09 July 2026 Karnataka Dam Water Level: Almatti, Tungabhadra, KRS Dams Water Levelಆಲಮಟ್ಟಿ ಜಲಾಶಯ

ಮುಂಗಾರು ರಾಜ್ಯಕ್ಕೆ ತಡವಾಗಿ ಆಗಮಿಸಿದೆ. ವಾಡಿಕೆಯಂತೆ ಜೂನ್‌ ಮೊದಲವಾರವೇ ಮಳೆ ಆರಂಭವಾಗಬೇಕಿತ್ತು, ಆದರೆ ತಡವಾಗಿ ಆರಂಭವಾಗಿದ್ದು, ರಾಜ್ಯದ ಹಲವು ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಇನ್ನು, ಮಹಾರಾಷ್ಟ್ರದಲ್ಲಿ ಅಧಿಕ ಮಳೆಯಾಗುತ್ತಿರುವುದರಿಂದ ಕೃಷ್ಣ ನದಿಗೆ ನೀರು ಬಿಡಲಾಗುತ್ತಿದ್ದು ಆಲಮಟ್ಟಿ ಜಲಾಶಯಕ್ಕೂ ಒಳಹರಿವು ಆಗುತ್ತಿದೆ.

ಹಾಗಾದರೆ ಕೆಆರ್‌ಎಸ್‌ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಾದ ಆಲಮಟ್ಟಿ, ಭದ್ರಾ, ತುಂಗಭದ್ರಾ, ಮಲಪ್ರಭಾ, ವಾರಾಹಿ ಮತ್ತು ಸೂಪಾ ಸೇರಿದಂತೆ 12 ಜಲಾಶಯಗಳ ನೀರಿನ ಪ್ರಮಾಣ (Karnataka Dam Water Level) ಜುಲೈ 09 ರಂದು ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟಿದೆ? ಹೊರಹರಿವು ಎಷ್ಟು ಇದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ        

ಕರ್ನಾಟಕದ ಪ್ರಮುಖ ಜಲಾಶಯಗಳು (Dam)ಗರಿಷ್ಠ ನೀರಿನ ಮಟ್ಟ (ಮೀ)ಒಟ್ಟು ಸಾಮರ್ಥ್ಯ (ಟಿಎಂಸಿಇಂದಿನ ನೀರಿನ ಮಟ್ಟ (ಟಿಎಂಸಿ)ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ)ಒಳಹರಿವು (ಕ್ಯೂಸೆಕ್ಸ್‌)ಹೊರಹರಿವು (ಕ್ಯೂಸೆಕ್ಸ್‌)
ಆಲಮಟ್ಟಿ ಜಲಾಶಯ (Almatti Dam)  519.60    123.08     33.34      87.74   1,26,373       100
ತುಂಗಭದ್ರಾ ಜಲಾಶಯ (Tungabhadra Dam)    497.71      105.79       11.22          75.93      17,507          170
ಮಲಪ್ರಭಾ ಜಲಾಶಯ (Malaprabha Dam)  633.80     37.73     10.38      23.46     13,700         194  
ಕೆ.ಆರ್‌.ಎಸ್‌ (KRS Dam)  38.04        49.45     12.49      46.30     7,531         790
ಲಿಂಗನಮಕ್ಕಿ (Linganamakki Dam)  554.44      151.75      25.64      83.78     41,7912          833
ಕಬಿನಿ ಜಲಾಶಯ (Kabini Dam)  696.13      19.52     7.96     17.76    10,757        500
ಭದ್ರಾ ಜಲಾಶಯ (Bhadra Dam)  657.73      71.54     28.75      54.89     17,818         214
ಘಟಪ್ರಭಾ ಜಲಾಶಯ (Ghataprabha Dam)    662.91        51.00          13.18       41.90       26,393           110
ಹೇಮಾವತಿ ಜಲಾಶಯ (Hemavati Dam)    890.58        37.10          18.78      34.97       16,593           300
ವರಾಹಿ ಜಲಾಶಯ (Varahi Dam)  594.36      31.10     7.21     16.83        8,404          0
ಹಾರಂಗಿ ಜಲಾಶಯ (Harangi Dam)  871.38       8.50     4.03     6.43        2,090          180
ಸುಫಾ ಜಲಾಶಯ (Supa Dam)  564.00     145.33      34.35     69.58      23,879            0

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *