Lakshmana Brings Sanjeevini Herb from Mudgala Maharshi Ashram to Heal BharataAI ಚಿತ್ರ

ದಾನದ ಮಹಿಮೆಯು ಅನಂತವಾದುದು. ಪರಿಶುದ್ಧನಾಗಿ, ಯೋಗ್ಯಕಾಲದಲ್ಲಿ, ಸತಾತನಾದವನಿಗೆ ಸ್ಥಲವೇ ದಾನಮಾಡಿದರೂ ಅದರಿಂದ ಅನಂತಫಲವನ್ನು ಪಡೆಯುವನೆಂಬುದಕ್ಕೆ ಮುದ್ದಲಮಹರ್ಷಿಗಳ ಕಥೆಯೇ ಸಾಕ್ಷಿಯಾಗಿದೆ.

ಮುಗ್ಗಲಮಹರ್ಷಿ ಕುರುಕ್ಷೇತ್ರದಲ್ಲಿ ವಾಸಮಾಡುತ್ತಿದ್ದರು. ಧರ್ಮಾತ್ಮರಾದ, ಆಸೂಯಾರಹಿತರಾದ, ಸತ್ಯನಿಷ್ಠರಾದ ಇವರು ಹೊಲಗದ್ದೆಗಳಲ್ಲಿ ಪೈರುಗಳನ್ನು ಕೊಯ್ದನಂತರ, ಅಲ್ಲಿ ಬಿದ್ದಿರುವ ಕಾಳುಗಳನ್ನು ಆರಿಸಿಕೊಂಡು ಅದರಿಂದ ಜೀವನ ನಿರ್ವಹಣೆ ಮಾಡುತ್ತಿದ್ದರು. ಇದಕ್ಕೆ ‘ಉಂಭವೃತ್ತಿ’ ಎಂದು ಹೆಸರು.

ಇದನ್ನು ‘ಕಪೋತವೃತ್ತಿ’ಯೆಂದೂ ಕರೆಯುತ್ತಾರೆ. ಹೀಗೆ ಬಡತನದಲ್ಲಿದ್ದರೂ ಈ ಋಷಿ ವೈದಿಕಕರ್ಮಗಳನ್ನೆಲ್ಲ ಶ್ರದ್ಧೆಯಿಂದ ಮಾಡುತ್ತ, ದೇವತೆಗಳನ್ನೂ ಅತಿಥಿಗಳನ್ನೂ ಪ್ರತಿದಿನವೂ ತೃಪ್ತಿಪಡಿಸಿ, ಉಳಿದುದನ್ನು ತಾವು ಭುಂಜಿಸುತ್ತ ಕಾಲಕಳೆಯುತ್ತಿದ್ದರು.

ಇವರು ಇಷ್ಟಿಕೃತವೆಂಬ ಯಾಗವನ್ನೂ ಮಾಡುತ್ತಿದ್ದರು. ಅಂದರೆ ಒಂದೊಂದು ಪಕ್ಷದಲ್ಲಿ ಸಂಗ್ರಹಿಸಿದ ಧಾನ್ಯವನ್ನು ಆಯಾ ಹುಣ್ಣಿಮೆ ಅಥವಾ ಅಮಾವಾಸ್ಯೆಗಳಲ್ಲಿ ಯಾಗ ಮಾಡಿ, ಅತಿಥಿಸತ್ಕಾರದಲ್ಲಿ ಖರ್ಚು ಮಾಡುತ್ತಿದ್ದರು.

ಆನಂದ ರಾಮಾಯಣದಲ್ಲೂ ಮುದ್ದಲ ಮಹರ್ಷಿಗಳ ಉಲ್ಲೇಖ ದೊರೆಯುತ್ತದೆ

ಸೀತಾ ಸ್ವಯಂವರ ನಡೆದ ಮೇಲೆ ದಶರಥನು ಮಕ್ಕಳು ಮತ್ತು ಸೊಸೆಯಂರೊಂದಿಗೆ ಪರಿವಾರ ಸಮೇತನಾಗಿ ಆಯೋಧ್ಯೆಗೆ ಹೊರಟಿದ್ದನು. ಆ ಸಮಯದಲ್ಲಿ ಸ್ವಯಂವರದಲ್ಲಿ ಸೋತಿದ್ದ ರಾಜರುಗಳೆಲ್ಲ ಒಟ್ಟಾಗಿ ಶ್ರೀರಾಮನ ಮೇಲೆ ಯುದ್ಧಕ್ಕೆ ಬಂದರು. ಆಗ ಲಕ್ಷ್ಮಣನ ಸೇನಾಧಿಪತ್ಯದಲ್ಲಿ ದಶರಥನ ಸೇನೆ ಆ ರಾಜರುಗಳನ್ನೆಲ್ಲ ಎದುರಿಸಲು ಯತ್ನಿಸಿದರು.

ಆದರೆ, ಜಯಗಳಿಸಲು ಸಾಧ್ಯವಾಗಲಿಲ್ಲ. ಯುದ್ಧದಲ್ಲಿ ಲಕ್ಷಣ, ಭರತ, ಶತ್ರುಘ್ನರು ಮೂರ್ಛಿತರಾದರು. ಕೊನೆಗೆ ರಾಮನೇ ಯುದ್ಧ ಬಂದು, ಶತ್ರುಗಳನ್ನೆಲ್ಲ ಸೋಲಿಸಿ ಓಡಿಸಿದನು.

ಅಷ್ಟರಲ್ಲಾಗಲೇ ಪರಿವಾರದವರ ಉಪಚಾರದಿಂದ ಲಕ್ಷಣ, ಶತ್ರುಘ್ನರು ಮೂರ್ಛಯಿಂದ ಎದ್ದಿದ್ದರು. ಆದರೆ ಭರತನಿಗೆ ತೀವ್ರಸ್ವರೂಪದ ಗಾಯಗಳಾಗಿದ್ದುದರಿಂದ ಆತನಿಗಿನ್ನೂ ಎಚ್ಚರವಾಗಿರಲಿಲ್ಲ, ಈ ಸಂದರ್ಭದಲ್ಲಿ ಶ್ರೀರಾಮನು ಲಕ್ಷ್ಮಣನನ್ನು ಕುರಿತು, ” ಇಲ್ಲಿಯೇ ಸ್ವಲ್ಪ ದೂರದಲ್ಲಿ ಮುದ್ದಲ ಮಹರ್ಷಿಗಳ ಆಶ್ರಮವಿದೆ. ಅಲ್ಲಿ ಸಂಜೀವಿನೀಲತೆ ಇದೆ. ಅದನ್ನು ತೆಗೆದುಕೊಂಡು ಬಾ” ಎಂದು ಕಳುಹಿಸಿದನು. ಲಕ್ಷ್ಮಣ ಮುದ್ದಲರ ಆಶ್ರಮಕ್ಕೆ ಹೋದಾಗ, ಮಹರ್ಷಿಗಳು ಧ್ಯಾನಮಗ್ನರಾಗಿದ್ದರು.

ಅವರ ಶಿಷ್ಯರೆಲ್ಲ ಗುರುಗಳ ಅಪ್ಪಣೆಯಿಲ್ಲದೆ ಮೂಲಿಕೆಯನ್ನು ಕಿತ್ತುಕೊಡಲು ನಿರಾಕರಿಸಿದರು. ಲಕ್ಷಣನು ನಿರುಪಾಯನಾಗಿ ಮರಳಿಬಂದು ರಾಮನಿಗೆ ನಡೆದುದನ್ನೆಲ್ಲ ತಿಳಿಸಿದನು.

ಅದಕ್ಕೆ ರಾಮನು, ತನ್ನ ಹೆಸರನ್ನು ಹೇಳಿದರೆ ಮಹರ್ಷಿಗಳಿಗೆ ಕೋಪ ಬಾರದೆಂದೂ ಮುನಿಕುಮಾರರನ್ನು ಲೆಕ್ಕಿಸದೆ ಲತೆಯನ್ನು ತರಬೇಕೆಂದೂ ಹೇಳಿ ಮತ್ತೆ ಲಕ್ಷ್ಮಣನನ್ನು ಕಳಿಸಿದನು. ಅದರಂತೆ ಲಕ್ಷ್ಮಣನು ಮತ್ತೆ ಆಶ್ರಮಕ್ಕೆ ಹೋಗಿ ಲತೆಯನ್ನು ತಂದ ಮೇಲೆ ಅದರಿಂದ ಭರತನು ಗುಣಮುಖನಾದನು.

ಆನಂತರ ದಶರಥನು ಮುದ್ಗಲ ಮಹರ್ಷಿಗಳ ಆಶ್ರಮಕ್ಕೆ ಹೋದಾಗ ಸ್ವತಃ ಮುದ್ದಲರೇ ಹೊರಗೆ ಬಂದು ದಶರಥನನ್ನು ಸ್ವಾಗತಿಸಿ, ಅವನ ಉಪಕಾರವನ್ನು ಮರೆಯುವುದಿಲ್ಲವೆಂದೂ ಈ ನೆಪದಲ್ಲಿ ತನಗೆ ಶ್ರೀರಾಮನ ದರ್ಶನವು ದೊರೆ ಯತೆಂದೂ ಸಂತೋಷಿಸಿದರು.

ಶ್ರೀರಾಮನು ಸಾಕ್ಷಾತ್ ವಿಷ್ಣುವಿನ ಅವತಾರವೆಂದು ಬಣ್ಣಿಸಿದರು. ರಾಮನ ಭವಿಷ್ಯ, ದಶರಥನ ಪೂರ್ವಜನ್ಮದ ಕಥೆ – ಮೊದಲಾದವನ್ನೂ ಅವರು ದಶರಥನಿಗೆ ಹೇಳಿದರು.

ಆಕರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಪುಸ್ತಕ ಭಾಗ -1

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *