Train service between Vasco da Gama and Dharwad partially cancelledರೈಲು

ಹುಬ್ಬಳ್ಳಿ, ಮೇ 7: ಕ್ಯಾಸಲ್ ರಾಕ್ ಮತ್ತು ಕುಳೆಂ ನಡುವಿನ ಘಾಟ್ ವಿಭಾಗದಲ್ಲಿ ನಡೆಯುತ್ತಿರುವ ಹಳಿ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಜಸಿದಿಹ್‌ನಿಂದ ಹೊರಡುವ  ಜಸಿದಿಹ್‌-ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್ ರೈಲು ಸಂಚಾರ ವಾಸ್ಕೋ-ಡ-ಗಾಮ ಮತ್ತು ಧಾರವಾಡ ನಡುವಿನ ರೈಲು ಸಂಚಾರವನ್ನು ಭಾಗಶಃ ರದ್ದುಪಡಿಸಲಾಗಿದೆ ಎಂದು ನೈರುತ್ಯ ರೈಲ್ವೆ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ಸಂಖ್ಯೆ 17321: ವಾಸ್ಕೋ ಡ ಗಾಮ – ಜಸಿದಿಹ್ ಎಕ್ಸ್‌ಪ್ರೆಸ್‌ ರೈಲು ಮೇ 08, 15, 22, 29 ಹಾಗೂ ಜೂನ್‌ 05 ರಂದು (ಒಟ್ಟು 05 ದಿನಗಳು) ವಾಸ್ಕೋ ಡ ಗಾಮ ಮತ್ತು ಧಾರವಾಡ  ನಡುವೆ ಸಂಚಾರ ಭಾಗಶಃ ರದ್ದಾಗಲಿದೆ. ಈ ರೈಲು ವಾಸ್ಕೋ ಡ ಗಾಮದ ಬದಲು ಧಾರವಾಡದಿಂದ, ಧಾರವಾಡ ನಿಗದಿತ ಸಮಯಕ್ಕೆ ಪ್ರಯಾಣ ಆರಂಭಿಸಲಿದೆ.

ರೈಲು ಸಂಖ್ಯೆ 17322: ಜಸಿದಿಹ್ – ವಾಸ್ಕೋ ಡ ಗಾಮ ಎಕ್ಸ್‌ಪ್ರೆಸ್‌ ರೈಲು ಮೇ 11, 18, 25 ಹಾಗೂ ಜೂನ್‌ 01 ರಂದು (ಒಟ್ಟು 04 ದಿನಗಳು) ಧಾರವಾಡ ಮತ್ತು ವಾಸ್ಕೋ ಡ ಗಾಮ ನಡುವೆ ಭಾಗಶಃ ರದ್ದಾಗಲಿದೆ. ಈ ರೈಲು ಧಾರವಾಡದಲ್ಲೇ ತನ್ನ ಪ್ರಯಾಣವನ್ನು ಕೊನೆಗೊಳಿಸುತ್ತದೆ.

ಬೆಂಗಳೂರು-ಕಲಬುರಗಿ ರೈಲು ಸಂಚಾರ ಅವಧಿ ವಿಸ್ತರಣೆ

ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಬೆಂಗಳೂರು-ಕಲಬುರಗಿ ರೈಲು ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದೆ.

ರೈಲು ಸಂಖ್ಯೆ 06207/06208: ಬೆಂಗಳೂರು ಕ್ಯಾಂಟೋನ್ಮೆಂಟ್ – ಕಲಬುರಗಿ – ಬೆಂಗಳೂರು ಕ್ಯಾಂಟೋನ್ಮೆಂಟ್ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಸಂಚಾರ ಅವಧಿಯನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಈ ರೈಲುಗಳು ಈಗಿನ ಸಮಯ, ನಿಲ್ದಾಣಗಳು ಹಾಗೂ ಬೋಗಿ ವಿನ್ಯಾಸದೊಂದಿಗೆ ಮುಂದುವರಿಯಲಿವೆ.

ರೈಲು ಸಂಖ್ಯೆ 06207: ಬೆಂಗಳೂರು ಕ್ಯಾಂಟೋನ್ಮೆಂಟ್ – ಕಲಬುರಗಿ ಎಕ್ಸ್‌ಪ್ರೆಸ್ ವಿಶೇಷ ರೈಲು, ಈ ಹಿಂದೆ ಏಪ್ರಿಲ್‌ 25 ರವರೆಗೆ ಮಾತ್ರ ಸಂಚರಿಸಿತ್ತು. ಇದೀಗ ಮೇ 9 ರಂದು ಹೆಚ್ಚುವರಿ ಒಂದು ಟ್ರಿಪ್ ಸಂಚರಿಸಲಿದೆ.

ರೈಲು ಸಂಖ್ಯೆ 06208: ಕಲಬುರಗಿ – ಬೆಂಗಳೂರು ಕ್ಯಾಂಟೋನ್ಮೆಂಟ್ ಎಕ್ಸ್‌ಪ್ರೆಸ್ ವಿಶೇಷ ರೈಲು, ಈ ಹಿಂದೆ ಜೂನ್‌ 26ರವರೆಗೆ ಮಾತ್ರ ಸಂಚರಿಸಿತ್ತು. ಇದೀಗ ಮೇ 10 ರಂದು ಹೆಚ್ಚುವರಿ ಒಂದು ಟ್ರಿಪ್ ಸಂಚರಿಸಲಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *