Good News: BSNL new recharge plan 90 days validity for 499 Rsಬಿಎಸ್‌ಎನ್‌ಎಲ್‌

ನವದೆಹಲಿ, ಫೆಬ್ರವರಿ 19: ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಕಂಪನಿಯಾದ ಭಾರತ್ ಸಂಚಾರ ನಿಗಮ್ ಲಿಮಿಟೆಡ್ (BSNL) ತನ್ನ ಗ್ರಾಹಕರಿಗೆ ಹೊಸದಾಗಿ ಒಂದು ಹೊಸ ಪ್ರಿಪೇಡ್ ಯೋಜನೆಯನ್ನು ಪರಿಚಯಿಸಿದೆ. ಇದು ವಿಶೇಷವಾಗಿ ದೀರ್ಘಕಾಲದಿಂದ ರೀಚಾರ್ಜ್‌ ಮಾಡದೆ ಬಂದ್‌ ಆಗಿರುವ ಅಥವಾ ಡೀಆಕ್ಟಿವೇಟ್‌ ಆಗಿರುವ ನಂಬರ್‌ಗಳನ್ನು ಮತ್ತೆ ಸಕ್ರಿಯವಾಗಿರಿಸಿಕೊಳ್ಳುವವರಿಗೆ ಮತ್ತು ಸೆಕೆಂಡರಿ ಸಿಮ್‌ ಬಳಸುವವರಿಗಾಗಿ ಈ ಪ್ಲಾನ್‌ ರೂಪಿಸಲಾಗಿದೆ.

ಪ್ಲಾನ್‌ನ ವಿಶೇಷತೆಗಳು

ಬಿಎಸ್‌ಎನ್‌ಎಲ್‌ ಪರಿಚಯಿಸಿರುವ ಈ ಹೊಸ ಪ್ರಿಪೇಯ್ಡ್‌ ಬೆಲೆ 449 ರೂ. ಆಗಿದೆ. ವ್ಯಾಲಿಡಿಟಿ 90 ದಿನಗಳವರೆಗೆ ಇರುತ್ತದೆ. ದಿನಕ್ಕೆ ಸುಮಾರು 5 ರೂಪಾಯಿ ಖರ್ಚಿನಲ್ಲಿ ಸಿಎಮ್‌ ಕಾರ್ಡ್‌ ಅನ್ನು ಸಕ್ರಿಯವಾಗಿಟ್ಟುಕೊಳ್ಳಬಹುದು. ದೇಶಾದ್ಯಂತ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕರೆ ಮಾಡಬಹದು. ನ್ಯಾಷನಲ್‌ ರೋಮಿಂಗ್ ಕೂಡ ಉಚಿತವಾಗಿದೆ. ಅಂದರೆ, ವಿದೇಶದಲ್ಲಿರುವಾಗ ಕರೆ ಮಾಡಿದರೆ ನಿಮಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಇದಲ್ಲದೆ, ನಿಮಗೆ ಪ್ರತಿದಿನ 100 ಉಚಿತ ಎಸ್‌ಎಂಎಸ್‌ಗಳು ಸೌಲಭ್ಯಗಳು ದೊರೆಯುತ್ತವೆ.
ಈ ಪ್ಲಾನ್‌ನಲ್ಲಿ 5GB ಇಂಟರ್ನೆಟ್‌ ಡೇಟಾ ಸಿಗಲಿದ್ದು, ಇದನ್ನು 90 ದಿನಗಳಲ್ಲಿ ಯಾವಾಗ ಬೇಕಾದರೂ ಬಳಸಬಹುದು. ಇದರಲ್ಲಿ ಯಾವುದೇ ದೈನಂದಿನ ಮಿತಿ ಇರುವುದಿಲ್ಲ. ಆದ್ದರಿಂದ ಅಗತ್ಯಕ್ಕೆ ಅನುಗುಣವಾಗಿ ಡೇಟಾ ಬಳಸಬಹದಾಗಿದೆ.

ಇದನ್ನೂ ಓದಿ: ಸಂಪೂರ್ಣ ಸ್ವದೇಶಿ ಟೂಲ್‌: Chatgpt, Metaಗೆ ಸೆಡ್ಡು ಹೊಡೆಯಬಲ್ಲ ಬೆಂಗಳೂರಿನ  SARVAM AI

ಯಾರಿಗೆ ಉಪಯುಕ್ತ?

ತಮ್ಮ ಹಳೆಯ ನಂಬರ್‌ ಅನ್ನು ಕಳೆದುಕೊಳ್ಳಲು ಇಷ್ಟವಿಲ್ಲದವರು ಅಥವಾ ಕಡಿಮೆ ಬೆಲೆಯಲ್ಲಿ ಕರೆ ಸೌಲಭ್ಯಕ್ಕಾಗಿ ಎರಡನೇ ಸಿಮ್‌ ಬಳಸುವವರಿಗೆ ಇದು ಅನುಕೂಲಕಾರಿಯಾಗಿದೆ. ಕೇವಲ ಡೇಟಾಕ್ಕಿಂತ ಹೆಚ್ಚಾಗಿ ಸಿಮ್‌ ಆಕ್ಟಿವ್‌ ಆಗಿರಬೇಕು ಮತ್ತು ಅನ್‌ಲಿಮಿಟೆಡ್‌ ಕರೆ ಬೇಕು ಎನ್ನುವರಿಗೆ ಈ ಪ್ಲಾನ್‌ ಉಪಯೋಗಕಾರಿಯಾಗಿದೆ.
ಇದೇ 90 ದಿನಗಳ ವ್ಯಾಲಿಡಿಟಿಗೆ ಜಿಯೋ ಸಂಸ್ಥೆಯು 899 ರೂ. ಪ್ಲಾನ್‌ ನೀಡುತ್ತಿದೆ. ಆದರೆ, ಕೇವಲ ಸಿಮ್‌ ಕಾರ್ಡ್‌ ಆಕ್ಟಿವ್‌ ಇಟ್ಟುಕೊಳ್ಳಲು ಬಯಸುವವರಿಗೆ ಬಿಎಸ್‌ಎನ್‌ಎಲ್‌ 449 ರೂ. ಪ್ಲಾನ್‌ ಅತಿ ಅಗ್ಗವಾಗಿದೆ. ಬಿಎಸ್‌ಎನ್‌ಎಲ್‌ ದೇಶಾದ್ಯಂತ ವೇಗವಾಗಿ 4G ಟವರ್‌ಗಳನ್ನು ಅಳವಡಿಸುತ್ತಿದ್ದು, ಶೀಘ್ರದಲ್ಲೇ ಪ್ರಮುಖ ನಗರಗಳಲ್ಲಿ 5G ಸೇವೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *