Two Fake universities in Karnataka, 32 Fake fake universities list ugcಯುಜಿಸಿ

ನವದೆಹಲಿ, ಫೆ.26: ಕರ್ನಾಟಕದ ಎರಡು ವಿಶ್ವವಿದ್ಯಾಲಯಗಳು (Universities) ‘ನಕಲಿ’ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗವು (UGC) ಗುರುತಿಸಿದೆ. ದೇಶದ ಉನ್ನತ ಶಿಕ್ಷಣ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿರುವ 32 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿ ಪ್ರಕಟಿಸಿದೆ. ಈ ಸಂಸ್ಥೆಗಳು ಶೈಕ್ಷಣಿಕ ಪದವಿಗಳನ್ನು ನೀಡಲು ಕಾನೂನುಬದ್ಧವಾಗಿ ಅನರ್ಹವಾಗಿದ್ದು, ವಿದ್ಯಾರ್ಥಿಗಳು ಪ್ರವೇಶ ಪಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಯುಜಿಸಿಯ ಈ ಪಟ್ಟಿಯಲ್ಲಿ ಕರ್ನಾಟಕದ ಎರಡು ಸಂಸ್ಥೆಗಳನ್ನು ‘ನಕಲಿ’ ಎಂದು ಗುರು ತಿಸಲಾಗಿದೆ. ಒಟ್ಟು 12 ರಾಜ್ಯಗಳಲ್ಲಿ ನಕಲಿ ವಿಶ್ವವಿದ್ಯಾಲಯಗಳು ಕಂಡುಬಂದಿದ್ದು, ದೇಶದಲ್ಲೇ ಹೆಚ್ಚು ಅಕ್ರಮ ಸಂಸ್ಥೆಗಳು ದೆಹಲಿಯಲ್ಲಿವೆ (12).

ಉತ್ತರ ಪ್ರದೇಶದಲ್ಲಿ 4, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಪುದುಚೇರಿಯಲ್ಲಿ ತಲಾ 2 ಹಾಗೂ ಹರಿಯಾಣ, ರಾಜಸ್ಥಾನ, ಜಾರ್ಖಂಡ್, ಅರುಣಾಚಲ ಪ್ರದೇಶದಲ್ಲಿ ತಲಾ 1 ವಿಶ್ವವಿದ್ಯಾಲಯಗಳು ಮಾನ್ಯತೆ ಹೊಂದಿಲ್ಲ ಎಂದು ಯುಜಿಸಿ ತಿಳಿಸಿದೆ.

ಈ ಪಟ್ಟಿಯಲ್ಲಿರುವ 32 ಸಂಸ್ಥೆಗಳು ಯುಜಿಸಿ ಕಾಯ್ದೆ 1956ರ ಯಾವುದೇ ಮಾನದಂಡಗಳನ್ನು ಪೂರೈಸಿಲ್ಲ. ಆದ್ದರಿಂದ ಇವು ನೀಡುವ ಪದವಿ ಪತ್ರಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಮಾನ್ಯತೆ ಇರುವುದಿಲ್ಲ ಎಂದು ಯುಜಿಸಿ ತಿಳಿಸಿದೆ.

ನಕಲಿ ವಿವಿಗಳ ಪಟ್ಟಿ ಲಿಂಕ್: Fake Universities List

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *