ಕೇಂದ್ರ ರಿಸರ್ವ್ ಪೊಲೀಸ್ ಫೋರ್ಸ್ (CRPF) ರಾಜ್ಯದಲ್ಲಿನ 471 ಹುದ್ದೆಗಳು ಸೇರಿದಂತೆ ಒಟ್ಟು 9195 ಹುದ್ದಗಳಿಗೆ ನೇಮಕಾತಿ ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಹೊರಡಿಸಿದೆ. ಏಪ್ರಿಲ್ 2026 ರ ಅಧಿಕೃತ ಅಧಿಸೂಚನೆ ಪ್ರಕಾರ ಕಾನ್ಸ್‌ಟೇಬಲ್ (ಟೆಕ್ನಿಕಲ್ ಮತ್ತು ಟ್ರೇಡ್ಸ್‌ಮೆನ್ ಮತ್ತು ಪಯೋನಿಯರ್) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ದೇಶಾದ್ಯಂತ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಇದು ಉತ್ತಮ ಅವಕಾಶವಾಗಿದೆ. ಆಸಕ್ತರು 2026ರ ಮೇ 19 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. CRPF ಖಾಲಿ ಹುದ್ದೆಗಳ ವಿವರಗಳು ಸಂಸ್ಥೆಯ ಹೆಸರು: ಕೇಂದ್ರ ರಿಸರ್ವ್ ಪೊಲೀಸ್ ಫೋರ್ಸ್ (CRPF) ಹುದ್ದೆಗಳ ಸಂಖ್ಯೆ: 9195 ಕೆಲಸದ ಸ್ಥಳ: ದೇಶಾದ್ಯಂತ ಹುದ್ದೆಯ ಹೆಸರು: ಕಾನ್ಸ್‌ಟೇಬಲ್ (ಟೆಕ್ನಿಕಲ್ & ಟ್ರೇಡ್ಸ್‌ಮೆನ್ & ಪಯೋನಿಯರ್) ವೇತನ: 21,700 –69,100 ರೂ. ಪ್ರತಿ ತಿಂಗಳು ರಾಜ್ಯವಾರು ಹುದ್ದೆಗಳ ವಿವರಗಳು ಆಂಧ್ರ ಪ್ರದೇಶ – 507 ಅಸ್ಸಾಂ – 288 ಬಿಹಾರ – 700 ಚಂಡೀಗಢ (UT) – 7 ಛತ್ತೀಸ್‌ಗಢ – 206 ದೆಹಲಿ (UT) – 114 ಗೋವಾ – 16 ಗುಜರಾತ್ – 452 ಹರಿಯಾಣ – 153 ಹಿಮಾಚಲ ಪ್ರದೇಶ – 42 ಜಮ್ಮು & ಕಾಶ್ಮೀರ – 167 ಜಾರ್ಖಂಡ್ – 257 ಕರ್ನಾಟಕ – 471 ಕೇರಳ – 306 ಮಹಾರಾಷ್ಟ್ರ – 688 ಮಧ್ಯಪ್ರದೇಶ – 454 ಒಡಿಶಾ – 288 ಪಂಜಾಬ್ – 245 ರಾಜಸ್ಥಾನ್ – 434 ತಮಿಳುನಾಡು – 681 ತೆಲಂಗಾಣ – 356 ಉತ್ತರ ಪ್ರದೇಶ – 1230 ಪಶ್ಚಿಮ ಬಂಗಾಳ – 754 (ಇತರೆ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಿಗೂ ಹುದ್ದೆಗಳು ಲಭ್ಯವಿವೆ) ಟ್ರೇಡ್‌ವಾರು ಹುದ್ದೆಗಳ ವಿವರಗಳು ಡ್ರೈವರ್ – 3176 ಬಾರ್ಬರ್ – 242 ಬಗ್ಲರ್ – 1263 ಕೋಬ್ಲರ್ – 118 ಅಡುಗೆ ಭಟ್ಟ – 1426 ಬಡಿಗ – 123 ಬ್ರಾಸ್ ಬ್ಯಾಂಡ್ – 175 ಮಾಲಿ – 142 ಮೋಟಾರ್ ಮೆಕ್ಯಾನಿಕ್ – 739 ಬ್ಯಾಗ್‌ಪೈಪ್ ವಾದ್ಯವೃಂದ – 48 ಪೇಂಟರ್ – 84 ಸ್ವಚ್ಛತಾ ಕಾರ್ಮಿಕ – 547 ಟೈಲರ್ – 197 ವಾಟರ್ ಕ್ಯಾರಿಯರ್ – 529 ದೋಬಿ/ ಅಗಸ – 363 ಹೆರ್ ಡ್ರೆಸರ್ – 3 ಗೌಂಡಿ – 13 ಎಲೆಕ್ಟ್ರಿಷಿಯನ್ – 7 ಅರ್ಹತೆ ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಮಂಡಳಿ/ವಿಶ್ವವಿದ್ಯಾಲಯದಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು ವಯೋಮಿತಿ ಕನಿಷ್ಠ ವಯಸ್ಸು: 18 ವರ್ಷ ಗರಿಷ್ಠ ವಯಸ್ಸು: 27 ವರ್ಷ ಟ್ರೇಡ್ ಪ್ರಕಾರ ಡ್ರೈವರ್: 21 – 27 ವರ್ಷ ಇತರೆ ಟ್ರೇಡ್‌ಗಳು: 18 – 23 ವರ್ಷ ವಯೋಮಿತಿ ಸಡಿಲಿಕೆ SC/ST ಅಭ್ಯರ್ಥಿಗಳಿಗೆ: 5 ವರ್ಷ OBC ಅಭ್ಯರ್ಥಿಗಳಿಗೆ: 3 ವರ್ಷ ಎಕ್ಸ್-ಸರ್ವಿಸ್‌ಮನ್: 3 ವರ್ಷ 1984 ಗಲಭೆಯಲ್ಲಿ ಮೃತಪಟ್ಟವರ ಮಕ್ಕಳಿಗೆ: UR: 5 ವರ್ಷ OBC: 8 ವರ್ಷ SC/ST: 10 ವರ್ಷ ಅರ್ಜಿ ಶುಲ್ಕ ಸಾಮಾನ್ಯ, EWS, OBC (ಪುರುಷರು) ರಿಗೆ: 1000 ರೂ. SC/ST/ಎಕ್ಸ್-ಸರ್ವಿಸ್‌ಮನ್/ಮಹಿಳೆಗಳು: ಶುಲ್ಕವಿಲ್ಲ ಪಾವತಿ ವಿಧಾನ: ಆನ್‌ಲೈನ್ ಆಯ್ಕೆ ಪ್ರಕ್ರಿಯೆ ದೈಹಿಕ ಸಾಮರ್ಥ್ಯ ಪರೀಕ್ಷೆ (PET) ದೈಹಿಕ ಮಾನದಂಡ ಪರೀಕ್ಷೆ (PST) ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಟ್ರೇಡ್/ಸ್ಕಿಲ್ ಟೆಸ್ಟ್ ದಾಖಲೆ ಪರಿಶೀಲನೆ ವೈದ್ಯಕೀಯ ಪರೀಕ್ಷೆ (DME/RME) ಅರ್ಜಿ ಸಲ್ಲಿಸುವ ವಿಧಾನ ಮೊದಲಿಗೆ CRPF ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಗಳನ್ನು ಪರಿಶೀಲಿಸಿ ಮಾನ್ಯ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ಹೊಂದಿರಲಿ ಅಗತ್ಯ ದಾಖಲೆಗಳನ್ನು ಸಿದ್ಧವಾಗಿರಲಿ ಆನ್‌ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದಲ್ಲ) ಸಲ್ಲಿಸಿ ಮತ್ತು ಅಪ್ಲಿಕೇಶನ್ ಸಂಖ್ಯೆಯನ್ನು ಕಾಯ್ದಿರಿಸಿಕೊಳ್ಳಿ ಪ್ರಮುಖ ದಿನಾಂಕಗಳು ಅರ್ಜಿ ಆರಂಭ ದಿನಾಂಕ: 20-ಏಪ್ರಿಲ್-2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 19-ಮೇ-2026 ಶುಲ್ಕ ಪಾವತಿ ಕೊನೆಯ ದಿನಾಂಕ: 19-ಮೇ-2026 ಪ್ರಮುಖ ಲಿಂಕ್‌ಗಳು ಅಧಿಕೃತ ಅಧಿಸೂಚನೆ ಪಿಡಿಎಫ್ ಲಭ್ಯ ಆನ್‌ಲೈನ್ ಅರ್ಜಿ: 20-ಏಪ್ರಿಲ್-2026 ರಿಂದ ಪ್ರಾರಂಭ ಅಧಿಕೃತ ವೆಬ್‌ಸೈಟ್: rect.crpf.gov.in ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಅಗ್ನಿಪಥ ನೇಮಕಾತಿ ಏಪ್ರಿಲ್ 10ರ ತನಕ ವಿಸ್ತರಣೆ ಉತ್ತರ ಕರ್ನಾಟಕ ಜನರಿಗೆ ಸಿಹಿ ಸುದ್ದಿ: ಏರೋಸ್ಪೇಸ್ ಕ್ಷೇತ್ರದಲ್ಲಿ 1,356 ಕೋಟಿ ರೂ. ಹೂಡಿಕೆ, 1,350 ಉದ್ಯೋಗ ಸೃಷ್ಟಿ