ಕಾಬೂಲ್/ಇಸ್ಲಾಮಾಬಾದ್, ಫೆ. 28: ಗಡಿ ಸಮಸ್ಯೆ ಹಾಗೂ ಗಡಿಯಲ್ಲಿನ ತಾಲಿಬಾನ್ ಭಯೋತ್ಪದಾನೆ ಸಮಸ್ಯೆ ಮುಂದಿಟ್ಟುಕೊಂಡು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ (Afghanistan-Pakistan War) ಮತ್ತೊಮ್ಮೆ ನೇರಾನೇರ ಸಂಘರ್ಷಕ್ಕೆ ಇಳಿದಿವೆ. ಎರಡೂ ಕಡೆಯಿಂದ ಭಾರಿ ದಾಳಿ-ಪ್ರತಿದಾಳಿಗಳು ನಡೆದಿವೆ. ಇದರಿಂದಾಗಿ ಎರಡೂ ಕಡೆ ಸೇರಿ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. “ಅಫಘಾನಿಸ್ತಾನದಲ್ಲಿ ಸೈನಿಕರ ಕ್ಯಾಂಪ್‌ಗಳನ್ನು ಗುರಿಯಾಗಿಸಿಕೊಂಡು ಶುಕ್ರವಾರ ರಾತ್ರಿಯಿಂದ ಶನಿವಾರ ಮುಂಜಾನೆವರೆಗೂ ವಾಯುದಾಳಿ ನಡೆಸಿದ್ದೇವೆ. ಈ ದಾಳಿಯಲ್ಲಿ 300ಕ್ಕೂ ಹೆಚ್ಚು ಅಫ್ಘಾನ್ ಸೈನಿಕರು ಮೃತಪಟಿದ್ದಾರೆ ಎಂದು ಪಾಕಿಸ್ತಾನ ಸರ್ಕಾರದ ವಕ್ತಾರರು ಮತ್ತು ಅಧಿಕಾರಿಗಳು ತಿಳಿಸಿದ್ದಾರೆ. ಯುದ್ಧಕ್ಕೆ ಕಾರಣ ಪಾಕಿಸ್ತಾನ – ಅಫ್ಘಾನಿಸ್ತಾನ ನಡುವೆ 2611 ಕಿ.ಮೀ. ಉದ್ದದ ಗಡಿ ಇದೆ. ಅದನ್ನು ಡ್ಯುರಾಂಡ್ ಲೈನ್ ಎನ್ನಲಾಗುತ್ತದೆ. ಈ ಗಡಿಗೆ ಅಫಘಾನಿಸ್ತಾನದ ಮಾನ್ಯತೆ ಇಲ್ಲ. ಇದು ಎರಡೂ ದೇಶಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗಿದೆ. ಅಫ್ಘಾನಿಸ್ತಾನ ಉಗ್ರರು ಪಾಕಿಸ್ತಾನದಲ್ಲಿ ದಾಳಿ ನಡೆಸುತ್ತಿದ್ದಾರೆ. ಇದಕ್ಕೆ ಅಫ್ಘಾನಿಸ್ತಾನ ಕಾರಣ ಎಂದು ಪಾಕಿಸ್ತಾನ ಆಕ್ರೋಶ ವ್ಯಕ್ತಪಡಿಸಿದೆ. ಇದರಿಂದಾಗಿ ಎರಡೂ ದೇಶಗಳ ನಡುವೆ ಹಲವು ತಿಂಗಳುಗಳಿಂದ ಸಂಘರ್ಷ ನಡೆಯುತ್ತಲೇ ಬಂದಿದೆ. ಹಠಾತ್ ಭುಗಿಲೆದ್ದ ಈ ಘರ್ಷಣೆಯು ಕತಾರ್ ಮಧ್ಯಸ್ಥಿಕೆಯಲ್ಲಿ ನಡೆದಿದ್ದ ಕದನ ವಿರಾಮವನ್ನು ಉಲ್ಲಂಘಿಸಿದೆ.ಗುರುವಾರ ರಾತ್ರಿ ಪಾಕಿಸ್ತಾನವು ಅಫ್ಘಾನಿಸ್ತಾನದ ಕಾಬೂಲ್ ನಗರದ ಮೇಲೆ ವಾಯುದಾಳಿ ನಡೆಸಿತು. ಇದೇ ಸಂದರ್ಭದಲ್ಲಿ ಪಕ್ತಿಯಾ ಮತ್ತು ಕಂದಹಾರ್ ಪ್ರಾಂತ್ಯಗಳ ಮೇಲೆ ದಾಳಿಗಳು ನಡೆದವು. ಕಂದಹಾರ್ ತಾಲಿಬಾನಿಗಳ ಪ್ರಮುಖ ಕೇಂದ್ರವಾಗಿದೆ, ಈ ಹಿನ್ನಲೆಯಲ್ಲಿ ದಾಳಿ ಮಾಡಲಾಗಿದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಅದೇ ರಾತ್ರಿ, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಗಡಿಭಾಗದ ಬಳಿ ಪಾಕಿಸ್ತಾನದ ಸೈನಿಕ ನೆಲೆಗಳ ವಿರುದ್ಧ ಭೂಸೇನಾ ಕಾರ್ಯಾಚರಣೆ ನಡೆಸಿದ್ದಾಗಿ ಘೋಷಿಸಿತು. ಕೆಲವು ಸೈನಿಕರ ಕ್ಯಾಂಪ್‌ಗಳನ್ನು ವಶಪಡಿಸಿಕೊಂಡಿದ್ದು, ಪಾಕಿಸ್ತಾನದ ಸೈನಿಕರನ್ನು ಬಂಧಿಸಿ ಹತ್ಯೆ ಮಾಡಿರುವುದಾಗಿ ಹೇಳಿಕೊಂಡಿದೆ. ತಾಲಿಬಾನ್ ಸರ್ಕಾರದ ಪ್ರಕಾರ, ಇದು “ಪ್ರತೀಕಾರಾತ್ಮಕ ಕ್ರಮ”ವಾಗಿದೆ. “ಪಾಕಿಸ್ತಾನದ ಸೈನಿಕರು ಅಫ್ಘಾನಿಸ್ತಾನದ ಭೂಭಾಗದ ಒಳಗೆ ನುಗ್ಗಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ನಾಗರಿಕರ ಸಾವಿಗೆ ಕಾರಣವಾಗಿದೆ. ಹೀಗಾಗಿ, ಈ ಕ್ರಮ ಕೈಗೊಳ್ಳಾಗಿದೆ ಎಂದು ತಿಳಿಸಿದೆ. ಆದರೆ, ಪಾಕಿಸ್ತಾನ ಹೇಳುವ ಪ್ರಕಾರ, “ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ. ಬದಲಿಗೆ ಅಫ್ಘಾನಿಸ್ತಾನದಲ್ಲಿರುವ ತಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರರ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿದ್ದೇವೆ. ಇಸ್ಲಾಮಾಬಾದ್‌ನಲ್ಲಿ ಶಿಯಾ ಮಸೀದಿಯ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆಗೆ ಟಿಟಿಪಿಯೇ ಹೊಣೆ ಎಂದು “ಖಚಿತ ಸಾಕ್ಷ್ಯ”ವಿದೆ ಎಂದು ಪಾಕಿಸ್ತಾನ ಹೇಳಿದೆ. ಆ ದಾಳಿಗೆ ಐಎಸ್ ಹೊಣೆ ಹೊತ್ತಿದ್ದರೂ, ಪಾಕಿಸ್ತಾನವು ಟಿಟಿಪಿಯನ್ನೇ ಆರೋಪಿಸಿದೆ. ಪಾಕಿಸ್ತಾನದ ಪ್ರಕಾರ, ಈ ದಾಳಿಗಳು ಅಫ್ಘಾನಿಸ್ತಾನದಲ್ಲಿರುವ ಟಿಟಿಪಿ ನಾಯಕರ ಮಾರ್ಗದರ್ಶನದಲ್ಲಿ ನಡೆಯುತ್ತಿವೆ ಹಾಗೂ ಅವರಿಗೆ ತಾಲಿಬಾನ್ ಸರ್ಕಾರ ಬೆಂಬಲ ನೀಡುತ್ತಿದೆ. ಆದರೆ ತಾಲಿಬಾನ್ ಸರ್ಕಾರ, ನಾವು ಯಾವುದೇ ದೇಶದ ಭದ್ರತೆಗೆ ಧಕ್ಕೆಉಂಟುಮಾಡಿಲ್ಲ ಎಂದು ಹೇಳಿದೆ. ಈ ಹಿಂದೆಯೂ ನಡೆದಿತ್ತು ಸಂಘರ್ಷಕ್ಕೆ ಕಳೆದ ವರ್ಷ 2025ರ ಅಕ್ಟೋಬರ್‌ನಲ್ಲಿಯೂ ಎರಡೂ ದೇಶಗಳ ನಡುವೆ ಸಂಘರ್ಷ ಉಂಟಾಗಿತ್ತು. ಆಗ ಎರಡೂ ದೇಶಗಳು ಪರಸ್ಪರ ದಾಳಿಗಳನ್ನು ನಡೆಸಿದ್ದವು. ಕತಾರ್ ಮತ್ತು ಟರ್ಕಿ ಮಧ್ಯಸ್ಥಿಕೆ ವಹಿಸಿ ದೋಹಾ ಮತ್ತು ಇಸ್ತಾಂಬುಲ್‌ನಲ್ಲಿ ಶಾಂತಿ ಸಭೆ ನಡೆಸಿದವು. ಆದರೆ, ಶಾಂತಿ ಸಭೆ ಫಲಪ್ರದವಾಗಿಲ್ಲ. 2025ರ ಅಕ್ಟೋಬರ್‌ನಿಂದ ಎರಡೂ ದೇಶಗಳ ನಡುವಿನ ವ್ಯಾಪಾರ ಸಂಪೂರ್ಣ ಸ್ಥಗಿತಗೊಂಡಿದ್ದು. ಇದು ಅಫ್ಘಾನಿಸ್ತಾನದ ಸಣ್ಣ ವ್ಯಾಪಾರಿಗಳಿಗೆ ಮತ್ತು ಔಷಧಿ ಸೇರಿದಂತೆ ಅಗತ್ಯ ಸರಕುಗಳ ಲಭ್ಯತೆಗೆ ದೊಡ್ಡ ಹೊಡೆತ ನೀಡಿದೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ