Karnataka High Court Recruitment 2026: 70 post Assistant Court Secretary requirementಕರ್ನಾಟಕ ಹೈಕೋರ್ಟ್‌

ಬೆಂಗಳೂರು, ಮಾರ್ಚ್‌ 19: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ (Karnataka High Court) ಅಗತ್ಯವಿರುವ ಅಸಿಸ್ಟೆಂಟ್‌ ಕೋರ್ಟ್‌ ಸೆಕ್ರೆಟರಿ (ಶೀಘ್ರಲಿಪಿಗಾರರು) ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ

ಅಸಿಸ್ಟೆಂಟ್‌ ಕೋರ್ಟ್‌ ಸೆಕ್ರೆಟೆರಿ (ಶೀಘ್ರಲಿಪಿಗಾರರು)

ಕರ್ತವ್ಯ ಸ್ಥಳ

ಹುದ್ದೆಗೆ ನೇಮಕಗೊಂಡ ಅಭ್ಯರ್ಥಿಗಳನ್ನು ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರಿನಲ್ಲಿನ ಪ್ರಧಾನ ಪೀಠದಲ್ಲಾಗಲೀ, ಧಾರವಾಡ ಅಥವಾ ಕಲಬುರಗಿಗಳಲ್ಲಿನ ಪೀಠಗಳಿಗೆ ನಿಯೋಜಿಸಲಾಗುತ್ತದೆ.

ಖಾಲಿಯಿರುವ ಹುದ್ದೆಗಳ ವಿವರ

ಒಟ್ಟು 70 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

  • ಕಲ್ಯಾಣ ಕರ್ನಾಟಕ ವೃಂದ: 11
  • ಉಳಿದ ಮೂಲ ವೃಂದ: 59

ಶೈಕ್ಷಣಿಕ ಅರ್ಹತೆ

  1. ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ವಿಜ್ಙಾನ/ಕಲೆ/ವಾಣಿಜ್ಯ/ವ್ಯವಹಾರ ನಿರ್ವಹಣೆ/ ಕಂಪ್ಯೂಟರ್‌ ಅಪ್ಲಿಕೇಷನ್‌/ ವ್ಯವಹಾರ ಆಡಳಿತ ಪದವಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  2. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಆಂಗ್ಲ ಶೀಘ್ರಲಿಪಿ ಪ್ರೌಢ ದರ್ಜೆ ಅಥವಾ ಆಂಗ್ಲ ಶೀಘ್ರಲಿಪಿ ಪ್ರೊಫಿಶಿಯಸ್ಸಿ ಮತ್ತು ಬೆರಳಚ್ಚು ಪ್ರೌಢ ದರ್ಜೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ತಾಂತ್ರಿಕ ಪರೀಕ್ಷಾ ಮಂಡಳಿ ನಡೆಸುವ ಆಂಗ್ಲ ಕಮರ್ಷಿಯಲ್‌ ಪ್ರಕ್ಟೀಸ್‌/ ಸೆಕ್ರೆಟೇರಿಯಲ್‌ ಪ್ರಾಕ್ಟೀಸ್‌ ಡಿಪ್ಲೋಮಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
  3. ಕಂಪ್ಯೂಟರ್‌ ನಿರ್ವಹಣಾ ಜ್ಞಾನ ಹೊಂದರಬೇಕು.

ವಯೋಮತಿ

ಅರ್ಜಿ ಸಲ್ಲಿಸಲು ನಿಗದಿಪಡಿಸಲಾದ ಕೊನೆಯ ದಿನಾಂಕದಂದು ಅಭ್ಯರ್ಥಿಗಳು ಕನಿಷ್ಠ 18 ವರ್ಷ ಪೂರೈಸಿರಬೇಕು.
• ಸಾಮಾನ್ಯ ಅಭ್ಯರ್ಥಿಗಳು – ಗರಿಷ್ಠ 40 ವರ್ಷ
• ಪ್ರವರ್ಗ 2ಎ, 2ಬಿ, 3ಬಿ ಅಭ್ಯರ್ಥಿಗಳು – ಗರಿಷ್ಠ 43 ವರ್ಷ
• ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1ಕ್ಕೆ ಸೇರಿದ ಅಭ್ಯರ್ಥಿಗಳು – ಗರಿಷ್ಠ 45 ವರ್ಷ

ವೇತನ

ಮಾಸಿಕ 44,900 ರೂ. ರಿಂದ 1,42,400 ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.

ಆಯ್ಕೆ ವಿಧಾನ

ಶೀಘ್ರಲಿಪಿ ಪರೀಕ್ಷೆ
ಸಂದರ್ಶನ

ಅರ್ಜಿ ಸಲ್ಲಿಕೆ ವಿಧಾನ

ಅಭ್ಯರ್ಥಿಯು ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು

ಹಂತ 1: ಇಲಾಖೆಯ ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: ಅಪ್ಲಿಕೇಷನ್‌ನಲ್ಲಿ ತಿಳಿಸಿರುವಂತಹ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.

ಹಂತ 3: ಅಪ್ಲಿಕೇಷನ್‌ ಯಾವುದೇ ಪ್ರಮಾಣ ಪತ್ರ/ ದಾಖೆಗಳನ್ನು ಅಪ್ಲೋಡ್‌ ಮಾಡಲು ಸೂಚಿದ್ದರೆ, ಅವುಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ. (ಅಗತ್ಯವಿದ್ದರೆ ಮಾತ್ರ)

ಅರ್ಜಿ ಶುಲ್ಕದ ವಿವರ

ಸಾಮಾನ್ಯ ಅಭ್ಯರ್ಥಿಗಳು: 500 ರೂ.
ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳು: 500 ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ 1ಕ್ಕೆ ಸೇರಿದ ಹಾಗೂ ಅಂಗವಿಕಲ ಅಭ್ಯರ್ಥಿಗಳು: 250 ರೂ.

ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿದ ದಿನಾಂಕ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: ಮಾರ್ಚ್‌ 16
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಏಪ್ರಿಲ್‌ 15
ಶುಲ್ಕ ಪಾವತಿಸಲು ಕೊನೆಯ ದಿನಾಂಕ: ಏಪ್ರಿಲ್‌ 15

Notification ಲಿಂಕ್‌ ಇಲ್ಲಿದೆ

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *