200 year old handwritten manuscript of 'Ramcharitmanas' found in Ayodhyaರಾಮಚರಿತಮಾನಸ

ಸುಮಾರು 200 ವರ್ಷ ಹಳೆಯದಾದ ಎನ್ನಲಾಗಿರುವ ದೇವನಾಗರಿ ಲಿಪಿಯಲ್ಲಿ ಬರೆಯಲ್ಪಟ್ಟ ಅಪರೂಪದ ‘ರಾಮಚರಿತಮಾನಸʼ ದ ಪಾಂಡುಲಿಪಿ ಅಯೋಧ್ಯೆಯಲ್ಲಿ ಪತ್ತೆಯಾಗಿದೆ. ಈ ಪವಿತ್ರ ಗ್ರಂಥವನ್ನು ಶೀಘ್ರದಲ್ಲೇ ಸಂರಕ್ಷಣೆಗಾಗಿ ಅಂತಾರಾಷ್ಟ್ರೀಯ ರಾಮಕಥಾ ಸಂಗ್ರಹಾಲಯಕ್ಕೆ ಹಸ್ತಾಂತರಿಸಲಾಗುವುದು ಎಂದು ಎನ್‌ಐ ವರದಿ ಮಾಡಿದೆ.

ಅಯೋಧ್ಯೆಯ ಕುಮಾರಗಂಜ್ ಪ್ರದೇಶದಲ್ಲಿ ವಾಸಿಸುವ ಅಮೇಥಿ ನಿವಾಸಿ ಜಗಜೀತ್ ಸಿಂಗ್ ಅವರು ಈ ಅಮೂಲ್ಯ ಪಾಂಡೂಲಿಪಿಯನ್ನು ಹಲವು ವರ್ಷಗಳಿಂದ ಸಂರಕ್ಷಿಸಿಕೊಂಡಿದ್ದರು. ಈಗ ಅವರು ಅದನ್ನು ಅಂತರರಾಷ್ಟ್ರೀಯ ರಾಮಕಥಾ ಸಂಗ್ರಹಾಲಯಕ್ಕೆ ನೀಡುವುದಾಗಿ ಹೇಳಿದ್ದಾರೆ. ಈ ಪಾಂಡೂಲಿಪಿ ದೇವನಾಗರಿ ಲಿಪಿಯಲ್ಲಿ ಕೈಬರಹದಲ್ಲಿ ರಚಿತವಾಗಿದ್ದು, ಅದರ ಪ್ರಾಚೀನತೆ ಕಾರಣದಿಂದಾಗಿ ಅತ್ಯಂತ ಮಹತ್ವದ್ದಾಗಿ ಪರಿಗಣಿಸಲಾಗಿದೆ. ಅಂತರರಾಷ್ಟ್ರೀಯ ರಾಮಕಥಾ ಸಂಗ್ರಹಾಲಯದ ಆಡಳಿತ ಅಧಿಕಾರಿಗಳು ಈ ಪಾಂಡೂಲಿಪಿಯ ಐತಿಹಾಸಿಕ ಮಹತ್ವವನ್ನು ಪರಿಶೀಲಿಸಲು ಕ್ರಮ ಕೈಗೊಂಡಿದೆ.

ಈ ಸಂಬಂಧ ಅಂತರರಾಷ್ಟ್ರೀಯ ರಾಮಕಥಾ ಸಂಗ್ರಹಾಲಯದ ನಿರ್ದೇಶಕರಾದ ಡಾ. ಸಂಜೀವ್ ಕುಮಾರ್ ಸಿಂಗ್ ಮಾತನಾಡಿ, ಸಂಪೂರ್ಣ ಪರಿಶೀಲನೆ ಮತ್ತು ಅಧ್ಯಯನದ ನಂತರವೇ ಇದನ್ನು ಅಧಿಕೃತವಾಗಿ ಸಂಗ್ರಹಾಲಯಕ್ಕೆ ತೆಗೆದುಕೊಳ್ಳಲಾಗುತ್ತದೆ. ನವದೆಹಲಿ ಪ್ರಧಾನಮಂತ್ರಿ ಸಂಗ್ರಹಾಲಯದ ಅಧ್ಯಕ್ಷರು ಹಾಗೂ ರಾಮಮಂದಿರ ಟ್ರಸ್ಟಿಯೂ ಆಗಿರುವ ನೃಪೇಂದ್ರ ಮಿಶ್ರ ಅವರ ಮಾರ್ಗದರ್ಶನದಲ್ಲಿ ರಾಮಕಥಾ ಸಂಗ್ರಹಾಲಯವನ್ನು ‘ರಿಪೊಸಿಟರಿ ಸೆಂಟರ್’ಆಗಿ ರೂಪಿಸಲಾಗಿದೆ. ಇದರಡಿ ದೇಶದಾದ್ಯಂತ ಇರುವ ಪ್ರಾಚೀನ ಮತ್ತು ಕೈಬರಹದ ಪಾಂಡೂಲಿಪಿಗಳನ್ನು ಸಂಗ್ರಹಿಸುವ ವಿಶೇಷ ಅಭಿಯಾನ ನಡೆಯುತ್ತಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಆಜ್‌ ತಕ್‌ಗೆ ತಿಳಿಸಿದ್ದಾರೆ.

ಟ್ವಿಟರ್‌ ಪೋಸ್ಟ್‌

ತಜ್ಞರ ಪ್ರಕಾರ, ಈ ಪಾಂಡೂಲಿಪಿ ಕೇವಲ ಧಾರ್ಮಿಕ ದೃಷ್ಟಿಯಿಂದಷ್ಟೇ ಅಲ್ಲದೆ, ಭಾಷಾ ಮತ್ತು ಐತಿಹಾಸಿಕ ಅಧ್ಯಯನಕ್ಕೂ ಬಹಳ ಮಹತ್ವದ್ದಾಗಿದೆ. ಇದರಿಂದ ಪ್ರಾಚೀನ ದೇವನಾಗರಿ ಲಿಪಿಯ ರಚನೆ, ಅಕ್ಷರಗಳ ವಿನ್ಯಾಸ ಮತ್ತು ಬರವಣಿಗೆಯ ಶೈಲಿಯನ್ನು ಅರ್ಥಮಾಡಿಕೊಳ್ಳಲು ಹೊಸ ದಾರಿ ಸಿಗಲಿದೆ. ಆ ಕಾಲದ ಬರವಣಿಗೆಯ ಶೈಲಿ ಇಂದಿನ ಆಧುನಿಕ ದೇವನಾಗರಿಯಿಂದ ಬಹಳ ಭಿನ್ನವಾಗಿದೆ.  

ಅಯೋಧ್ಯೆಯಲ್ಲಿ ಪತ್ತೆಯಾದ ಈ ಅಪರೂಪದ ಪಾಂಡೂಲಿಪಿ ಕೇವಲ ಭಕ್ತಿಯ ಸಂಕೇತವಲ್ಲ, ಭಾರತೀಯ ಸಂಸ್ಕೃತಿಯ ಜೀವಂತ ಸಾಕ್ಷಿಯಾಗಿದೆ. ಇದರ ಪ್ರಾಮಾಣಿಕತೆ ಸಾಬೀತಾದರೆ, ಈ ಕಂಡುಹಿಡಿತ ಇತಿಹಾಸದ ಪುಟಗಳಲ್ಲಿ ಚಿನ್ನದ ಅಕ್ಷರಗಳಲ್ಲಿ ದಾಖಲಾಗುವುದು.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *