ಹುಬ್ಬಳ್ಳಿ, ಮಾರ್ಚ್ 20: ನೈಋತ್ಯ ರೈಲ್ವೆ ವಲಯವು (South Western Railway) ವಿಜಯಪುರ-ಬಾಗಲಕೋಟೆ ನಡುವೆ ಕಾಮಗಾರಿ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಆರು ದಿನಗಳ ಕಾಲ ಬಾಗಲಕೋಟೆ-ವಿಜಯಪುರ ನಡುವೆ ವಿಜಯಪುರ-ಮಂಗಳೂರು ಎಕ್ಸಪ್ರೆಸ್ ರೈಲು ಸಂಚರಿಸುವುದಿಲ್ಲ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ರೈಲು ಭಾಗಶಃ ರದ್ದು ರೈಲು ಸಂಖ್ಯೆ 17378: ಮಂಗಳೂರು ಸೆಂಟ್ರಲ್ – ವಿಜಯಪುರ ಎಕ್ಸ್‌ಪ್ರೆಸ್ ರೈಲು ಮಾರ್ಚ್ 19 ರಿಂದ ಮಾರ್ಚ್ 24ರವರೆಗೆ ಬಾಗಲಕೋಟೆವರೆಗೆ ಮಾತ್ರ ಸಂಚರಿಸುತ್ತದೆ. ಈ 6 ದಿನಗಳಲ್ಲೂ ರೈಲು ಬಾಗಲಕೋಟೆ ಮತ್ತು ವಿಜಯಪುರ ನಡುವೆ ಸಂಚರಿಸುವುದಿಲ್ಲ. ರೈಲು ಸಂಖ್ಯೆ 17377: ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಮಾರ್ಚ್ 20 ರಿಂದ ಮಾರ್ಚ್ 25 ರವರೆಗೆ ವಿಜಯಪುರ ಬದಲಿಗೆ ಬಾಗಲಕೋಟೆಯಿಂದ ಸಂಜೆ 5.00 ಗಂಟೆಗೆ ಆರಂಭವಾಗುತ್ತದೆ. ಈ ರೈಲು ಕೂಡ ವಿಜಯಪುರ ಮತ್ತು ಬಾಗಲಕೋಟೆ ನಡುವೆ ಸಂಚರಿಸುವುದಿಲ್ಲ. ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಕೇಂದ್ರದಿಂದ ಪ್ರಾಚೀನ ಹಸ್ತಪ್ರತಿಗಳ ಡಿಜಿಟಲೀಕರಣ: ನಿಮ್ಮ ಮನೆಗೂ ಬರುವರು ಅಧಿಕಾರಿಗಳು