ಕಣ್ವರು ಋಗ್ವೇದಕಾಲದಲ್ಲಿದ್ದ ಪ್ರಸಿದ್ಧ ಮಹರ್ಷಿಗಳು, ಇವರ ಹೆಸರಿನಲ್ಲಿ ಎಂಬವರ ಪುತ್ರರು. ಇವರನ್ನು ಕಾಶ್ಯಪಗೋತ್ರದ ಮಹರ್ಷಿಗಳೆಂದು ಹೇಳುತ್ತಾರೆ. ಋನ್ನೇದದ ಕೆಲವು ಸೂಕ್ತಗಳೂ ಇವೆ. ಇವರು ಪ್ರಸಿದ್ದ ಮಹರ್ಷಿಗಳಾಗಿದ್ದ ಮೇಧಾತಿಥಿ ಕಣ್ಣರು ಗುರುಕುಲವನ್ನು ಸ್ಥಾಪಿಸಿ, ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿದ್ದರು. ಪುರುವಂಶದ ಮೂಲಪುರುಷನಾದ ಭರತನ ತಾಯಿಯಾದ ಶಕುಂತಲೆಯನ್ನು ಪೋಷಿಸಿದ ಕೀರ್ತಿ ಕಣ್ಣರಿಗೆ ಸಲ್ಲುತ್ತದೆ. ಭರತನಿಂದಲೇ ನಮ್ಮ ದೇಶಕ್ಕೆ ಭಾರತವೆಂಬ ಹೆಸರು ಬಂದಿತು. ಕಣ್ಣರ ಆಶ್ರಮದ ಸೊಬಗು ಅಂದಿನ ಕಾಲಕ್ಕೆ ವಿಶ್ವವಿಖ್ಯಾತವಾಗಿದ್ದಿತು. ನದಿಯು ಹರಿಯುತ್ತಿದ್ದಿತು. ಲಕ್ಷ್ಮಿ ನಗರದ ಹತ್ತಿರ ಈಗಲೂ ಈ ಆಶ್ರಮವನ್ನು ಕಣ್ವರ ಆಶ್ರಮ ಅತ್ಯಂತ ಮನೋಹರವಾಗಿತ್ತು. ಸಮೀಪದಲ್ಲಿಯೇ ಮಾಲಿನೀ ಗುರುತಿಸುತ್ತಾರೆ. ಈ ಆಶ್ರಮ ಮತ್ತು ನದಿಯನ್ನು ನೋಡಿದರೆ ನರ-ನಾರಾಯಣ ಮಹರ್ಷಿಗಳು ತಪಸ್ಸು ಮಾಡಿದ ಬದರಿಕಾಶ್ರಮದ ನೆನಪು ಬರುತ್ತಿದ್ದಿತಂತೆ. ಆಶ್ರಮ ದೊಡೆಯರಾಗಿದ್ದ ಕುಲಪತಿಗಳಾದ ಕಣ್ವರೂ ಅಮಿತ ವರ್ಚಸ್ಸಿನಿಂದ ಕೂಡಿದವರೂ ತಪೋಧನರೂ ಆಗಿದ್ದರು. ಅವರ ಆಶ್ರಮದಲ್ಲಿ ನಿರಂತರವಾಗಿ ಯಜ್ಞಯಾಗಾದಿಗಳು, ವೇದಘೋಷಗಳು ನಡೆಯುತ್ತಿದ್ದವು, ಎಲ್ಲ ವೇದಗಳ ಪಠಣವೂ ಅಲ್ಲಿ ನಡೆಯುತ್ತಿದ್ದಿತು. ನ್ಯಾಯತತ್ತ್ವಗಳನ್ನು ಅರಿತಿದ್ದ ಆತ್ಮಜ್ಞಾನಸಂಪನ್ನರು ವೇದಾಂತದ ವಿಷಯಗಳನ್ನು ಶ್ರುತ್ಯುಕ್ತ ತರ್ಕಗಳಿಂದ ಮನನಮಾಡುತ್ತಿದ್ದರು. ಕ್ರಮಶಿಕ್ಷಾವಿದ್ಯೆಗಳ ಪಾರಂಗತರೂ, ಉಪಾಸನಾಪರರೂ, ಮೋಕ್ಷಧರ್ಮಪರಾಯಣರೂ, ಪರಮಾರ್ಥಜ್ಞರೂ, ವೇದಾಂಗ ಗಳನ್ನು ಅಭ್ಯಾಸ ಮಾಡಿದವರೂ, ಯಾವ ಯಾವ ಕರ್ಮಕ್ಕೆ ಯಾವಯಾವ ದ್ರವ್ಯಗಳು ಎಷ್ಟೆಷ್ಟು ಬೇಕೆಂಬುದನ್ನು ಖಚಿತವಾಗಿ ಬಲ್ಲವರೂ, ಸಕಲಜ್ಞಾನ ವಿಶಾರದರೂ, ಪಕ್ಷಿಗಳ ಭಾಷೆಯನ್ನು ಬಲ್ಲವರು. ಹೀಗೆ ಎಲ್ಲ ಬಗೆಯ ಪಂಡಿತರೂ ಅಲ್ಲಿದ್ದು, ಅದೊಂದು ದೊಡ್ಡ ವಿಶ್ವವಿದ್ಯಾನಿಲಯವನ್ನು ಹೋಲುತ್ತಿತ್ತು. ಆ ಕಾಲದಲ್ಲಿಯೇ ಇಷ್ಟು ಸುವ್ಯವಸ್ಥಿತವಾದ ಗುರುಕುಲವನ್ನು ಅವರು ನಡೆಸುತ್ತಿದ್ದರು. ಕಣ್ವರು ಒಮ್ಮೆ ಸ್ನಾನಾರ್ಥವಾಗಿ ಮಾಲಿನೀ ತೀರಕ್ಕೆ ಹೋಗಿದ್ದಾಗ, ಪಕ್ಷಿಗಳಿಂದ ರಕ್ಷಿಸಲ್ಪಡುತ್ತಿದ್ದ ಹೆಣ್ಣು ಮಗುವೊಂದನ್ನು ಅಲ್ಲಿ ಕಂಡರು. ತಮ್ಮ ಜ್ಞಾನಬಲದಿಂದ ಆ ಶಿಶುವು ವಿಶ್ವಾಮಿತ್ರ-ಮೇನಕೆಯರದೆಂದು ತಿಳಿದು, ಅದನ್ನು ಆಶ್ರಮಕ್ಕೆ ತಂದು ಪೋಷಿಸಿ ವರು, ಶಕುಂತಪಕ್ಷಿಗಳಿಂದ ರಕ್ಷಿಸಲಟ್ಟ ಆ ಮಗುವಿಗೆ ‘ಶಕುಂತಲಾ’ ಎಂದೇ ನಾಮಕರಣ ಮಾಡಿದರು. ಆಶ್ರಮದಲ್ಲಿಯೇ ಬೆಳೆದ ಶಕುಂತಲೆಯನ್ನು ಮೃಗಯಾವಿಹಾರಕ್ಕಾಗಿ ಬಂದ ದುಷ್ಯಂತನು ವರಿಸಿದನು. ಅವರ ಮಗನೇ ಪ್ರಸಿದ್ಧನಾದ ಭರತ. ಈ ಪ್ರಸಂಗವನ್ನೇ ಆಧಾರವಾಗಿಟ್ಟುಕೊಂಡು ಕಾಳಿದಾಸ ಮಹಾಕವಿಯು ರಚಿಸಿರುವ ‘ಅಭಿಜ್ಞಾನಶಾಕುಂತಲಾ’ ನಾಟಕ ಜಗದ್ವಿಖ್ಯಾತವಾಗಿದೆ. ಅದರಲ್ಲಿಯ ನಾಲ್ಕನೆಯ ಅಂಕದಲ್ಲಿ ಕಣ್ಣರು ಶಕುಂತಲೆಯನ್ನು ಪತಿಗೃಹಕ್ಕೆ ಕಳಿಸುವಾಗ ಹೇಳುವ ಮಾತುಗಳು (೪ ಶ್ಲೋಕಗಳು) ಎಲ್ಲ ಕಾಲಕ್ಕೂ ಹೊಂದುವ ಅತ್ಯುತ್ತಮ ಸಂದೇಶವಾಗಿದೆ. ಕಣ್ವರು ದುರ್ಯೋಧನನಿಗೆ ಬುದ್ದಿವಾದ ಹೇಳಿ ಮಹಾಭಾರತದ ಯುದ್ಧವನ್ನು ನಿಲ್ಲಿಸಲು ಮಾಡಿದ ಪ್ರಯತ್ನವೊಂದು ಅವರ ಸಾಮಾಜಿಕ ಕಳಕಳಿ ಮತ್ತು ರಾಜಕೀಯ ಪಜ್ಞೆಗೆ ನಿದರ್ಶನವಾಗಿದೆ. ಪಾಂಡವರು ವನವಾಸ ಮತ್ತು ಅಜ್ಞಾತವಾಸಗಳನ್ನು ಮುಗಿಸಿದ ನಂತರ ತಮ್ಮ ರಾಜ್ಯವನ್ನು ಹಿಂದಕ್ಕೆ ಪಡೆಯಲು ಪ್ರಯತ್ನಿಸುತ್ತಾರೆ. ಆಗ ಶ್ರೀಕೃಷ್ಣನು ಸಂಧಾನಕ್ಕಾಗಿ ದುರ್ಯೋಧನನ ಆಸ್ಥಾನಕ್ಕೆ ಬರುತ್ತಾನೆ. ಅಲ್ಲಿ ಸಂಧಿಯ ಆವಶ್ಯಕತೆಯನ್ನು ಪ್ರಭಾವಶಾಲಿಯಾಗಿ ನಿರೂಪಿಸುತ್ತಾನೆ. ಶ್ರೀಕೃಷ್ಣನನ್ನು ಸಂದರ್ಶಿಸಲು ಆನೇಕ ಋಷಿ-ಮುನಿಗಳೂ ಸಭೆಗೆ ಆಗಮಿಸುತ್ತಾರೆ. ಶ್ರೀಕೃಷ್ಣನ ಮಾತನ್ನು ಸಮರ್ಥಿಸುತ್ತ ಪರುಶುರಾಮರು ಮೊದಲು ದಂಬೋದ್ಭವನೆಂಬ ರಾಜನ ವೃತ್ತಾಂತವನ್ನು ನಿರೂಪಿ ಸುತ್ತಾರೆ. ಅನಂತರ ಕಣ್ವರು ಜಾಮದಗ್ನಿಯ ಮಾತುಗಳನ್ನು ಸಮರ್ಥಿಸುತ್ತ, ಸಂಧಿ ಮಾಡಿಕೊಳ್ಳುವಂತೆ ದುರ್ಯೊಧನನಿಗೆ ಸಲಹೆ ನೀಡುತ್ತಾರೆ. “ಚಂದ್ರ-ಸೂರ್ಯ-ಭೂಮಿ ಮುಂತಾದ ಎಲ್ಲವೂ ಕಾಲಾಂತರದಲ್ಲಿ ಮೃತ್ಯುವಶವಾಗುತ್ತವೆ. ತಾನು ಬಲಿಷ್ಠ ನೆಂಬುದು ಕೇವಲ ಅಹಂಕಾರವನ್ನು ತೋರಿಸುತ್ತದೆ” ಎಂದು ಬೋಧಿಸುತ್ತ ಈ ವಿಷಯವನ್ನು ಸಮರ್ಥಿಸಲು ಮಾತಲಿಯು ತನ್ನ ಮಗಳಿಗೆ ವರನನ್ನು ಹುಡುಕಲು ಯತ್ನಿಸಿದ ಪುರಾತನ ಇತಿಹಾಸವನ್ನು ಉದಾಹರಿಸುತ್ತಾರೆ. ಆ ಕಥೆ ಹೀಗಿದೆ: ಮಾತಲಿಯು ತನ್ನ ಮಗಳಾದ ಗುಣಕೇಶಿಗೆ ವರನನ್ನು ಹುಡುಕುತ್ತ ನಾರದರೊಡನೆ ವರುಣಲೋಕ, ಪಾತಾಳ, ದೈತ್ಯ-ದಾನವರ ಹಿರಣ್ಯಪುರ, ಗರುಡಲೋಕ, ಗೋವು ಗಳಿರುವ ರಸಾತಲ, ಮತ್ತು ನಾಗಲೋಕಗಳನ್ನು ಸಂದರ್ಶಿಸುತ್ತಾನೆ. (ಕಣ್ವರು ತಮ್ಮ ತಪೋಮಹಿಮೆಯಿಂದ ಈ ಎಲ್ಲ ಲೋಕಗಳನ್ನು ಕಂಡುಕೊಂಡಿದ್ದವರಾದ್ದರಿಂದ ಅವುಗಳ ನೈಜ ಚಿತ್ರಣವನ್ನು ಈ ಸಂದರ್ಭದಲ್ಲಿ ನೀಡಿರುತ್ತಾರೆ.) ಕೊನೆಗೆ ಮಾತಲಿಯು ನಾಗಕುಮಾರನಾದ ಸುಮುಖನಿಗೆ ತನ್ನ ಮಗಳನ್ನು ಕೊಟ್ಟು ವಿವಾಹ ಮಾಡಲು ನಿಶ್ಚಯಿಸುತ್ತಾನೆ. ಅಲ್ಪಾಯುವಾಗಿದ್ದ ಸುಮುಖನಿಗೆ ಇಂದ್ರನು ದೀರ್ಘಾಯುಷ್ಯವನ್ನು ಕರುಣಿಸುತ್ತಾನೆ. ಇದರಿಂದ ಗರುಡನಿಗೆ ತನ್ನ ಆಹಾರವು ತಪ್ಪಿದಂತಾಯಿತು. ಕ್ರುದ್ಧನಾದ ಗರುಡನು ತಾನು ಅತ್ಯಂತ ಬಲಶಾಲಿಯೆಂದೂ ಸಾಕ್ಷಾತ್ ಶ್ರೀಮನ್ನಾರಾಯಣನನ್ನು ಹೊತ್ತು ತಿರುಗುವವನೆಂದೂ ಜಂಬಕೊಚ್ಚಿಕೊಂಡು ಇಂದ್ರನ ಜೊತೆ ಯುದ್ಧಕ್ಕೆ ಮುಂದಾದನು. ಆಗ ವಿಷ್ಣುವು ವೈನತೇಯನ ಮೇಲೆ ತನ್ನ ಕೈಯನ್ನಿಟ್ಟನು. ಅಷ್ಟು ಭಾರಕ್ಕೆ ಗರುಡನು ಮೂರ್ಛಿತನಾಗಿ ಬಿದ್ದುಬಿಟ್ಟನು. ಅನಂತರ ತಾನೇ ಬಲಶಾಲಿಯೆಂಬ ಜಂಬವನ್ನು ತೊರೆದನು. ಕಣ್ವರು ಈ ಕಥೆಯನ್ನು ದುರ್ಯೋಧನನಿಗೆ ಹೇಳಿ ಅವನ ಅಹಂಕಾರವನ್ನು ತಗ್ಗಿಸಲು ಯತ್ನಿಸಿದರು. ಆ ವಿಷ್ಣುವೇ ಈ ಕೃಷ್ಣನೆಂದೂ ಹೇಳಿದರು. ಆಗ ದುರ್ಯೋಧನನು ಕಣ್ವರ ಮಾತುಗಳನ್ನು ಅವಹೇಳನ ಮಾಡುತ್ತ ಕಣ್ವರನ್ನು ನೋಡುತ್ತ ಗಟ್ಟಿಯಾಗಿ ನಕ್ಕನು. ಮತ್ತು, ತನ್ನ ತೊಡೆಗಳನ್ನು ತಟ್ಟಿಕೊಳ್ಳುತ್ತ ಕಣ್ವರಿಗೆ, ಅವರ ಪ್ರಲಾಪವನ್ನು ಸಾಕುಮಾಡುವಂತೆ ಹೇಳಿಬಿಟ್ಟನು. ವಿಧಿಚೋದಿತರಿಗೆ ಯಾರ ಮಾತೂ ಹಿಡಿಸುವುದಿಲ್ಲವಷ್ಟೆ! ಆಗ ಕಣ್ವರು ದುರ್ಯೋಧನನನ್ನು ಶಪಿಸಿದರೆಂದು ಕೆಲವರು ಹೇಳುತ್ತಾರೆ. ಆದರೆ ಮಹಾಭಾರತದಲ್ಲಿ ಈ ವಿಷಯವೇನೂ ಬರುವುದಿಲ್ಲ. ದಯಾಘನರಾಗಿದ್ದ ಕಣ್ವರು ಎಂದೂ ಕುಪಿತರಾದುದಾಗಲೀ ಶಾಪಕೊಡುವುದಾಗಲೀ ಕಂಡುಬರುವುದಿಲ್ಲ. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-೧ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ನಾರದ ಜಯಂತಿ: ದಾಸಿಪುತ್ರ ದೇವರ್ಷಿಯಾಗಿ ವಾಲ್ಮೀಕಿ ಮಹರ್ಷಿಗಳಿಗೆ ರಾಮಾಯಣ ಬೋಧಿಸಿದ ನಾರದರು ಬ್ರಹ್ಮಜ್ಞಾನ ಪುರುಷರಿಗೆ ಮೀಸಲಲ್ಲ, ಮಹಿಳೆಯರೂ ಪಡೆಯಬಹುದೆಂದು ತೋರಿಸಿಕೊಟ್ಟ ಯಾಜ್ಞವಲ್ಕ್ಯ ಮಹರ್ಷಿ