Job Recruitment in Karnataka State Women and Child Welfare Departmentರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಡಿ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ (Karnataka State Women and Child Welfare Department) ವಿವಿಧ ಹುದ್ದೆಗಳ ನೇಮಕಾತಿಗೆ (Recruitment) ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಏ.6 ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಹುದ್ದೆಗಳ ವಿವರ

ಟೆಕ್ನಿಕಲ್ ಆಫೀಸರ್, ಮೆಡಿಕಲ್ ಆಫೀಸರ್, ಎನ್‌ಎಚ್‌ಎಂ ಕನ್ಸಲ್ಟಂಟ್, ಹೆಚ್‌ಆರ್, ಸ್ಟೇಟ್ ಲೆಪ್ರೊಸಿ ಕನ್ಸಲ್ಟಂಟ್, ಡೇಟಾ ಮ್ಯಾನೇಜರ್, ಲೀಗಲ್ ಕನ್ಸಲ್ಟಂಟ್ ಸೇರಿದಂತೆ ಒಟ್ಟು 13 ಹುದ್ದೆಗಳಿವೆ.

ಶೈಕ್ಷಣಿಕ ಅರ್ಹತೆ

ಹುದ್ದೆಗಳ ಅನುಸಾರ ವಿದ್ಯಾರ್ಹತೆಯನ್ನು ಕೇಳಲಾಗಿದೆ. ಪದವಿ, ಸ್ನಾತಕೋತ್ತರ ಪದವಿಯನ್ನು ಎಂಬಿಎ, ಬಯೋಕೆಮಿಸ್ಟ್‌, ಮೈಕ್ರೋಬಯಾಲಜಿ, ಕಂಪ್ಯೂಟರ್‌ ಅಪ್ಲಿಕೇಶನ್‌, ಎಲ್‌ಎಲ್‌ಬಿ, ಎಂಬಿಬಿಎಸ್‌, ಫಾರ್ಮಸಿಯಲ್ಲಿ ಡಿಪ್ಲೊಮಾ ವಿದ್ಯಾರ್ಹತೆ ಪೆದವರಿಗೆ ಆದ್ಯತೆ ಇರಲಿದೆ.

ವೇತನ

ಅಭ್ಯರ್ಥಿಗಳಿಗೆ ಮಾಸಿಕವಾಗಿ 18 ಸಾವಿರ ರೂ. ದಿಂದ 80 ಸಾವಿರ ರೂ.ವರೆಗೆ ವೇತನವನ್ನು ನೀಡಲಾಗುತ್ತದೆ. ಕನಿಷ್ಠ ಹುದ್ದೆಗೆ ಸಂಬಂಧಿಸಿದ ಕ್ಷೇತ್ರದಲ್ಲಿ 2-3 ವರ್ಷದ ಅನುಭವ ಕೇಳಲಾಗಿದೆ.

ಅರ್ಹತೆ

ಕನ್ನಡ ಭಾಷೆಯಲ್ಲಿ ಸಂವಹನ ನಡೆಸಲು, ಓದಲು, ಬರೆಯಲು ಬಲ್ಲವರಾಗಿರಬೇಕು. ಕಂಪ್ಯೂಟ‌ರ್ ಜ್ಞಾನವನ್ನು ಹೊಂದಿರಬೇಕು. ಹುದ್ದೆಗಳಿಗೆ ಕೇಳಲಾದ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಕಾಲೇಜಿನಿಂದ ಪೂರ್ಣಗೊಳಿಸಿರಬೇಕು. ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ವಯೋಮಿತಿ

45 ವರ್ಷ ಮೀರಿರದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದ್ದು, ನಿಯಮಾನುಸಾರ ವಯೋ ಸಡಿಲಿಕೆ ಅನ್ವಯವಾಗಲಿದೆ.

ಸಂದರ್ಶನ ನಡೆಯುವ ಸ್ಥಳ

Office of Chief Administrative Officer, National Health Mission, 1st Floor West wing. Arogya Soudha, Magadi Road, 1 Cross, Bengaluru 560023.

ಸಂದರ್ಶನ ನಡೆಯುವ ದಿನ

2026ರ ಏಪ್ರಿಲ್ 4

ಅಧಿಸೂಚನೆ ಲಿಂಕ್‌: https://hfwcom.karnataka.gov.in/uploads/Website%20Notification%206_1773831503.pdf

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *