ರೈಲು

ಹುಬ್ಬಳ್ಳಿ, ಮಾರ್ಚ್‌ 15: ವಾರಾಂತ್ಯ ಮತ್ತು ಯುಗಾದಿ (Ugadi) ಹಬ್ಬ ಹಿನ್ನೆಲೆಯಲ್ಲಿ ಸಾಲು ಸಾಲು ರಜೆಗಳು ಬಂದಿವೆ. ಈ ಸಂದರ್ಭದಲ್ಲಿ ರೈಲಿನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತದೆ. ಹೀಗಾಗಿ, ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಮತ್ತು ಅವರ ಅನುಕೂಲಕ್ಕಾಗಿ ನೈರುತ್ಯ ರೈಲ್ವೆ ವಲಯ (South Western Railway) ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ವಿಶೇಷ ರೈಲುಗಳನ್ನು (Train) ಓಡಿಸಲು ನಿರ್ಧರಿಸಿದೆ. ಈ ಕುರಿತು ನೈರುತ್ಯ ರೈಲ್ವೆ ವಲಯ ಮಾದ್ಯಮ ಪ್ರಕಟಣೆ ಹೊರಡಿಸಿದೆ.

ಹುಬ್ಬಳ್ಳಿ- ಯಶವಂತಪುರ

  1. ರೈಲು ಸಂಖ್ಯೆ 07379: ಹುಬ್ಬಳ್ಳಿ-ಯಶವಂತಪುರ ವಿಶೇಷ ಎಕ್ಸ್‌ಪ್ರೆಸ್‌ ರೈಲು ಬುಧವಾರ (ಮಾ.18) ದಂದು ಮಧ್ಯಾಹ್ನ ಹುಬ್ಬಳ್ಳಿಯಿಂದ ಹೊರಟು, ಅದೇ ದಿನ ರಾತ್ರಿ 8:15ಕ್ಕೆ ಯಶವಂತಪುರ ತಲಪುತ್ತದೆ.

ವಿಜಯಪುರ-ಯಶವಂತಪುರ

  1. ರೈಲು ಸಂಖ್ಯೆ 06277: ಯಶವಂತಪುರ-ವಿಜಯಪುರವಿಶೇಷ ಎಕ್ಸಪ್ರೆಸ್‌ ರೈಲು ಬುಧವಾರ (ಮಾ.18) ರಾತ್ರಿ 9:45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 9:45ಕ್ಕೆ ವಿಜಯಪುರ ತಲುಪಲಿದೆ.
  2. ರೈಲು ಸಂಖ್ಯೆ 06278: ವಿಜಯಪುರ-ಯಶವಂತಪುರ ವಿಶೇಷ ಎಕ್ಸಪ್ರೆಸ್‌ ರೈಲು ರವಿವಾರ (ಮಾ.22) ಮಧ್ಯಾಹ್ನ 1:30ಕ್ಕೆ ವಿಜಯಪುರದಿಂದ ಹೊರಟು ಮಧ್ಯರಾತ್ರಿ 12:30ಕ್ಕೆ ಯಶವಂತಪುರ ತಲುಪಲಿದೆ.

ಯಶವಂತಪುರ-ಮಡಗಾಂವ-ಬೆಂಗಳೂರು ದಂಡು

  1. ರೈಲು ಸಂಖ್ಯೆ 06267: ಯಶವಂತಪುರ-ಮಡಗಾಂವ ವಿಶೇಷ ಎಕ್ಸಪ್ರೆಸ್‌ ರೈಲು ಬುಧವಾರ (ಮಾ.18)  ಮಧ್ಯಾಹ್ನ 12 ಗಂಟೆಗೆ ಯಶವಂತಪುರದಿಂದ ಹೊರಟು ಮರುದಿನ ಬೆಳಗ್ಗೆ 6:45ಕ್ಕೆ ಮಡಗಾಂವ ತಲುಪಲಿದೆ.
  2. ರೈಲು ಸಂಖ್ಯೆ 06268: ಮಡಗಾಂವ-ಬೆಂಗಳೂರು ದಂಡು ವಿಶೇಷ ಎಕ್ಸಪ್ರೆಸ್‌ ರೈಲು ಗುರುವಾರ (ಮಾ.19)  ಬೆಳಗ್ಗೆ 11 ಗಂಟೆಗೆ ಮಡಗಾಂವದಿಂದ ಹೊರಟು ಮರುದಿನ ನಸುಕಿನ ಜಾವ 5:20ಕ್ಕೆ ಬೆಂಗಳೂರು ದಂಡು ತಲುಪಲಿದೆ.

ಯಶವಂತಪುರ-ಹೊಸಪೇಟೆ

  1. ರೈಲು ಸಂಖ್ಯೆ 06533: ಯಶವಂತಪುರ-ಹೊಸಪೇಟೆ ವಿಶೇಷ ಎಕ್ಸಪ್ರೆಸ್‌ ರೈಲು ಬುಧವಾರ (ಮಾ.18) ಸಂಜೆ 6:45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ನಸುಕಿನ ಜಾವ 4 ಗಂಟೆಗೆ ಹೊಸಪೇಟೆ ತಲುಪಲಿದೆ.
  2. ರೈಲು ಸಂಖ್ಯೆ 06534: ಹೊಸಪೇಟೆ-ಯಶವಂತಪುರ ವಿಶೇಷ ಎಕ್ಸಪ್ರೆಸ್‌ ರೈಲು ಗುರುವಾರ (ಮಾ.19) ಬೆಳಗ್ಗೆ 9 ಗಂಟೆಗೆ ಹೊಸಪೇಟೆಯಿಂದ ಹೊರಟು ಅದೇ ದಿನ ರಾತ್ರಿ 7:20ಕ್ಕೆ ಯಶವಂತಪುರ ತಲುಪಲಿದೆ.

ರೈಲು ಸಮಯ ಸೇರಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು ರೈಲ್ವೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ www.enquiry.indianrail.gov.in ಗೆ ಭೇಟಿ ನೀಡಿ ಅಥವಾ NTES app ಅಥವಾ 139  ಗೆ ಕರೆ ಮಾಡಿ.   

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *