ಸೂರ್ಯನ ಅಲ್ಟ್ರಾ ವೈಯೊಲೆಟ್ (UV) ಕಿರಣಗಳು, ಧೂಳು ಮತ್ತು ಮಾಲಿನ್ಯವು ಮಹಿಳೆಯರ ತ್ವಚೆಯ ಮೇಲೆ ನೇರ ಪರಿಣಾಮ ಬೀರುತ್ತವೆ. ಚರ್ಮದಲ್ಲಿರುವ ನೈಸರ್ಗಿಕ ತೇವಾಂಶ ಕಡಿಮೆಯಾಗುವುದರಿಂದ ಒಣತನ, ಮೊಡವೆ, ಕಪ್ಪು ಮಚ್ಚೆಗಳು, ಸನ್‌ಟ್ಯಾನ್ ಹಾಗೂ ಚರ್ಮದ ಬೇಗ ವೃದ್ಧಾಪ್ಯ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ತ್ವಚೆಯನ್ನು ರಕ್ಷಿಸಲು ಕೇವಲ ಸೌಂದರ್ಯ ವಸ್ತುಗಳಲ್ಲ, ವೈಜ್ಞಾನಿಕವಾಗಿ ಪರಿಣಾಮಕಾರಿ ನೈಸರ್ಗಿಕ ಪದಾರ್ಥಗಳ ಬಳಕೆ ಅಗತ್ಯವಾಗಿದೆ. ಬಿಸಿಲಿಗೆ ತ್ವಚೆ ಏನು ಆಗುತ್ತದೆ? ಮಾನವನ ಚರ್ಮದಲ್ಲಿ “Sebaceous glands” ಎಂಬ ಗ್ರಂಥಿಗಳು ಇರುತ್ತವೆ. ಇವು ಎಣ್ಣೆಯಂಥ “Sebum” ಉತ್ಪಾದಿಸುತ್ತವೆ. ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಾದಾಗ ಈ ಗ್ರಂಥಿಗಳು ಹೆಚ್ಚು ಕ್ರಿಯಾಶೀಲವಾಗಿ ಹೆಚ್ಚುವರಿ ಎಣ್ಣೆ ಉತ್ಪಾದಿಸುತ್ತವೆ. ಇದರಿಂದ ಧೂಳು ಮತ್ತು ಬ್ಯಾಕ್ಟೀರಿಯಾಗಳು ತ್ವಚೆಗೆ ಅಂಟಿಕೊAಡು ಮೊಡವೆಗಳು ಉಂಟಾಗುತ್ತವೆ. ಅದೇ ರೀತಿ ಸೂರ್ಯನ UV-A ಮತ್ತು UA-B ಕಿರಣಗಳು ಚರ್ಮದ ಒಳಪದರವಾದ “Dermis” ಗೆ ಹಾನಿ ಮಾಡುತ್ತವೆ. ಇದರಿಂದ ಮೆಲನಿನ್ ಉತ್ಪಾದನೆ ಹೆಚ್ಚಾಗಿ ಚರ್ಮ ಕಪ್ಪಾಗುತ್ತದೆ. ವಿಜ್ಞಾನಿಗಳ ಪ್ರಕಾರ ದೀರ್ಘಕಾಲ UV ಕಿರಣಗಳಿಗೆ ಒಳಗಾದರೆ ಚರ್ಮದ ಕೋಶಗಳಲ್ಲಿ ಹಾನಿ ಉಂಟಾಗಿ ಬೇಗ ವೃದ್ಧಾಪ್ಯ ಕಾಣಿಸಬಹುದು. ನೈಸರ್ಗಿಕ ಪದಾರ್ಥಗಳ ವೈಜ್ಞಾನಿಕ ಮಹತ್ವ ಅಲೋವೆರಾ – ಪ್ರಕೃತಿಯ ಜೀವಂತ ಔಷಧಿ ಅಲೋವೆರಾದಲ್ಲಿ “Polysaccharides”, “Glycoproteins” ಮತ್ತು “Vitamin E” ಇದ್ದು, ಇವು ಚರ್ಮಕ್ಕೆ ತೇವಾಂಶ ಒದಗಿಸುತ್ತವೆ. ಇದರಲ್ಲಿರುವ “Anti-inflammatory” ಗುಣಗಳು ಸೂರ್ಯನ ಬಿಸಿಯಿಂದ ಉಂಟಾಗುವ ಉರಿಯನ್ನು ಕಡಿಮೆ ಮಾಡುತ್ತವೆ. ಅಲೋವೆರಾ ಚರ್ಮದ ಹಾನಿಗೊಳಗಾದ ಕೋಶಗಳನ್ನು ಮರುನಿರ್ಮಿಸಲು ಸಹ ಸಹಾಯ ಮಾಡುತ್ತದೆ. ಮೊಸರು: ನೈಸರ್ಗಿಕ ಲ್ಯಾಕ್ಟಿಕ್ ಆಸಿಡ್ ಚಿಕಿತ್ಸೆಯಂತೆ ಮೊಸರಿನಲ್ಲಿ ಇರುವ “Lactic Acid” ಸತ್ತ ಚರ್ಮಕೋಶಗಳನ್ನು ತೆಗೆದುಹಾಕುವ ನೈಸರ್ಗಿಕ ಎಕ್ಸ್ಫೋಲಿಯೇಟರ್ ಆಗಿದೆ. ಇದು ಚರ್ಮವನ್ನು ಮೃದುವಾಗಿಸಿ ಕಾಂತಿ ನೀಡುತ್ತದೆ. ಜೊತೆಗೆ ಮೊಸರಿನಲ್ಲಿರುವ ಪ್ರೊಬಯೋಟಿಕ್ ಬ್ಯಾಕ್ಟೀರಿಯಾಗಳು ಚರ್ಮದ ಮೇಲೆ ಇರುವ ಹಾನಿಕಾರಕ ಜೀವಾಣುಗಳನ್ನು ಕಡಿಮೆ ಮಾಡುತ್ತವೆ. ಸೌತೆಕಾಯಿ: ತಂಪಿನ ವೈಜ್ಞಾನಿಕ ಶಕ್ತಿ ಸೌತೆಕಾಯಿಯಲ್ಲಿ ಸುಮಾರು ೯೫% ನೀರಿನಾಂಶವಿದೆ. ಇದರಲ್ಲಿರುವ “Siಟiಛಿಚಿ” ಎಂಬ ಖನಿಜ ಚರ್ಮದ ಸ್ಥಿತಿಸ್ಥಾಪಕತೆಯನ್ನು ಹೆಚ್ಚಿಸುತ್ತದೆ. ಕಣ್ಣಿನ ಸುತ್ತಲಿನ ಊತ ಮತ್ತು ಉರಿಯನ್ನು ಕಡಿಮೆ ಮಾಡುವಲ್ಲಿ ಸೌತೆಕಾಯಿ ಪರಿಣಾಮಕಾರಿ. ಅರಿಶಿನ: ಶಕ್ತಿಶಾಲಿ ಪ್ರತಿಜೀವಕ ಅರಿಶಿನದಲ್ಲಿರುವ “ಎಂಬ ರಾಸಾಯನಿಕ ಸಂಯೋಗವು ಬ್ಯಾಕ್ಟೀರಿಯಾ ಮತ್ತು ಫಂಗಸ್ ವಿರುದ್ಧ ಹೋರಾಡುತ್ತದೆ. ಇದರಿಂದ ಮೊಡವೆ ಹಾಗೂ ಚರ್ಮದ ಸೋಂಕು ಕಡಿಮೆಯಾಗುತ್ತದೆ. ವೈಜ್ಞಾನಿಕ ಅಧ್ಯಯನಗಳು ಅರಿಶಿಣದಲ್ಲಿ ಶಕ್ತಿಯುತ “Antioxidant” ಗುಣಗಳಿವೆ ಎಂದು ಹೇಳುತ್ತವೆ. ಜೇನುತುಪ್ಪ: ನೈಸರ್ಗಿಕ ತೇವಾಂಶ ಸಂರಕ್ಷಕ ಜೇನುತುಪ್ಪದಲ್ಲಿ “Curcumin” ಎಂಬ ಗುಣವಿದ್ದು ಇದು ಗಾಳಿಯಿಂದ ತೇವಾಂಶವನ್ನು ಸೆಳೆದು ಚರ್ಮದಲ್ಲಿ ಉಳಿಸುತ್ತದೆ. ಇದರ “Antibacyerial” ಗುಣಗಳು ಚರ್ಮದ ಸೋಂಕುಗಳನ್ನು ತಡೆಯುತ್ತವೆ. ಬೇಸಿಗೆಯಲ್ಲಿ ಆಹಾರವೂ ತ್ವಚೆಯ ಆರೋಗ್ಯಕ್ಕೆ ಮುಖ್ಯ: ತ್ವಚೆಯ ಆರೋಗ್ಯವು ಹೊರಗಿನ ಆರೈಕೆಯಿಂದ ಮಾತ್ರವಲ್ಲ; ಒಳಗಿನ ಪೋಷಕಾಂಶಗಳಿAದಲೂ ನಿರ್ಧಾರವಾಗುತ್ತದೆ. ಕಲ್ಲಂಗಡಿ, ದ್ರಾಕ್ಷಿ, ಕಿತ್ತಳೆ ಮುಂತಾದ ಹಣ್ಣುಗಳಲ್ಲಿ ನೀರಿನಾಂಶ ಹೆಚ್ಚು ಇರುವುದರಿಂದ ದೇಹ ತಂಪಾಗಿರುತ್ತದೆ. ರಾಗಿ ಅಂಬಳಿ, ಮಜ್ಜಿಗೆ, ತೆಂಗಿನ ನೀರು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತವೆ. ವಿಟಮಿನ್ ಅ ಇರುವ ಆಹಾರಗಳು ಕೊಲಾಜನ್ ಉತ್ಪಾದನೆಗೆ ಸಹಾಯ ಮಾಡುತ್ತವೆ. ಇದರಿಂದ ಚರ್ಮ ಮೃದುವಾಗಿರುತ್ತದೆ. ರಾಸಾಯನಿಕ ಉತ್ಪನ್ನಗಳ ಅತಿಯಾದ ಬಳಕೆಯ ಅಪಾಯ – ವೈಜ್ಞಾನಿಕ ವಿಶ್ಲೇಷಣೆ ಇಂದಿನ ಕಾಲದಲ್ಲಿ ಮಹಿಳೆಯರು ತ್ವಚೆಯ ಆರೈಕೆಗೆ ವಿವಿಧ ರೀತಿಯ ಕಾಸ್ಮೆಟಿಕ್ ಮತ್ತು ಸ್ಕಿನ್‌ಕೇರ್ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಫೇಸ್‌ವಾಶ್, ಫೇರ್‌ನೆಸ್ ಕ್ರೀಮ್, ಸನ್‌ಸ್ಕ್ರೀನ್, ಸೀರಮ್, ಮೇಕಪ್ ಉತ್ಪನ್ನಗಳು ಮುಂತಾದವುಗಳು ತಾತ್ಕಾಲಿಕವಾಗಿ ಚರ್ಮವನ್ನು ಆಕರ್ಷಕವಾಗಿ ತೋರಿಸಬಹುದು. ಆದರೆ ಅವುಗಳಲ್ಲಿ ಇರುವ ಕೆಲವು ರಾಸಾಯನಿಕ ಪದಾರ್ಥಗಳ ಅತಿಯಾದ ಮತ್ತು ದೀರ್ಘಕಾಲದ ಬಳಕೆ ತ್ವಚೆಯ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟುಮಾಡಬಹುದು ಎಂದು ಚರ್ಮ ತಜ್ಞರು ಎಚ್ಚರಿಸುತ್ತಾರೆ. ಪ್ಯಾರಾಬೆನ್ಸ್ (Paraben) – ಸಂರಕ್ಷಕಗಳ ಮೌನ ಅಪಾಯ Parabens ಎಂಬವು ಕಾಸ್ಮೆಟಿಕ್ ಉತ್ಪನ್ನಗಳು ಬೇಗ ಹಾಳಾಗದಂತೆ ಉಳಿಸಲು ಬಳಸುವ “Preservatives” ಇವು ಬ್ಯಾಕ್ಟೀರಿಯಾ ಮತ್ತು ಫಂಗಸ್ ಬೆಳವಣಿಗೆಯನ್ನು ತಡೆಯುತ್ತವೆ. ಸಾಮಾನ್ಯವಾಗಿ “Methylparaben”, “Propylparaben”, “Butylparaben” ಮುಂತಾದ ರೂಪಗಳಲ್ಲಿ ಇರುತ್ತವೆ. ವೈಜ್ಞಾನಿಕ ಹಿನ್ನೆಲೆ ಕೆಲವು ಅಧ್ಯಯನಗಳ ಪ್ರಕಾರ Pareben ದೇಹದ ಹಾರ್ಮೋನ್ ವ್ಯವಸ್ಥೆಯನ್ನು ಪ್ರಭಾವಿಸಬಹುದು. ಇವು “Estrogen” ಎಂಬ ಮಹಿಳಾ ಹಾರ್ಮೋನ್‌ನಂತೆ ವರ್ತಿಸುವ ಸಾಧ್ಯತೆ ಇದೆ ಎಂದು ಸಂಶೋಧಕರು ಹೇಳಿದ್ದಾರೆ. ಇದರ ಪರಿಣಾಮವಾಗಿ ಹಾರ್ಮೋನ್ ಅಸಮತೋಲನ ಉಂಟಾಗಬಹುದು ಎಂಬ ಆತಂಕವಿದೆ. ತ್ವಚೆಯ ಮೇಲೆ ಪರಿಣಾಮ ಚರ್ಮದಲ್ಲಿ ಕೆಂಪು ಕಲೆಗಳು ಅಲರ್ಜಿ ಮತ್ತು ಉರಿ ಸಂವೇದನಾಶೀಲ ತ್ವಚೆಯಲ್ಲಿ ಕಿರಿಕಿರಿ ದೀರ್ಘಕಾಲದಲ್ಲಿ ಚರ್ಮದ ರಕ್ಷಣಾತ್ಮಕ ಪದರ ದುರ್ಬಲವಾಗುವುದು ಸಲ್ಫೇಟ್ಸ್ (Sulphates) – ಅತಿಯಾದ ಸ್ವಚ್ಛತೆ, ಆದರೆ ಹಾನಿಯೂ ಹೆಚ್ಚು Sulphates ವಿಶೇಷವಾಗಿ ಫೇಸ್‌ವಾಶ್, ಶ್ಯಾಂಪು ಮತ್ತು ಕ್ಲೆನ್ಸರ್‌ಗಳಲ್ಲಿ ನೊರೆ ಬರಲು ಬಳಸಲಾಗುತ್ತದೆ. “Sodium Lauryl Sulphates (SLS)” ಮತ್ತು “Sodium Laureth Sulphate (SLES)” ಸಾಮಾನ್ಯ ಉದಾಹರಣೆಗಳು. ವೈಜ್ಞಾನಿಕ ಹಿನ್ನೆಲೆ ಮಾನವನ ಚರ್ಮದ ಮೇಲೆ “Lipid Barrier” ಎಂಬ ನೈಸರ್ಗಿಕ ರಕ್ಷಣಾತ್ಮಕ ಪದರ ಇರುತ್ತದೆ. ಇದು ತೇವಾಂಶವನ್ನು ಕಾಪಾಡಿ ಬ್ಯಾಕ್ಟೀರಿಯಾ ಮತ್ತು ಮಾಲಿನ್ಯದಿಂದ ರಕ್ಷಿಸುತ್ತದೆ. Sulphates ಈ ನೈಸರ್ಗಿಕ ಎಣ್ಣೆಯನ್ನು ಸಂಪೂರ್ಣ ತೆಗೆದುಹಾಕುವುದರಿಂದ ಚರ್ಮದ ಸಮತೋಲನ ಹಾಳಾಗುತ್ತದೆ. ಪರಿಣಾಮಗಳು ತ್ವಚೆ ಒಣಗುವುದು ಚರ್ಮ ಬಿಗಿಯಾಗಿರುವ ಅನುಭವ ಮೊಡವೆ ಹೆಚ್ಚಾಗುವುದು ಚರ್ಮದ ಉರಿಯೂತ ಸಂವೇದನಾಶೀಲ ಚರ್ಮದಲ್ಲಿ ಚರ್ಮ ಸಿಪ್ಪೆ ಬಿಚ್ಚಿಕೊಳ್ಳುವುದು ವೈಜ್ಞಾನಿಕವಾಗಿ ಇದನ್ನು “Sikn Barrier Damage” ಎಂದು ಕರೆಯಲಾಗುತ್ತದೆ. ಕೃತಕ ಸುಗಂಧ ದ್ರವ್ಯಗಳು: ಮೌನ ಅಲರ್ಜಿ ಕಾರಣ ಬಹಳಷ್ಟು ಕ್ರೀಮ್ ಮತ್ತು ಲೋಷನ್‌ಗಳಲ್ಲಿ ಸುಗಂಧಕ್ಕಾಗಿ ಕೃತಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಇವು “Fragrance” ಅಥವಾ “Perfume” ಎಂಬ ಹೆಸರಿನಲ್ಲಿ ಪದಾರ್ಥ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ. ಸಮಸ್ಯೆ ಏನು? ಒಂದು ಸುಗಂಧ ದ್ರವ್ಯದಲ್ಲಿ ನೂರಾರು ರಾಸಾಯನಿಕ ಸಂಯೋಗಗಳಿರಬಹುದು. ಕೆಲವು ಮಂದಿಯಲ್ಲಿ ಇವು ಅಲರ್ಜಿಯನ್ನು ಉಂಟುಮಾಡುತ್ತವೆ. ಸಾಮಾನ್ಯ ಲಕ್ಷಣಗಳು ಚರ್ಮ ಕೆಂಪಾಗುವುದು ಕಿಚ್ಚು ಅಥವಾ ಕೊರಗು ಕಣ್ಣೀರು ಬರುವುದು ತಲೆನೋವು ಉಸಿರಾಟದ ತೊಂದರೆ (ಅತಿಸಂವೇದನಾಶೀಲರಿಗೆ) ತ್ವಚೆಯ “Microbiome” ಹಾನಿ ಮಾನವನ ಚರ್ಮದ ಮೇಲೆ ಒಳ್ಳೆಯ ಬ್ಯಾಕ್ಟೀರಿಯಾಗಳ ಸಮೂಹವಿರುತ್ತದೆ. ಇದನ್ನು “Skin Microbiome” ಎಂದು ಕರೆಯುತ್ತಾರೆ. ಇದು ಚರ್ಮವನ್ನು ರೋಗಗಳಿಂದ ರಕ್ಷಿಸುತ್ತದೆ. ಅತಿಯಾದ ರಾಸಾಯನಿಕ ಉತ್ಪನ್ನಗಳು ಈ ಒಳ್ಳೆಯ ಬ್ಯಾಕ್ಟೀರಿಯಾಗಳನ್ನೂ ನಾಶಮಾಡಬಹುದು. ಪರಿಣಾಮವಾಗಿ: ಮೊಡವೆಗಳು ಹೆಚ್ಚಾಗುತ್ತವೆ ಚರ್ಮ ಬೇಗ ಸೋಂಕಿಗೆ ಒಳಗಾಗುತ್ತದೆ ಚರ್ಮದ ನೈಸರ್ಗಿಕ ಸಮತೋಲನ ಹಾಳಾಗುತ್ತದೆ ಪರಿಸರದ ಮೇಲಿನ ಪರಿಣಾಮ ರಾಸಾಯನಿಕ ಕಾಸ್ಮೆಟಿಕ್ ಉತ್ಪನ್ನಗಳು ಕೇವಲ ಮಾನವನಿಗಷ್ಟೇ ಅಲ್ಲ, ಪರಿಸರಕ್ಕೂ ಹಾನಿಕಾರಕ. ಪ್ಲಾಸ್ಟಿಕ್ ಪ್ಯಾಕೇಜಿಂಗ್ ಪರಿಸರ ಮಾಲಿನ್ಯ ಹೆಚ್ಚಿಸುತ್ತದೆ. ಕೆಲವು ರಾಸಾಯನಿಕಗಳು ನೀರಿನಲ್ಲಿ ಕರಗಿ ಜಲಚರ ಜೀವಿಗಳಿಗೆ ಹಾನಿ ಮಾಡುತ್ತವೆ. “Microplastics” ಸಮುದ್ರಗಳಿಗೆ ಸೇರಿ ಪರಿಸರ ಸಮತೋಲನ ಕೆಡಿಸುತ್ತವೆ. ಆದ್ದರಿಂದ ನೈಸರ್ಗಿಕ ಉತ್ಪನ್ನಗಳು ಪರಿಸರ ಸ್ನೇಹಿಯಾಗಿಯೂ ಪರಿಗಣಿಸಲ್ಪಡುತ್ತವೆ. ನೈಸರ್ಗಿಕ ವಿಧಾನಗಳ ಮಹತ್ವ ಅಲೋವೆರಾ, ಅರಿಶಿನ, ಸೌತೆಕಾಯಿ, ಮೊಸರು, ಜೇನುತುಪ್ಪ ಮುಂತಾದ ನೈಸರ್ಗಿಕ ಪದಾರ್ಥಗಳು: ಕಡಿಮೆ ಅಡ್ಡಪರಿಣಾಮ ಹೊಂದಿವೆ ತ್ವಚೆಯ ನೈಸರ್ಗಿಕ ಸಮತೋಲನ ಕಾಪಾಡುತ್ತವೆ ದೀರ್ಘಕಾಲದ ಆರೋಗ್ಯಕರ ಕಾಂತಿ ನೀಡುತ್ತವೆ ಪರಿಸರಕ್ಕೆ ಹಾನಿ ಮಾಡುವುದಿಲ್ಲ ತ್ವಚೆಯ ಸೌಂದರ್ಯವು ಕೇವಲ ಹೊರಗಿನ ಮೇಕಪ್‌ನಲ್ಲಿಲ್ಲ; ಅದರ ಆರೋಗ್ಯದಲ್ಲಿದೆ. ತಾತ್ಕಾಲಿಕ ಹೊಳಪಿಗಾಗಿ ಅತಿಯಾಗಿ ರಾಸಾಯನಿಕ ಉತ್ಪನ್ನಗಳನ್ನು ಬಳಸುವುದಕ್ಕಿಂತ, ತ್ವಚೆಯ ನೈಸರ್ಗಿಕ ರಕ್ಷಣಾತ್ಮಕ ವ್ಯವಸ್ಥೆಯನ್ನು ಕಾಪಾಡುವುದು ಮುಖ್ಯ. ತ್ವಚೆಯ ಸೌಂದರ್ಯವು ಪ್ರಕೃತಿಯೊಂದಿಗೆ ಹೊಂದಿಕೊಂಡಾಗ ಮಾತ್ರ ದೀರ್ಘಕಾಲ ಉಳಿಯುತ್ತದೆ. ಮನೆಯಲ್ಲೇ ದೊರೆಯುವ ಅಲೋವೆರಾ, ಮೊಸರು, ಸೌತೆಕಾಯಿ, ಅರಿಶಿನ ಮತ್ತು ಜೇನುತುಪ್ಪ ಕೇವಲ ಸಾಂಪ್ರದಾಯಿಕ ಉಪಾಯಗಳಲ್ಲ; ಅವುಗಳ ಹಿಂದೆ ವೈಜ್ಞಾನಿಕ ಕಾರಣಗಳೂ ಇವೆ. ಆದ್ದರಿಂದ ಈ ಬೇಸಿಗೆಯಲ್ಲಿ ರಾಸಾಯನಿಕ ಉತ್ಪನ್ನಗಳಿಗಿಂತ ನೈಸರ್ಗಿಕ ಆರೈಕೆಗೆ ಆದ್ಯತೆ ನೀಡಿ ಆರೋಗ್ಯಕರ, ತಾಜಾ ಮತ್ತು ಕಾಂತಿಯುತ ತ್ವಚೆಯನ್ನು ಕಾಪಾಡೋಣ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಮಹಿಳೆಯರ ಆರೋಗ್ಯ ರಕ್ಷಣೆಗೆ ನೀರಿನ ವೈಜ್ಞಾನಿಕ ಪಾತ್ರ ಮಹಿಳೆಯರ ಆರೋಗ್ಯಕ್ಕೆ ಕ್ಯಾಲ್ಸಿಯಂ ಏಕೆ ಅತ್ಯಗತ್ಯ?