Indian Railways to manufacture 2 trains with 220 kmphರೈಲುಗಳು

ನವದೆಹಲಿ, ಏಪ್ರಿಲ್‌ 12: ಭಾರತೀಯ ರೈಲ್ವೆ ಸಚಿವಾಲಯವು ಗಂಟೆಗೆ 220 ಕಿಮೀ ಸಂಚರಿಸುವ ಎರಡು ಹೊಸ ರೈಲುಗಳನ್ನು ತಯಾರಿಸಲು ಯೋಜನೆ ರೂಪಿಸಿದೆ. ಪ್ರಸ್ತುತ, ವಂದೇ ಭಾರತ್ ಎಕ್ಸ್‌ಪ್ರೆಸ್ ಅತಿ ವೇಗದ ರೈಲಾಗಿದ್ದು, ಇದು ಗಂಟೆಗೆ 180 ಕಿಮೀ ವೇಗದಲ್ಲಿ ಸಂಚರುತ್ತಿದೆ. ಪ್ರಸ್ತುತ ದೇಶದಾದ್ಯಂತ 81 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ.

ಮುಂದಿನ ತಲೆಮಾರದ ರೈಲುಗಳು

ಚೈನ್ನೈನ ಐಸಿಎಫ್‌ (ICF) ಮತ್ತು ಬಿಇಎಂಎಲ್‌ (BEML) ಸಂಸ್ಥೆಗಳು ಜಂಟಿಯಾಗಿ ಈ ರೈಲುಗಳನ್ನು ತಯಾರಿಸಲಿವೆ. ಇವು ಸ್ಟೇನ್‌ಲೆಸ್‌ ಸ್ಟೀಲ್‌ನಿಂದ ನಿರ್ಮಾಣವಾಗಲಿದ್ದು, ಆಧುನಿಕ ಏರೋಡೈನಾಮಿಕ್‌ ವಿನ್ಯಾಸ ಮತ್ತು ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿರುತ್ತದೆ. 2027-28ರ ಹೊತ್ತಿಗೆ 16 ಬೋಗಿಗಳನ್ನು ಒಳಗೊಂಡಿರುವ ಈ ಎರಡು ರೈಲು ಸಿದ್ಧವಾಗಲಿವೆ.

ICF ಎರಡು ಹೈ-ಸ್ಪೀಡ್ ರೈಲುಗಳ ಬ್ಲೂಪ್ರಿಂಟ್‌ ಅನ್ನು 2024ರ ಅಕ್ಟೋಬರ್‌ನಲ್ಲೇ  ಕೇಂದ್ರ ರೈಲ್ವೆ ಮಂಡಳಿಗೆ ನೀಡಿತ್ತು. ರೈಲಿನ ಪ್ರತಿ ಬೋಗಿ ತಯಾರಿಸಲು 27.86 ಕೋಟಿ ರೂ. ಖರ್ಚಾಗಲಿದ್ದು, ಒಟ್ಟು 866.87 ಕೋಟಿ ರೂ. ಖರ್ಚಾಗುತ್ತದೆ.  

ಪ್ರಸ್ತುತ ಬೋಗಿಗಳನ್ನು ಮೂರು ಪ್ರಮುಖ ಉತ್ಪಾದನಾ ಘಟಕಗಳಲ್ಲಿ ತಯಾರಿಸಲಾಗುತ್ತಿದೆ. ಚೆನ್ನೈಯ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF), ಕಪೂರ್ತಲಾದ ರೈಲ್ ಕೋಚ್ ಫ್ಯಾಕ್ಟರಿ (RCF) ಮತ್ತು ರಾಯಬರೇಲಿಯ ಮಾಡರ್ನ್ ಕೋಚ್ ಫ್ಯಾಕ್ಟರಿ (MCF). ವಂದೇ ಭಾರತ್, ನಮೋ ಭಾರತ್, ರಾಪಿಡ್ ಮತ್ತು ರೀಜನಲ್ ಮೆಟ್ರೋ ರೈಲುಗಳು, ಕೊಲ್ಕತ್ತಾ ಮೆಟ್ರೋ ರೇಕ್‌ಗಳು, ಅಮೃತ ಭಾರತ್ ರೈಲುಗಳು ಸೇರಿದಂತೆ ವಿವಿಧ ಪ್ರಯಾಣಿಕರ ರೈಲು ಬೋಗಿಗಳು ಇಲ್ಲಿ ತಯಾರಾಗುತ್ತವೆ.

ಅಂದುಕೊಂಡಂತೆ ಎಲ್ಲವೂ ನಡೆದರೆ, ಚೆನ್ನೈನಿಂದ ಕೊಯಮತ್ತೂರು ಮತ್ತು ಮಧುರೈಗೆ 4 ಗಂಟೆಗಳಲ್ಲಿ ತಲುಪಬಹುದು. ಅಷ್ಟೇ ಅಲ್ಲ, ಚನ್ನೈನಿಂದ ಬೆಂಗಳೂರಿಗೆ ಕೇವಲ 2 ಗಂಟೆಗಳಲ್ಲಿ, ಹಾಗೇಯೇ ಬೆಂಗಳೂರಿನಿಂದ ಹುಬ್ಬಳಿಗೆ ಕೇವಲ 2 ಗಂಟೆಯಲ್ಲಿ ಹೋಗಬಹುದು.  

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *