NHM Karnataka Recruitment 2026: 35 Vacancies for Programme Assistant & ConsultantNHM Karnataka

ಕರ್ನಾಟಕದ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕ (NHM Karnataka) ದಲ್ಲಿ ಪ್ರೋಗ್ರಾಂ ಅಸಿಸ್ಟೆಂಟ್ ಹಾಗೂ ಕನ್ಸಲ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು 13 ಏಪ್ರಿಲ್ ರಂದು ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದು.

ಸಂಸ್ಥೆಯ ಹೆಸರು: ರಾಷ್ಟ್ರೀಯ ಆರೋಗ್ಯ ಮಿಷನ್ ಕರ್ನಾಟಕ (NHM Karnataka)

ಒಟ್ಟು ಹುದ್ದೆಗಳು: 35

ಉದ್ಯೋಗ ಸ್ಥಳ: ಕರ್ನಾಟಕ

ಹುದ್ದೆಗಳ ಹೆಸರು: ಪ್ರೋಗ್ರಾಂ ಅಸಿಸ್ಟೆಂಟ್, ಕನ್ಸಲ್ಟೆಂಟ್

ಹುದ್ದೆಗಳ ವಿವರ ಮತ್ತು ಅರ್ಹತೆ

ಹುದ್ದೆ ಹೆಸರುಹುದ್ದೆಗಳ ಸಂಖ್ಯೆವಿದ್ಯಾರ್ಹತೆ
ವ್ಯಾಕ್ಸಿನ್ ಕೋಲ್ಡ್ ಚೈನ್ ಮ್ಯಾನೇಜರ್32D.Pharm, B.Pharm, ಪದವಿ (Degree), Graduation
NUHM ಕನ್ಸಲ್ಟೆಂಟ್1BAMS, BDS, MPH/DPH/DPHM, MBBS, MD
ಪ್ರೋಗ್ರಾಂ ಅಸಿಸ್ಟೆಂಟ್2ಪದವಿ (Degree)

ವೇತನ ವಿವರ

ಹುದ್ದೆ ಹೆಸರುಮಾಸಿಕ ವೇತನ
ವ್ಯಾಕ್ಸಿನ್ ಕೋಲ್ಡ್ ಚೈನ್ ಮ್ಯಾನೇಜರ್ರೂ. 23,100/-
NUHM ಕನ್ಸಲ್ಟೆಂಟ್ರೂ. 55,000 – 80,000/-
ಪ್ರೋಗ್ರಾಂ ಅಸಿಸ್ಟೆಂಟ್ರೂ. 25,000/-

ವಯೋಮಿತಿ

ಗರಿಷ್ಠ ವಯಸ್ಸು: 45 ವರ್ಷ

ವಯೋಮಿತಿ ಸಡಿಲಿಕೆ: NHM ಕರ್ನಾಟಕ ನಿಯಮಗಳ ಪ್ರಕಾರ ಅನ್ವಯವಾಗುತ್ತದೆ

ಅರ್ಜಿ ಸಲ್ಲಿಸುವ ವಿಧಾನ

ಕರ್ನಾಟಕದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಹಾಜರಾಗಬಹುದು.

ಸ್ಥಳ

ಮುಖ್ಯ ಆಡಳಿತಾಧಿಕಾರಿ ಕಚೇರಿ,

ರಾಷ್ಟ್ರೀಯ ಆರೋಗ್ಯ ಮಿಷನ್ (NHM),

1ನೇ ಮಹಡಿ, ವೆಸ್ಟ್ ವಿಂಗ್, ಆರೋಗ್ಯ ಸೌಧ,

ಮಗಡಿ ರಸ್ತೆ, 1ನೇ ಕ್ರಾಸ್,

ಬೆಂಗಳೂರು – 560023

ಪ್ರಮುಖ ದಿನಾಂಕ

ಅಧಿಸೂಚನೆ ಪ್ರಕಟ ದಿನಾಂಕ: 02-04-2026

ಸಂದರ್ಶನ ನಡೆಯುವ ದಿನಾಂಕ: 13-ಏಪ್ರಿಲ್-2026

ಮುಖ್ಯ ಲಿಂಕುಗಳು

ಅಧಿಕೃತ ಅಧಿಸೂಚನೆ PDF: ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯ

ಅಧಿಕೃತ ವೆಬ್‌ಸೈಟ್: hfwcom.karnataka.gov.in, nhm.karnataka.gov.in

ಸೂಚನೆ: ಅಭ್ಯರ್ಥಿಗಳು ಇಂಟರ್ವ್ಯೂಗೆ ಹಾಜರಾಗುವ ಮೊದಲು ಅಧಿಕೃತ ಅಧಿಸೂಚನೆಯನ್ನು ಗಮನದಿಂದ ಓದುವುದು ಅಗತ್ಯ.

Leave a Reply

Your email address will not be published. Required fields are marked *