SARVAM AI Bengaluru based AI Model will beat the ChatGPT and metaಸರ್ವಮ್ ಎಐ

ಬೆಂಗಳೂರು, ಫೆಬ್ರವರಿ 18: ಜಗತ್ತು ಕೃತಕ ಬುತ್ತಿಮತ್ತೆಯತ್ತ (AI) ವಾಲುತ್ತಿದೆ. ಈಗಾಗಲೇ ಎಐ ಎಲ್ಲ ರಂಗದಲ್ಲೂ ಪ್ರವೇಶಿಸಿದೆ. ಭವಿಷ್ಯದಲ್ಲಿ ಜಗತ್ತನ್ನೇ ಆಳುವ ಸಾಧನ ಈ ಎಐ ಆದರೂ ಅಚ್ಚರಿ ಇಲ್ಲ. ಸದ್ಯ ನಾವು ಬಳಸುತ್ತಿರುವ ಎಐ ಟೂಲ್‌ಗಳು ಅಮೇರಿಕ, ಚೀನಾ ನಿರ್ಮತವುಗಳಾಗಿವೆ. Chatgpt, Meta, Gemini ಸೇರಿದಂತೆ ಇನ್ನು ಅನೇಕ ಅಮೇರಿಕ ನಿರ್ಮಿತ ಎಐ ಟೂಲ್‌ಗಳನ್ನು ಬಳಸುತ್ತವೆ. ಇನ್ನು, ಚೀನಾ ನಿರ್ಮಿತ deepsseek ಸೇರಿದಂತೆ ಅನೇಕ ಟೂಲ್‌ಗಳನ್ನು ಬಳಸುತ್ತೇವೆ. ಆದರೆ, ಭಾರತ ಸಿದ್ದಪಡಿಸಿದ ಎಐ ಟೂಲ್‌ ಇಲ್ಲವೆ? ಇದೆ, ಅದು SARVAM AI. ಈ SARVAM AI ಹೇಗೆ ಕಾರ್ಯನಿರ್ವಹಿಸುತ್ತದೆ? ಇಲ್ಲಿದೆ ವಿವರ

ಸರ್ವಮ್‌ ಎಐ ಬೆಂಗಳೂರು ಮೂಲದ ಕಂಪನಿಯಾಗಿದೆ. 2023ರಲ್ಲಿ ಶುರುವಾದ ಸರ್ವಮ್ ಎಐ ತನ್ನ ವಿವಿಧ ಲ್ಯಾಂಗ್ವೇಜ್ ಸೇವೆಗಳಿಂದ ಗಮನ ಸೆಳೆಯತೊಡಗಿದೆ. ಐಐಟಿ ಎಂಜಿನಿಯರುಗಳಾದ ವಿವೇಕ್ ರಾಘವನ್ ಮತ್ತು ಪ್ರತ್ಯುಶ್ ಕುಮಾರ್ ಅವರು 2023ರ ಆಗಸ್ಟ್ ತಿಂಗಳಲ್ಲಿ ಸರ್ವಮ್ ಎಐ ಅನ್ನು ಸ್ಥಾಪಿಸಿದ್ದಾರೆ. ಬೆಂಗಳೂರಿನಲ್ಲಿ ಇದರ ಕಚೇರಿ ಇದೆ. ವಿವೇಕ್ ರಾಘವನ್ ಮತ್ತು ಪ್ರತ್ಯುಶ್ ಕುಮಾರ್ ಅವರು ಐಐಟಿ ಡೆಲ್ಲಿಯಲ್ಲಿ ಬಿಟೆಕ್, ಅಮೆರಿಕದ ಕಾರ್ನೇಜೀ ಮೆಲ್ಲೋನ್ ಯೂನಿವರ್ಸಿಟಿಯಲ್ಲಿ ಪಿಎಚ್​ಡಿ ಮಾಡಿದ್ದಾರೆ.

ಇದನ್ನೂ ಓದಿ: ಇಂಡಿಯಾ-AI ಮಿಷನ್: ಗಿನ್ನೆಸ್ ವಿಶ್ವ ದಾಖಲೆ ಪಟ್ಟಿಗೆ ಸೇರಿದ ಭಾರತ

ಭಾರತೀಯ ಭಾಷೆ, ಸಂಸ್ಕೃತಿ ಮತ್ತು ಭಾರತೀಯ ಬಳಕೆದಾರರಿಗೆ ಅನುಕೂಲ ಆಗುವ ಹಾಗೆ ಸರ್ವಮ್‌ ಎಐ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಸರ್ವವಮ್‌ ಎಐ ಚ್ಯಾಟ್​ಜಿಪಿಟಿ ಮತ್ತು ಜೆಮಿನಿಯ ಅಡ್ವಾನ್ಸ್ಡ್ ವರ್ಷನ್​ಗಳಿಗೆ ಪೈಪೋಟಿ ನೀಡುವಷ್ಟು ಉತ್ತಮ ಪ್ರದರ್ಶನ ತೋರುತ್ತಿವೆ. ಸರ್ವಮ್ ವಿಷನ್ ಮಾಡಲ್ ಭಾರತೀಯ ಭಾಷೆಗಳ ಡಾಕ್ಯುಮೆಂಟ್​ಗಳನ್ನು ಸಂಸ್ಕರಿಸಬಲ್ಲುದು.

ಸರ್ವವಮ್‌ ಎಐನಲ್ಲಿನ ಫೀಚರ್‌ಗಳು

ಸರ್ವವಮ್‌ ಎಐನಲ್ಲಿ ಟೆಕಸ್ಟ್‌ ಟು ಸ್ಪೀಚ್‌, ವಿಷನ್‌, ಸ್ಪೀಚ್‌ ಟು ಟೆಕಸ್ಟ್‌, ಟ್ರಾನ್‌ಸ್ಲೇಟ್‌, ಚಾಟ್‌ ಆಯ್ಕೆ ಇದೆ. ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಳ್ಳಲು conversational agents ಇದೆ. ಹಾಗೇ, ವಾಯ್ಸ್‌ ಡಬ್ಬಿಂಗ್‌ ಸೇರಿದಂತೆ ಅನೇಕ ಫೀಚರ್‌ಗಳು ಇದರಲ್ಲಿ ಇವೆ. ಜಾಟ್‌ಜಿಪಿಟಿ ಮತ್ತು ಜೆಮಿನೈ ರೀತಿ ಸರ್ವವಮ್‌ ಎಐ ಅನ್ನು ಬಳಸಿಕೊಳ್ಳಬಹುದು. ಜೊತೆಗೆ, ಎಲ್‌ವನ್‌ ಲ್ಯಾಬ್ಸ್‌ ಮತ್ತು ಮೆಟಾ ಎಐ ಮಾಡುವ ಕೆಲಸಗಳನ್ನು ಕೂಡ ಇದು ಮಾಡುತ್ತದೆ.

ಈ ಸರ್ವವಮ್‌ ಎಐ ನಲ್ಲಿ ಪುರುಷ ಮತ್ತು ಮಹಿಳೆ ವಾಯ್ಸ್‌ ಡಬ್‌ ಮಾಡಿಕೊಡುತ್ತದೆ. ಸರ್ವವಮ್‌ ಎಐ ಭಾರತದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ವಾಯ್ಸ್‌ ಡಬ್‌ ಮಾಡಿಕೊಡುವದರ ಜೊತೆಗೆ ಅನುವಾದ ಕೂಡ ಮಾಡುತ್ತದೆ. ಇದರಲ್ಲಿ 35 ವಾಯ್ಸ್‌ ಮಾದರಿಗಳಿವೆ. 10 ಸ್ಥಳೀಯ ಭಾಷೆಗಳಿಗೆ ಸಪೋರ್ಟ್‌ ಮಾಡುತ್ತದೆ.  

ನವದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ ಸರ್ವವಮ್‌ ಎಐ ಸ್ಥಾಪಕರು ಮಹತ್ವದ ಘೋಷಣೆಯೊಂದು ಮಾಡಿದ್ದಾರೆ. ಅದು, ಎರಡು ಹೊಸ ಭಾಷಾ ಮಾದರಿಗಳನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ಒಂದು 30 ಬಿಲಿಯನ್ ಪ್ಯಾರಾಮೀಟರ್ ಮಾದರಿ ಮತ್ತು  105 ಬಿಲಿಯನ್ ಪ್ಯಾರಾಮೀಟರ್ ಮಾದರಿಗಳನ್ನು ಆರಂಭಿಸುವುದಾಗಿ ಹೇಳಿದ್ದಾರೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *