ನವದೆಹಲಿ, ಮಾರ್ಚ್ 22: ಪ್ರಧಾನಿ ನರೇಂದ್ರ ಮೋದಿ (Narendra Modi) ಮಗದೊಂದು ದಾಖಲೆ ಬರೆದಿದ್ದಾರೆ. ದೇಶದಲ್ಲಿ ದೀರ್ಘಾವಧಿಯ ಆಡಳಿತ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ವ್ಯಕ್ತಿ ಎನಿಸಿದ್ದಾರೆ. 8931 ದಿನ ಕಾರ್ಯ ನಿರ್ವಹಿಸುವ ಮೂಲಕ ದೇಶದಲ್ಲಿಯೇ ದೀರ್ಘಾವಧಿಗೆ ಸರ್ಕಾರದ ಮುಖ್ಯಸ್ಥರಾಗಿ ಸಿಕ್ಕಿಂನ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ ಚಮ್ಲಿಂಗ್ ಅವರ ದಾಖಲೆಯನ್ನು ಪ್ರಧಾನಿ ಮೋದಿ ಮುರಿದಿದ್ದಾರೆ. 2001ರ ಅಕ್ಟೋಬರ್ 1 ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ಪ್ರಮಾಣವಚನ ಸ್ವೀಕರಿಸಿದ್ದರು. 2014ರ ಮೇ 26ರವರೆಗೆ ಅವರು ಗುಜರಾತ್‌ನ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ಬಳಿಕ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸಿದ್ದರಲ್ಲದೆ ಭಾರತದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈ ಮೈಲಿಗಲ್ಲು ಭಾರತದ ಇತಿಹಾಸದಲ್ಲಿ ಮಹತ್ವದ ಕ್ಷಣವಾಗಿದ್ದು, ದಶಕಗಳ ನಿರಂತರ ಸಾರ್ವಜನಿಕ ಸೇವೆ ಮತ್ತು ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ. 2025ರ ಅಕ್ಟೋಬರ್‌ನಲ್ಲಿ ಪ್ರಧಾನಿ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 25 ವರ್ಷ ಪೂರೈಸಿದ್ದರು. ಪ್ರಧಾನಿ ಮೋದಿಯವರ ಜೀವನವು ದೇಶ ಮತ್ತು ಅದರ ಜನರ ಮೇಲಿನ ಸಂಪೂರ್ಣ ಸಮರ್ಪಣೆಗೆ ಒಂದು ಉದಾಹರಣೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. Prime Minister Shri @narendramodi is now the longest-serving head of a government in India.Pure devotion to the nation and its people defines PM Modi Ji. From his unwavering commitment as the Chief Minister of Gujarat to his dedicated leadership as the Prime Minister, his life… pic.twitter.com/llGPwziZZC— Rajnath Singh (@rajnathsingh) March 22, 2026 ಗುಜರಾತ್ ಮುಖ್ಯಮಂತ್ರಿಯಾಗಿ ಅವರ ಅಧಿಕಾರಾವಧಿ ಪ್ರಾರಂಭವಾಯಿತು. ಅಲ್ಲಿ ಅವರು ಅಭಿವೃದ್ಧಿಗೆ ಹೊಸ ಮಾನದಂಡವನ್ನು ಸ್ಥಾಪಿಸಿದ್ದರು. ಮುಖ್ಯಮಂತ್ರಿಯಿಂದ ಪ್ರಧಾನಿವರೆಗಿನ ಅವರ ಪ್ರಯಾಣವು ನಿರಂತರ ಸೇವೆ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಅವರ ಅಚಲ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿನಂದಿಸಿದ್ದಾರೆ. Post navigation ಏಪ್ರಿಲ್ 1 ರಿಂದ ATM ವಹಿವಾಟಿನಲ್ಲಿ ಮಹತ್ವದ ಬದಲಾವಣೆ: ಇಲ್ಲಿದೆ ಸಂಪೂರ್ಣ ಮಾಹಿತಿ ದೇಶದ ಮೊದಲ LPG ಎಟಿಎಂ: 25 ದಿನ ಕಾಯಬೇಕಿಲ್ಲ ಎರಡೇ ನಿಮಿಷದಲ್ಲಿ ಸಿಗುತ್ತೆ ಗ್ಯಾಸ್