ಭಾರತೀಯ ಸೇನೆಯು ತಿಂಗಳ ಹಿಂದೆ 2026ನೇ ಸಾಲಿಗೆ ಅಗ್ನಿಪಥ ಯೋಜನೆಯಡಿಯಲ್ಲಿ ಭೂಸೇನೆಯಲ್ಲಿ ಅಗ್ನಿವೀರರ ನೇಮಕಾತಿಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಏ.10ರ ತನ ಮುಂದೂಡಿದೆ. ರಾಜ್ಯದಲ್ಲಿ ಬೆಂಗಳೂರು, ಮಂಗಳೂರು ಮತ್ತು ಬೆಳಗಾವಿ ಸೇನಾ ವಲಯ ಕಚೇರಿಗಳು ನೇಮಕದ ಉಸ್ತುವಾರಿ ವಹಿಸಲಿವೆ. ರಾಜ್ಯದಲ್ಲಿಯೂ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ನೇಮಕ ರ್ಯಾಲಿಗಳು ನಡೆಯಲಿವೆ. ಮೊದಲ ಹಂತದಲ್ಲಿ ಕಂಪ್ಯೂಟರ್ ಆಧರಿತ ಆನ್‌ಲೈನ್ ಪರೀಕ್ಷೆ ನಡೆಸಿ ನಂತರ ನೇಮಕ ರ್ಯಾಲಿ ಕೈಗೊಳ್ಳಲಾಗುತ್ತದೆ ಎಂದು ಸೇನೆಯು ಅಧಿಸೂಚನೆಯಲ್ಲಿ ತಿಳಿಸಿದೆ. ಜನರಲ್ ಡ್ಯೂಟಿ, ಟೆಕ್ನಿಕಲ್, ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹಾಗೂ ಟ್ರೇಡ್ಸ್‌ಮನ್ ವಿಭಾಗದಲ್ಲಿ ಅಗ್ನಿವೀರರ ನೇಮಕಾತಿ ನಡೆಯಲಿದೆ. ಎಎಸ್‌ಎಸ್‌ಎಲ್‌ಸಿ, ಪಿಯುಸಿ ಸೇರಿದಂತೆ ವಿವಿಧ ಅರ್ಹತೆಯುಳ್ಳವರಿಗೆ ಸೇನೆಯಲ್ಲಿ ಅವಕಾಶವಿದೆ. ಹೆಚ್ಚಿನ ವಿವರಗಳಿಗೆ ಸೇನೆಯ ವೆಬ್ ಸೈಟ್ (www.joinindiannavy.gov.in) ನೋಡಬಹುದು. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation NHM ಕರ್ನಾಟಕದಲ್ಲಿ 35 ಹುದ್ದೆಗಳು ಖಾಲಿ: ನೇರ ಸಂದರ್ಶನದ ಮೂಲಕ ನೇಮಕಾತಿ CRPF ನೇಮಕಾತಿ 2026: ಕರ್ನಾಟಕದ 471 ಸೇರಿದಂತೆ 9195 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ