AI Impact: Cyclone, Landslide and Flood Alerts 15 Days in Advanceಸಾಂದರ್ಭಿಕ ಚಿತ್ರ

ಹವಾಮಾನ ಬದಲಾವಣೆ (Climate Change) ಇಂದು ಇದು ಕೇವಲ ಪರಿಸರ ಸಮಸ್ಯೆಯಲ್ಲ. ಅದು ಆರ್ಥಿಕತೆ, ಕೃಷಿ, ಆರೋಗ್ಯ ಮತ್ತು ಜೀವನೋಪಾಯಗಳ ಮೇಲೆ ನೇರ ಪರಿಣಾಮ ಬೀರುವ ಜಾಗತಿಕ ಸವಾಲಾಗಿದೆ. ಭಾರತದಂತ ಹವಾಮಾನ-ಸೂಕ್ಷ್ಮ ದೇಶಕ್ಕೆ ಇದು ಇನ್ನಷ್ಟು ಗಂಭೀರವಾಗಿದೆ. ಹೆಚ್ಚುತ್ತಿರುವ ಚಂಡಮಾರುತಗಳು, ಅನಿಶ್ಚಿತ ಮಾನ್ಸೂನ್, ಪ್ರವಾಹಗಳು, ಭೂಕುಸಿತಗಳು ಮತ್ತು ಉಷ್ಣತೆಯ ಅಲೆಗಳು ಅಭಿವೃದ್ಧಿಗೆ ಸವಾಲಾಗಿದೆ.

ಈ ಸನ್ನಿವೇಶದಲ್ಲಿ ಕೃತಕ ಬುದ್ಧಿಮತ್ತೆ (AI) ಭಾರತಕ್ಕೆ ಹೊಸ ದಾರಿ ತೋರಿಸುತ್ತಿದೆ. ಡೇಟಾ ಆಧಾರಿತ ನಿರ್ಧಾರಗಳು, ಸುಧಾರಿತ ಮುನ್ಸೂಚನೆ ವ್ಯವಸ್ಥೆಗಳು, ನಿಖರ ಕೃಷಿ ಸಲಹೆಗಳು ಮತ್ತು ಪರಿಸರ ಮೇಲ್ವಿಚಾರಣೆಯ ಮೂಲಕ AI ಹವಾಮಾನ ಕ್ರಮವನ್ನು ವೇಗಗೊಳಿಸುತ್ತಿದೆ. ತಂತ್ರಜ್ಞಾನವನ್ನು ಜನಪರವಾಗಿ ಬಳಸುವ ಭಾರತದ ದೃಷ್ಟಿಕೋನವು ಮಾದರಿಯಾಗಿದೆ.

ಪ್ರಕೃತಿ ವಿಕೋಪದ ಮುನ್ಸೂಚನೆ ನೀಡುವ ಎಚ್ಚರಿಕೆ ಗಂಟೆ AI

ಭಾರತದ ಹವಾಮಾನ ಮುನ್ಸೂಚನೆ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳು ಆಗಿವೆ. ಭಾರತ ಹವಾಮಾನ ಇಲಾಖೆ (IMD) AI ಬಳಸಿಕೊಂಡು ಚಂಡಮಾರುತಗಳ ದಿಕ್ಕು, ತೀವ್ರತೆ ಮತ್ತು ಭೂಕುಸಿತ ಸಮಯವನ್ನು ಹೆಚ್ಚು ನಿಖರವಾಗಿ ಅಂದಾಜು ಮಾಡುತ್ತಿದೆ.

ಉನ್ನತ ಸಾಮರ್ಥ್ಯದ ಕಂಪ್ಯೂಟರ್‌ ವ್ಯವಸ್ಥೆಗಳು (22 ಪೆಟಾಫ್ಲಾಪ್ಸ್) ಹವಾಮಾನ ಮಾದರಿಗಳನ್ನು ಕ್ಷಿಪ್ರವಾಗಿ ವಿಶ್ಲೇಷಿಸಲು ನೆರವಾಗುತ್ತಿವೆ. ಟ್ರಾನ್ಸ್‌ಫಾರ್ಮರ್ ಆಧಾರಿತ ಜಾಲಗಳು ಮುಂಗಾರಿನ ಬಗ್ಗೆ 15 ರಿಂದ 18 ದಿನಗಳ ಮುಂಚಿತವಾಗಿ ತಿಳಿಸುವ ಮಟ್ಟಕ್ಕೆ ಅಭಿವೃದ್ಧಿಯಾಗಿವೆ.

ಐಐಟಿ ಇನ್‌ಸ್ಟಿಟ್ಯೂಟ್‌ಗಳು ಅಭಿವೃದ್ಧಿಪಡಿಸಿದ AI ಮಾದರಿಗಳು ಭೂಕುಸಿತ ಹಾಗೂ ಚಂಡಮಾರುತದ ಬಗ್ಗೆ ಮೌಲ್ಯಮಾಪನದಲ್ಲಿ ಸಹಾಯ ಮಾಡುತ್ತಿವೆ. ವಿಶೇಷವಾಗಿ, ಹಿಮಾಲಯ ಪ್ರದೇಶಗಳಲ್ಲಿ ಸ್ಥಾಪಿಸಲಾದ AI ಆಧಾರಿತ ಭೂಕುಸಿತ ಎಚ್ಚರಿಕೆ ವ್ಯವಸ್ಥೆಗಳು ಶೇ 90 ಕ್ಕಿಂತ ಹೆಚ್ಚು ನಿಖರವಾಗಿ ಮಾಹಿತಿಯನ್ನು ನೀಡುತ್ತವೆ. ಇದರಿಂದ ಜೀವಹಾನಿ ಮತ್ತು ಆಸ್ತಿನಷ್ಟವನ್ನು ಕಡಿಮೆ ಮಾಡಬಹುದು.

ಗ್ರಾಮ ಮಟ್ಟದ ಹವಾಮಾನ ಬುದ್ಧಿಮತ್ತೆ

AIನ ನಿಜವಾದ ಶಕ್ತಿ ದೇಶದ ಗ್ರಾಮವನ್ನು ತಲುಪಬೇಕಾಗಿದೆ. ಗ್ರಾಮ ಪಂಚಾಯತ್ ಮಟ್ಟದ ಹವಾಮಾನ ಮುನ್ಸೂಚನೆ ಸೇವೆಗಳು ರೈತರಿಗೆ ನಾಟಿ, ಕೊಯ್ಲು ಮತ್ತು ನೀರಾವರಿ ಕುರಿತು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತಿವೆ.

ಭಾರತ್ ಫೋರ್ಕಾಸ್ಟಿಂಗ್ ಸಿಸ್ಟಮ್ (BFS) 6 ಕಿಮೀ ರೆಸಲ್ಯೂಶನ್‌ನೊಂದಿಗೆ 10 ದಿನಗಳ ಮುಂಚಿತವಾಗಿ ಮಳೆ ಮುನ್ಸೂಚನೆ ನೀಡುತ್ತದೆ. ಇದು ಹಿಂದಿನ ವ್ಯವಸ್ಥೆಗಳಿಗಿಂತ ಹೆಚ್ಚು ನಿಖರವಾಗಿದೆ. ಮೌಸಮ್‌ಜಿಪಿಟಿ ಮಾದರಿಯ AI ಚಾಟ್‌ಬಾಟ್‌ಗಳು ಸ್ಥಳೀಯ ಭಾಷೆಯಲ್ಲಿ ಹವಾಮಾನ ಸಲಹೆಗಳನ್ನು ನೀಡುವ ಮೂಲಕ ಸಾಮಾನ್ಯ ಜನರಿಗೆ ಅನುಕೂಲಕರವಾಗಿದೆ.

ಪ್ರವಾಹ, ಹಿಮನದಿ ಮತ್ತು ನದಿ ನಿರ್ವಹಣೆಯಲ್ಲಿ AI

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾದ ಭೂ ದತ್ತಾಂಶ ಸಂಯೋಜನೆ ವ್ಯವಸ್ಥೆಗಳು ಉಪಗ್ರಹ ಮತ್ತು ಭೂ-ಸಂವೇದಕ ಡೇಟಾವನ್ನು ಬಳಸಿಕೊಂಡು ಪ್ರವಾಹ ಮುನ್ಸೂಚನೆ ದೊರೆಯುತ್ತದೆ.

ಗಂಗಾ ಮತ್ತು ಬ್ರಹ್ಮಪುತ್ರಾ ಕಣಿವೆಗಳಲ್ಲಿ AI ಆಧಾರಿತ ಪ್ರವಾಹ ಮಾದರಿಗಳು ನೀರಿನ ಹರಿವು, ಮಳೆ ಪ್ರಮಾಣ ಮತ್ತು ಭೂ ಮೇಲ್ಮೈ ಸ್ಥಿತಿಗಳನ್ನು ವಿಶ್ಲೇಷಿಸಿ ಮುಂಚಿತವಾಗಿ ಎಚ್ಚರಿಕೆಗಳನ್ನು ನೀಡುತ್ತವೆ. ಇದರಿಂದ, ಮುಂಚಿತವಾಗಿಯೇ ಅಗತ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ.

ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ರಕ್ಷಣೆ

AI ಆಧಾರಿತ ಮೆಷಿನ್ ವಿಷನ್ ವ್ಯವಸ್ಥೆಗಳು ಕಾಡ್ಗಿಚ್ಚುಗಳನ್ನು ಪ್ರಾರಂಭದ ಹಂತದಲ್ಲೇ ಪತ್ತೆಹಚ್ಚುತ್ತವೆ. ಮಾನವ-ವನ್ಯಜೀವಿ ಸಂಘರ್ಷಗಳನ್ನು ಕಡಿಮೆ ಮಾಡಲು ಕಾಡು ಗಡಿಗಳಲ್ಲಿ ಸ್ಥಾಪಿಸಲಾದ ಕ್ಯಾಮೆರಾಗಳು ಸಹಕಾರಿಯಾಗಿವೆ.

ಉಪಗ್ರಹ, ಡ್ರೋನ್ ಮತ್ತು ಭೂ-ಸಂವೇದಕ ಜಾಲಗಳ ಸಮನ್ವಯದಿಂದ ಅಕ್ರಮ ಅತಿಕ್ರಮಣ ಹಾಗೂ ಕಡಿಯುವಿಕೆಗಳನ್ನು ಪತ್ತೆಹಚ್ಚಲು ಸಾಧ್ಯವಾಗಿದೆ. ಇದರಿಂದ ಕಾರ್ಬನ್ ಸಿಂಕ್‌ಗಳಾದ ಅರಣ್ಯಗಳನ್ನು ರಕ್ಷಿಸಲು ನೆರವಾಗಿದೆ.

ವಾಯು ಮತ್ತು ನೀರಿನ ಗುಣಮಟ್ಟ ನಿರ್ವಹಣೆ

AI ಆಧಾರಿತ ಸಂವೇದಕಗಳು ನಗರಗಳಲ್ಲಿ ನೈಜ-ಸಮಯದ ವಾಯು ಗುಣಮಟ್ಟದ ಡೇಟಾವನ್ನು ಸಂಗ್ರಹಿಸುತ್ತವೆ. ಈ ಡೇಟಾ ನಗರ ಯೋಜನೆ ಮತ್ತು ಆರೋಗ್ಯ ನೀತಿಗಳಿಗೆ ಮಹತ್ವದ ಮಾಹಿತಿಯನ್ನು ಒದಗಿಸುತ್ತದೆ.

ಭಾರತೀಯ ತಂತ್ರಜ್ಞಾನ ಸಂಸ್ಥೆ ಖರಗ್‌ಪುರ ಅಭಿವೃದ್ಧಿಪಡಿಸಿದ AI ಮಾದರಿಗಳು ಅಂತರ್ಜಲದಲ್ಲಿನ ಆರ್ಸೆನಿಕ್ ಮಾಲಿನ್ಯವನ್ನು ಗುರುತಿಸಿ ಸುರಕ್ಷಿತ ಕುಡಿಯುವ ನೀರಿನ ಮೂಲಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತಿವೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *