande Matram) ಎನ್ನುವ ಆ ಒಂದು ಘೋಷಣೆ. 1875 ರಲ್ಲಿ ಬಂಕಿಮಚಂದ್ರ ಚಟರ್ಜಿ (Bankimchandra chatterjee) ಅವರಿಂದ ರಚನೆಯಾಗಿ ಬಂಗಾಳದಿಂದ ಮೊಳಗಿದ್ದ ವಂದೇ ಮಾತರಂ ದೇಶವ್ಯಾಪಿ ವ್ಯಾಪಿಸಿ, ಕಿಚ್ಚು ಹೊತ್ತಿಸಿ, ಹೋರಾಟಗಾರರಿಗೆ ರಾಷ್ಟ್ರೀಯ ಸಂಕೇತವಾಗಿತ್ತು.

ಮುಂದೆ 1937ರಲ್ಲಿ ರಾಷ್ಟೀಯ ಕಾಂಗ್ರೆಸ್ ಇದನ್ನು ರಾಷ್ಟೀಯ ಗೀತೆಯಾಗಿ ಅಳವಡಿಸಿ ಕೊಂಡಿತು, ಆದರೆ ಅನ್ಯ ಮತೀಯರ ಓಲೈಕೆಗಾಗಿ 6 ಚರಣಗಳ ಗೀತೆಯನ್ನು 4 ಚರಣಗಳನ್ನು ಕಡಿತ ಮಾಡಿ ಕೇವಲ 2 ಚರಣಗಳಿಗೆ ಮೀಸಲಿರಿಸಿತ್ತು, ಮುಂದೆ ದೇಶವು ಮತಗಳ ಆಧಾರದಲ್ಲಿ ವಿಭಜನೆಯೊಂದಿಗೆ ಸ್ವತಂತ್ರಗೊಂಡರು ಪೂರ್ಣ ವಂದೇ ಮಾತರಂ ಗೀತೆ ಕನಸಾಗಿಯೇ ಉಳಿದಿತ್ತು.

ಈಗ ಈ ಸ್ಫೂರ್ತಿ ಗೀತೆಗೆ ನೂರೈವತ್ತರ ಸಂಭ್ರಮ, ಹೀಗಾಗಿ ರಾಷ್ಟ್ರೀಯ ವಿಚಾರಗಳನ್ನು ಮೈಗೂಡಿಸಿಕೊಂಡಿರುವ ಸರ್ಕಾರವು ಗೌರವ ಸೂಚಕವಾಗಿ ರಾಷ್ಟ್ರೀಯ ಗೀತೆಗೆ ಮಾರ್ಗಸೂಚಿಯನ್ನು ರೂಪಿಸಿದೆ, ಇದೊಂದು ಚಾರಿತ್ರಾರ್ಹ ನಿರ್ಧಾರ ಎಂದು ಜಾಲತಾಣ ಪ್ರಭುದ್ದರ ಅಭಿಪ್ರಾಯವಾಗಿದೆ.

ಕೇಂದ್ರ ಸರ್ಕಾರ ವಂದೇ ಮಾತರಂ ಗೀತೆಗೆ ರಾಷ್ಟ್ರೀಯ ಗೀತೆ ಸ್ಥಾನಮಾನ ನೀಡಿದೆ. ಸರ್ಕಾರಿ ವೇದಿಕೆಗಳಲ್ಲಿ ಹಾಗೂ ಶಾಲೆಗಳಲ್ಲಿ ಹಾಡಬೇಕು ಎಂದು ಕಡ್ಡಾಯಗೊಳಿಸಿದೆ. ಸರ್ಕಾರದ ಮಹತ್ವದ ಘೋಷಣೆಯ ಬೆನ್ನಲ್ಲೇ ಲೋಕಸಭೆಯಲ್ಲಿ ಬಿಸಿ-ಬಿಸಿ ಚರ್ಚೆಗಳು ಏರ್ಪಟ್ಟು, ಆಡಳಿತ ಪಕ್ಷ ಗೀತೆಯ ಪರವಾಗಿ ಮತ್ತು ವಿರೋಧ ಪಕ್ಷಗಳು ಗೀತೆಯ ವಿರುದ್ಧವಾಗಿ ಚರ್ಚೆಯಲ್ಲಿ ಪಾಲ್ಗೊಂಡಿದ್ದವು.

ಗ್ರಹ ಮಂತ್ರಿ ಅಮಿತ್ ಷಾ ಅವರು ‘ವಂದೇ ಮಾತರಂ’ ಸಾಂಸ್ಕೃತಿಕ ರಾಷ್ಟ್ರೀಯತೆಯ ಮೊದಲ ಘೋಷಣೆಯಾಗಿದೆ ಮನ, ನಬನಬಬಬಬಬಬಎಂದು ಜಾಲತಾಣಗಳಲ್ಲಿ ಬರೆದುಕೊಂಡರು. ಆರೆಸ್ಸೆಸ್‌ನ ಹಿರಿಯರಾದ ಸುರೇಶ್ ಭಯ್ಯಾಜಿ ಜೋಶಿ ವಂದೇ ಮಾತರಂ ದೇಶಭಕ್ತಿಯೇ ಹೊರತು ಹಿಂದೂ-ಮುಸ್ಲಿಂ ಸಮಸ್ಯೆಯಲ್ಲ ಎಂದಿದ್ದಾರೆ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ “ರಾಷ್ಟ್ರೀಯ ಗೀತೆ ವಂದೇ ಮಾತರಂ ಅನ್ನು ವಿರೋಧಿಸುವುದು ಮತ್ತು ರಾಷ್ಟ್ರೀಯ ಚಿಹ್ನೆಗಳ ವಿರುದ್ಧ ಅವಮಾನಕರ.

ಶ್ರೀರಾಮ ಸೇನೆಯ ಸಂಸ್ಥಾಪಕರಾದ ಪ್ರಮೋದ್ ಮುತಾಲಿಕ್ – ವಂದೇ ಮಾತರಂ ಹೇಳಲೊಪ್ಪದವರು ದೇಶ ಬಿಟ್ಟು ತೊಲಗಿ ಎಂದು ಹೇಳಿರುವ ವಿಡಿಯೋ ತುಣುಕುಗಳು ಜಾಲತಾಣದಲ್ಲಿ ಬಾರಿ ಸಂಚಲನ ಮೂಡಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಬಹುತೇಕರು ವಂದೇ ಮಾತರಂ ಎಂದು ಕಾಮೆಂಟ್ ಮಾಡಿ ಇವರ ಮ್ಯಾಟೊಗೆ ತಲೆದೂಗಿದ್ದಾರೆ, ಗೀತೆಯ ಲಿರಿಕ್ಸ್ ನ VSK ಫೋಟೋ, ಹೊಸ ದಿಂಗಂತ ಪತ್ರಿಕೆಯ ಪುಟವುದ್ದದ ವರದಿ ಮತ್ತು ನಾ,ನಾಗರಾಜ್ ಅವರ “ಐಕ್ಯತೆಯ ರಣಮಂತ್ರ – ವಂದೇ ಮಾತರಂ” ಎಂಬ ಹಳೆಯ ಲೇಖನ ಜಾಲತಾಣಗಳಲ್ಲಿ ವೈರಲ್ ಆಗಿವೆ.

3 ನಿಮಿಷ 10 ಸೆಕೆಂಡಿನ 6 ಚರಣಗಳನ್ನು ಹೇಳಲು ಮುಸ್ಲಿಂ ಸಮುದಾಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಅದರಲ್ಲಿ ದೇಶವನ್ನು ಹಿಂದೂ ದೇವತೆ ದುರ್ಗಾ ಮಾತೆಯ ರೂಪದೊಂದಿಗೆ ವರ್ಣಿಸಲಾಗಿದೆ, ಹೀಗಾಗಿ ಅದು ಮುಸ್ಲಿಂ ಮತಕ್ಕೆ ವಿರುದ್ಧ ಎಂಬುದು ಅವರ ವಾದ, ಮುಸ್ಲಿಮರ ವಾರಸುದಾರ ಎನ್ನುವ ಭ್ರಮೆಯಲ್ಲಿರುವ ಸಂಸದ ಅಸಾದುದ್ದೀನ್ ಓವೈಸಿ “ವಂದೇ ಮಾತರಂ ಹಾಡಿದರೆ ಮಾತ್ರ ದೇಶಭಕ್ತರಲ್ಲ!” ಎಂದಿದ್ದಾರೆ.

ಕಾಂಗ್ರೆಸ್ಸಿನ ನಾಯಕ ಬಿ.ಕೆ ಹರಿಪ್ರಸಾದ್ ಅವರ “ಎಲ್ಲ ಧರ್ಮದವರೂ ಈ ದೇಶದಲ್ಲಿ ಇರುವಾಗ ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ. ಚುನಾವಣಾ ಗಿಮಿಕ್” ಎನ್ನುವ ಹೇಳಿಕೆ ಸಹಿತ ಜಾಲತಾಣ ಚಾವಡಿಯಲ್ಲಿ ಪರ-ವಿರೋಧ ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ, ಖ್ಯಾತ ಪತ್ರಕರ್ತ ರಾಮಚಂದ್ರ ಗುಹಾ “Bankim’s Vande Mataram is poetry, history, and politics. 150 years later, it still provokes debate as it should.” ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು, ಖ್ಯಾತ ಗಾಯಕಿ ಶ್ರೇಯ ಘೋಷಾಲ್ “A rendition of the first two stanzas, captioned “For the motherland, always.” ಎಂದು ಬರೆದಿದ್ದಾರೆ, ಸರ್ಕಾರದ ನೀತಿಯ ಪರವಾಗಿ #VandeMataram, #VandeMataram150 ಎನ್ನುವ ಹ್ಯಾಶ್ ಟ್ಯಾಗ್ ಸದ್ದು ಮಾಡಿವೆ, ಇನ್ನು ಎಲ್ಲರಿಗೂ ಕಡ್ಡಾಯ ಎನ್ನುವ ಹೇರಿಕೆ ಮಾಡಬೇಡಿ ಎಂದು ನೀತಿಯ ವಿರುದ್ಧವಾದ #DontImposeVandeMataram and #NationalSongNotReligiousSong ಎನ್ನುವ ಹ್ಯಾಶ್ ಟ್ಯಾಗ್ ಕೂಡಾ ಚರ್ಚೆಗೊಳಪಟ್ಟಿವೆ.

ಲೇಖಕರು: ಪರಪ್ಪ ಶಾನವಾಡ

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *