Indian Raghuram Annadana Wins the Royal Entomological Society Photography Awardರಘುರಾಮ್ ಅನ್ನದಾನ

ಅದೆಷ್ಟೋ ಸಾಧಕರು ಸಾಧನೆಗೈದು ತೆರೆಮರೆಯಲ್ಲಿ ಇರುತ್ತಾರೆ. ಇಂತಹವರ ಸಾಲಿಗೆ ರಘುರಾಮ್ ಅನ್ನದಾನ (Raghuram Annadana) ಅವರು ಸೇರುತ್ತಾರೆ. ಹೌದು, ಯುನೈಟೆಡ್ ಕಿಂಗ್‌ಡಮ್ (UK) ಯ ಕೀಟ ವಿಜ್ಞಾನ ದತ್ತಿ ಸಂಸ್ಥೆಯಿಂದ ನಡೆಸಲಾಗುವ ರಾಯಲ್ ಎಂಟೊಮೋಲಾಜಿಕಲ್ ಸೊಸೈಟಿ (Royal Entomological Society) ‘ಇನ್ಸೆಕ್ಟ್ ವೀಕ್’ ಛಾಯಾಗ್ರಹಣ ಸ್ಪರ್ಧೆಯಲ್ಲಿ ಭಾರತದ ರಘುರಾಮ್ ಅನ್ನದಾನ ಅವರು ವಿಜೇತರಾಗಿದ್ದಾರೆ. ‘ಪ್ಯಾರಾಸೈಟಿಕ್ ಪ್ಲೇ’ ಛಾಯಾಚಿತ್ರಕ್ಕೆ ರಘುರಾಮ್ ಅನ್ನದಾನ ಅವರಿಗೆ ರಾಯಲ್ ಎಂಟೊಮೋಲಾಜಿಕಲ್ ಸೊಸೈಟಿ ಪ್ರಶಸ್ತಿ ಲಭಿಸಿದೆ.

ಕೇವಲ ಮತ್ತೊಂದು ಛಾಯಾಚಿತ್ರ ಸ್ಪರ್ಧೆಯಲ್ಲ ಇದು ಮೂಲಭೂತವಾಗಿ ಕೀಟಗಳ ಜಗತ್ತನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ಪ್ರದರ್ಶಿಸುವ ಛಾಯಾಚಿತ್ರಗಾರರ ಒಲಿಂಪಿಕ್ಸ್ ಆಗಿದೆ. ಮ್ಯಾಕ್ರೋ ಛಾಯಾಗ್ರಹಣದ ಬಗೆಗಿನ ಹೆಚ್ಚುತ್ತಿರುವ ಜಾಗತಿಕ ಒಲವನ್ನು ಮತ್ತು ನಾವು ಎಂದಿಗೂ ಗಮನಿಸದೆ ಇರುವ ಕೀಟಗಳ ಸೂಕ್ಷ್ಮ ಜಗತ್ತನ್ನು ಅನಾವರಣಗೊಳಿಸುವ ಛಾಯಾಗ್ರಾಹಕರಿಗಾಗಿ ಈ ಸ್ಪರ್ಧೆ ಆಯೋಜಿಸಲಾಗುತ್ತದೆ.

2025ರಲ್ಲಿ ನಡೆದ ಈ ಸ್ಪರ್ಧೆಯಲ್ಲಿ 110ಕ್ಕೂ ಹೆಚ್ಚು ದೇಶಗಳ  3,000ಕ್ಕೂ ಹೆಚ್ಚು ಛಾಯಾಗ್ರಾಹಕರು ಭಾಗವಹಿಸಿದ್ದರು. ರಾಯಲ್ ಎಂಟೊಮೋಲಾಜಿಕಲ್ ಸೊಸೈಟಿಯ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ಸ್ಪರ್ಧೆ ಇದಾಗಿತ್ತು. ಈ ಸ್ಪರ್ಧೆಯಲ್ಲಿ ಭಾರತೀಯ ಛಾಯಾಗ್ರಾಹಕ ರಘುರಾಮ್ ಅನ್ನದಾನ ಅವರ “ಪ್ಯಾರಾಸೈಟಿಕ್ ಪ್ಲೇ” ಅಗ್ರ ಗೌರವವನ್ನು ಪಡೆಯಿತು.

ಪ್ಯಾರಾಸೈಟಿಕ್ ಪ್ಲೇ ಚಿತ್ರದ ವಿಶೇಷತೆ ಏನು?

ಬನಾನಾ ಸ್ಕಿಪ್ಪರ್ ಚಿಟ್ಟೆಯ ಮೊಟ್ಟೆಗಳ ಮೇಲೆ ಪರಾವಲಂಬಿ ಕಣಜ (parasitic wasp) ಮೊಟ್ಟೆಯಿಡುವುದನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಬನಾನಾ ಸ್ಕೀಪರ್ ಚಿಟ್ಟೆಯ (ಎರಿಯೋನಾಟಾ ಥ್ರಾಕ್ಸ್) ಮೊಟ್ಟೆಗಳು ಕೇವಲ 1.8 ಮಿ.ಮೀ (ಅಕ್ಕಿಗಿಂತ ಚಿಕ್ಕ) ಗಾತ್ರದ್ದಾಗಿವೆ. ಈ ಮೊಟ್ಟೆಗಳ ಮೇಲೆ, ಇನ್ನೂ ಚಿಕ್ಕದಾದ ಪರಾವಲಂಬಿ ಕಣಜವು ತನ್ನ ಮೊಟ್ಟೆಗಳನ್ನು ಇಡುತ್ತಿರುವ ದೃಶ್ಯವನ್ನು ರಘುನಂದನ ಅನ್ನದಾನ ಅವರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಚಿತ್ರದ ವಿಶೇಷತೆಯನ್ನು ಕೇವಲ ತಾಂತ್ರಿಕ ಪರಿಣತಿಯಿಂದಲೇ ಹೇಳಲಾಗುವುದಿಲ್ಲ. ಅದು ಕೀಟಗಳ ಕಥೆ, ಜೀವನ, ಬದುಕಲು ನಡೆಸುವ ಹೋರಾಟವನ್ನು ತೋರಿಸುತ್ತದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *