T20 World Cup: Zimbabwe reach Super 8, Australia eliminatedಸೂಪರ್-8ಕ್ಕೆ ಜಿಂಬಾಬ್ವೆ ಎಂಟ್ರಿ, ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್‌

ಮೊಟ್ಟ ಮೊದಲ ಬಾರಿಗೆ ಜಿಂಬಾಬ್ವೆ (Zimbabwe) ತಂಡವು T20 World Cup ನಲ್ಲಿ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ.  ಆಸ್ಟ್ರೇಲಿಯಾ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಹೌದು, ಜಿಂಬಾಬ್ವೆ ತಂಡವು ಆಡಿದ ಎರಡೂ ಪಂದ್ಯಗಳಲ್ಲಿ ಗೆಲವು ದಾಖಲಿಸಿತ್ತು. ಆದರೆ, ಆಸ್ಟ್ರೇಲಿಯಾ (Australia) ತಂಡವು ಮೂರು ಪಂದ್ಯಗಳ ಪೈಕಿ ಎರಡು ಸೋತು ಒಂದು ಗೆಲವು ಸಾಧಿಸಿತ್ತು.

ಶ್ರೀಲಂಕಾದ ಪಲ್ಲೆಕೆಲೆ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಂಗಳವಾರ  (ಫೆ.17) ಜಿಂಬಾಬ್ವೆ ಮತ್ತು ಐರ್ಲೆಂಡ್‌ ನಡುವೆ ಪಂದ್ಯ ನಿಗದಿಯಾಗಿತ್ತು. ಆದರೆ, ಬೆಳಗ್ಗೆಯಿಂದಲೇ ಬಿಟ್ಟು ಬಿಡದೆ ಸುರಿದ ಮಳೆಯಿಂದ ಪಂದ್ಯ ರದ್ದಾಗಿದೆ. ಹೀಗಾಗಿ, ಐರ್ಲೆಂಡ್‌ ಹಾಗೂ ಜಿಂಬಾಬ್ವೆ ಉಭಯ ತಂಡಗಳು ಒಂದೊಂದು ಅಂಕ ಹಂಚಿಕೊಂಡವು.

ಇದರೊಂದಿಗೆ ಜಿಂಬಾಬ್ವೆ ತಂಡದ ಖಾತೆಗೆ ಒಂದು ಅಂಕ ಸೇರ್ಪಡೆಗೊಂಡಿದ್ದರಿಂದ ಒಟ್ಟಾರೆ ಜಿಂಬಾಬ್ವೆ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 5 ಅಂಕದೊಂದಿಗೆ ಸೂಪರ್‌-8 ಹಂತಕ್ಕೆ ಅಧಿಕೃತ ಪ್ರವೇಶ ಪಡೆಯಿತು. ಇನ್ನೊಂದಡೆ, ಆಸ್ಟ್ರೇಲಿಯಾ ಬಳಿ ಸದ್ಯ ಕೇವಲ 2 ಅಂಕಗಳಿದ್ದು, ಒಮಾನ್‌ ವಿರುದ್ಧ ನಡೆಯಲಿರುವ ಪಂದ್ಯ ಗೆದ್ದರೂ ಕೇವಲ 4 ಅಂಗಳಾಗಲಿವೆ.

ಒಂದು ವೇಳೆ ಜಿಂಬಾಬ್ವೆ ತಂಡವು ಐರ್ಲೆಂಡ್‌ ಎದರು ಸೋತಿದ್ದರೇ, ಆಸ್ಟ್ರೇಲಿಯಾ ತಂಡದ ಸೂಪರ್‌-8 ಕನಸು ಜೀವಂತವಾಗಿರುತ್ತಿತ್ತು. ಗ್ರೂಪ್ ಬಿ ಯಿಂದ ಸೂಪರ್ 8 ಹಂತಕ್ಕೆ ಪ್ರವೇಶಿಸಿದ ಜಿಂಬಾಬ್ವೆ ಎರಡನೇ ಹಾಗೂ ಅಂತಿಮ ತಂಡವಾಗಿದೆ. ಮೊದಲ ತಂಡ ಶ್ರೀಲಂಕಾ ಆಗಿದೆ.

ಆಸ್ಟ್ರೇಲಿಯಾ ತಂಡವು ತನ್ನದೇ ತಪ್ಪಿನಿಂದ ಹೊರಬಿದ್ದಂತಾಗಿದೆ. ಆಸ್ಟ್ರೇಲಿಯಾ ತಂಡವು ಜಿಂಬಾಬ್ವೆ ವಿರುದ್ಧ 23 ರನ್‌ಗಳ ಅಂತರದಿಂದ ಸೋಲು ಕಂಡಿದ್ದು ದೊಡ್ಡ ಅಚ್ಚರಿಗೆ ಕಾರಣವಾಗಿತ್ತು.  ಇದಕ್ಕೂ ಮೊದಲು ಆಸ್ಟೇಲಿಯಾ ತಂಡವು ಶ್ರೀಲಂಕಾ ವಿರುದ್ಧ ಸೋಲು ಕಂಡಿತ್ತು.  

ಗ್ರೂಪ್ ಬಿ ಪಾಯಿಂಟ್ ಪಟ್ಟಿಯಲ್ಲಿ ಸ್ಥಿತಿ

ಗ್ರೂಪ್ ಬಿ ಪಾಯಿಂಟ್ ಪಟ್ಟಿಯಲ್ಲಿನ ಶ್ರೀಲಂಕಾ ಆಡಿದ ಮೂರೂ ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಅಗ್ರಸ್ಥಾನದಲ್ಲಿದೆ. ಶ್ರೀಲಂಕಾದ ನೆಟ್ ರನ್ ರೇಟ್ 2.462 ಇದೆ. ಜಿಂಬಾಬ್ವೆ ದ್ವಿತೀಯ ಸ್ಥಾನದಲ್ಲಿದೆ. ನಂತರ ಕ್ರಮವಾಗಿ ಐರ್ಲೆಂಡ್, ಆಸ್ಟ್ರೇಲಿಯಾ ಹಾಗೂ ಒಮಾನ್ ತಂಡಗಳಿವೆ.

ಜಿಂಬಾಬ್ವೆಗೆ ಐತಿಹಾಸಿಕ ಸಾಧನೆ

ಜಿಂಬಾಬ್ವೆಗೆ ಇದು ಐತಿಹಾಸಿಕ ಕ್ಷಣವಾಗಿದೆ. 2024ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲು ವಿಫಲವಾದ ಬಳಿಕ ಇದೀಗ ಮೊದಲ ಬಾರಿಗೆ ಟಿ20 ವಿಶ್ವಕಪ್‌ನಲ್ಲಿ ಸೂಪರ್ 8 ಹಂತ ತಲುಪಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *