BSNL 120 Post Recruitment: job details, application process, and fee informationಬಿಎಸ್‌ಎನ್‌ಎಲ್‌

ಭಾರತ್‌ ಸಂಚಾರ್‌ ನಿಗಮ ನಿಯಮಿತ (BSNL) ಕಾಯಂ ಆಧಾರದಲ್ಲಿ 120 ಸೀನಿಯರ್‌ ಎಕ್ಸಿಕ್ಯೂಟಿವ್ ಟ್ರೈನಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಅರ್ಜಿ ಸಲ್ಲಿಕೆ ಕೊನೆ ದಿನವನ್ನು ಏಪ್ರಿಲ್ 15ರ ತನಕ ವಿಸ್ತರಿಸಿದೆ. ಟೆಲಿಕಾಂ ಮತ್ತು ಫೈನಾನ್ಸ್ ವಿಭಾಗದಲ್ಲಿ ಹುದ್ದೆಗಳು ಖಾಲಿ ಇವೆ. ಟೆಲಿಕಾಂ ವಿಭಾಗದಲ್ಲಿ 95 ಹುದ್ದೆಗಳು ಮತ್ತು ಫೈನಾನ್ಸ್ ವಿಭಾಗದಲ್ಲಿ 25 ಹುದ್ದೆಗಳು ಸೇರಿ ಒಟ್ಟು 120 ಹುದ್ದೆಗಳಿಗೆ ನೇಮಕ ನಡೆಯಲಿದೆ.

ಅರ್ಹತೆಗಳೇನು?

ಟೆಲಿಕಾಂ ವಿಭಾಗದಲ್ಲಿನ ಹುದ್ದೆಗಳಿಗೆ ಎಂಜಿನಿಯರಿಂಗ್ ಅಥವಾ ಟೆಕ್ನಾಲಜಿಯಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯುನಿಕೇಷನ್‌, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌, ಇನ್‌ಫಾರ್ಮೆಶನ್‌ ಟೆಕ್ನಾಲಜಿ, ಎಲೆಕ್ಟಿಕಲ್ ಅಥವಾ ಇನ್ ಸ್ಟ್ರುಮೆಂಟೇಶನ್ ವಿಭಾಗದಲ್ಲಿ ಕನಿಷ್ಠ ಶೇ.60 ಅಥವಾ ಅದಕ್ಕಿಂತ ಹೆಚ್ಚು ಅಂಕಗಳೊಂದಿಗೆ ನಿಗದಿತ ವಿದ್ಯಾರ್ಹತೆ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

ಫೈನಾನ್ಸ್ ವಿಭಾಗದ ಹುದ್ದೆಗಳಿಗೆ ಸಿಎ ಅಥವಾ ಸಿಎಂಎ ಅರ್ಹತೆಯಿದ್ದವರು ಪ್ರಯತ್ನಿಸಬಹುದು. 21ರಿಂದ 30 ವರ್ಷದೊಳಗಿನವರಿಗೆ ಅವಕಾಶವಿದೆ. ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುತ್ತದೆ.

  • ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ವರ್ಷಗಳ ಪ್ರೊಬೆಷನರಿ ಅವಧಿ ಇರುತ್ತದೆ.
  • ಒಂದು ಬಾರಿ ನೇಮಕಗೊಂಡರೆ ಕನಿಷ್ಠ 5 ವರ್ಷ ಕಾರ್ಯನಿರ್ವಹಿಸುವುದು ಕಡ್ಡಾಯವಾಗಿದೆ.
  • ನೇಮಕಗೊಂಡ 3 ವರ್ಷಗಳ ಬಳಿಕ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಆಗಿ ಬಡ್ತಿ ಪಡೆಯುವ ಅವಕಾಶವಿದೆ.
  • ಸಂಸ್ಥೆ ನಿಯೋಜಿಸಿದ ಸ್ಥಳದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.
  • ದೇಶದ 27 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳಿರಲಿವೆ.
  • ಈ ಹುದ್ದೆಗೆ ತಿಂಗಳಿಗೆ 24900-50500 ರೂ. ವೇತನ ನಿಗದಿಪಡಿಸಲಾಗಿದೆ.

ಪರೀಕ್ಷೆ ಹೇಗಿರುತ್ತದೆ?

ಕಂಪ್ಯೂಟರ್ ಆಧರಿತ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ವಸ್ತುನಿಷ್ಠ ಮಾದರಿಯ ಬಹು ಆಯ್ಕೆ ಪ್ರಶ್ನೆಗಳನ್ನು ಹೊಂದಿರುತ್ತದೆ. ಎರಡು ಹಂತದಲ್ಲಿ ಪರೀಕ್ಷೆ ನಡೆಯಲಿದೆ.

ಮೊದಲನೇ ಹಂತದಲ್ಲಿ ಅಪ್ಟಿಟ್ಯೂಡ್ ಟೆಸ್ಟ್ ಅದಕ್ಕೆ 40 ಅಂಕಗಳ 40 ಪ್ರಶ್ನೆಗಳು, ಎರಡನೇ ಹಂತದಲ್ಲಿ ಅಯಾ ಹುದ್ದೆಗೆ ಅನುಗುಣವಾಗಿ ತಾಂತ್ರಿಕ ಪರೀಕ್ಷೆ ನಡೆಯಲಿದೆ. ಇದರಲ್ಲಿ 160 ಅಂಕಗಳ 160 ಪ್ರಶ್ನೆಗಳಿರುತ್ತವೆ. ಒಟ್ಟು 200 ಅಂಕಗಳ ಪ್ರಶ್ನೆ, 180 ನಿಮಿಷ ಬರೆಯಲು ಸಮಯ ನೀಡಲಾಗುತ್ತದೆ ತಪ್ಪು ಉತ್ತರಗಳಿಗೆ 0.25 ನೆಗೆಟಿವ್ ಅಂಕ ಇರುತ್ತದೆ. ಹೆಚ್ಚಿನ ವಿವರಗಳಿಗೆ ಬಿಎಸ್ಎನ್ (https://bsnl.co.in) ಗೆ ಭೇಟಿ ನೀಡಬಹುದು.

ಅರ್ಜಿ ಶುಲ್ಕ

ಎಸ್ಸಿ / ಎಸ್‌ಟಿ ಮತ್ತು ವಿಶೇಷ ಚೇತನ ಅಭ್ಯರ್ಥಿಗಳು 1250 ರೂ.
ಉಳೆದೆಲ್ಲ ವರ್ಗದವರಿಗೆ 2500 ರೂ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *