Ambedkar Jayanti: Dalit Welfare Lies in Nation’s Progress – Babasaheb’s Speech at the London Round Table Conferenceಡಾ. ಬಿ ಆರ್‌ ಅಂಬೇಡ್ಕರ್‌

ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಈ ಶತಮಾನದ ಓರ್ವ ಅತಿ ಶ್ರೇಷ್ಠ ರಾಷ್ಟ್ರ ನಾಯಕರು. ಮಹಾರಾಷ್ಟ್ರದಲ್ಲಿನ ಅಸ್ಪೃಶ್ಯರೆನಿಸಿಕೊಂಡ ಮಹರ್ ಜಾತಿಗೆ ಸೇರಿದ ಕುಟುಂಬದಲ್ಲಿ ಜನಿಸಿದ ಅವರು ಹಿಂದೂ ಸಮಾಜದಲ್ಲಿನ ದಲಿತ ವರ್ಗದ ಏಳಿಗೆಯನ್ನೇ ಪ್ರಧಾನ ಜೀವನ ಕಾರ್ಯವಾಗಿ ಸ್ವೀಕರಿಸಿದ್ದರು. ತಮ್ಮ ಬದುಕಿನುದ್ದಕ್ಕೂ ಅಸ್ಪೃಶ್ಯತೆಯ  ಅಪಮಾನಗಳನ್ನು ಸ್ವತಃ ಅನುಭವಿಸಿ ನೊಂದು ಬಂದವರು ಅವರು.

ಆದರೆ ಹುಟ್ಟಿನಿಂದಲೇ ಅಸಾಧಾರಣ ಬುದ್ಧಿ ಪ್ರತಿಭೆ ಮತ್ತು ಕರ್ತೃತ್ವಗಳ ಗಣಿಯಾಗಿದ್ದ ಅಂಬೇಡ್ಕರ್‌ ಅವರು ತಮ್ಮ ಪರಮಾವಧಿ ಪರಿಶ್ರಮದಿಂದ ಅವೆಲ್ಲವನ್ನು ಅರಗಿಸಿಕೊಂಡು ನಿಜಕ್ಕೂ ಧೂಳಿನಿಂದ ಎದ್ದು ಬಾನೆತ್ತರದವರೆಗೂ ತನ್ನ ವ್ಯಕ್ತಿತ್ವವನ್ನು ಬೆಳೆಸಲು ಶಕ್ತರಾದರು. ದಲಿತ ವರ್ಗದ ಏಳಿಗೆಗಾಗಿ ಅಂಬೇಡ್ಕರ್ ಪರಿಶ್ರಮಿಸುತ್ತಿದ್ದ ದಿನಗಳಲ್ಲೇ ನಮ್ಮ ದೇಶವು ಸ್ವರಾಜ್ಯ ಪ್ರಾಪ್ತಿಗಾಗಿ ಹೋರಾಟದಲ್ಲಿ ತೊಡಗಿತ್ತು ಎನ್ನುವುದು ಅಂದಿನ ಸನ್ನಿವೇಶಗಳಿಗೆ ಇರುವ ಇನ್ನೊಂದು ಮುಖ.

ಬಾಬಾ ಸಾಹೇಬರು ತಮ್ಮ ಶಿಕ್ಷಣ ಪೂರೈಸಿ ಸಾರ್ವಜನಿಕ ಜೀವನವನ್ನು ಆರಂಭಿಸಿದುದು 20ನೇ ಶತಮಾನದ ಎರಡನೆಯ ದಶಕದಲ್ಲಿ. ದೇಶದ ಸ್ವಾತಂತ್ರ್ಯ ಹೋರಾಟದ ಕಾವು ದಿನಗಳಿದಂತೆ ತೀವ್ರಗೊಳ್ಳುತ್ತಿದ್ದ ಕಾಲ ಅದು. ಬ್ರಿಟಿಷ್ ಸರ್ಕಾರಕ್ಕೂ ತಾನು ಈ ದೇಶದಿಂದ ಗಂಟು ಮೂಟೆ ಕಟ್ಟಬೇಕಾದ ಕಾಲ ದೂರವಿಲ್ಲ ಎಂಬ ಅರಿವು ಆಗ ಕಾಣಿಸತೊಡಗಿತ್ತು. ಆಡಳಿತದಲ್ಲಿ ಆಗಾಗ ಕೆಲವು ಸುಧಾರಣೆಗಳನ್ನು ತರುವುದರ ಮೂಲಕ ದೇಶೀಯರೊಂದಿಗೆ ಅಧಿಕಾರ ಹಂಚಿಕೊಳ್ಳುವ ಪ್ರಕ್ರಿಯೆಯನ್ನು ಬ್ರಿಟಿಷರು ಆಗಲೇ ಆರಂಭಿಸಿದ್ದರು.

ಇಂತಹ ಸಂಧಿಕಾಲದಲ್ಲಿ ಅಂಬೇಡ್ಕರ್ ರಿಗೆ ತಮ್ಮ ಜನರ ಹಿತ ಸಾಧನೆಗಾಗಿ ಆಳುವ ವಿದೇಶ ಸರ್ಕಾರದೊಂದಿಗೆ ಮಾತ್ರವಲ್ಲ ಮುಂದೆ ಸ್ವರಾಜ್ಯಪ್ರಾಪ್ತಿಯ ನಂತರ ದೇಶಿಯ ಅಧಿಕಾರರೂಢರೊಂದಿಗೂ ಹೋರಾಡಬೇಕಾದ ಪ್ರಸಂಗ ಬರಬಹುದೆಂದು ಅನಿಸಿದ್ದು ಸಹಜ. ತಮ್ಮ ಹೇಳಿಕೆಯ ಜೊತೆಯಾಗಿ ಒಟ್ಟು ದೇಶದ ಸ್ವಾತಂತ್ರ್ಯದ ಸಲುವಾಗಿ ಬೇಕಾದ ಮಾನಸಿಕತೆಯನ್ನು ದಲಿತ ವರ್ಗದಲ್ಲಿ ರೂಪಿಸುವುದು ಆಗ ಅವರಿಗೆ ಅಗತ್ಯವೆನಿಸಿತು.

ಆ ದಿನಗಳಲ್ಲಿ ಸ್ವಾತಂತ್ರ್ಯ ಆಂದೋಲನದ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಅಥವಾ ಇನ್ನಾವುದೇ ಗುಂಪಿನೊಂದಿಗೆ ಕೈಜೋಡಿಸಿ ಅಂದಿನ ಚಳುವಳಿಯಲ್ಲಿ ಅವರು ಕ್ರಿಯಾಶೀಲ ಪಾತ್ರದಲ್ಲಿ ವಹಿಸಲಿಲ್ಲ ಎಂಬುದು ನಿಜ, ಆದರೆ ಸ್ವರಾಜ್ಯ ಪ್ರಾಪ್ತಿಗಾಗಿ ನಡೆಯುತ್ತಿದ್ದ ಇತರ ಹಲವು ಪ್ರಕ್ರಿಯೆಗಳಲ್ಲಿ ಅವರು ತುಂಬಾ ಪ್ರಭಾವಿ ಪಾತ್ರ ವಹಿಸಿದ್ದರು.

ಮುಖ್ಯವಾಗಿ ರಾಜ್ಯ ಪ್ರಾಪ್ತಿಯ ಪ್ರಯತ್ನಗಳು ತಮ್ಮವರನ್ನು ಒಂದು ಬಲವಾದ ರಾಜಕೀಯ ಶಕ್ತಿಯಾಗಿ ರೂಪಿಸಬೇಕೆಂದು ಆಗ ಅವರ ಉದ್ದೇಶವಾಗಿತ್ತು ಮೊದಲು1936 ರಲ್ಲಿ ಇಂಡಿಪೆಂಡೆಂಟ್ ಲೇಬರ್ ಪಾರ್ಟಿ ಎಂಬ ರಾಜಕೀಯ ಪಕ್ಷ ಮುಂದೆ 1942 ರಲ್ಲಿ ಆಲ್ ಇಂಡಿಯಾ ಶೆಡ್ಯೂಲ್ಡ್ ಕಾಸ್ಟ್ ಫೆಡರೇಷನ್ ಎಂಬ ಪರಿಶಿಷ್ಟ ಜಾತಿಗಳ ಸಂಘಟನೆ ಇವೆರಡನ್ನು ಕಟ್ಟುವಾಗಲು ಅವರ ಕಣ್ಣ ಮುಂದಿದ್ದ ಸ್ಪಷ್ಟ ಉದ್ದೇಶವೇ ಇದು.

ಲಂಡನ್‌ನಲ್ಲಿ ಮೂರು ಬಾರಿ ಕರೆಯಲಾಗಿದ್ದ ದುಂಡು ಮೇಜಿನ ಪರಿಷತ್ತುಗಳಲ್ಲಿ ಪ್ರತಿಯೊಂದರಲ್ಲೂ ಭಾಗವಹಿಸಿ ಅಲ್ಲಿ ದಲಿತರ ಪರವಾಗಿ ಅವರು ಬಲವಾಗಿ ವರ್ತಿಸಿದ್ದರು. ಬ್ರಿಟಿಷ್ ಆಡಳಿತವು ಭಾರತದಲ್ಲಿ ಕಾನೂನು ವ್ಯವಸ್ಥೆಗಳನ್ನು ಸರಿಪಡಿಸಬಹುದಾದರು ಇಲ್ಲಿನ ದಲಿತರ ಪರಿಸ್ಥಿತಿಗಳನ್ನು ಸುಧಾರಿಸಲಿಲ್ಲ ಎನ್ನುವುದೇ ಪರಿಷತ್ತಿನ ಸಭೆಯಲ್ಲಿ ಅವರು ಮಂಡಿಸುತ್ತಿದ್ದ ವಾದ. ಅದಕ್ಕಾಗಿ ಪರಕೀಯ ಆಡಳಿತ ಆದಷ್ಟು ಶೀಘ್ರ ಕೊನೆಗೊಳ್ಳಬೇಕೆಂದು ಅವರ ಸ್ಪಷ್ಟ ನಿಲುವಾಗಿತ್ತು.

ಸ್ವರಾಜ್ಯ ಪ್ರಾಪ್ತಿ ಮತ್ತು ತಮ್ಮ ಜನರ ಹಿತ ಸಾಧನೆ ಇವೆರಡರ ಪೈಕಿ ಆದ್ಯತೆ ಯಾವುದಕ್ಕೆ ಎಂಬುದೇ ಆದ ಅಂಬೇಡ್ಕರ್‌ ಅವರ ಮನದಲ್ಲಿ ಇದ್ದ ಜಿಜ್ಞಾಸೆ. ಸ್ವಾತಂತ್ರ ಪೂರ್ವದಲ್ಲಿ ಮುಂಬೈ ಪ್ರಾಂತ್ಯದ ಶಾಸನಸಭೆಯ ಸದಸ್ಯರಾಗಿದ್ದ ಅವರು ಒಮ್ಮೆ ಚರ್ಚೆಯಲ್ಲಿ ಭಾಗವಹಿಸುತ್ತ ನನ್ನ ವ್ಯಕ್ತಿಹಿತ ಹಾಗೂ ದೇಶದ ಇವೆರಡರ ನಡುವೆ ದ್ವಂದ್ವ ಉಂಟಾದಾಗ ಸಹಜವಾಗಿಯೇ ನನ್ನ ಆದ್ಯತೆ ದೇಶಕ್ಕೆ ಆದರೆ ದೇಶ ಹಿತ ಮತ್ತು ದಲಿತರಹಿತ ಇವೆರಡರ ನಡುವೆ ಒಂದನ್ನೇ ಆರಿಸಬೇಕಾದ ನನ್ನ ಮೊದಲ ಒಲವು ಖಂಡಿತವಾಗಿಯೂ ದಲಿತ ವರ್ಗದ ಪರವಾಗಿಯೇ ಎಂದು ಸಹ ಹೇಳಿದ್ದು ತಮ್ಮ ಮನದಾಳದ ಭಾವನೆಗಳ ಆವೇಶದಲ್ಲಿ ಅವರು ಹೇಳಿದ ಮಾತುಗಳು.

ಆದರೂ ಆ ದಿನಗಳಲ್ಲಿ ದೇಶದ ಜನಸಾಮಾನ್ಯರ ಮನದಲ್ಲಿ ಪ್ರಾಪ್ತಿಯ ಅಪೇಕ್ಷೆಯೇ ಪ್ರಬಲವಾಗಿದ್ದುದರ ಅರಿವು ಸಹ ಅವರಿಗಿತ್ತು ಒಟ್ಟು ದೇಶದ ಹಿತದಲ್ಲೇ ತಮ್ಮವರ ಹಿತವೂ ಒಳಗೊಂಡಿದೆ ಎಂಬುದನ್ನು ಚೆನ್ನಾಗಿ ತಿಳಿದಿದ್ದವರು.

ಅವರು ಇನ್ನೊಂದು ಸಂದರ್ಭದಲ್ಲಿ ತಮ್ಮ ಕುಲಬಾಂಧವರ ಮುಂದೆ ಬಿಟ್ಟು ಮನದಿಂದ ಅವರಾಡಿದ ಮಾತುಗಳು ಅವರ ಅಂತರಂಗಕ್ಕೆ ಕನ್ನಡಿ ಹಿಡಿದಿದೆ. “ಸ್ವರಾಜ್ಯ ಬಂದ ನಂತರದ ಸಂವಿಧಾನದಲ್ಲಿ ನಿಮ್ಮ ಕೈಗಳಿಗೆ ರಾಜಕೀಯ ಅಧಿಕಾರ ಸಿಗುವ ಸಂಭವವಿದೆ ಅದರ ಹೊರತು ನಮ್ಮ ಜನರ ಉದ್ಧಾರ ಎಂದಿಗೂ ಸಾಧ್ಯವಿಲ್ಲ. ಹೀಗೆ ಏನಾಗಿದೆಯೋ ಅದರ ಬಗ್ಗೆ ತುಂಬಾ ಚಿಂತಿಸುವ ಅವಶ್ಯಕತೆ ಏನಿಲ್ಲ ಸ್ವಂತದ ನಿರ್ಧಾರ ಕೈಗೊಳ್ಳುವಾಗ ಇನ್ನೊಬ್ಬರ ಭಯ ಅಥವಾ ಆಮಿಷಕ್ಕೆ ಒಳಗಾಗಿ ಕೊಚ್ಚಿ ಹೋಗಬೇಕಾದ ಅಗತ್ಯವೂ ಇಲ್ಲ ನಿಮ್ಮ ಅತ್ಯಂತ ಹೆಚ್ಚಿನ ಹಿತ ಎಲ್ಲಿದೆ ಎಂಬುದನ್ನು ಯೋಚಿಸಿ ನೋಡಿ ಆಗ ಸ್ವರಾಜ್ಯವೇ ಅದಕ್ಕೆ ಉತ್ತರ ಎಂಬುದನ್ನು ನೀವೇ ಮನಗಾಣುವಿರಿ”

ದುಂಡುಮೇಜಿನ ಪರಿಷತ್ತಿನಲ್ಲಿ ದಲಿತರ ಹಿತದ ಸಲುವಾಗಿ ಬಲವಾಗಿ ಪ್ರತಿಪಾದಿಸುತ್ತಿದ್ದಾಗಲೂ ಅದು ಸ್ವರಾಜ್ಯದ ಚೌಕಟ್ಟಿನಲ್ಲೇ ಇರಬೇಕೆನ್ನುವುದು ಅವರ ನಿಲುವಾಗಿತ್ತು. ಅವರಾಡಿದ ಶಬ್ದಗಳೇ ಇದಕ್ಕೆ ಪುರಾವೆ ನೀಡಿದೆ

“ನಮ್ಮ ಕುಂದು ಕೊರತೆಗಳನ್ನು ಸರಿಪಡಿಸುವವರು ನಾವೇ ಅಲ್ಲವೇ ಇನ್ನೂ ಅಲ್ಲ ರಾಜಕೀಯ ಅಧಿಕಾರ ನಮ್ಮ ಕೈಗಳಿಗೆ ಬರದೆ ಅದು ಸಾಧ್ಯವೂ ಇಲ್ಲ ಬ್ರಿಟಿಷ್ ಸರ್ಕಾರ ಈಗ ಇರುವಂತೆ ಇರುವಷ್ಟು ಕಾಲ ರಾಜಕೀಯ ಅಧಿಕಾರದಲ್ಲಿ ನಾವು ಎಂದು ಪಾಲುದಾರರಾಗುವ ಸಂಭವವಿಲ್ಲ ರಾಜಕೀಯ ಅಧಿಕಾರ ನಮ್ಮ ಕೈಗಳಿಗೆ ಬರುವ ಸಾಧ್ಯತೆ ಇರುವುದು ಸ್ವರಾಜ್ಯದ ಸಂವಿಧಾನದಲ್ಲಿ ಮಾತ್ರ ಅದು ಸಿಗದೇ ನಮ್ಮ ಜನರ ಉನ್ನತಿ ಸಾಧ್ಯವಾಗಲಾರದು.

ರಾಜಕೀಯ ಅಧಿಕಾರ ತಮ್ಮ ಸ್ವಂತ ಕೈಗಳಿಗೆ ಬರದೆ ಹಿಂದುಳಿದ ವರ್ಗಗಳಿಗೆ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿಲ್ಲ ಸ್ವರಾಜ್ಯವನ್ನು ಕಲ್ಪಿಸುವಾಗ ಕಳೆದ ನೂರಾರು ವರ್ಷಗಳಲ್ಲಿ ನಮ್ಮ ಮೇಲಾದ ಗಮನ ದಬ್ಬಾಳಿಕೆ ಹಾಗೂ ಅನ್ಯಾಯಗಳ ನೆನಪಾಗುತ್ತದೆ ಮಾತ್ರವಲ್ಲ ಸ್ವರಾಜ್ಯದಲ್ಲಿ ಅವೆಲ್ಲವೂ ಮರುಕಳಿಸಬಹುದೆಂಬ ಭೀತಿಯು ನಮಗಿದೆ ಆದರೂ ಈ ಸಂಭವನೀಯ ಅಪಾಯವನ್ನೆದುರಿಸಲು ನಾವು ನಿರುಪಾಯವಾಗಿ ಸಿದ್ದರು ನಮ್ಮ ದೇಶ ಬಾಂಧವರೊಂದಿಗೆ ರಾಜಕೀಯ ಅಧಿಕಾರವನ್ನು ಸಾಕಷ್ಟು ಪ್ರಮಾಣದಲ್ಲಿ ಹಂಚಿಕೊಳ್ಳಬಲ್ಲವೆಂಬ ಭರವಸೆ ನಮಗಿದೆ.

ಶತಮಾನಗಳ ಕಾಲ ನಮ್ಮ ದಲಿತ ಬಾಂಧವರು ಅನುಭವಿಸಿದ ನೋವು ಅಪಮಾನಗಳ ಒಳಗುದಿ ಲಾವಾರಸವಾಗಿ ಅಂಬೇಡ್ಕರ್ ರ ವಿಚಾರಗಳಲ್ಲಿ ಹೊರಹೊಮ್ಮುತ್ತಿದ್ದ ಕಾರಣ ಹಿಂದೂ ಸಮಾಜದ ಅನ್ಯ ವರ್ಗಗಳಲ್ಲಿ ಅವರ ಕುರಿತಾಗಿ ಇರುವ ತಪ್ಪು ಗ್ರಹಿಕೆಗಳು ಅನೇಕ ಜೊತೆಯಲ್ಲಿ ಅವರು ಆಡುತ್ತಿದ್ದ ಭಾಷೆಯು ತುಂಬಾ ಹೀಗಾಗಿ ಸಮಾಜದ ಇತರ ವರ್ಗದವರಿಗೆ ಅವರ ಮಾತುಗಳು ಸಹಜವೇ ಸ್ವಾತಂತ್ರ ಆಂದೋಲನದಲ್ಲಿ ಅಂದಿನ ಯಾವುದೇ ಜನಪ್ರಿಯ ಪಕ್ಷಗಳೊಂದಿಗೆ ಸಹಕರಿಸದಿರುವುದರಿಂದ ಹಾಗೂ ದುಂಡು ಮೇಜಿನ ಪರಿಷತ್ತಿನಲ್ಲೂ ದಲಿತರ ಹಿತಕ್ಕೆ ಸಂಬಂಧಿಸಿದಂತೆ ತುಂಬಾ ಬಿಗಿದೋರಣೆ ಕಳೆದುದರಿಂದ ಅವರನ್ನು ಬ್ರಿಟಿಷರ ಕೈಗೊಂಬೆ ದೇಶದ್ರೋಹಿ ಇತ್ಯಾದಿಯಾಗಿ ಅನೇಕರು ಟೀಕೆ ಮಾಡಿರುವುದು ಉಂಟು.

ಆದರೆ ವಾಸ್ತವಿಕವಾಗಿ ದೇಶ ಹಿತದ ಸವಾಲು ಬಂದಾಗ ಅಂಬೇಡ್ಕರ್ರು ಎಂದು ರಾಜ ಮಾಡಿದವರಲ್ಲ ನನ್ನದು ತಾರಸ್ವಭಾವ ಎಷ್ಟೋ ಬಾರಿ ಅಧಿಕಾರದಲ್ಲಿರುವ ಅವರೊಂದಿಗೆ ನನ್ನ ಚಕಮಕಿ ನಡೆದಿದೆ ಆದರೆ ನಾನು ಭಾರತದ ವಿಷಯವಾಗಿ ಪರದೇಶಗಳಲ್ಲಿ ಕಟುವಾಗಿ ಮಾತನಾಡುವೆ ಎನ್ನುವ ತಪ್ಪು ಗ್ರಹಿಕೆ ಮಾತ್ರ ಯಾರು ತಾಳುವುದು ಬೇಡ.

ನಾನು ದೇಶದ ವಿರುದ್ಧವಾಗಿ ಎಂದು ದಂಗೆ ಎದ್ದವನಲ್ಲ ನನ್ನ ಹೃದಯದಲ್ಲಿ ಯಾವತ್ತಿಗೂ ಪ್ರಧಾನವಾಗಿರುವುದು ದೇಶದ ಹಿತವೇ ದುಂಡುಮೇಜಿನ ಪರಿಷತ್ತಿನಲ್ಲಿ ದೇಶದ ಹಿತದೃಷ್ಟಿಯಿಂದ ನಾನು ಗಾಂಧೀಜಿಯವರಿಗಿಂತಲೂ ಎರಡು ನೂರು ಮೈಲಿ ಮುಂದೆ ಇದ್ದೆ ಎಂದು ಸಹ ಒಮ್ಮೆ ನುಡಿದಿದ್ದುಂಟು.

ಲೇಖಕರು: ಕಿರಣ ರಾಮ್

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *