Ashtavakra Maharishi Story in Kannadaಅಷ್ಟಾವಕ್ರ ಮಹರ್ಷಿ

ಅಷ್ಟಾವಕ್ರರು ಕಹೋಡಮಹರ್ಷಿಗಳ ಪುತ್ರರು, ಕಹೋಡರು ಜಿತೇಂದ್ರಿಯರೂ ಗುರುಶುಶೂಷಾಪರಾಯಣರೂ ಆಗಿದ್ದರು. ಅವರ ಸದ್ಗುಣಗಳಿಂದ ಸುಪ್ರೀತರಾದ ಗುರು ಉದ್ಘಾಲಕರು ತಮ್ಮ ಮಗಳಾದ ಸುಜಾತೆಯನ್ನು ಕಹೋಡರಿಗೆ ವಿವಾಹ ಮಾಡಿಕೊಟ್ಟರು. ಕಾಲಕ್ರಮದಲ್ಲಿ ಸುಜಾತೆ ಗರ್ಭಿಣಿಯಾದಳು.

ಒಂದಾನೊಂದು ದಿನ ಗರ್ಭದಲ್ಲಿದ್ದ ಶಿಶುವು ತಂದೆಯ ವೇದಾಧ್ಯಯನದಲ್ಲಿ ತಪ್ಪನ್ನು ಕಂಡುಹಿಡಿದು ನಕ್ಕುಬಿಟ್ಟಿತು. ಕಹೋದರಿಗೆ ಇದರಿಂದ ಕೋಪಬಂದು. “ನಿನ್ನ ದೇಹದ ಎಂಟು ಭಾಗಗಳಲ್ಲಿ ವಕ್ರತೆಯುಂಟಾಗಲಿ” ಎಂದು ಶಪಿಸಿದರು. ಇದರಿಂದಾಗಿ ವಕ್ರನಾಗಿ ಜನಿಸಿದ ಶಿಶುವು, ‘ಅಷ್ಟಾವಕ್ರ’ನೆಂದೇ ಪ್ರಸಿದ್ಧವಾಯಿತು.

ಮಗುವು ಜನಿಸುವ ಮೊದಲೇ ಕಹೋಡರು ಜನಕನ ಆಸ್ಥಾನದಲ್ಲಿದ್ದ ವಂದಿಯೆಂಬ ಮಹಾಪಂಡಿತನೊಡನೆ ವಾದಮಾಡಲು ಹೋದರು. ಅವರನ್ನು ಜಯಿಸಿದ ವಂದಿಯು ಕಹೋಡರನ್ನು ನೀರಿಗೆ ತಳ್ಳಿಸಿಬಿಟ್ಟನು. ಹೀಗಾಗಿ ಮಗುವಿಗೆ ತಂದೆಯ ವಿಷಯವಾಗಿ ಏನೂ ತಿಳಿದಿರಲಿಲ್ಲ. ಅಷ್ಟಾವಕ್ರನು, ಉದ್ದಾಲಕರನ್ನೇ ‘ತಂದೆ’ ಎಂದು ಸಂಬೋಧಿಸುತ್ತ ಅವರಿಂದ ಎಲ್ಲ ಶಿಕ್ಷಣವನ್ನು ಪಡೆದನು.

ಒಂದು ದಿನ ಅಷ್ಟಾವಕ್ರನು ಉದ್ದಾಲಕರ ತೊಡೆಯ ಮೇಲೆ ಕುಳಿತು ಶಾಸ್ತ್ರಾರ್ಥ ವನ್ನು ಚರ್ಚಿಸುತ್ತಿದ್ದನು. ಉದ್ದಾಲಕರ ಮಗನಾದ ಶ್ವೇತಕೇತುವಿಗೆ ಇದು ಸಹ್ಯವಾಗಲಿಲ್ಲ. ಅವನು, “ಅಷ್ಟಾವಕ್ರ, ನನ್ನ ತಂದೆಯ ತೊಡೆಯ ಮೇಲೆ ನಾನು ಕುಳಿತುಕೊಳ್ಳಬೇಕು. ನೀನು ಎದ್ದು ಹೋಗು” ಎಂದು ಅವನ ಕೈಹಿಡಿದು ಎಳೆದನು. ಅಷ್ಟಾವಕ್ರನು ಅಳುತ್ತ ತಾಯಿಯ ಬಳಿಗೆ ಹೋಗಿ “ನನ್ನ ತಂದೆ ಎಲ್ಲಮ್ಮಾ?” ಎಂದು ಪ್ರಶ್ನಿಸುತ್ತಾ ಸುಜಾತೆಗೆ ನಡೆದ ವಿಷಯವನ್ನು ಹೇಳಿದನು. ದುಃಖಿತಳಾದ ಸುಜಾತೆಯು ಮಗನಿಗೆ ತನ್ನ ಪತಿಯ ವೃತ್ತಾಂತವನ್ನು ಯಥಾವತ್ತಾಗಿ ತಿಳಿಸಿದಳು.

ಹನ್ನೆರಡು ವರುಷದ ಬಾಲಕ ಅಷ್ಟಾವಕ್ರನಿಗೆ ತಂದೆಯ ಸೋಲಿಗೆ ಪ್ರತೀಕಾರ ಮಾಡಬೇಕೆನಿಸಿತು. ಸೋದರಮಾವನಾದ ಶ್ವೇತಕೇತುವನ್ನು ಕುರಿತು, “ಜನಕರಾಜನ ಆಸ್ಥಾನವು ಅತ್ಯಾಶ್ಚರ್ಯಮಯ ಸಂಗತಿಗಳಿಂದ ಕೂಡಿರುವುದೆಂದು ಕೇಳಿದ್ದೇನೆ. ಅದನ್ನೆಲ್ಲ ನೋಡಬೇಕೆಂದು ನನಗೆ ಇಚ್ಛೆಯಾಗಿದೆ. ನಾವಿಬ್ಬರೂ ಹೋಗಿ ವಿದ್ವಾಂಸರು ಈಸ್ವಾರ್ಥಗಳ ಮೇಲೆ ಮಾಡುವ ವಾಗ್ವಾದಗಳ ಸರಣಿಯನ್ನು ಕೇಳಿ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳೋಣ. ರಾಜಭೋಜನದಲ್ಲಿ ಪಾಲ್ಗೊಂಡು ಸಂತೋಷಪಡೋಣ” ಎಂದು ಹೇಳಿದನು. ಅಷ್ಟವಕ್ರನ ಮಾತಿಗೆ ಶ್ವೇತಕೇತುವೂ ಒಪ್ಪಿದನು. ಇಬ್ಬರೂ ಜನಕನ ರಾಜಧಾನಿಯಾದ ಮಿಥಿಲೆಗೆ ಪ್ರಯಾಣ ಮಾಡಿದರು.

ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-೧

ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *