Sunday April 26th Namma Metro will start at 3:30 am because of TCS World 10Kನಮ್ಮ ಮೆಟ್ರೋ

ಬೆಂಗಳೂರು, ಏಪ್ರಿಲ್‌ 23: ನಮ್ಮ ಮೆಟ್ರೋ ಬೆಂಗಳೂರು ಜನರ ಜೀವನಾಡಿಯಾಗಿದೆ. ‌ನಮ್ಮ ಮೆಟ್ರೋದಲ್ಲಿ ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಾರೆ. ನಮ್ಮ ಮೆಟ್ರೋ ಪ್ರತಿ ರವಿವಾರ ಬೆಳಗ್ಗೆ 7ಕ್ಕೆ ಆರಂಭವಾಗುತ್ತದೆ. ಆದರೆ, ಬರುವ ರವಿವಾರ (ಏ.26) ದಂದು ನಸುಕಿನ ಜಾವದಿಂದಲೇ ಆರಂಭವಾಗಲಿದೆ.

ಹೌದು, ಏ. 26 ದಂದು ಫೀಲ್ಡ್ ಮಾರ್ಷಲ್ ಸ್ಯಾಮ್ ಮಾನೇಕ್‌ಶಾ ಪರೇಡ್ ಮೈದಾನದಿಂದ ಪ್ರಾರಂಭವಾಗುವ ಟಿಸಿಎಸ್ ವರ್ಲ್ಡ್ 10ಕೆ ಬೆಂಗಳೂರು ಓಟ ನಡೆಯಲಿದೆ. ಈ ಓಟದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಮೆಟ್ರೋ ರೈಲು ಸೇವೆಗಳನ್ನು ಬೆಳಿಗ್ಗೆ 7ಕ್ಕೆ ಪ್ರಾರಂಭಿಸುವ ಬದಲಿಗೆ ಕೆಳಕಂಡಂತೆ ಮುಂಗಡವಾಗಿ ಪ್ರಾರಂಭಿಸುತ್ತದೆ.

  1. ವೈಟ್‌ಫೀಲ್ಡ್ (ಕಾಡುಗೋಡಿ) ದಿಂದ – ಬೆಳಿಗ್ಗೆ 3:30ಕ್ಕೆ
  2. ಚಲಘಟ್ಟದಿಂದ ಬೆಳಿಗ್ಗೆ 3:35ಕ್ಕೆ
  3. ಮಾದಾವರದಿಂದ ಬೆಳಿಗೆ 3:20ಕ್ಕೆ
  4. ರೇಷ್ಮೆ ಸಂಸ್ಥೆಯಿಂದ ಬೆಳಿಗ್ಗೆ 3:30ಕ್ಕೆ
  5. ಬೊಮ್ಮಸಂದ್ರದಿಂದ ಬೆಳಿಗ್ಗೆ 3:00ಕ್ಕೆ ಆರಂಭವಾಗಲಿದೆ.

ಮೊದಲ ಒಂದು ಗಂಟೆ ರೈಲುಗಳು 15 ನಿಮಿಷಗಳ ಅವಧಿಯಲ್ಲಿ ಸಂಚರಿಸಲಿವೆ. ನಂತರ ಬೆಳಿಗ್ಗೆ 7:00 ಗಂಟೆಯವರೆಗೆ ಸೇವೆಗಳ ನಿರಂತರತೆಯನ್ನು ಕಾಯ್ದುಕೊಳ್ಳಲು 30 ನಿಮಿಷಗಳ ಅವಧಿಯಲ್ಲಿ ರೈಲುಗಳು ಸಂಚರಿಸಲಿವೆ. ಬೆಳಿಗ್ಗೆ 7.00 ಗಂಟೆಯ ನಂತರ ರೈಲುಗಳು ನಿಯಮಿತ ವೇಳಾಪಟ್ಟಿಯಂತೆ ಸಂಚರಿಸಲಿವೆ.

ಸಾರ್ವಜನಿಕರು ವಿಶ್ವದ ಪ್ರೀಮಿಯರ್ 10ಕೆ ಓಟದಲ್ಲಿ ಭಾಗವಹಿಸಲು ಈ ಮೇಲಿನ ಮೆಟ್ರೋ ಸೇವೆಯ ಜೊತೆಗೆ ಮುಂಗಡವಾಗಿ ಕ್ಯೂಆರ್ ಕೋಡ್ ಸೌಲಭ್ಯವನ್ನು ಬಳಸಿಕೊಳ್ಳುವಂತೆ ವಿನಂತಿಸಿದೆ.

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *