Dr. B.R. Ambedkar and Nationalism: We Are Indians First and Lastಡಾ. ಬಿ ಆರ್‌ ಅಂಬೇಡ್ಕರ್‌

ಭಾರತದ ಇತಿಹಾಸದಲ್ಲಿ ರಾಷ್ಟ್ರೀಯತೆ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮೌಲ್ಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸಿದ ಮಹಾನ್ ಚಿಂತಕರಲ್ಲಿ ಡಾಕ್ಟರ್ ಭೀಮರಾವ ಅಂಬೇಡ್ಕರ್ ಅವರು ಪ್ರಮುಖರು. “ನಾವು ಮೊದಲು ಭಾರತೀಯರು, ಕೊನೆಗೂ ಭಾರತೀಯರೇ” ಎಂಬ ಅವರ ಸಂದೇಶವು ದೇಶಭಕ್ತಿಯ ಅತ್ಯುನ್ನತ ರೂಪವನ್ನು ಪ್ರತಿಬಿಂಬಿಸುತ್ತದೆ.

ಅವರ ದೃಷ್ಟಿಯಲ್ಲಿ ರಾಷ್ಟ್ರೀಯತೆ ಎಂದರೆ ಕೇವಲ ಭೌಗೋಳಿಕ ಸೀಮೆಗಳಲ್ಲ, ಅದು ಮಾನವೀಯ ಮೌಲ್ಯಗಳು, ಸಮಾನ ಹಕ್ಕುಗಳು ಮತ್ತು ಸಾಮಾಜಿಕ ಏಕತೆಯ ಆಧಾರವಾಗಿದೆ. ರಾಷ್ಟ್ರ ಅಂತ ಬಂದಾಗ ಇಡೀ ಜಗತ್ತನ್ನೇ ಎದುರಿಸಬಲ್ಲೆ ರಾಷ್ಟ್ರ ಎಂದಿಗೂ ಬಿಟ್ಟು ಕೊಡವುದಿಲ್ಲ. ಹೀಗಾಗಿ ನಾನು ಮೊದಲು ಭಾರತೀಯ, ಕಟ್ಟಕಡೆಗೂ ಭಾರತೀಯನೇ! ಎಂದು ಗುಡುಗಿದ ಸರ್ವಶ್ರೇಷ್ಟ ರಾಷ್ಟ್ರಭಕ್ತ ಡಾ. ಬಾಬಾಸಾಹೇಬರು.

ಅಂಬೇಡ್ಕರ್ ಅವರು ಭಾರತೀಯ ಸಮಾಜದ ಅಸಮಾನತೆಗಳನ್ನು ಗಮನಿಸಿ, ಎಲ್ಲ ವರ್ಗಗಳಿಗೂ ಸಮಾನ ಅವಕಾಶಗಳನ್ನು ಒದಗಿಸುವುದು ನಿಜವಾದ ರಾಷ್ಟ್ರ ನಿರ್ಮಾಣದ ಮೂಲವೆಂದು ನಂಬಿದರು. ಅವರ ನೇತೃತ್ವದಲ್ಲಿ ರೂಪುಗೊಂಡ ಭಾರತದ ಸಂವಿಧಾನವು ನ್ಯಾಯ, ಸ್ವಾತಂತ್ರ್ಯ ಮತ್ತು ಸಮಾನತೆಯ ತತ್ವಗಳನ್ನು ಬಲವಾಗಿ ಪ್ರತಿಪಾದಿಸುತ್ತದೆ. ಇದು ಅವರ ರಾಷ್ಟ್ರೀಯತೆಯ ನಿಲುವನ್ನು ಸ್ಪಷ್ಟಪಡಿಸುತ್ತದೆ.

ಅವರ ರಾಷ್ಟ್ರೀಯತೆಗೆ ಹಿಡಿದ ಕೈನ್ನಡಿಯ ಒಂದು ಘಟನೆ ನೆನಪಿಗೆ ಬರುತ್ತದೆ. ಸಂವಿಧಾನ ರಚನಾ ಸಭೆಯ ಸಂದರ್ಭದಲ್ಲಿ 370ನೇ ವಿಧಿ ಸೇರಿಸಿ ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಬೇಕೆಂದು ಆವತ್ತಿನ ಎರಡನೇಯ ಪ್ರಧಾನಮಂತ್ರಿಗಳಾದ ಪಂಡಿತ ಜವಾಹರಲಾಲ ನೇಹರು ಹಾಗೂ ಅವರ ಟೀಮ್ ಸೇರಿ ಚರ್ಚೆ ಮಾಡುತ್ತಿರುವಾಗ ಸಭಾ ತ್ಯಾಗ ಮಾಡಿ ಎದ್ದು ಹೋದ ಧೀಮಂತ ಬಾಬಾಸಾಹೇಬರು. ಕೊನೆಗೂ ಅವರ ಆಸೆಯ ಮೇಲೆ ಮಣ್ಣು ಚೆಲ್ಲಿ 370 ಎಂಬ ವಿಷಯವನ್ನು ಸಂವಿಧಾನದಲ್ಲಿ ಸೇರಿಸಿದರು. ಮುಂದೆ ನಡೆದಿದ್ದು ನಿಮಗೆ ಗೊತ್ತಿದೆ. ಕಾಶ್ಮೀರದಲ್ಲಿ ನಡೆಯುವ ಹಿಂಸಾಚಾರವನ್ನು ಊಹಿಸಿ ಸಾಕಷ್ಟು ಭಾರಿ ಕಣ್ಣೀರಾಗಿದ್ದು ಮಾತ್ರ ಅಂಬೇಡ್ಕರರು.

ಅವರ ಚಿಂತನೆಯ ಪ್ರಕಾರ, ಒಂದು ದೇಶ ಶಕ್ತಿಶಾಲಿಯಾಗಬೇಕಾದರೆ ಅದರ ನಾಗರಿಕರು ಶಿಕ್ಷಣ, ನೈತಿಕತೆ ಮತ್ತು ಏಕತೆಯಲ್ಲಿ ಬಲವಾಗಿರಬೇಕು. ಯೋಗ್ಯ ಸಮಯ ಬಂದಾಗ ಭಾರತವು ವಿಶ್ವಶಕ್ತಿಯಾಗಿ ಹೊರಹೊಮ್ಮುತ್ತದೆ ಎಂಬ ಅವರ ವಿಶ್ವಾಸವು ಇಂದು ಕೂಡ ಪ್ರಸ್ತುತವಾಗಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘವು ಕೂಡ ನೂರು ವರ್ಷಗಳಿಂದ ಮಾಡುತ್ತಾ ಬಂದಿರುವುದು ಇದನ್ನೆ!  ಹ್ಞಾಂ! ಇಲ್ಲೊಂದು ಘಟನೆ ನೆನಪು ಮಾಡಿಕೊಳ್ಳಲೇಬೇಕು ಬಾಬಾಸಾಹೇಬರು ಮೇ 1939ರಲ್ಲಿ ನಾಗಪುರದಲ್ಲಿ ನಡೆದ ಸಂಘಶಿಕ್ಷಾ ವರ್ಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅತ್ಯಂತ ರೋಚಕ ಸನ್ನಿವೇಶ- ಸಂಘಶಿಕ್ಷಾ ವರ್ಗದಲ್ಲಿನ ಎಲ್ಲಾ ಸ್ವಯಂಸೇವಕರಿಗೆ ನಿಮ್ಮಲ್ಲಿ ಕೆಳಜಾತಿಯವರು ಯಾರಿದ್ದಿರಿ ಎಂದು ಕೇಳುತ್ತಾರೆ. ಯಾವ ಸ್ವಯಂಸೇವಕನೂ ಕೈ ಎತ್ತುವುದಿಲ್ಲ.

ಸ್ವತಃ ಪ.ಪೂ. ಡಾ. ಹೇಡಗೆವಾರವರು ಹೇಳಿದಾಗ ಸಾಕಷ್ಟು ಜನರು ಕೈಯೆತ್ತುತ್ತಾರೆ. ಅಲ್ಲಿ ಸ್ವತಃ ಬಾಬಾಸಾಹೇಬರು ಧಿನ್ಞೂಢರಾಗಿ ಮುಂದಿನ ಭಾರತದ ಭವಿಷ್ಯ ಸಂಘದಿಂದ ಉಜ್ವಲವಾಗುತ್ತದೆ ಎಂದು ನುಡಿದರು. ಅವರಿಗೆ ಸಂಘದ ಪ್ರಭಾವ ಎಷ್ಟಿತ್ತೆಂದರೆ 1940ರಲ್ಲಿ ಸಾತಾರದಲ್ಲಿ ಒಂದು ಶಾಖೆಗೂ ಭೇಟಿ ನೀಡಿದರು. ಸಂಘದ ಸಾಕಷ್ಟು ಹಿರಿಯರೊಂದಿಗೆ ಬಾಭಾಸಾಹೇಬರ ನಿಕಟಪೂರ್ವ ಸಂಬಂಧವಿತ್ತು. ಇದರಲ್ಲಿ ಮುಖ್ಯವಾಗಿ ಸಂಘದ ಜೇಷ್ಠ ಪ್ರಚಾರಕರಾದ ದತ್ತೊಪಂಥ ಠೇಂಗಡಿಯವರು ಬಾಬಸಾಹೇಬರು ದೇಶದ ಸಾಕಷ್ಟು ಆಗುಹೋಗುಗಳ ಕುರಿತು, ಸಂಘದ ಬೆಳವಣಿಗೆ ಕುರಿತು, ಭಾರತದ ಭವಿಷ್ಯದ ಕುರಿತು ಗಹನವಾಗಿ ಚರ್ಚೆ ನಡೆಸುತ್ತಿದ್ದರು.

ಅಂಬೇಡ್ಕರ ಅವರನ್ನು ಆವತ್ತಿನ ಕಾಂಗ್ರೇಸ ಸರ್ಕಾರ ಚುನಾವಣೆಯಲ್ಲಿ ಸೋಲಿಸಲು ಮುಂದಾಯಿತು. ಸೋಲಿಸಿತು ಕೂಡಾ. ಸ್ವತಃ ಸಂಘದ ಪ್ರಚಾರಕರಾದ ದತ್ತೋಪಂಥರು ಬಾಬಾರ ಚುನಾವಣಾ ಏಜೆಂಟರಾಗಿ ಕಾರ್ಯ ನಿರ್ವಹಿಸಿದರು.  ಜಾತಿಮತ ಪಂಥ ಭಾಷೆ ಪ್ರಾಂತ ಭೇದವಿಲ್ಲದ ಸಂಘಟನೆಯ ಪರಿಣಾಮ ಇಂದು ಅಂಬೇಡ್ಕರ್ ಅವರ ಕನಸಿನ ಭಾರತದ ಸಂಘದಿಂದ ನಿರ್ಮಾಣವಾಗುತ್ತಿದೆ. ಹಾಗೇಯೇ ಭಾರತ ವಿಶ್ವಶಕ್ತಿಯಾಗಿ ಬೆಳೆಯುತ್ತಿದೆ.

ಇಂದಿನ ಸಮಾಜದಲ್ಲಿ ಅಂಬೇಡ್ಕರ್ ಅವರ ಸಂದೇಶ ಇನ್ನಷ್ಟು ಪ್ರಾಮುಖ್ಯತೆ ಪಡೆದಿದೆ. ವಿಭಜನೆಗಿಂತ ಏಕತೆ, ಭೇದಭಾವಕ್ಕಿಂತ ಸಮಾನತೆ ಮತ್ತು ಅಜ್ಞಾನಕ್ಕಿಂತ ಜ್ಞಾನವನ್ನು ನಾವು ಆರಿಸಬೇಕು. ಶಿಕ್ಷಣ ಸಂಘಟನೆ ಹೋರಾಟ ಎಂಬ ತ್ರೀಸೂತ್ರವನ್ನು ಅವರು ಕಟ್ಟಿಕೊಟ್ಟರು. ಇಲ್ಲಿಯೂ ಬಾಬಾರ ದೂರದೃಷ್ಠಿ ಎಷ್ಟಿತ್ತೆಂದರೇ ಮೊದಲು ಶಿಕ್ಷಣವನ್ನು ಪಡೆಯಿರಿ.

ಸರಿ ತಪ್ಪುಗಳು ಅರ್ಥೈಸಿಕೊಂಡಾಗ ಮಾತ್ರ ಸಂಘಟನೆ ಬಲಗೊಳ್ಳಲು ಸಾಧ್ಯ, “ಶಿಕ್ಷಣವಿಲ್ಲದ ಸಂಘಟನೆ ಶವಕ್ಕೆ ತೊಡಿಸಿದ ರೇಷ್ಮೆಯ ಬಟ್ಟೆಯಿದ್ದಂತೆ” ಅದು ಕೇವಲ ಶೋಕಿಯಾಗುತ್ತದೆ. ಕೊನೆಗೆ ಹೋರಾಟದ ಮೂಲಮಂತ್ರವನ್ನು ನೀಡಿದರು. ನಿಮ್ಮ ನಿಮ್ಮ ಹಕ್ಕುಗಳಿಗಾಗಿ ನೀವು ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ಅದು ಯಶಸ್ವಿಯಾಗುತ್ತದೆ. ಅವರ ಆದರ್ಶಗಳನ್ನು ಅನುಸರಿಸುವುದೇ ನಿಜವಾದ ಗೌರವ.

ಅವರ ಜನ್ಮದಿನದಂದು, ನಾವು ಎಲ್ಲರೂ ಅವರ ಚಿಂತನೆಗಳನ್ನು ಅಳವಡಿಸಿಕೊಂಡು, ನ್ಯಾಯಯುತ ಮತ್ತು ಸಮಾನತೆಯ ಭಾರತವನ್ನು ನಿರ್ಮಿಸುವ ಸಂಕಲ್ಪ ಮಾಡೋಣ.

ಭಾರತದ ಏಕತೆ, ಸಮಾನತೆ ಮತ್ತು ಸ್ವಾಭಿಮಾನಕ್ಕೆ ಜೀವ ತುಂಬಿದ ಮಹಾನ್ ದಾರ್ಶನಿಕರು, ಸಂವಿಧಾನದ ಶಿಲ್ಪಿ, ವಿಶ್ವರತ್ನ, ಭಾರತ ರತ್ನ ಬಾಬಾಸಾಹೇಬರ ಜನ್ಮದಿನದಂದು, ಅವರ ಚಿಂತನೆಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯ.

ಯೋಗ್ಯ ಸಮಯ ಬಂದಾಗ, ಭಾರತ ದೇಶವು ತಲೆ ಎತ್ತಿ ನಿಂತು ವಿಶ್ವಶಕ್ತಿಯಾಗಿ ಹೊರಹೊಮ್ಮುತ್ತದೆ— ಅದನ್ನು ತಡೆಯಲು ಯಾವುದೇ ಶಕ್ತಿಗೂ ಸಾಧ್ಯವಿಲ್ಲ ಎಂಬ ದೃಢ ವಿಶ್ವಾಸವನ್ನು ಅವರು ನೀಡಿದರು. ಇಂದು ಅವರ ಆದರ್ಶಗಳನ್ನು ಅನುಸರಿಸಿ, ಸಮಾನತೆ, ನ್ಯಾಯ ಮತ್ತು ಬಾಂಧವ್ಯದ ದಾರಿಯಲ್ಲಿ ನಡೆಯೋಣ. ಭಾರತ ವಿಶ್ವಗುರುವಾಗಿಸುವ ಸಂಕಲ್ಪ ಮಾಡೋಣ.

ಜಯ ಭೀಮ್! ಜಯ ಭಾರತ!

ಲೇಖಕರು: ಸುನೀಲ ಭಾರತೀಯ, ಹವ್ಯಾಸಿ ಬರಹಗಾರರು

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *