ನವದೆಹಲಿ, ಏಪ್ರಿಲ್ 26: ಬ್ರೆಜಿಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಚೀಸ್ ಸ್ಪರ್ಧೆಯಲ್ಲಿ ಎರಡು ಭಾರತೀಯ ಚೀಸ್ ಬ್ರಾಂಡ್‌ಗಳು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಮನ್ ಕಿ ಬಾತ್‌ನಲ್ಲಿ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿಯುವರ ಇಂದು ಮನ್ ಕಿ ಬಾತ್‌ನ 133ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಡೈರಿ ವಲಯದಲ್ಲಿ ಬಹುದೊಡ್ಡ ಬದಲಾವಣೆ ಆಗುತ್ತಿದೆ. ಈ ವಲಯದಲ್ಲಿ ಮೌಲ್ಯ ವರ್ಧನೆಯು ನಮ್ಮ ಸಾಂಪ್ರದಾಯಿಕ ರುಚಿಗೆ ಹೊಸದೊಂದು ಗುರುತು ನೀಡಿದೆ ಎಂದರು. ಇಂದು ಭಾರತೀಯ ಚೀಸ್ ವಿಶ್ವಾದ್ಯಂತ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಬೆಳಗಿನ ಉಪಹಾರವೇ ಇರಲಿ, ಮಧ್ಯಾಹ್ನದ ಭೋಜನವೇ ಇರಲಿ ಅಥವಾ ರಾತ್ರಿಯ ಭೋಜನವೇ ಇರಲಿ ವಿಶ್ವದ ಆಹಾರ ತಟ್ಟೆಗಳಲ್ಲಿ ಭಾರತದ ರುಚಿ ತಲುಪುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಜಮ್ಮ-ಕಾಶ್ಮೀರದ ಕಲಾರಿ ಚೀಸ್ ಅನ್ನು ‘ಕಾಶ್ಮೀರದ ಮೋಜೆರೆಲಾ’ ಎಂದು ಕರೆಯಲಾಗುತ್ತದೆ. ಗುಜ್ಜರ್ – ಬಕರವಾಲ್ ಸಮುದಾಯದ ಜನರು, ಹಲವಾರು ತಲೆಮಾರುಗಳಿಂದಲೂ ಇದನ್ನು ತಯಾರಿಸುತ್ತಿದ್ದಾರೆ ಮತ್ತು ಸೇವಿಸುತ್ತಿದ್ದಾರೆ. ಅಂತೆಯೇ ಸಿಕ್ಕಿಂ, ಅರುಣಾಚಲ ಪ್ರದೇಶ ಮತ್ತು ಲಡಾಖ್‌ನಲ್ಲಿ ‘ಛುರಪೀ’ ಬಹಳ ಜನಪ್ರಿಯವಾಗಿದೆ. ಈ ಚೀಸ್‌ನ ವಿಶೇಷತೆ ಎಂದರೆ ಇದನ್ನು ಚಮರೀಮೃಗ/ಯಾಕ್ ಹಾಲಿನಿಂದ ತಯಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಮಹಾರಾಷ್ಟ್ರ ಮತ್ತು ಗುಜರಾತ್ ನಲ್ಲಿ ‘ಸೂರ್ತಿ ಚೀಸ್’ ಅನ್ನು ‘ಟೋಪ್ಲಿ ನು ಪನೀರ್’ ಎಂಬ ಹೆಸರಿನಿಂದಲೂ ಕೂಡಾ ಕರೆಯಲಾಗುತ್ತದೆ ಮತ್ತು ಇದಕ್ಕೆ ತನ್ನದೇ ಆದ ವಿಶಿಷ್ಠತೆ ಇದೆ. ನಾನು ಇಲ್ಲಿ ಕೆಲವೇ ಹೆಸರುಗಳನ್ನು ಉಲ್ಲೇಖಿಸಿದ್ದೇನೆ, ಆದರೆ ನಮ್ಮ ದೇಶದಲ್ಲಿ ಈ ರುಚಿಯ ವ್ಯಾಪ್ತಿ ಬಹಳ ವಿಶಾಲವಾಗಿದೆ ಎಂದು ಹೇಳಿದರು. ಈ ಸಂಪ್ರದಾಯವು ಹೊಸ ಬಲವನ್ನು ಪಡೆಯುತ್ತಿದೆ. ಅನೇಕ ಭಾರತೀಯ ಕಂಪನಿಗಳು ಈ ವಲಯದಲ್ಲಿ ಹೂಡಿಕೆ ಮಾಡುತ್ತಿವೆ. ಆಧುನಿಕ ತಂತ್ರಜ್ಞಾನ ಬರುತ್ತಿದೆ, ಪ್ಯಾಕೇಜಿಂಗ್ ಉತ್ತಮಗೊಳ್ಳುತ್ತಿದೆ ಮತ್ತು ನಮ್ಮ ಉತ್ಪನ್ನಗಳು ವಿಶ್ವ ಮಾನದಂಡಗಳೊಂದಿಗೆ ಮುಂದುವರಿಯುತ್ತಿವೆ. ಇದರ ಪರಿಣಾಮವಾಗಿ, ಭಾರತೀಯ ಚೀಸ್ ಈಗ ದೇಶದ ಗಡಿಗಳನ್ನು ಮೀರಿ ವಿಶ್ವದ ಮಾರುಕಟ್ಟೆಗಳು ಮತ್ತು ರೆಸ್ಟೋರೆಂಟ್ ಗಳನ್ನು ತಲುಪುತ್ತಿವೆ ಎಂದು ಹೇಳಿದ್ದಾರೆ. ನಾವು ಇಂದು ಸ್ಥಳೀಯದಿಂದ ಗ್ಲೋಬಲ್ ಕುರಿತ ಮಾತನಾಡುತ್ತೇವೆ, ಇದರಲ್ಲಿ ಭಾರತೀಯ ಚೀಸ್ ನ ಉದಾಹರಣೆಯು, ನಮಗೆ ಮುಂದಿನ ದಾರಿಯನ್ನು ತೋರಿಸುತ್ತವೆ. ಭಾರತದ ರುಚಿ, ಭಾರತದ ಸಂಪ್ರದಾಯ ಮತ್ತು ಭಾರತದ ಗುಣಮಟ್ಟ ವಿಶ್ವದ ಜನರಿಗೆ ಒಂದು ಹೊಸ ಅನುಭವ ನೀಡಲಿದೆ ಮತ್ತು ಭಾರತದೊಂದಿಗೆ ಹೊಸ ಸಂಪರ್ಕವನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆ ನನಗಿದೆ ಎಂದರು. ಪವನ ಶಕ್ತಿಯ ಮೂಲಕ 56 ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಭಾರತ ಪವನ ಶಕ್ತಿ ಸಾಮರ್ಥ್ಯದಲ್ಲಿ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತದ ಅಭಿವೃದ್ಧಿಗೆ ಸೌರಶಕ್ತಿ ಮತ್ತು ಪವನ ಶಕ್ತಿ ಅತ್ಯಗತ್ಯವಾಗಿವೆ ಎಂದರು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಯುರೋಪಿಯನ್ ಗರ್ಲ್ಸ್ ಮ್ಯಾಥಮ್ಯಾಟಿಕಲ್ ಒಲಿಂಪಿಯಾಡ್ನಲ್ಲಿ ಭಾರತದ ನಾರಿಗೆ ಚಿನ್ನದ ಪದಕ ಜೂನ್ಗಿಂತಲೂ ಮೊದಲೇ ಭಾರತಕ್ಕೆ ಮುಂಗಾರು ಪ್ರವೇಶ ಸಾಧ್ಯತೆ