ವಾಷಿಂಗ್ಟನ್: ಅಧಿಕಾರಕ್ಕೆ ಬಂದಾಗಿನಿಂದಲೂ ಹಲವು ರಾಷ್ಟ್ರಗಳ ವಿರುದ್ಧ ಬೇಕಾಬಿಟ್ಟಿಯಾಗಿ ಸುಂಕ ಸಮರ ಸಾರಿದ್ದ ಅಮೆರಿಕ (America) ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಭಾರಿ ಹಿನ್ನಡೆಯಾಗಿದೆ. ರಾಷ್ಟ್ರೀಯ ತುರ್ತು ಕಾನೂನಿನಡಿಯಲ್ಲಿ ಟ್ರಂಪ್ ವಿಧಿಸಿದ ಎಲ್ಲಾ ಸುಂಕಗಳನ್ನು (Tariff) ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ವ್ಯಾಪಕ ಸುಂಕಗಳು ಕಾನೂನುಬಾಹಿರ ಎಂದು 6-3 ಮತಗಳಿಂದ ತೀರ್ಪು ನೀಡಿದೆ. ಟ್ರಂಪ್ ಅವರು ವ್ಯಾಪಕ ಶ್ರೇಣಿಯ ಸುಂಕಗಳನ್ನು ವಿಧಿಸಲು ತುರ್ತು ಆರ್ಥಿಕ ಅಧಿಕಾರ ಬಳಸಿಕೊಳ್ಳುವಲ್ಲಿ ಮಿತಿಯನ್ನು ಮೀರಿದ್ದಾರೆ. ಆಮದು ಸುಂಕಗಳನ್ನು ಆಧರಿಸಿರುವ ಕಾನೂನಿನ ಪ್ರಕಾರ, “ಅಧ್ಯಕ್ಷರಿಗೆ ಸುಂಕವನ್ನು ವಿಧಿಸಲು ಅಧಿಕಾರ ಇರುವುದಿಲ್ಲ.” ಎಂದು ನ್ಯಾಯಪೀಠ ಹೇಳಿದೆ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಈ ಅಭಿಪ್ರಾಯವನ್ನು ನೀಡಿದರು. ನ್ಯಾಯಮೂರ್ತಿ ಕ್ಲಾರೆನ್ಸ್ ಥಾಮಸ್, ಸ್ಯಾಮ್ಯುಯೆಲ್ ಅಲಿಟೊ ಮತ್ತು ಬ್ರೆಟ್ ಕವನಾಘ್ ಅವರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು. ಅವರು ಟ್ರಂಪ್‌ಗಿಂತ ಮೊದಲು, ಯಾವುದೇ ಅಧ್ಯಕ್ಷರು “ಯಾವುದೇ ಸುಂಕಗಳನ್ನು, ಈ ಪ್ರಮಾಣ ಮತ್ತು ವ್ಯಾಪ್ತಿಯ ಸುಂಕಗಳನ್ನು ಹೇರಲು” ಈ ಕಾಯ್ದೆಯನ್ನು ಬಳಸಿರಲಿಲ್ಲ ಎಂದು ಕೋರ್ಟ್ ಹೇಳಿತು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation UKಯ ರಾಯಲ್ ಎಂಟೊಮೋಲಾಜಿಕಲ್ ಸೊಸೈಟಿ ಫೋಟೋಗ್ರಫಿ ಪ್ರಶಸ್ತಿ ಭಾರತದ ರಘುರಾಮ್ ಅನ್ನದಾನ ಮುಡಿಗೆ ಕೇರಳ ರಾಜ್ಯದ ಹೆಸರು ಬದಲು: ಮರುನಾಮಕರಣಕ್ಕೆ ಕೇಂದ್ರ ಒಪ್ಪಿಗೆ