Scientific role of water in protecting women's healthಸಾಂದರ್ಭಿಕ ಚಿತ್ರ

ಬೇಸಿಗೆ ಕಾಲದಲ್ಲಿ ದೇಹದ ತಾಪಮಾನ ಹೆಚ್ಚಾದಾಗ ದೇಹವು ಥರ್ಮೊರೆಗುಲೇಶನ್ (Thermoregulation) ಪ್ರಕ್ರಿಯೆಯ ಮೂಲಕ ಬೆವರು ಹೊರಹಾಕಿ ತಾಪಮಾನವನ್ನು ನಿಯಂತ್ರಿಸುತ್ತದೆ. ಈ ಸಮಯದಲ್ಲಿ ದೇಹದಿಂದ ನೀರು ಮತ್ತು ಲವಣಗಳು (Electrolytes) ಹೆಚ್ಚು ಪ್ರಮಾಣದಲ್ಲಿ ಕಳೆದುಹೋಗುತ್ತವೆ. ಮಹಿಳೆಯರಲ್ಲಿ ಹಾರ್ಮೋನಲ್ ಬದಲಾವಣೆಗಳ ಕಾರಣ ದೇಹದ ದ್ರವ ಸಮತೋಲನ (Fluid balance) ಕಾಪಾಡುವುದು ಇನ್ನಷ್ಟು ಮುಖ್ಯವಾಗುತ್ತದೆ.

ನೀರು ದೇಹದ ಕೋಶಗಳ ಕಾರ್ಯಕ್ಕೆ ಅಗತ್ಯವಾಗಿದ್ದು, ಪೋಷಕಾಂಶಗಳ ಸಾಗಣೆ (Transport of nutrients) ಮತ್ತು ವಿಷಪದಾರ್ಥಗಳ ಹೊರಹಾಕುವಿಕೆ (Detoxification) ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮೂತ್ರಪಿಂಡಗಳ ಸರಿಯಾದ ಕಾರ್ಯಕ್ಷಮತೆಗೆ ನೀರು ಅತ್ಯವಶ್ಯಕ. ನೀರಿನ ಕೊರತೆಯಿಂದ ರಕ್ತದ ದಟ್ಟತೆ (Blood viscosity) ಹೆಚ್ಚಾಗಿ ದೇಹದ ಕಾರ್ಯಕ್ಷಮತೆ ಕುಂಠಿತವಾಗುತ್ತದೆ. ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಡಿಹೈಡ್ರೇಶನ್ (Dehydration) ಉಂಟಾಗಿ ತಲೆನೋವು, ದೌರ್ಬಲ್ಯ, ಕಡಿಮೆ ರಕ್ತದ ಒತ್ತಡ ಮತ್ತು ಚರ್ಮದ ಒಣಗಿಕೆ ಕಾಣಬಹುದು. ವಿಶೇಷವಾಗಿ ಗರ್ಭಿಣಿ ಮತ್ತು ಸ್ತನಪಾನ ಮಾಡುತ್ತಿರುವ ಮಹಿಳೆಯರಿಗೆ ಹೆಚ್ಚಿನ ದ್ರವ ಅಗತ್ಯವಿರುತ್ತದೆ, ಏಕೆಂದರೆ ದೇಹದ ನೀರಿನ ಬೇಡಿಕೆ ಹೆಚ್ಚಿರುತ್ತದೆ.

ಮಹಿಳೆಯರು ದಿನನಿತ್ಯ ಮನೆ ಕೆಲಸಗಳು, ಉದ್ಯೋಗ ಮತ್ತು ಕುಟುಂಬದ ಜವಾಬ್ದಾರಿಗಳಿಂದ ಹೆಚ್ಚು ಶ್ರಮಿಸುತ್ತಾರೆ. ಈ ಕಾರಣದಿಂದ ದೇಹದಲ್ಲಿ ನೀರಿನ ಕೊರತೆ (ಡಿಹೈಡ್ರೇಶನ್) ಉಂಟಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಠ ೮–೧೦ ಗ್ಲಾಸ್ ನೀರು ಕುಡಿಯುವುದು ಅಗತ್ಯ.

ನೀರಿನ ಜೊತೆಗೆ ಮಜ್ಜಿಗೆ, ತೆಂಗಿನಕಾಯಿ ನೀರು, ಹಣ್ಣಿನ ರಸಗಳು ಮುಂತಾದ ದ್ರವ ಆಹಾರಗಳನ್ನು ಸೇವಿಸುವುದು ಉತ್ತಮ. ಬೇಸಿಗೆ ಕಾಲದಲ್ಲಿ ಮಹಿಳೆಯರು ತಮ್ಮ ಆಹಾರದಲ್ಲಿ ರಸಭರಿತ ತರಕಾರಿಗಳಾದÀ ಸೌತೆಕಾಯಿ, ಟೊಮಾಟೊ, ಸೋರಕಾಯಿ ಮತ್ತು ಬೂದು ಕುಂಬಳಕಾಯಿ ದೇಹಕ್ಕೆ ತಂಪು ನೀಡುವುದರ ಜೊತೆಗೆ ನೀರಿನ ಕೊರತೆಯನ್ನು ತಡೆಯುತ್ತವೆ. ಇದರಿಂದ ದೇಹ ಹೈಡ್ರೇಟ್ ಆಗಿ ಇರುತ್ತದೆ ಮತ್ತು ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. ಜೊತೆಗೆ ಕ್ಯಾರೆಟ್ ಮತ್ತು ಬೀಟ್ರೂಟ್ ಮುಂತಾದ ತರಕಾರಿಗಳು ದೇಹಕ್ಕೆ ಅಗತ್ಯವಾದ ವಿಟಮಿನ್‌ಗಳನ್ನು ನೀಡುತ್ತವೆ. ಆದ್ದರಿಂದ ಬೇಸಿಗೆಯಲ್ಲಿ ಆರೋಗ್ಯವಾಗಿರಲು ಈ ತರಕಾರಿಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವುದು ಅಗತ್ಯ. ಇವು ದೇಹವನ್ನು ತಂಪಾಗಿರಿಸಲು ಮತ್ತು ಶಕ್ತಿ ನೀಡಲು ಸಹಾಯ ಮಾಡುತ್ತವೆ. ವಿಶೇಷವಾಗಿ ಗರ್ಭಿಣಿ ಮತ್ತು ತಾಯಿಯಾಗಿರುವ ಮಹಿಳೆಯರು ಹೆಚ್ಚು ನೀರನ್ನು ಸೇವಿಸಬೇಕು.

ನೀರು ದೇಹದ ತಾಪಮಾನ ನಿಯಂತ್ರಣ, ಪೋಷಕಾಂಶ ಸಾಗಣೆ ಮತ್ತು ವಿಷಪದಾರ್ಥಗಳ ಹೊರಹಾಕುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಬೇಸಿಗೆಯಲ್ಲಿ ಮಹಿಳೆಯರು ಆರೋಗ್ಯವಂತವಾಗಿರಲು ಮತ್ತು ಚೈತನ್ಯಪೂರ್ಣವಾಗಿರಲು ನಿರಂತರವಾಗಿ ಸಮರ್ಪಕ ಪ್ರಮಾಣದಲ್ಲಿ ನೀರು ಸೇವಿಸುವುದು ಅತ್ಯಂತ ಅವಶ್ಯಕ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *