Karnataka Police Constable Recruitment 2026: Application open for 3991 postsಸಾಂದರ್ಭಿಕ ಚಿತ್ರ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ(KSP) 3991 ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್(Civil Police Constable) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ಸರ್ಕಾರದ ಉದ್ಯೋಗವನ್ನು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಹೊಸ ನಿಯಮಗಳ ಪ್ರಕಾರ ಸಾಮಾನ್ಯ, 2A, 2B ಹಾಗೂ SC/ST ಅಭ್ಯರ್ಥಿಗಳಿಗೆ ವಯೋಮಿತಿ ಅನ್ವಯವಾಗುತ್ತದೆ.

ಹುದ್ದೆಯ ವಿವರಗಳು

  • ಸಂಸ್ಥೆ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP)
  • ಒಟ್ಟು ಹುದ್ದೆಗಳು: 3991
  • ಉದ್ಯೋಗ ಸ್ಥಳ: ಕರ್ನಾಟಕ
  • ಹುದ್ದೆಯ ಹೆಸರು: ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್
  • ವೇತನ ಶ್ರೇಣಿ: 37,500 –76,100 ರೂ.

ಹುದ್ದೆಗಳ ವಿಂಗಡಣೆ

  • ಕಲ್ಯಾಣ ಕರ್ನಾಟಕ (KK): 596 ಹುದ್ದೆಗಳು
  • ಉಳಿದ ಕರ್ನಾಟಕ / RPC: 3395 ಹುದ್ದೆಗಳು

ಶೈಕ್ಷಣಿಕ ಅರ್ಹತೆ

ಅಭ್ಯರ್ಥಿಗಳು ಕೆಳಗಿನ ವಿದ್ಯಾರ್ಹತೆಗಳಲ್ಲಿ ಯಾವುದಾದರೂ ಒಂದನ್ನು ಹೊಂದಿರಬೇಕು:

  • ಎಸ್‌ಎಸ್‌ಎಲ್‌ಸಿ (10ನೇ ತರಗತಿ)
  • ಪಿಯುಸಿ / 12ನೇ ತರಗತಿ

ವಯೋಮಿತಿ

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 33 ವರ್ಷ

ವಯೋಮಿತಿ ಸಡಿಲಿಕೆ

  • OBC, 2A, 2B, 3A, 3B ಅಭ್ಯರ್ಥಿಗಳಿಗೆ – 2 ವರ್ಷ
  • SC/ST ಅಭ್ಯರ್ಥಿಗಳಿಗೆ – 5 ವರ್ಷ
  • PwD (ದಿವ್ಯಾಂಗ) ಅಭ್ಯರ್ಥಿಗಳಿಗೆ – 10 ವರ್ಷ

ಅರ್ಜಿ ಶುಲ್ಕ

  • ಸಾಮಾನ್ಯ, OBC, 2A, 2B, 3A, 3B ಅಭ್ಯರ್ಥಿಗಳಿಗೆ – ₹750
  • SC/ST ಅಭ್ಯರ್ಥಿಗಳಿಗೆ – ₹500

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳ ಮೂಲಕ ನಡೆಯಲಿದೆ:

  1. ಲಿಖಿತ ಪರೀಕ್ಷೆ (OMR ಆಫ್‌ಲೈನ್)
  2. ಸಹಿಷ್ಣುತೆ ಪರೀಕ್ಷೆ (Endurance Test)
  3. ದೈಹಿಕ ಮಾನದಂಡ ಪರೀಕ್ಷೆ (Physical Standard Test)
  4. ವೈದ್ಯಕೀಯ ಪರೀಕ್ಷೆ (Medical Test)

ಅರ್ಜಿ ಸಲ್ಲಿಸುವ ವಿಧಾನ

ಅರ್ಹ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದಿ, ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

  • ಆನ್‌ಲೈನ್ ಅರ್ಜಿ ಆರಂಭ ದಿನಾಂಕ: 08 ಜೂನ್ 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03 ಜುಲೈ 2026
  • ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 04 ಜುಲೈ 2026

ಪ್ರಮುಖ ಲಿಂಕ್‌ಗಳು

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *