ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) 1267 ನಿರ್ಬಂಧಗಳ ಮೇಲ್ವಿಚಾರಣಾ ಸಮಿತಿಯ ಹೊಸ ವರದಿಯು ಪಾಕಿಸ್ತಾನದ ಬಗ್ಗೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ (JeM) ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಬಳಿ ನಡೆದ ಭಯೋತ್ಪಾದಕ ದಾಳಿಗೆ ನೇರ ಸಂಬಂಧ ಹೊಂದಿದೆ ಎಂದು ವರದಿಯು ಸ್ಪಷ್ಟವಾಗಿ ಹೇಳುತ್ತದೆ. ಜೈಶ್-ಎ-ಮೊಹಮ್ಮದ್ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಿದ್ದು ಮಾತ್ರವಲ್ಲದೆ, ತನ್ನ ಬಲ ಮತ್ತು ಜಾಲವನ್ನು ವಿಸ್ತರಿಸುತ್ತಿದೆ. ನವದೆಹಲಿ, ಫೆಬ್ರವರಿ 12: ಇತ್ತೀಚೆಗೆ ದೆಹಲಿಯ ಕೆಂಪುಕೋಟೆ ಬಳಿ ನಡೆದಿದ್ದ ಕಾರು ಸ್ಫೋಟ(Car Blast)ಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಹೊಸ ವರದಿಯನ್ನು ಬಿಡುಗಡೆ ಮಾಡಿದೆ. ಆ ವರದಿಯಲ್ಲಿ ಈ ದಾಳಿಯಲ್ಲ ಪಾಕಿಸ್ತಾನಿ ಉಗ್ರ ಸಂಘಟನೆ ಜೈಶ್-ಎ ಮೊಹಮ್ಮದ್ ಕೈವಾಡವಿತ್ತು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ವಿಶ್ವಸಂಸ್ಥೆಯ 37 ನೇ ವರದಿಯು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ನಂಟು ಈ ದಾಳಿಯಲ್ಲಿ ಬೆಳಕಿಗೆ ಬಂದಿದೆ ಎಂದು ಹೇಳಿದೆ. ವರದಿ ಪ್ರಕಾರ, ಜೈಶ್ ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಸದಸ್ಯ ರಾಷ್ಟ್ರವೊಂದು ಹೇಳಿದೆ. ವರದಿಯು ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಪ್ರಶ್ನೆಗಳನ್ನು ಮತ್ತೆ ಹುಟ್ಟುಹಾಕಿದೆ. ಮಸೂದ್ ಅಜರ್ ಅಕ್ಟೋಬರ್ 8 ರಂದು ಪ್ರತ್ಯೇಕ ಮಹಿಳಾ ವಿಭಾಗವನ್ನು ರಚಿಸುವುದಾಗಿ ಘೋಷಿಸಿದ್ದಾನೆ. ಹೊಸ ವಿಭಾಗಕ್ಕೆ ಜಮಾತ್-ಉಲ್-ಮುಮಿನಾತ್ ಎಂದು ಹೆಸರಿಲಾಗಿದೆ. ಈ ವಿಭಾಗವನ್ನು ವಿಶ್ವಸಂಸ್ಥೆಯ ಪಟ್ಟಿಯಲ್ಲಿ ಸೇರಿಸಲಾಗಿಲ್ಲ, ಆದರೆ ಸಂಘಟನೆಯು ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಲಾಗಿದೆ. ಈ ವಿಷಯದ ಬಗ್ಗೆ ಸದಸ್ಯ ರಾಷ್ಟ್ರಗಳಲ್ಲಿ ಭಿನ್ನಾಭಿಪ್ರಾಯವಿದೆ. ಒಂದು ದೇಶ ಜೈಶ್ ಇನ್ನೂ ಸಕ್ರಿಯವಾಗಿದೆ ಎಂದು ಹೇಳಿಕೊಂಡರೆ, ಇನ್ನೊಂದು ದೇಶ ಜೈಶ್ ಈಗ ನಿಷ್ಕ್ರಿಯ ಎಂದು ಹೇಳಿದೆ. ನಿಷೇಧದ ನಂತರ ಜೈಶ್ ಮತ್ತು ಲಷ್ಕರ್ ಇನ್ನು ಮುಂದೆ ಸಕ್ರಿಯವಾಗಿಲ್ಲ ಎಂದು ಪಾಕಿಸ್ತಾನ ಈಗಾಗಲೇ ಹೇಳಿದೆ.ವರದಿಯು ಪಹಲ್ಗಾಮ್ ದಾಳಿಯ ಬಗ್ಗೆಯೂ ಉಲ್ಲೇಖಿಸಿದೆ. ಏಪ್ರಿಲ್ 2025 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ್ದರು. ಲಷ್ಕರ್‌ನ ಪ್ರತಿನಿಧಿ ಎಂದು ಪರಿಗಣಿಸಲಾದ ದಿ ರೆಸಿಸ್ಟೆನ್ಸ್ ಫ್ರಂಟ್ ಈ ದಾಳಿಯನ್ನು ನಡೆಸಿತ್ತು. Post navigation ರಾಜ್ಯಪಾಲರು ಚುಟುಕು ಭಾಷಣ ಮಾಡಿದ್ದೇಕೆ?ಏನಿದು ವಿಬಿ ಜಿ ರಾಮ್ ಜಿ ಯೋಜನೆ?