ಬೆಂಗಳೂರು, ಏಪ್ರಿಲ್ 6: ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾತುರದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ (Karnataka 2nd PUC Result) ಪ್ರಕಟಣೆ ದಿನಾಂಕ ಕೊನೆಗೂ ಬಹಿರಂಗವಾಗಿದೆ. ಶಿವಮೊಗ್ಗದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಏಪ್ರಿಲ್ 9 ರ ಸಂಜೆ 6:15 ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ದಾವಣಗೆರೆ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶವನ್ನು ನಾಳೆ (ಏಪ್ರಿಲ್ 7) ರಂದು ಪ್ರಕಟವಾಗುವುದಿಲ್ಲ. ಮಾರ್ಚ್‌ನಲ್ಲಿ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಗೆ ರಾಜ್ಯಾದ್ಯಂತ ಸುಮಾರು 7 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಮುಗಿದ ಬೆನ್ನಲ್ಲೇ ಮೌಲ್ಯಮಾಪನ ಕಾರ್ಯ ಚುರುಕಿನಿಂದ ಸಾಗಿತ್ತು. ಆದರೆ, ಉಪಚುನಾವಣೆ ಹಿನ್ನೆಲೆಯಲ್ಲಿ ಫಲಿತಾಂಶ ವಿಳಂಬವಾಗುತ್ತಿದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಕೆಳಗಿನ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು: karresults.nic.in, kseab.karnataka.gov.in. ಇವುಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ, ಡಿಜಿಲಾಕರ್ ಮೂಲಕವೂ ಫಲಿತಾಂಶ ನೋಡಲು ಅವಕಾಶ ಇದೆ. ಫಲಿತಾಂಶ ಪರಿಶೀಲಿಸುವ ವಿಧಾನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ“PUC Result 2026” ಲಿಂಕ್ ಮೇಲೆ ಕ್ಲಿಕ್ ಮಾಡಿನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ“Submit” ಮೇಲೆ ಕ್ಲಿಕ್ ಮಾಡಿಫಲಿತಾಂಶವನ್ನು ಡೌನ್‌ಲೋಡ್ ಅಥವಾ ಪ್ರಿಂಟ್‌ಔಟ್ ತೆಗೆದುಕೊಳ್ಳಬಹುದು ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation Karnataka 2nd PUC Result 2026: ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಪ್ರಕಟ? ರಿಸಲ್ಟ್ ನೋಡುವುದು ಹೇಗೆ? ಇಲ್ಲಿದೆ ಡಿಟೈಲ್ಸ್ ಕಳೆದ 3 ವರ್ಷಗಳಲ್ಲಿ ಸರ್ಕಾರಿ ಶಾಲೆಯನ್ನು ತೊರೆದ 7 ಲಕ್ಷ ವಿದ್ಯಾರ್ಥಿಗಳು