HDFC Bank, Punjab National Bank, UPI cash withdrawal New ATM Rules From April 1ಸಾಂದರ್ಭಿಕ ಚಿತ್ರ


2025-26ನೇ ಹಣಕಾಸು ವರ್ಷ (2025-26 Financial Year) ಮುಕ್ತಾಯಕ್ಕೆ ಸಮೀಪಿಸುತ್ತಿದ್ದು, ಹೊಸ ಹಣಕಾಸು ವರ್ಷ (New Financial Year) ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಏಪ್ರಿಲ್‌ 1 ರಿಂದ ಹೊಸ ಹಣಕಾಸು ವರ್ಷ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಏಪ್ರಿಲ್‌ 1 ರಿಂದ ATM ಮತ್ತು UPI ಕ್ಯಾಶ್‌ ವಿತ್‌ಡ್ರಾ ನಿಯಮಗಳಲ್ಲಿ ಮಹತ್ವದ ಬದಲಾವಣೆಯಾಗಲಿದೆ.

ಭಾರತದ ಪ್ರಮುಖ ಬ್ಯಾಂಕುಗಳಾದ ಹೆಚ್‌ಡಿಎಫ್‌ಸಿ, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಮತ್ತು ಬಂಧನ್‌ ಬ್ಯಾಂಕ್‌ ತಮ್ಮ ಎಟಿಎಂ ವಹಿವಾಟು ಮತ್ತು ಯುಪಿಐ ಮೂಲಕ ನಗದು ವಿತ್‌ಡ್ರಾ ಮಿತಿಗಳಲ್ಲಿ ಮಹತ್ವದ ಬದಲಾವಣೆಗಳನ್ನು ತರುತ್ತಿವೆ.

  • ಯುಪಿಎ ಮೂಲಕ ನಗದು ವಿತ್‌ಡ್ರಾ ಮಿತಿ

    ಎಟಿಎಂಗಳಲ್ಲಿ ಕಾರ್ಡ್‌ ಇಲ್ಲದೆಯೇ ಯುಪಿಐ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಹಣ ಪಡೆಯುವ ಸೌಲಭ್ಯ ಜನಪ್ರಿಯವಾಗುತ್ತಿದೆ. ಹೆಚ್‌ಡಿಎಫ್‌ಸಿ ಬ್ಯಾಂಕ್‌ ದಿನಕ್ಕೆ ಯುಪಿಐ ಗರಿಷ್ಠ 10 ಸಾವಿರ ರೂಪಾಯಿಗಳವರೆಗೆ ಹಣ ವಿತ್‌ಡ್ರಾ ಮಾಡಲು ಮಿತಿ ವಿಧಿಸಿದೆ. ತಿಂಗಳಿಗೆ ಗರಿಷ್ಠ 5 ವಹಿವಾಟುಗಳನ್ನು ಮಾತ್ರ ಉಚಿತವಾಗಿ ಮಾಡಬಹುದು.
    ಪಿಎನ್‌ಬಿ ತನ್ನ ಗ್ರಾಹಕರಿಗೆ ದಿನಕ್ಕೆ 5 ಸಾವಿರ ರೂ. ಯುಪಿಐ ನಗದು ಮಿತಿಯನ್ನು ನಿಗದಿಪಡಿಸಿದೆ.

    • ಪರಿಷ್ಕೃತ ಎಟಿಎಂ ಶುಲ್ಕಗಳು

    ಗ್ರಾಹಕರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ಮತ್ತು ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ಮಾಡುವ ಉಚಿತ ವಹಿವಾಟುಗಳ ಮಿತಿ ಮುಗಿದ ನಂತರ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ.

    ಬಂಧನ್‌ ಬ್ಯಾಂಕ್‌: ಉಚಿತ ಮಿತಿಯ ನಂತರದ ಪ್ರತಿ ಹಣಕಾಸು ವಹಿವಾಟಿಗೆ (Financial Transaction) ಈ ಹಿಂದೆ ಇದ್ದ 21 ರೂ. ಶುಲ್ಕವನ್ನು ಈಗ 25 ರೂ.ಗೆ ಏರಿಸಿದೆ.

    ಪಿಎನ್‌ಬಿ: ಇತರ ಬ್ಯಾಂಕ್‌ ಎಟಿಂಗಳಲ್ಲಿ ಉಚಿತ ಮಿತಿ ಮೀರಿದ ನಂತರ ಪ್ರತಿ ವಹಿವಾಟಿಗೆ 23 ರೂ. ಪ್ಲಸ್‌ ಜಿಎಸ್‌ಟಿ ವಿಧಿಸಲು ನಿರ್ಧರಿಸಿದೆ.

    • ಹೆಚ್‌ಡಿಎಫ್‌ಸಿ ಬ್ಯಾಂಕ್‌ನ ಹೊಸ ನಿಯಮಗಳು

    ಹೆಚ್‌ಡಿಎಫಸಿ ತನ್ನ ಉಳಿತಾಯ ಖಾತೆದಾರರಿಗೆ ಮೆಟ್ರೋ ನಗರಗಳಲ್ಲಿ ಮೂರು ಮತ್ತು ಇತರ ನಗರಗಳಲ್ಲಿ ಐದು ಉಚಿತ ವಹಿವಾಟುಗಳ ಮಿತಿಯನ್ನು ಮುಂದುವರಿಸಿದೆ. ಆದರೆ, ಈ ಮಿತಿ ಮೀರಿದ ನಂತರದ ಹಣಕಾಸಿನ ವಹಿವಾಟಿಗೆ 25 ರೂ. ಮತ್ತು ಹಣಕಾಸೇತೆ ವಹಿವಾಟಿಗೆ (ಬ್ಯಾಲೆನ್ಸ್‌ ಚೆಕ್‌ ಇತ್ಯಾದಿ) 12 ರೂ. ಶುಲ್ಕ ವಿಧಿಸಲಾಗುತ್ತದೆ.

    • ಎಟಿಎಂ ಪಿನಾಕಲ್‌ ಮತ್ತು ಪ್ರೀಮಿಯಂ ಖಾತೆಗಳು

    ಕೆಲವು ಪ್ರೀಮಿಯಂ ಖಾತೆದಾರರಿಗೆ ಯಾವುದೇ ಬ್ಯಾಂಕಿನ ಎಟಿಎಂಗಳಲ್ಲಿ ಅನ್‌ಲಿಮಿಟೆಡ್‌ ಉಚಿತ ವಹಿವಾಟುಗಳನ್ನು ನೀಡಲಾಗುತ್ತಿತ್ತು. ಆದರೆ, ಏಪ್ರಿಲ್‌ 1 ರಿಂದ, ಈ ಸೌಲಭ್ಯಕ್ಕೂ ಮಿತಿ ಹೇರಲಾಗುತ್ತಿದ್ದು, ತಿಂಗಳಿಗೆ ಗರಿಷ್ಠ 10 ಉಚಿತ ವಹಿವಾಟುಗಳ ನಂತರ ಶುಲ್ಕ ಅನ್ವಯವಾಗಲಿದೆ ಎಂದು ಬಂಧನ್‌ ಬ್ಯಾಂಕ್‌ ತಿಳಿಸಿದೆ.

    ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

    Leave a Reply

    Your email address will not be published. Required fields are marked *