ನವದೆಹಲಿ, ಏಪ್ರಿಲ್ 11: ಖ್ಯಾತ ಹಿರಿಯ ಹಿನ್ನೆಲೆ ಗಾಯಕಿ ಆಶಾ ಬೋಸ್ಲೆ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. 92 ವರ್ಷದ ಆಶಾ ಬೋಸ್ಲೆ ಅವರಿಗೆ ಇಂದು (ಏ.11) ಹೃದಯ ಸ್ತಂಭನ ಉಂಟಾಗಿದ್ದು, ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಶಾ ಬೋಸ್ಲೆ ಅವರಿಗೆ ಸದ್ಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಆಶಾ ಭೋಸ್ಲೆ ಅವರು ಹೃದಯ ಸ್ತಂಭನ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರು ಈಗ ಎಮರ್ಜೆನ್ಸಿ ಮೆಡಿಕಲ್ ಸರ್ವಿಸಸ್ (EMS) ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತಿತ್ ಸಮ್ದಾನಿ ಅವರು ತಿಳಿಸಿದ್ದಾರೆ. ಎಂಟು ದಶಕಗಳ ಸುದೀರ್ಘ ಪಯಣ ಭಾರತೀಯ ಚಿತ್ರರಂಗದ ದಂತಕಥೆಯಾಗಿರುವ ಆಶಾ ಬೋಸ್ಲೆ ಅವರು ಎಂಟು ದಶಕಗಳ ಕಾಲ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ವಿವಿಧ ಭಾರತೀಯ ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಅವರು, ಎರಡು ರಾಷ್ಟ್ರ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಕೇವಲ ಸಿನಿಮಾ ಮಾತ್ರವಲ್ಲದೆ, ಸ್ವತಂತ್ರ ಆಲ್ಬಮ್‌ಗಳ ಮೂಲಕವೂ ಅವರು ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸದ್ಯ ಆಶಾ ಬೋಸ್ಲೆ ಶೀಘ್ರವಾಗಿ ಗುಣಮುಖರಾಗಲಿ ಎಂದು ದೇಶಾದ್ಯಂತ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಪಶ್ಚಿಮ ಬಂಗಾಳದಲ್ಲಿ 54 ಲಕ್ಷ ಹಿಂದೂಗಳ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ಗಂಟೆಗೆ 220 ಕಿಮೀ ಸಂಚರಿಸುವ ರೈಲು: ಹುಬ್ಬಳ್ಳಿಯಿಂದ ಬೆಂಗಳೂರಿಗೆ 2 ಗಂಟೆ ಪ್ರಯಾಣ