ಶ್ರೀರಾಮನು ಶರಭಂಗರ ಸಲಹೆಯಂತೆ ಸುತೀಕ್ಷರೆಂಬ ಮಹರ್ಷಿಗಳ ಆಶ್ರಮದತ ಪ್ರಯಾಣ ಬೆಳೆಸಿದನು. ಸುತೀಕ್ಷರ ಆಶ್ರಮವು ದಟ್ಟವಾದ ಕಾಡಿನ ಮಧ್ಯಭಾಗದಲ್ಲಿದ್ದಿತು. ಅವರ ಆಶ್ರಮದ ಪ್ರದೇಶ ಮಾತ್ರ ಹೂವು ಹಣ್ಣುಗಳಿಂದ ತುಂಬಿದ್ದಿತು. ಶ್ರೀರಾಮನು ಆಶ್ರಮವನ್ನು ಪ್ರವೇಶಿಸಿ, ಸುತೀಕ್ಷ್ಯ ಮುನಿಗಳನ್ನು ಕಂಡು ಅಭಿವಾದನ ಮಾಡಿದನು. ಋಷಿಗಳು ಶ್ರೀರಾಮನನ್ನು ಸ್ವಾಗತಿಸಿ, “ನಾನು ನಿನ್ನನ್ನೇ ನಿರೀಕ್ಷಿಸುತ್ತಿದ್ದೆನು. ನಾನೂ ಶರಭಂಗರಂತೆ ಈ ದೇಹವನ್ನು ತ್ಯಜಿಸಿ ಹೋಗಬಹುದಾಗಿದ್ದಿತು. ಆದರೆ ನಿನ್ನ ನಿರೀಕ್ಷಣೆಯಲ್ಲಿ ದೇಹವನ್ನು ಧರಿಸಿಕೊಂಡಿದ್ದೇನೆ. ದೇವೇಂದ್ರನು ಇಲ್ಲಿಗೂ ಬಂದಿದ್ದನು. ಸಮಸ್ತ ಪುಣ್ಯಲೋಕಗಳೂ ನನ್ನ ವಶದಲ್ಲಿವೆಯೆಂದು ಅವನು ಹೇಳಿದನು. ನಾನು ಸಂತೋಷದಿಂದ ಅವುಗಳನ್ನೆಲ್ಲ ನಿನಗೆ ಕೊಡುವೆನು. ನೀನು ಸಂತೋಷವಾಗಿರು” ಎಂದು ಹೇಳಿದರು. ಶ್ರೀರಾಮನು ಮಹರ್ಷಿಗಳನ್ನು ಕುರಿತು, “ನನಗೆ ಸದ್ಯಕ್ಕೆ ಪುಣ್ಯಲೋಕಗಳ ಆವಶ್ಯಕತೆಯಿಲ್ಲ. ನನಗೆ ಬೇಕಾಗಿರುವುದು ಇಲ್ಲಿ ವಾಸಮಾಡಲು ಅನುಕೂಲವಾದ ಸ್ಥಳ. ನೀವು ಸಕಲವಿಷಯಗಳನ್ನೂ ತಿಳಿದವರೆಂದೂ ಸರ್ವಭೂತದಯಾಪರರೆಂದೂ ಗೌತಮವಂಶೀಯರಾದ ಶರಭಂಗಮಹರ್ಷಿಗಳು ಹೇಳಿದರು. ಅವರೇ ನನ್ನನ್ನು ಇಲ್ಲಿಗೆ ಕಳುಹಿಸಿದರು” ಎಂದನು. ಆಗ ಸುತೀಕ್ಷರು ಸಂತೋಷದಿಂದ, “ಈ ಆಶ್ರಮವೇ ವಾಸಯೋಗ್ಯವಾಗಿದೆ. ಇಲ್ಲಿ ಬೇಕಾದಷ್ಟು ಮಹರ್ಷಿಗಳಿದ್ದಾರೆ. ಫಲಮೂಲಗಳು ಸಮೃದ್ಧವಾಗಿವೆ. ಮೃಗಗಳು ನಿರ್ಭಯವಾಗಿ ಓಡಾಡುತ್ತಿರುತ್ತವೆ. ಕೆಲವು ಸಲ ಅವು ನಮ್ಮ ಧ್ಯಾನಕಾರ್ಯಕ್ಕೂ ಭಂಗವನ್ನುಂಟು ಮಾಡುತ್ತವೆ. ಇಂಥದೊಂದು ದೋಷವನ್ನು ಬಿಟ್ಟರೆ ಇಲ್ಲಿ ಬೇರೆ ಯಾವ ತೊಂದರೆಯೂ ಇಲ್ಲ” ಎಂದರು. ರಾಮನು “ನಾನು ಆ ಮೃಗಗಳನ್ನು ನನ್ನ ಬಾಣದಿಂದ ಕೊಲ್ಲಬಲ್ಲೆ. ಆದರೆ ಅದರಿಂದ ನಿಮ್ಮ ಮನಸ್ಸಿಗೆ ವ್ಯಥೆಯಾದೀತೇ ಹೊರತು ಸಂತೋಷವೇನೂ ಆಗುವುದಿಲ್ಲ. ಆದ್ದರಿಂದ ನಾನು ಈ ಆಶ್ರಮದಲ್ಲಿ ಬಹಳ ದಿನ ಇರಲು ಇಷ್ಟಪಡುವುದಿಲ್ಲ. ನನ್ನ ಬಾಣಗಳಿಂದ ನಿಮಗೆ. ಇಲ್ಲಿಯ ಪರಿಸರಕ್ಕೆ ತೊಂದರೆಯಾಗದಂತೆ ಬೇರೆಯ ಉತ್ತಮಸ್ಥಳವನ್ನು ಸೂಚಿಸಿ” ಎಂದು ಕೇಳಿಕೊಂಡನು. ಆದರೂ ಸುತೀಕ್ಷರ ಅಪೇಕ್ಷೆಯಂತೆ ಅಂದಿನ ರಾತ್ರಿ ಮೂವರೂ ಅಲ್ಲಿಯೇ ಉಳಿದುಕೊಂಡರು. ಸುತೀಕ್ಷ್ಯರು ಅವರೆಲ್ಲರಿಗೂ ತಾಪಸಿಗಳು ತಿನ್ನುವ ಆಹಾರವನ್ನೇ ಕೊಟ್ಟು ಸತ್ಕರಿಸಿದರು. ದೇವತಾರ್ಚನೆಗಳನ್ನು ಮುಗಿಸಿಕೊಂಡು, ಸುತೀಕ್ಷರ ಬಳಿಗೆ ಹೋಗಿ ವಂದಿಸಿ, ಬೆಳಗಿನ ಜಾವ ಅವರೆಲ್ಲರೂ ಎದ್ದು, ಪ್ರಾತಃಕಾಲದ ಅಗ್ನಿಕಾರ್ಯ-ಹೊರಡಲು ಅವರ ಅನುಜ್ಞೆಯನ್ನು ಬೇಡಿದರು. ಬಿಸಿಲು ಹೆಚ್ಚಾಗುವ ಮೊದಲೇ ಪ್ರಯಾಣ ಮಾಡುವುದು ಉತ್ತಮವೆಂದು ಅವರ ಅಭಿಪ್ರಾಯವಾಗಿತ್ತು. ಮುನಿಶ್ರೇಷ್ಠರು ರಾಮನನ್ನು ಆಲಂಗಿಸಿ, ವಾತ್ಸಲ್ಯದಿಂದ, “ರಾಮ, ನಿನ್ನ ದಾರಿಯು ಸುಗಮವಾಗಲಿ. ದಂಡಕಾರಣ್ಯದಲ್ಲಿ ತಪಸ್ವಿಗಳು ಬಹಳ ಜನರಿದ್ದಾರೆ. ರಮಣೀಯವಾದ ಆಶ್ರಮಗಳಿವೆ. ಆ ವನಗಳಲ್ಲಿ ಫಲಪುಷ್ಪಗಳು ಸಮೃದ್ಧವಾಗಿವೆ. ಅರಳಿರುವ ತಾವರೆಗಳು ಮತ್ತು ಜಲಪಕ್ಷಿಗಳಿರುವ ಕೊಳಗಳಿವೆ. ಶಾಂತಸ್ವಭಾವದ ಮೃಗಪಕ್ಷಿಗಳಿವೆ. ನನ್ನ ಆಶ್ರಮಕ್ಕೆ ಬರಬೇಕು” ಎಂದರು. ಶ್ರೀರಾಮನು ಹಾಗೆಯೇ ಆಗಲೆಂದು ಒಪ್ಪಿಕೊಂಡು, ಬಿಲ್ಲುಬಾಣಗಳಿಂದ ಸನ್ನದ್ಧನಾಗಿ ಸೀತೆ-ಲಕ್ಷ್ಮಣರೊಡನೆ ಮುಂದಕ್ಕೆ. ನೀವೆಲ್ಲರೂ ಮತ್ತೆ ಪ್ರಯಾಣಮಾಡಿದನು. ರಾಮಾದಿಗಳು ಹೀಗೆ ವನದಲ್ಲಿ ವಿಹಾರ ಮಾಡುತ್ತ, ಬೇರೆ ಆಶ್ರಮಗಳಲ್ಲಿ ಕೆಲಕೆಲವು ದಿನಗಳು ವಾಸಮಾಡುತ್ತ, ಅಲ್ಲಿರುವ ಮುನಿಗಳಿಗೆ ಸಹಾಯ ಮಾಡುತ್ತ ಹತ್ತು ವರ್ಷಗಳನ್ನು ಕಳೆದರು. ಅನಂತರ ಅವರು ಮತ್ತೆ ಸುತೀಕ್ಷರ ಆಶ್ರಮಕ್ಕೆ ಆಗಮಿಸಿದರು. ಕೆಲವು ದಿನಗಳು ಅಲ್ಲಿದ್ದು, ಒಂದು ದಿನ ಸುತೀಕ್ಷ್ಯರನ್ನು “ಭಗವಾನ್ ಅಗಸ್ಯ ಮಹಾಮುನಿಗಳು ಇದೇ ಅರಣ್ಯದಲ್ಲಿ ವಾಸವಾಗಿದ್ದಾರಂತೆ. ಅವರನ್ನು ಸಂದರ್ಶಿಸಬೇಕೆಂದಿದ್ದೇನೆ. ಅವರ ಆಶ್ರಮವು ಎಲ್ಲಿರುವುದು?” ಎಂದು ಪ್ರಶ್ನಿಸಿದನು. ಸುತೀಕ್ಷರು, “ನಾನೇ ಈ ವಿಷಯವನ್ನು ತಿಳಿಸಬೇಕೆಂದಿದ್ದೆ. ಈಗ ನೀನಾಗಿಯೇ ಆಸಕ್ತಿಯನ್ನು ತೋರಿಸಿದುದು ಒಳ್ಳೆಯದೇ ಆಯಿತು. ಇಲ್ಲಿಂದ ದಕ್ಷಿಣಕ್ಕೆ ನಾಲ್ಕು ಯೋಜನ ದೂರ ಹೋದರೆ ಒಂದು ಸುಂದರವಾದ ಆಶ್ರಮವಿದೆ. ಅದು ಅಗಸ್ತ್ರರ ತಮ್ಮನದಾಗಿದೆ. ಅಲ್ಲಿಂದ ಒಂದು ಯೋಜನ ದೂರ ಹೋದರೆ ಅಗಸ್ವರ ಆಶ್ರಮವು ದೊರೆಯುತ್ತದೆ. ಅದು ನೋಡಲೇಬೇಕಾದ ಸ್ಥಳ. ನೀವು ಅತ್ತ ಪ್ರಯಾಣಮಾಡಿ” ಎಂದು ಅಪ್ಪಣೆ ನೀಡಿದರು. ಅವರೆಲ್ಲರೂ ಮಹರ್ಷಿಗಳಿಗೆ ನಮಸ್ಕರಿಸಿ ಮುಂದಕ್ಕೆ ಪ್ರಯಾಣ ಮಾಡಿದರು. ಹೀಗೆ ಸುತೀಕ್ಷರು ವನವಾಸಕಾಲದಲ್ಲಿ ರಾಮನಿಗೆ ಮಾರ್ಗದರ್ಶಕರಾಗಿ ಮಹದುಪಕಾರ ಮಾಡಿದರು. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-2 ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಇಂದ್ರಾದಿ ದೇವತೆಗಳನ್ನೇ ಆಜ್ಞಾಧಾರಕರನ್ನಾಗಿ ಮಾಡಿಕೊಂಡಿದ್ದ ಸಂವರ್ತ ಮಹರ್ಷಿ ವೀರ ಸಾವರ್ಕರ್ ಸ್ಮರಣ ಸಂಚಿಕೆ 2: ಸ್ವಾತಂತ್ರ್ಯ ಹೋರಾಟದ ಸಪ್ತಪದಿ ತುಳಿದ ದಂಪತಿ, ಲಂಡನ್ಗೆ ಜಿಗಿದ ಸಿಂಹ