ಬೆಂಗಳೂರು, ಏಪ್ರಿಲ್ 28: ರಾಜ್ಯಾದ್ಯಂತ ವಾತಾವರಣದಲ್ಲಿ ಉಷ್ಣಾಂಶ ಜಾಸ್ತಿಯಾಗುತ್ತಿರುವ ಬೆನ್ನಲ್ಲೇ ಹವಾಮಾನ ತಜ್ಞರು ಸಮಾಧಾನಕರ ಸಂಗತಿ ತಿಳಿಸಿದ್ದಾರೆ. ಈ ವರ್ಷ ಭಾರತಕ್ಕೆ ಮುಂಗಾರು ಪ್ರವೇಶ ಸಾಮಾನ್ಯ ಅವಧಿಗೂ ಮುನ್ನವೇ ಆಗಲಿದೆ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಜೂನ್‌ನಲ್ಲಿ ಮುಂಗಾರು ಭಾರತಕ್ಕೆ ಪ್ರವೇಶ ಮಾಡುತ್ತದೆ. ಅಂದರೆ, ಮೇ ಕೊನೆವಾರದಲ್ಲಿ ಅಂಡಮಾನ್-ನಿಕೋಬಾರ್‌ಗೆ ಮುಂಗಾರು ಪ್ರವೇಶ ಮಾಡುತ್ತಿತ್ತು. ಜೂನ್ 1 ಅಥವಾ 2 ರಂದು ಕೇರಳಕ್ಕೆ ಆಗಮನ ಆಗುತ್ತಿತ್ತು. ಆದರೆ, ಈ ಸಲ ಅವಧಿಗೂ ಮುನ್ನವೇ ಭಾರತಕ್ಕೆ ಮುಂಗಾರು ಪ್ರವೇಶ ಮಾಡಲಿದೆ ಎಂದು ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ-ರೇಂಜ್ ವೆದರ್ ಫೋರ್‌ಕಾಸ್ಟ್ ಮಾಹಿತಿ ನೀಡಿದೆ. ಮೇ 18ರ ಸುಮಾರಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಮಾನ್ಸೂನ್ ತಲುಪುವ ಸಾಧ್ಯತೆಯಿದೆ. ಮೇ 25ಕ್ಕೆ ಕೇರಳವನ್ನು ಪ್ರವೇಶಿಸಬಹುದು ಎಂದು ಹೇಳಲಾಗಿದೆ. ಕೃಷಿ ಪ್ರಧಾನವಾಗಿರುವ ಭಾರತಕ್ಕೆ ಮುಂಗಾರು ಸರಿಯಾದ ಸಮಯದಲ್ಲಿ ಪ್ರವೇಶ ಮಾಡುವುದು ತುಂಬ ಮುಖ್ಯ. ಇಲ್ಲದೆ ಇದ್ದರೆ, ಅದೆಷ್ಟೋ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ನೀರಿಗೆ ಹಾಹಾಕಾರ ಉಂಟಾಗುತ್ತದೆ. ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ರಾಜ್ಯದ ದಕ್ಷಿಣ ಒಳನಾಡು ಜಿಲ್ಲೆಗಳಾದ ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಚಾಮರಾಜನಗರ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಏಪ್ರಿಲ್ 30 ಮತ್ತು ಮೇ 1 ರಂದು 64.5 ಮಿಮಿ ನಿಂದ 115.5 ಮಿಮಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಎಲ್ಲೋ ಅಲರ್ಟ್ ಘೋಷಿಸಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ರಾಜ್ಯಾದ್ಯಂತ ಏಪ್ರಿಲ್ 30ರವರೆಗೆ ಆಲಿಕಲ್ಲು ಮಳೆ: ಹವಾಮಾನ ಇಲಾಖೆ ಕರಕುಶಲ ಕಲೆಗೆ ಹೊಸ ಮೆರುಗು ನೀಡುತ್ತಿದೆ ‘ಆರೋಹಣʼ, ನಿಮ್ಮಿಷ್ಟದಂತೆ ಇಲ್ಲಿ ಅರಳಲಿವೆ ಹ್ಯಾಂಡ್ಮೇಡ್ ಉತ್ಪನ್ನಗಳು!