Census: How to submit Self-Enumeration information onlineಜನಗಣತಿ

ನವದೆಹಲಿ, ಮಾರ್ಚ್‌ 31: 2027ರಲ್ಲಿ ನಡೆಯುವ ಜನಗಣತಿ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ‘ಸಂಪೂರ್ಣ ಡಿಜಿಟಲ್ ಮೂಲಕ ನಡೆಯುತ್ತಿದೆ. ಸಾಂಪ್ರದಾಯಿಕ ಕಾಗದ ರಹಿತವಾಗಿ, ‘Bring Your Own Device (BYOD)’ ಮಾದರಿಯಲ್ಲಿ ವಿಶೇಷ ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಗಣತಿದಾರರು ಮಾಹಿತಿ ಸಂಗ್ರಹಿಸಲಿದ್ದಾರೆ.

ಸಾರ್ವಜನಿಕರಿಗೆ “se.census.gov.in” ಪೋರ್ಟಲ್ ಮೂಲಕ ಸ್ವಯಂ-ಗಣತಿ (Self-Enumeration) ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ಜನರು 2026ರ ಏಪ್ರಿಲ್ 1 ರಿಂದ ಏಪ್ರಿಲ್ 15ರ ವರೆಗೆ ತಮ್ಮ ಮಾಹಿತಿಯನ್ನು ತಾವೇ ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ. ನಂತರ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಈ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ.

ಆನ್‌ಲೈನ್‌ನಲ್ಲಿ ಸಲ್ಲಿಸುವುದು ಹೇಗೆ?

  1. ನೋಂದಣಿ (Registration): ಪೋರ್ಟಲ್‌ಗೆ ಭೇಟಿ ನೀಡಿ, ರಾಜ್ಯ/ಜಿಲ್ಲೆ ಆಯ್ಕೆ ಮಾಡಿ, ಕುಟುಂಬದ ಮುಖ್ಯಸ್ಥರ ಹೆಸರು ಮತ್ತು 10 ಅಂಕಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  2. OTP ಪರಿಶೀಲನೆ: ಮೊಬೈಲ್‌ಗೆ ಬರುವ OTP ಬಳಸಿ ಲಾಗಿನ್ ಆಗಿ.
  3. ಮಾಹಿತಿ ಭರ್ತಿ (Filling Details): ಮನೆ, ಆಸ್ತಿ, ಮತ್ತು ಕುಟುಂಬದ ಸದಸ್ಯರ ವಿವರಗಳನ್ನು ಒದಗಿಸಿ.
  4. ನಕ್ಷೆಯಲ್ಲಿ ಗುರುತಿಸುವುದು (Location Marking): ನಿಮ್ಮ ಮನೆಯ ನಿಖರವಾದ ಸ್ಥಳವನ್ನು ಮ್ಯಾಪ್‌ನಲ್ಲಿ (Map) ಗುರುತಿಸಿ.
  5. ಸಲ್ಲಿಸುವುದು (Submission): ಎಲ್ಲಾ ಮಾಹಿತಿ ಸರಿಯಾಗಿದೆಯೇ ಎಂದು ಪರಿಶೀಲಿಸಿ ಸಬ್ಮಿಟ್ (Submit) ಮಾಡಿ.
  6. ID ಪಡೆಯಿರಿ: ಪ್ರಕ್ರಿಯೆ ಮುಗಿದ ತಕ್ಷಣ, Self-Enumeration (SE) ID ಸಿಗುತ್ತದೆ. ಇದನ್ನು ಉಳಿಸಿಕೊಳ್ಳಿ. ಗಣತಿದಾರರು ಮನೆಗೆ ಬಂದಾಗ ಈ ID ತೋರಿಸಿದರೆ ಸಾಕು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *