ವೈದಿಕಸಾಹಿತ್ಯದಲ್ಲಿ ಅತ್ರಿಮಹರ್ಷಿಗಳ ಸ್ಥಾನ ಬಹಳ ಹಿರಿದಾದುದು. ಅವರು ಬ್ರಹ್ಮನ ಮಾನಸಪುತ್ರರಲ್ಲಿ ಒಬ್ಬರು, ಮೊದಲನೆಯದಾದ ಸ್ವಾಯಂಭುವ ಮನ್ವಂತರದ ಸಪ್ತರ್ಷಿಗಳಲ್ಲಿ ಇವರೂ ಒಬ್ಬರಾಗಿದ್ದಾರೆ. ಈಗ ನಡೆಯುತ್ತಿರುವ ವೈವಸ್ಥತ ಮನ್ನಂತರದಲ್ಲಿಯೂ ಸಪ್ತರ್ಷಿಮಂಡಲದಲ್ಲಿ ಇವರಿಗೆ ಪ್ರಥಮಸ್ಥಾನ. ಪ್ರಜಾಪತಿಗಳ ಸಾಲಿನಲ್ಲಿಯೂ ಅತ್ರಿಗಳ ಸ್ಥಾನ ಮಹತ್ವದ್ದು. ಇವರು ಮಂತ್ರದ್ರಷ್ಟಾರರು. ಯಗೈದರ ಐದನೆಯ ಮಂಡಲದಲ್ಲಿ ಇವರ ಮಂತಗಳು ಉಕ್ತವಾಗಿವೆ. ಹತ್ತನೆಯ ಮಂಡಲ ದಲ್ಲಿಯೂ ಇವರ ಮತ್ತು ಇವರ ವಂಶದವರಾದ ಅತ್ಮೀಯರ ಹೆಸರುಗಳು ಕಂಡು ಬರುತ್ತವೆ. ಅತ್ರಿಗಳಿಂದ ಪ್ರವೃತ್ತವಾದ ಗೋತ್ರವೇ ಆತ್ರೇಯಗೋತ್ರ. ಚಂದ್ರನು ಅತ್ರಿಮಹರ್ಷಿಗಳ ಪುತ್ರನೆಂದು ಹೇಳುತ್ತಾರೆ. ಹರಿವಂಶದಲ್ಲಿ ಈ ರೀತಿ ಹೇಳಲಟ್ಟಿದೆ: ಪ್ರಾಚೀನಕಾಲದಲ್ಲಿ ಬ್ರಹ್ಮನು ಸೃಷ್ಟಿಯನ್ನು ಸಂಕಲ್ಪಿಸಿದನು. ಆಗ ಅವನ ಮನಸ್ಸಿನಿಂದ ಅತ್ರಿಯೇ ಮುಂತಾದ ಮಹರ್ಷಿಗಳ ಜನ್ಮವಾಯಿತು. ಬ್ರಹ್ಮನು ತನ್ನ ಮಾನಸಪುತ್ರರಿಗೆ ಸೃಷ್ಟಿಕಾರ್ಯದಲ್ಲಿ ನೆರವಾಗುವಂತೆ ಆಣತಿಯಿತ್ತನು. ಕಠೋರ ವ್ರತನಿಷ್ಠರೂ ಧರ್ಮಾತ್ಮರೂ ಮಹಾತೇಜಸ್ವಿಗಳೂ ಆದ ಅತ್ರಿಮಹರ್ಷಿಗಳು ಮೂರು ಸಾವಿರ ದೇವವರ್ಷಗಳ ಕಾಲ, ಕೈಗಳನ್ನು ಮೇಲಕ್ಕೆತ್ತಿಕೊಂಡು, ಕಲ್ಲಿನಂತೆ ನಿಶ್ಚಲರಾಗಿ ನಿಂತು, ‘ಅನುತ್ತರ’ ಎಂಬ ಹೆಸರಿನ ಸರ್ವೋತ್ಕೃಷ್ಟ ಮಹಾತಪಸ್ಸನ್ನು ಮಾಡಿದರು. ಅವರು ರೆಪ್ಪೆಗಳನ್ನು ಕೂಡಾ ಆಡಿಸದೇ ಶಾಂತಮನದಿಂದ ತಪಸ್ಸನ್ನು ಮಾಡುತ್ತಿದ್ದರು. ಶುದ್ಧಾಂತಃಕರಣರಾದ ಮುನಿಯ ಕಣ್ಣುಗಳಿಂದ ತೇಜಸ್ಸು ಜಲರೂಪದಲ್ಲಿ ಹೊಮ್ಮ ತೊಡಗಿತು. ಅದು ಹತ್ತು ದಿಕ್ಕುಗಳಿಗೂ ಹರಡಿತು. ಓಷಧೀಲತೆಗಳ ಮೂಲಕವಾಗಿ ಎಲ್ಲ ಜನರಿಗೂ ಪುಷ್ಟಿಯನ್ನುಂಟುಮಾಡಬಲ್ಲ ಶೀತಕಿರಣಗಳಿಂದ ಕೂಡಿದ ಈ ತೇಜಸ್ಸನ್ನು ಲೋಕಪಿತಾಮಹನಾದ ಬ್ರಹ್ಮನು ಒಂದುಗೂಡಿಸಿ ಒಂದು ರಥದಲ್ಲಿ ಕುಳ್ಳಿರಿಸಿದನು. ಈ ರಥವು ವೇದಮಯವಾಗಿದ್ದು, ಧರ್ಮಸ್ವರೂಪವೂ ಸತ್ಯದಿಂದ ನಿಯಂತ್ರಿ ಸಲ್ಪಡುವಂತಹುದೂ ಆಗಿದ್ದಿತು. ಬ್ರಹ್ಮನ ಮಾನಸಪುತ್ರರೂ ಭೈಗುವೇ ಮುಂತಾದ ಮಹರ್ಷಿಗಳೂ ವೇದಮಂತ್ರಗಳಿಂದ ಸೋಮನನ್ನು ಸ್ತೋತ್ರಮಾಡಿದರು. ಹೀಗೆ ಚಂದ್ರನು ಅತ್ರಿಮುನಿಗಳ ತಪಃಪ್ರಭಾವದಿಂದ ಜನಿಸಿ, ಬೀಜಗಳಿಗೂ ಓಷಧಿಗಳಿಗೂ ಬ್ರಾಹ್ಮಣರಿಗೂ ಮತ್ತು ನೀರಿಗೂ ರಾಜನಾಗಿ ಅಭಿಷಿಕ್ತನಾದನು. ಅನಂತರ ರಾಜನಾದ ಸೋಮನು ತಂದೆಯಾದ ಅತ್ರಿಯನ್ನೇ ಹೋತ್ಸವನ್ನಾಗಿಸಿಕೊಂಡು ರಾಜಸೂಯಯಾಗವನ್ನು ಮಾಡಿದನು. ಚಂದ್ರನ ವಂಶವು ಮುಂದೆ ಅಭಿವೃದ್ಧಿಯನ್ನು ಪಡೆಯಿತು. ಇದರ ಮೂಲಪುರುಷರು ಅತ್ರಿಮಹರ್ಷಿ. ಚಂದ್ರನ ಉತ್ಪತ್ತಿಗೆ ಕಾರಣರಾದಂತೆಯೇ ಅತ್ರಿಮಹರ್ಷಿಗಳು ಸೂರ್ಯನ ರಕ್ಷಣೆಗೂ ಮುಂದಾದರು. ಗ್ರಹಣಕಾಲದಲ್ಲಿ ಸೂರ್ಯನನ್ನು ರಾಹುವು ಆಕ್ರಮಿಸುತ್ತಾನೆಂಬುದು ಪೌರಾಣಿಕ ಸಂಗತಿ. ಈ ಸಂದರ್ಭದಲ್ಲಿ ಸೂರ್ಯನಿಗೆ ತನ್ನನ್ನು ರಕ್ಷಣೆ ಮಾಡಿಕೊಳ್ಳಲು ಬೇಕಾದ ಸಾಮರ್ಥ್ಯವನ್ನು ಒದಗಿಸುವುವು ವೇದಮಂತ್ರಗಳು. ಇಂತಹ ಮೂರು ಮಂತ್ರಗಳು ಋಗ್ರೇದದಲ್ಲಿದ್ದುವಂತೆ. ಅತ್ರಿಮಹರ್ಷಿಗಳು ಇನ್ನೂ ಶಕ್ತಿಶಾಲಿಯಾದ ನಾಲ್ಕನೆಯ ವಿಶೇಷಸ್ತೋತ್ರವನ್ನು ಸೂರ್ಯನಿಗಾಗಿ ರಚನೆಮಾಡಿದರು.ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-೧ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಇಂದ್ರನ ಅವತಾರವಾದ ಶೌನಕ ಮಹರ್ಷಿಗಳ ಕಥೆ ಹಿರಣ್ಯಕಶಿಪು ತಂದೆ, ಬ್ರಹ್ಮನ ಮೊಮ್ಮಗ ಕಶ್ಯಪ ಮಹರ್ಷಿ