18ನೇ ಶತಮಾನದ ಭಾರತದ ಇತಿಹಾಸದಲ್ಲಿ ಭಾರತವನ್ನು ಮೊಘಲರು, ಅರಬ್ಬರು, ಅಪಘನ್ನರು, ಪೋರ್ಚಗೀಸರು, ತುರ್ಕರು, ಫ್ರೆಂಚರು, ಡಚ್ಚರು, ಬ್ರಿಟಿಷರು ಆಳ್ವಿಕೆ ಮಾಡಿದರು. ಕೇವಲ 500-1000 ಸಂಖ್ಯೆಯಲ್ಲಿ ದಾಳಿ ಮಾಡಿದ್ದ ದಾಳಿಕೋರರು ಬೃಹತ್ ಭಾರತವನ್ನು ಹೇಗೆ ಆಕ್ರಮಿಸಿದರು, ಆಳಿದರು ಎಂದು ಯೋಚಿಸಿದಾಗ ಥಟನ್ನೇ ನೆನಪಿಗೆ ಬರುವುದು ಭಾರತೀಯರ ಒಗ್ಗಟಿನ ಕೊರೆತೆ ಹಾಗೂ ದೇಶಭಕ್ತಿಯ ಜಾಗೃತಿಯ ಕೊರತೆ. ಕ್ರಿ.ಶ 1800ರ ನಂತರದಲ್ಲಿ ವಿಶ್ವದಲ್ಲಿ ಜಾಗತಿಕ ರಾಜಕೀಯ ಮತ್ತು ಕೈಗಾರಿಕಾ ಕ್ರಾಂತಿಯಲ್ಲಿ ಮಹತ್ವದ ಬದಲಾವಣೆಯ ಸಮಯ. ನೆಪೋಲಿಯನ್ ಬೋನಪಾರ್ಟೆ ಯುರೋಪಿನಲ್ಲಿ ಪ್ರಾಬಲ್ಯ ಸಾಧಿಸಿದರೇ ಅಮೆರಿಕಾದಲ್ಲಿ ಚುನಾವಣೆಯ ಮೂಲಕ ಅಧಿಕಾರ ಹಸ್ತಾಂತರವಾಗಿತ್ತು. ವಿಶ್ವದ ಜನಸಂಖ್ಯೆ ಒಂದು ಬಿಲಿಯನ್ ತಲುಪಿತ್ತು. ಆದರೆ ಭಾರತದಲ್ಲಿ ಬ್ರಿಟಿಷರ ಅಳ್ವಿಕೆ ವ್ಯಾಪಕವಾಗಿತ್ತು. ಭಾರತೀಯರು ಬ್ರಿಟಿಷರ ಗುಲಾಮರಾಗಿ ಬದುಕಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು. ಇಂಥ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಶುರುವಾಗಿತ್ತು. ಅನೇಕ ಸ್ವಾತಂತ್ರ್ಯ ಹೋರಾಟಗಾರನ ಜನನವಾಗಿತ್ತು. ಇಂಥ ಕಷ್ಟಕರ ಸಮಯದಲ್ಲಿ ಜನಿಸಿದವರೇ ಸ್ವಾತಂತ್ರ್ಯ ವೀರ ಸಾರ್ವಕರ್ 1863ರ ಮೇ 28 ರಂದು ಮಹರಾಷ್ಟ್ರದ ನಾಸಕಿನ ಬಾಗೂರ್‌ನಲ್ಲಿ ದಾಮೋದರಪಂತ್ ಹಾಗೂ ರಾಧಾಬಾಯಿ ದಂಪತಿಗಳ ದ್ವಿತೀಯ ಪುತ್ರನಾಗಿ ವಿನಾಯಕ ದಾಮೋದರ ಸಾವರ್ಕರ್ ಜನಿಸಿದರು. ತಾಯಿಯಿಂದ ಹಲವಾರು ದೇಶಭಕ್ತಿಯ ಕಥೆಗಳನ್ನು ಕಥೆಗಳನ್ನು ಕೇಳಿ ಬೆಳೆದ ಸಾವರ್ಕರ್ ಕಾಲಾಂತರದಲ್ಲಿ ಸ್ವಾತಂತ್ರ್ಯವೀರ ಸಾವರ್ಕರ್ ಆಗಿ ಬೆಳೆದ ರೀತಿಯೇ ರೋಚಕ. ತಮ್ಮ 9ನೇ ವಯಸ್ಸಿನಲ್ಲಿ ತಾಯಿಯನ್ನು ಹಾಗೂ 16ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು, ಅಣ್ಣನ ಆಶ್ರಯದಲ್ಲಿ ಬೆಳದರು. ಸಾವರ್ಕರ್ ಅವರು ತಮ್ಮ ಯೌವನಾವಸ್ಥೆಯಲ್ಲೇ ರಾಜಕೀಯ ಚಟುವಟಿಕೆಗಳನ್ನು ಪ್ರಾರಂಭಿಸಿ ಯುವಕರಿಗೆ ರಾಜಕೀಯದ ಆಸಕ್ತಿಯನ್ನು ಬೆಳೆಸತೊಡಗಿದರು. ಹಿಂದೂ ಸಮಾಜದ ಒಗ್ಗಟ್ಟಿನಲ್ಲಿ ಬಲವಾದ ನಂಬಿಕೆ ಇಟ್ಟಿದ್ದ ಸಾವರ್ಕರ್ ಅವರು ಮುಂದೆ ಹಿಂದೂ ಮಹಾಸಭಾದ ಪ್ರಮುಖ ನಾಯಕರಾದರು. ಹಿಂದೂ ಮಹಾಸಭಾವು ಸ್ವಾತಂತ್ರ್ಯ ನಂತರ ಹಿಂದೂರಾಷ್ಟ್ರದ ಸ್ಥಾಪೆಯ ಕಲ್ಪನೆಗೆ ಅನುಮೋದನೆ ನೀಡಿತು. ಸಾವರ್ಕರ್ ಅವರು ಕುಟುಂಬ ಎಷ್ಟರಮಟ್ಟಿಗೆ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದರೆಂದರೇ ಅಭಿನವ ಭಾರತ ಎಂಬ ರಹಸ್ಯ ಸಂಘಟನೆಯೊಂದನ್ನು ಸ್ಥಾಪಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಯುವಕರನ್ನು ಒಗ್ಗೂಡಿಸಲು ಆರಂಭಿಸಿದರು. ಸಾವರ್ಕರ್ ಅವರು ವಿದ್ಯಾರ್ಥಿಯಾಗಿದ್ದಾಗಲೇ ಸ್ವದೇಶಿ ಚಳುವಳಿಯನ್ನು ಆರಂಭಿಸಿದರು. ಸ್ವದೇಶಿ ಮೇಳಗಳಲ್ಲಿ ಭಾಗವಹಿಸುವುದು, ಸ್ವದೇಶಿ ಚಿಂತನೆಯನ್ನು ಪ್ರಚಾರ ಪಡಿಸುವಲ್ಲಿ ಪ್ರಮುಖರಾದರು. ನಂತರ ಅವರು, ತಿಲಕರ “ಸ್ವರಾಜ್ಯ” ಪಕ್ಷದ ಸದಸ್ಯರಾದರು. ಈ ಸಂಸ್ಥೆ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರಮುಖ ವೇದಿಕೆಯಾಯಿತು. ಇದೇ ವೇಳೆಗೆ ಯೌವನಾವಸ್ಥೆಗೆ ತಲುಪಿದ್ದ ಸಾವರ್ಕರ್ ಅವರು ಕ್ರಿ.ಶ 1901ರ ಮಾರ್ಚನಲ್ಲಿ ಯಮುನಾಬಾಯಿ ಅವರ ವಿವಾಹವಾದರು. ಪತಿಯ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲಿಸುತ್ತಾ ಪ್ರೋತ್ಸಾಹಿಸ ತೊಡಗಿದರು. ಕ್ರಮೇಣ ದಂಪತಿಗಳಿಬ್ಬರೂ ಒಟ್ಟಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗತೊಡಗಿದರು. ಮುಂದೆ ದಂಪತಿಗಳ ಸ್ವಾತಂತ್ರ್ಯ ಹೋರಾಟ ಯಾವರೀತಿ ಇತ್ತು? ನಿರೀಕ್ಷಿಸಿ ಮುಂದಿನಭಾಗದಲ್ಲಿ…. ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಗಂಗೆಯ ಅಹಂಕಾರ ಅಡಗಿಸಿದ ಜಹ್ನು ಮಹರ್ಷಿಗಳು ಶ್ರೀರಾಮನ ಸತ್ಯಸಂಧತೆಯನ್ನು ಜಗತ್ತಿಗೆ ತೋರಿಸಿಕೊಟ್ಟ ಜಾಬಾಲಿ ಮಹರ್ಷಿ