Story of Shaunaka Sage in Kannadaಶೌನಕ ಮಹರ್ಷಿ

ಶೌನಕರು ನೈಮಿಷಾರಣ್ಯದಲ್ಲಿ ಕುಲಪತಿಗಳಾಗಿ, ಗುರುಕುಲವನ್ನು ನಡೆಸುತ್ತ ನೂರಾರು ಶಿಷ್ಯರಿಗೆ ವಿದ್ಯಾದಾನ ಮಾಡುತ್ತಿದ್ದವರು. ಅವರು ಅನೇಕ ಮಹಾಯಜ್ಞಗಳನ್ನು ಮಾಡಿದ್ದರು. ಒಮ್ಮೆ ಹನ್ನೆರಡು ವರ್ಷಗಳ ಸತ್ತಯಾಗವನ್ನು ಪ್ರಾರಂಭಿಸಿದರು. ಇಡೀ ಭರತಖಂಡದ ಋಷಿಮಹರ್ಷಿಗಳನ್ನೆಲ್ಲ ಅಲ್ಲಿಗೆ ಆಮಂತ್ರಿಸಿದ್ದರು.

ಈ ಮಹರ್ಷಿಗಳೆಲ್ಲ ಬಿಡುವಿನ ವೇಳೆಯಲ್ಲಿ ಪೌರಾಣಿಕರಾದ ಉಗ್ರಶ್ರವಸೌತಿಗಳಿಂದ ಪುರಾಣಗಳನ್ನು ಕೇಳುತ್ತ, ಭಗವಚ್ಚಿಂತನೆಯಲ್ಲಿ ಕಾಲಕಳೆಯುತ್ತಿದ್ದವರು. ಈ ರೀತಿ ಹಲವಾರು ಪುರಾಣ ಗಳು ರಚನೆಗೊಂಡಿರುವುದು ಶೌನಕಮಹರ್ಷಿಗಳ ಆಶ್ರಮದಲ್ಲಿಯೇ. ಶೌನಕರೇ ಸ್ವತಃ ದೇವಾಸುರ ಸಂಬಂಧವಾದ ಅನೇಕ ಕಥೆಗಳನ್ನು ತಿಳಿದಿದ್ದವರು.

ವ್ರತನಿಷ್ಠರಾದ ಅವರು ಅಗ್ನಿಯ ಉಪಾಸಕರು ಮತ್ತು ಗುರುಕುಲವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವುದರಲ್ಲಿ ದಕ್ಷರು. ಧೀಮಂತರಾದ ಅವರು ಶ್ರುತಿ-ಸ್ಕೃತಿ-ಇತಿಹಾಸ-ಪುರಾಣ-ಉಪನಿಷತ್ತು ಮುಂತಾದ ಎಲ್ಲ ಶಾಸ್ತ್ರಗಳಲ್ಲಿಯೂ ವಿಶೇಷ ಪರಿಣತಿಯನ್ನು ಹೊಂದಿ, ಅಂದಿನ ಕಾಲಕ್ಕೆ ಪ್ರಸಿದ್ಧರಾದ ಆಚಾರ್ಯರಾಗಿದ್ದರು.

ಸತ್ಯವಾದಿಗಳೂ ಜಿತೇಂದ್ರಿಯರೂ ನಿಯತವತರೂ ತಪಸ್ವಿಗಳೂ ಆದ ಅವರು ತಪಸ್ವಿಗಳಲ್ಲೆಲ್ಲ ಮಾನ್ಯರೆನಿಸಿದ್ದರು. ಅವರ ಆಶ್ರಮದಲ್ಲಿ ದಿನವೂ ಅವರ ಅಧ್ಯಕ್ಷತೆಯಲ್ಲಿಯೇ ಕಥಾಶ್ರವಣ ನಡೆಯುತ್ತಿತ್ತು. ಅವರನ್ನು ಪ್ರತೀಕ್ಷಿಸಿ, ಗುರುಗಳಾದ ಅವರು ಸರ್ವಪೂಜ್ಯವಾದ ಪೀಠವನ್ನು ಅಲಂಕರಿಸಿದ ಮೇಲೆಯೇ ಕಥಾಶ್ರವಣವು ಪ್ರಾರಂಭವಾಗುತ್ತಿತ್ತು. ಅಂದಿನ ಕಥಾವಿಷಯವನ್ನು ಅವರೇ ಸೂಚಿಸಬೇಕಾಗಿತ್ತು.

ಶೌನಕರು ಭೈಗುವಂಶದಲ್ಲಿ ಜನ್ಮತಾಳಿದವರು. ಈ ವಂಶವು ದೇವತೆಗಳಿಂದಲೂ ಋಷಿಗಳಿಂದಲೂ ಗೌರವಿಸಲ್ಪಡುತ್ತಿತ್ತು. ಭೈಗುಮಹರ್ಷಿಗಳ ಪುತ್ರರು ಚ್ಯವನರು. ಚ್ಯವನರಿಗೆ ಪ್ರಮತಿಯೆಂಬ ಪುತ್ರನು ಜನಿಸಿದನು. ಪ್ರಮತಿಗೆ ಧೃತಾಚಿಯೆಂಬ ಅಪ್ಸರೆ ಯಲ್ಲಿ ‘ರುರು’ ಎಂಬ ಪುತ್ರನು ಹುಟ್ಟಿದನು.

ರುರುವು ತನ್ನ ಪತ್ನಿಯಾದ ಪ್ರಮದ್ವರೆಗೆ ತನ್ನ ಅರ್ಧ ಆಯುಷ್ಯವನ್ನೇ ಕೊಟ್ಟು ಬದುಕಿಸಿಕೊಂಡ ಮಹಾಮಹಿಮನು. ಇವರ ಮಗನಾಗಿ ಶುನಕರು ಜನಿಸಿದರು. ಶುನಕರೂ ವೇದಪಾರಂಗತರು. ಈ ಶುನಕರ ಪುತ್ರರೇ ಶೌನಕರು. ಇವರನ್ನು ಇಂದ್ರನ ಅವತಾರವೆನ್ನುತ್ತಾರೆ.

ಶೌನಕರು ವೇದಕಾಲದ ಪ್ರಸಿದ್ಧ ಋಷಿಗಳಲ್ಲೊಬ್ಬರು. ಶತಪಥಬ್ರಾಹ್ಮಣದಲ್ಲಿ ಇವರಿಂದ ರಚಿಸಲ್ಪಟ್ಟ ಮಂತ್ರಗಳಿವೆ. ಕೌಶೀತಕೀ ಬ್ರಾಹ್ಮಣದಲ್ಲೂ ನಾಲ್ಕನೆಯ ಅಧ್ಯಾಯದಲ್ಲಿ ಇವರ ಉಲ್ಲೇಖವಿದೆ. ಇವರಿಗೆ ಗೃತ್ಸಮದ ಎಂಬ ಹೆಸರೂ ಇತ್ತೆಂದೂ, ಅದೇ ಅವರ ಜನ್ಮನಾಮವೆಂದೂ ಶಕುನರಯ ಪುತ್ರರಾದ್ದರಿಂದ ಶೌಕನರೆಂದೂ ಪ್ರಖ್ಯಾತರಾದರೆಂದೂ ತಿಳಿದುಬರುತ್ತದೆ.

ಇವರು ಅಶ್ವಲಾಯನರ ಶಿಷ್ಯರು, ಇದನ ಇತ್ತೆಂದೂ, ಅದೇ ಅವರ ಜನ್ಮನಾಮವೆಂದೂ ಶುನಕರ ಪುತ್ರರಾದ್ದರಿಂದ ಶೇಷಕರದ ದಾಸ ಗುರುಕುಲದಲ್ಲಿ ಹತ್ತುಸಾವಿರದವರೆಗೂ ವಿದ್ಯಾರ್ಥಿಗಳಿದ್ದು, ಅವರೆಲ್ಲರಿಗೂ ಸೂಕ್ತವಾದ ವಿದ್ಯೆಯನ್ನು ಕಲಿಯಲು ಮುಕ್ತ ಅವಕಾಶವಿತ್ತು. ಜನಮೇಜಯ ಮಹಾರಾಜನಿಂದ ಬಹ್ಮಹತ್ಯಾದೋಷಪರಿಹಾರಕ್ಕಾಗಿ ಅಶ್ವಮೇಧಯಜ್ಞವನ್ನು ಇವರು ಮಾಡಿಸಿದರೆಂದು ತಿಳಿದುಬರುತ್ತದೆ.

ಶೌನಕರು ಜ್ಞಾನಕಾಂಡದಲ್ಲಿಯೂ ಹೆಸರುವಾಸಿಯಾಗಿದ್ದರು. ಛಾಂದೋಗ್ಯ: ಪನಿಷತ್ತಿನಲ್ಲಿ ಉದ್ದೀಥೋಪಾಸನೆಯ ಪ್ರಕರಣ ಬರುತ್ತದೆ. ಅಲ್ಲಿ ಶಾಲಾವತ್ಯ, ದಾಲ್ಸ ಮತ್ತು ಜೈವಲಿಗಳೆಂಬ ಮೂವರು ವಿದ್ವಾಂಸರು ಈ ವಿಷಯವಾಗಿ ಚರ್ಚೆಯನ್ನು ಕೈಗೆತ್ತಿಕೊಳ್ಳುತ್ತಾರೆ. ಸ್ವರ್ಗವೇ ಉದ್ದೀಥಕ್ಕೆ ಗತಿಯೆಂಬುದು ದಾಲ್ಮನ ಸಿದ್ಧಾಂತವಾಗಿರುತ್ತದೆ. ಪೃಥ್ವಿಯೇ ಗತಿಯೆಂಬುದು ಶಾಲಾವತ್ಯನ ಸಿದ್ಧಾಂತ. ಆದರೆ ಜೈವಲಿಯು ಪರಮಾತ್ಮನೇ ಉದ್ದೀಥಕ್ಕೆ ಆಶ್ರಯನೆಂದು ಸಮರ್ಥಿಸುತ್ತಾನೆ. ಈ ಸಂದರ್ಭದಲ್ಲಿ ಶೌನಕರು ಉದ್ದೀಥವನ್ನು ಚೆನ್ನಾಗಿ ಉಪಾಸನೆ ಮಾಡಿದ್ದರೆಂದೂ ಈ ದರ್ಶನವನ್ನು ತಮ್ಮ ಶಿಷ್ಯರಾದ ಉದರಶಾಂಡಿಲ್ಯರಿಗೆ ಉಪದೇಶಿಸಿ, ಎಷ್ಟು ಕಾಲದವರೆಗೆ ಈ ಉಪಾಸನೆಯನ್ನು ಮಾಡುವರೋ ಅಷ್ಟೂ ಕಾಲ ವಿಶಿಷ್ಟತರವಾದ ಲೌಕಿಕಜೀವನ ಮತ್ತು ಪಾರೋವರೀಯವಾದ ಲೋಕವು ಆಗುವುದೆಂದು ಹೇಳಿದರೆಂದೂ ಜೈವಲಿ ಹೇಳುತ್ತಾನೆ.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-೧

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *