54 Lakh Hindu Voters Removed from Electoral Rolls in West Bengalಸಾಂದರ್ಭಿಕ ಚಿತ್ರ

 ಪಶ್ಚಿಮ ಬಂಗಾಳದಲ್ಲಿ ನಡೆದ ವಿಶೇಷ ತೀವ್ರ ಪರಿಶೀಲನೆ (SIR) ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಸುಮಾರು 90 ಲಕ್ಷ ಹೆಸರುಗಳನ್ನು ತೆಗೆದುಹಾಕಲಾಗಿದೆ. SIR ಪ್ರಕ್ರಿಯೆಯ ಮುಂಚೆ ಮತ್ತು ನಂತರದ ಬೂತ್ ಮಟ್ಟದ ಮಾಹಿತಿಯನ್ನು ಹೋಲಿಸಿದಾಗ ತೆಗೆದುಹಾಕಲಾದ ಮತದಾರರಲ್ಲಿ 57.47 ಲಕ್ಷ (63%) ಹಿಂದೂಗಳು ಮತ್ತು 31.1 ಲಕ್ಷ (34%) ಮುಸ್ಲಿಮರು ಹೆಸರುಗಳನ್ನು ಮತಾದರರ ಪಟ್ಟಿಯಿಂದ ತೆಗೆದುಹಾಕಲಾಗಿದೆ.

2011ರ ಜನಗಣತಿಯ ಪ್ರಕಾರ ಮುಸ್ಲಿಮರು ರಾಜ್ಯದ ಜನಸಂಖ್ಯೆಯ ಕೇವಲ 27% ಮಾತ್ರ ಇದ್ದರು. ಈ ಅಂಕಿ-ಅಂಶಗಳು ವಿಶೇಷ ಮಹತ್ವ ಪಡೆದುಕೊಂಡಿವೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೊರತುಪಡಿಸಿ ಉಳಿದ ಎಲ್ಲಾ ರಾಜಕೀಯ ಪಕ್ಷಗಳು SIR ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದವು. ಆದರೆ ಬಿಜೆಪಿ ಈ ಪ್ರಕ್ರಿಯೆ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವ ಮತ್ತು ಬಾಂಗ್ಲಾದೇಶದಿಂದ ಬಂದ ಅಕ್ರಮ ಪ್ರವೇಶಿಕರನ್ನ ಮತದಾರರ ಪಟ್ಟಿಯಿಂದ ತೆಗೆದುಹಾಕುವ ಅಭಿಯಾನ ಎಂದು ಹೇಳಿದೆ.

ಮೂಲಗಳ ಪ್ರಕಾರ, ಗಡಿಭಾಗದ ಕೆಲವು ಕ್ಷೇತ್ರಗಳಲ್ಲಿ ಮುಖ್ಯಮಂತ್ರಿ ಮತುವಾ ಬ್ಯಾನರ್ಜಿ ಅವರ ಸಮುದಾಯದ ಜನರು ಹೆಚ್ಚಾಗಿ ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮತುವಾ ಬ್ಯಾನರ್ಜಿ ಅವರು ಹಿಂದೂ ನಮಶೂದ್ರ (ದಲಿತ) ಸಮುದಾಯಕ್ಕೆ ಸೇರಿದವರಾಗಿದ್ದು, ಇವರು ಬಾಂಗ್ಲಾದೇಶದಿಂದ ದೊಡ್ಡ ಪ್ರಮಾಣದಲ್ಲಿ ವಲಸೆ ಬಂದವರು. ಇವರಿಗೆ Citizenship Amendment Act ಅಡಿಯಲ್ಲಿ ನಾಗರಿಕತ್ವ ನೀಡುವ ಭರವಸೆ ನೀಡಲಾಗಿದೆ.

ಉತ್ತರ 24 ಪರಗಣಾ ಜಿಲ್ಲೆಯ ಬಗ್ದಾ ಕ್ಷೇತ್ರದಲ್ಲಿ 50,230 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರಲ್ಲಿ 46,826 ಹಿಂದೂಗಳು ಮತ್ತು 3,264 ಮುಸ್ಲಿಮರ ಹೆಸರುಗಳಿವೆ. ಅದೇ ಜಿಲ್ಲೆಯ ಬೊಂಗಾಂ ಉತ್ತರ ಕ್ಷೇತ್ರದಲ್ಲಿ 42,164 ಮತದಾರರ ಹೆಸರುಗಳನ್ನು  ತೆಗೆದುಹಾಕಲಾಗಿದ್ದು, ಇದರಲ್ಲಿ 37,101 ಹಿಂದೂಗಳು ಮತ್ತು 4,310 ಮುಸ್ಲಿಮರ ಹೆಸರುಗಳಿವೆ.

ಭವಾನೀಪುರ ಕ್ಷೇತ್ರದಲ್ಲಿ ಒಟ್ಟು 50,987 ಮತದಾರರ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರಲ್ಲಿ 37,227 ಹಿಂದೂಗಳು ಮತ್ತು 12,084 ಮುಸ್ಲಿಮರ ಹೆಸರು ಸೇರಿವೆ.

ಜಂಗಲ್ ಮಹಲ್ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆ ಕಡಿಮೆ ಇರುವುದರಿಂದ, ಮತದಾರರ ಪಟ್ಟಿಯಿಂದ ಸುಮಾರು ಶೇ 90 ರಷ್ಟು ಹಿಂದೂಗಳ ಹೆಸರುಗಳನ್ನು ತೆಗೆದುಹಾಕಲಾಗಿದೆ. ಜಾರ್ಗ್ರಾಮ್ ಜಿಲ್ಲೆಯಲ್ಲಿ ಶೇ 94, ಬಂಕುರಾದಲ್ಲಿ ಶೇ 91 ಮತ್ತು ಪುರೂಲಿಯಾದಲ್ಲಿ ಶೇ 88 ರಷ್ಟು ಹಿಂದೂಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ.

ಫೆಬ್ರವರಿ 28ರಂದು ಪ್ರಕಟಿಸಿದ ಕರಡು ಪಟ್ಟಿಯಿಂದ 63 ಲಕ್ಷ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಇನ್ನೂ 60 ಲಕ್ಷ ಮತದಾರರ ಹೆಸರುಗಳು ನ್ಯಾಯಾಂಗ ಅಧಿಕಾರಿಗಳ ಪರಿಶೀಲನೆಗೆ ಒಳಪಟ್ಟಿದ್ದವು. ಈ ಪರಿಶೀಲನೆ ನಂತರ ಏಪ್ರಿಲ್ 6 ರಂದು 27 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.  

ನ್ಯಾಯಾಂಗ ಪರಿಶೀಲನೆಯ ವೇಳೆ ತೆಗೆದುಹಾಕಲಾದ ಮತದಾರರ ಸಂಖ್ಯೆಯಲ್ಲಿ ಮುಸ್ಲಿಂ ಪ್ರಾಬಲ್ಯ ಇರುವ ಜಿಲ್ಲೆಗಳಲ್ಲಿ ಹೆಚ್ಚು ಸಂಖ್ಯೆ ಕಂಡುಬಂದಿದೆ. ಮುರ್ಷಿದಾಬಾದ್ ಜಿಲ್ಲೆಯಲ್ಲಿ (ಮುಸ್ಲಿಂ ಜನಸಂಖ್ಯೆ ಹೆಚ್ಚು ಇರುವ ಜಿಲ್ಲೆ) 11.01 ಲಕ್ಷ ಪರಿಶೀಲನೆಗೊಂಡ ಹೆಸರಿನಲ್ಲಿ 4.55 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. ಉತ್ತರ 24 ಪರಗಣಾದಲ್ಲಿ 3.25 ಲಕ್ಷ ಮತ್ತು ಮತ್ತೊಂದು ಮುಸ್ಲಿಂ ಪ್ರಾಬಲ್ಯ ಜಿಲ್ಲೆ ಮಲ್ದಾದಲ್ಲಿ 2.39 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ.

ಭವಾನೀಪುರ ಮತ್ತು ನಂದಿಗ್ರಾಮ್ ಕ್ಷೇತ್ರಗಳಲ್ಲಿ ನ್ಯಾಯಾಂಗ ಪರಿಶೀಲನೆ ವೇಳೆ ಹಿಂದೂಗಳಿಗಿಂತ ಹೆಚ್ಚು ಮುಸ್ಲಿಂ ಮತದಾರರನ್ನು ತೆಗೆದುಹಾಕಲಾಗಿದೆ.

ಪ್ರಸ್ತುತ ಪಶ್ಚಿಮ ಬಂಗಾಳದ ಒಟ್ಟು ಮತದಾರರ ಸಂಖ್ಯೆ 6.75 ಕೋಟಿ ಆಗಿದ್ದು, SIR ಪ್ರಕ್ರಿಯೆ ಆರಂಭವಾಗುವ ಮೊದಲು (ಅಕ್ಟೋಬರ್ 2025) ಇದ್ದ 7.66 ಕೋಟಿ ಇತ್ತು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *