‘ನಾರದ’ ಎಂಬ ಹೆಸರು ಕೇಳಿದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ವೀಣೆಯನ್ನು ಹಿಡಿದು, ನಾರಾಯಣ ನಾಮಸ್ಮರಣೆ ಮಾಡುತ್ತ ಮೂರು ಲೋಕ ಗಳಲ್ಲಿಯೂ ಸಂಚಾರ ಮಾಡುತ್ತಿರುವ ಒಬ್ಬ ಋಷಿಯ ಚಿತ್ರ ಅನೇಕ ಪೌರಾಣಿಕ ಘಟನೆಗಳಿಗೆ ಕಾರಣಕರ್ತರಾದ ಅವರನ್ನು ‘ಕಲಹಪ್ರಿಯ’ರೆಂದು ಭಾವಿಸಿರುವವರೇ ಹೆಚ್ಚು ಮಂದಿ. ಆದರೆ ನಾರದರು ದೇವಕಾರ್ಯಗಳಿಗೆ ಸಹಾಯಮಾಡುತ್ತ ಜಗತ್ತಿನ ಒಳಿತಿಗಾಗಿ ಶ್ರಮಿಸುತ್ತಿದ್ದ ಒರ್ವ ದೇವರ್ಷಿಗಳು, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ತನ್ನ ವಿಭೂತಿಗಳನ್ನು ವಿಸ್ತರಿಸುತ್ತ ‘ದೇವರ್ಷಿಣಾಂ ಚ ನಾರದಃ’ ಎಂದು ನಾರದರನ್ನು ತನ್ನ ಅಂಶವೆಂದೇ ಸಾರಿದ್ದಾನೆ. ಅವರು ತಪಸ್ಸಿನಿಂದ ಸಕಲ ಪಾಪಗಳನ್ನೂ ಕಳೆದುಕೊಂಡು ಸತ್ಯಸಂಧರಾಗಿ, ವೇದವೇದಾಂಗಗಳ ಮರ್ಮವನ್ನು ಅರ್ಥಮಾಡಿಕೊಂಡು, ಅದನ್ನು ಎಲ್ಲರಿಗೂ ತಿಳಿಯಹೇಳುತ್ತಿದ್ದರು. ನಾರದರು ಬ್ರಹ್ಮನ ಹತ್ತು ಮಂದಿ ಮಾನಸಪುತ್ರರಲ್ಲಿ ಒಬ್ಬರು. ‘ನಾರಂ’ ಎಂದರೆ ನರರಿಗೆ ಸಂಬಂಧಿಸಿದ ಧರ್ಮ. ಅದನ್ನು ಚೆನ್ನಾಗಿ ಅರ್ಥಮಾಡಿಕೊಂಡು, ಸಾಮಾನ್ಯ ಜನರಿಗೂ ತಿಳಿಯುವಂತೆ ಹೇಳುತ್ತಿದ್ದವರು ನಾರದರು. ಅಂದು ದೇವತೆಗಳು ಮತ್ತು ‘ರಾಕ್ಷಸರು – ಇಬ್ಬರಲ್ಲಿಯೂ ಧೈರ್ಯವಾಗಿ ಮಾತನಾಡುತ್ತಿದ್ದವರು ನಾರದರೊಬ್ಬರೇ. ಸಕಾಲದಲ್ಲಿ ಅವರು ಎಲ್ಲರನ್ನೂ ಎಚ್ಚರಿಸುತ್ತಿದ್ದರು. ಭಾಗವತ ಮಹಾಪುರಾಣದಲ್ಲಿ ನಾರದರ ಪೂರ್ವಜನ್ಮವೃತ್ತಾಂತ ಬರುತ್ತದೆ. ತಮ್ಮ ಪೂರ್ವಜನ್ಮವನ್ನು ಕುರಿತು ಸ್ವತಃ ನಾರದರು ಹೇಳಿದ್ದನ್ನು ವ್ಯಾಸರು ಅಲ್ಲಿ ಬರೆದಿದ್ದಾರೆ. ನಾರದರು ಹಿಂದಿನ ಜನ್ಮದಲ್ಲಿ ವೇದಾಧ್ಯಯನಶೀಲರಾದ ಬ್ರಾಹ್ಮಣರೊಬ್ಬರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ದಾಸಿಯೊಬ್ಬಳ ಪುತ್ರರಾಗಿದ್ದರು. ಒಮ್ಮೆ ಮಳೆಗಾಲ ದಲ್ಲಿ ಕೆಲವು ಸಂನ್ಯಾಸಿಗಳು ಚಾತುರ್ಮಾಸ್ಯವ್ರತಕ್ಕಾಗಿ ಆ ಬ್ರಾಹ್ಮಣರ ಮನೆಯಲ್ಲಿ ತಂಗಿದ್ದರು. ಈ ದಾಸೀಪುತ್ರ ಆ ಸಂನ್ಯಾಸಿಗಳ ಸೇವೆಗೆ ನಿಯಮಿಸಲ್ಪಟ್ಟನು. ಬ್ರಾಹ್ಮಣರ ಈ ಬಾಲಕನ ನಿಷ್ಠಾಪೂರ್ವಕ ಸೇವೆಯಿಂದ ಸಂನ್ಯಾಸಿಗಳೆಲ್ಲ ಸಂತುಷ್ಟರಾದರು. ಅವರು ಪ್ರತಿದಿನವೂ ಮಾಡುತ್ತಿದ್ದ ಕೃಷ್ಣಕಥೆಯ ಗಾಯನ-ಪಾರಾಯಣವನ್ನು ಕೇಳಿ ಬಾಲಕನಲ್ಲಿ ಭಗವದ್ಭಕ್ತಿ ಮೊಳೆಯಿತು. ಸಂನ್ಯಾಸಿಗಳು ನಡೆಸುತ್ತಿದ್ದ ವೇದಾಂತ ಚರ್ಚೆಗಳನ್ನೂ ಆತ ಆಸಕ್ತಿಯಿಂದ ಕೇಳುತ್ತಿದ್ದನು. ಆ ಸಂನ್ಯಾಸಿಗಳೂ ಬಾಲಕನಲ್ಲಿ ಕರುಣೆ ತೋರಿ, ಕೆಲವು ಮಂತ್ರೋಪದೇಶಗಳನ್ನು ಮಾಡಿದರು. ಚಾತುರ್ಮಾಸ್ಯ ಕಳೆದು ಸಂನ್ಯಾಸಿಗಳು ಹೊರಟುಹೋದರು. ಅದಾಗಿ ಕೆಲವೇ ದಿನಗಳಲ್ಲಿ ಬಾಲಕನ ತಾಯಿಯು ಹಾವು ಕಡಿದು ಸತ್ತುಹೋದಳು. ಏಕಾಂಗಿಯಾದ ಬಾಲಕ, ಆ ಮನೆಯನ್ನು ತೊರೆದು ಕಾಡನ್ನು ಸೇರಿ, ಧ್ಯಾನಯೋಗದಿಂದ ಪರಮಾತ್ಮನ ಸಾಕ್ಷಾತ್ಕಾರ ಪಡೆದನು. ಅನಂತರ ದೇಹಾವಸಾನದವರೆಗೂ ಭೂಮಿಯಲ್ಲೇ ಸಂಚರಿಸುತ್ತ, ಭಗವಂತನ ನಾಮಸಂಕೀರ್ತನೆಯಲ್ಲಿ ಕಾಲಕಳೆಯುತ್ತಿದ್ದನು. ಈ ಭಕ್ತಿಯ ಪ್ರಭಾವದಿಂದಲೇ ಮರುಜನ್ಮದಲ್ಲಿ ದೇವರ್ಷಿಯ ಪದವನ್ನು ಪಡೆದು ನಾರದರಾಗಿ ಲೋಕವಿಖ್ಯಾತಿಯನ್ನು ಪಡೆದರು. ನಾರದರು ತ್ರಿಲೋಕ ಸಂಚಾರಿಗಳು. ಅವರು ಹಾಗೆ ನಿತ್ಯನಿರಂತರ ಸಂಚಾರಿ ಗಳಾಗುವುದಕ್ಕೆ ದಕ್ಷನು ಕೊಟ್ಟ ಶಾಪ ಮೂಲಕಾರಣ. ಅದು ನಡೆದಿದ್ದು ಹೀಗೆ: ಪ್ರಾಚೇತಸನು ಭಗವಂತನ ಸಂಕಲ್ಪದಂತೆ ಪುರಂಜನ ಪುತ್ರಿಯನ್ನು ವಿವಾಹ ವಾಗಿ ಅವಳಲ್ಲಿ ಹರ್ಯಶ್ವರೆಂದು ಕರೆಯಲ್ಪಡುವ ಹತ್ತುಸಾವಿರ ಮಂದಿ ಮಕ್ಕಳನ್ನು ಪಡೆದನು. ಇವರೆಲ್ಲರೂ ಒಟ್ಟಾಗಿ ಒಂದೇ ಧರ್ಮವನ್ನು ಅನುಸರಿಸುವವರಾಗಿದ್ದರು. ಅವರೆಲ್ಲರೂ ತಂದೆಯಿಂದ ಪ್ರಜಾಭಿವೃದ್ಧಿಗಾಗಿ ನಿಯಮಿಸಲ್ಪಟ್ಟವರಾಗಿ ಸಿಂಧೂ ನದಿಯು ಸಮುದ್ರದೊಡನೆ ಸೇರುವ ‘ನಾರಾಯಣ ಸರಸ್ಸು’ ಎಂಬ ಪುಣ್ಯತೀರ್ಥದಲ್ಲಿ ತಪಸ್ಸನ್ನು ಆರಂಭಿಸಿದರು. ಅಲ್ಲಿಗೆ ಬಂದ ನಾರದರು ಹರ್ಯಶ್ವರನ್ನು ಕುರಿತು, “ಕರ್ಮಮಾರ್ಗದಲ್ಲಿ ಹೋಗುವ ಜೀವನು, ಗುಹೆಯಲ್ಲಿ ಪ್ರವೇಶಿಸಿದವನು ಅಲ್ಲಿಯೇ ಸಿಕ್ಕಿ ನರಳುವಂತೆ ತೊಳಲುವನು” ಎಂದು ಉಪದೇಶ ಮಾಡಿದರು. ಅಂತೆಯೇ ಹರ್ಯಶ್ವರು ಈ ಉಪದೇಶವನ್ನು ಅರ್ಥಮಾಡಿಕೊಂಡು ಮುಕ್ತಿಮಾರ್ಗವನ್ನು ಅನುಸರಿಸಿದರು. ಈ ವಿಷಯವನ್ನು ತಿಳಿದ ದಕ್ಷನು ತನ್ನ ಪತ್ನಿಯಾದ ಪಾಂಚಜನಿ ಯಲ್ಲಿ ಶಬಲಾಶ್ವರೆಂಬ ಒಂದು ಸಾವಿರ ಮಕ್ಕಳನ್ನು ಪಡೆದನು. ಅವರೂ ಎಲ್ಲರೂ ನಾರದರಿಂದ ಉಪದೇಶ ಹೊಂದಿ, ಸಹೋದರರ ಮಾರ್ಗವನ್ನೇ ಅನುಸರಿಸಿದರು. ಇದರಿಂದ ಕುಪಿತನಾದ ದಕ್ಷನು ನಾರದರಿಗೆ, “ನಿನಗೆ ನಿಲ್ಲಲು ನೆಲೆಯಿಲ್ಲದಿರಲಿ” ಎಂದು ಶಾಪ ಕೊಟ್ಟನು; ಅದನ್ನು ಪ್ರೀತಿಯಿಂದಲೇ ಸ್ವೀಕರಿಸಿದ ನಾರದರು ನಿತ್ಯನಿರಂತರ ಸಂಚಾರಿಗಳಾದರು. ಆದಿಕವಿ ವಾಲ್ಮೀಕಿಗಳಿಗೆ ರಾಮಾಯಣದ ಕಥೆಯನ್ನು ಬೋಧಿಸಿ. ಆದಿಕಾವ್ಯದ ರಚನೆಗೆ ಕಾರಣರಾದವರೂ ನಾರದರೇ. ಮಹಾಭಾರತದಲ್ಲಿಯೂ ಅನೇಕ ಕಡೆಗಳಲ್ಲಿ ನಾರದರ ಉಲ್ಲೇಖ ಬರುತ್ತದೆ. ದೌಪದಿ ಸ್ವಯಂವರದಲ್ಲಿ ಅರ್ಜುನ ಮತ್ಸಯಂತ್ರವನ್ನು ಭೇದಿಸಿ, ಕುಂತಿಯ ಅಪೇಕ್ಷೆಯಂತೆ ಪಾಂಡವರೈವರನ್ನೂ ಬ್ರೌಪದಿ ಮದುವೆಯಾಗಿ, ಎಲ್ಲರೂ ಹಸ್ತಿನಾಪುರಕ್ಕೆ ಬಂದರು. ಭೀಷ್ಮ-ಧೃತರಾಷ್ಟ್ರರ ನಿರ್ಣಯದಂತೆ ಪಾಂಡವರಿಗೆ ಅರ್ಧರಾಜ್ಯ ದೊರೆಯಿತು. ಅವರು ಇಂದ್ರಪ್ರಸ್ಥವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯಭಾರ ಪ್ರಾರಂಭಿಸಿದರು. ಈ ಸಮಯದಲ್ಲಿ ನಾರದರು ಅಲ್ಲಿಗೆ ಆಗಮಿಸಿದರು. ಪಾಂಡವರು ನಾರದರನ್ನು ಸತ್ಕರಿಸಿ, ಆಶಿರ್ವಾದ ಕೋರಿದರು. ಆಗ ನಾರದರು, “ಸುಂದೋಪಸುಂದರೆಂಬ ಸೋದರರು, ರಾಕ್ಷಸರು. ಅವರು ತಪಸ್ಸುಮಾಡಿ, ವರ ಪಡೆದು ಬಲಶಾಲಿಗಳಾಗಿ ಮರೆಯುತ್ತಿದ್ದರು. ದೇವತೆಗಳಿಗೂ బారణరిగుణ య&మనిగళగుణ ఆవర కుభటళ కాళలారడాయు. ಅವರೆಲ್ಲರೂ ಬ್ರಹ್ಮನಲ್ಲಿ ಮೊರೆಯಿಟ್ಟರು. ಆಗ ಬ್ರಹ್ಮನು ‘ತಿಲೋತ್ತಮೆ’ ಎಂಬ ರೂಪಾತಿಶಯಕ್ಕೆ ಮನಸೋತು, ಅವಳನ್ನು ಪಡೆಯಲು ಪೈಪೋಟಿಗಿಳಿದರು. ಆಗ ಅಪ್ಸರೆಯನ್ನು ಸೃಷ್ಟಿಸಿ, ಅವರ ಬಳಿಗೆ ಕಳಿಸಿದನು. ಸುಂದೋಪಸುಂದರು ಅವಳ ತಿಲೋತ್ತಮೆಯು ಉಪಾಯವಾಗಿ, ಅವರಿಬ್ಬರನ್ನೂ ಪರಸ್ಪರ ಕಾದಾಟಕ್ಕೆ ಪ್ರೇರೇಪಿಸಿ, ಗೆದ್ದವರಿಗೆ ತಾನು ದೊರೆಯುವುದಾಗಿ ಹೇಳಿದಳು. ಅವಳ ಮಾತಿನಂತೆ ಇಬ್ಬರೂ ಪರಸ್ಪರ ಕಾದಾಡಿ ಪ್ರಾಣಬಿಟ್ಟರು. “ಈ ಕಥೆಯನ್ನು ಏಕೆ ಹೇಳುತ್ತಿದ್ದೇನೆಂದರೆ, ಪಾಂಚಾಲರಾಜಪುತ್ರಿಯನ್ನು ನೀವು ಐವರೂ ವರಿಸಿರುವಿರಿ. ನಿಮೈವರಿಗೂ ಆಕೆ ಧರ್ಮಪತ್ನಿಯಾಗಿರುವಳು. ಆದುದರಿಂದ ನೀವೆಲ್ಲರೂ ಅವಳೊಡನೆ ವ್ಯವಹರಿಸಬೇಕಾಗುತ್ತದೆ, ಅಂತಹ ಸಂದರ್ಭದಲ್ಲಿ ನಿಮ್ಮಲ್ಲಿ – ಸುಂದೋಪಸುಂದರಲ್ಲಾದಂತೆ – ವೈಮನಸ್ಯ ಉಂಟಾಗ ಬಾರದು. ಅದಕ್ಕಾಗಿ ನೀವೊಂದು ಸ್ಪಷ್ಟ ನಿಯಮವನ್ನು ರೂಪಿಸಿಕೊಳ್ಳುವುದು ಒಳ್ಳೆಯದು” ಎಂದು ಹೇಳಿದರು. ನಾರದರ ಸಲಹೆಯಂತೆಯೇ ಪಾಂಡವರು ವರ್ಷಕ್ಕೊಬ್ಬರು ಸರತಿಯಂತೆ ದೌಪದಿಯ ಜೊತೆಗಿರುವುದೆಂದೂ ಆ ಸಮಯದಲ್ಲಿ ಅವರನ್ನು ಉಳಿದವರಲ್ಲಿ ಯಾರಾದರೂ ನೋಡಿದರೆ ಅವರು ತೀರ್ಥಯಾತ್ರೆ ಮಾಡಬೇಕೆಂದೂ ನಿಯಮ ಮಾಡಿಕೊಂಡರು. ಇನ್ನೊಮ್ಮೆ, ಮಯನಿರ್ಮಿತ ಸಭಾಭವನದಲ್ಲಿ ನಾರದರು ಯುಧಿಷ್ಠಿರನಿಗೆ ರಾಜನೀತಿಯನ್ನು ಉಪದೇಶಿಸಿದ್ದುದರ ಉಲ್ಲೇಖ ಸಭಾಪರ್ವದಲ್ಲಿ ಬರುತ್ತದೆ. ನಾರದರು ಯುಧಿಷ್ಠಿರನ ಬಳಿ ಅವನ ಆಡಳಿತಕ್ಕೆ ಸಂಬಂಧಿಸಿದಂತೆ ಸುಮಾರು ನೂರಿಪತ್ತೈದು ಪ್ರಶ್ನೆಗಳನ್ನು ಕೇಳುತ್ತಾರೆ. ಅವರಿಬ್ಬರ ನಡುವಿನ ಪ್ರಶೋತ್ತರ ರೂಪದ ಸಂವಾದದ ಈ ಭಾಗವನ್ನು ‘ಕಶ್ಚಿತ್‌ಸರ್ಗ’ ಎಂದೇ ಕರೆಯಲಾಗಿದೆ. ನಾರದರ ರಾಜನೀತಿನಿಪುಣತೆ ಇಲ್ಲಿ ಸೊಗಸಾಗಿ ವ್ಯಕ್ತವಾಗಿದೆ. ಈ ಮಾತುಕತೆಯ ನಂತರ ಯುಧಿಷ್ಠಿರನು ‘ಮೂರುಲೋಕಗಳಲ್ಲಿರುವ ಶ್ರೇಷ್ಠ ಸಭಾಭವನ’ಗಳನ್ನು ಕುರಿತು ತಿಳಿಯಲು ಬಯಸುತ್ತಾನೆ. ಆಗ ನಾರದರು, ಇಂದ್ರ, ಯಮ, ವರುಣ, ಬ್ರಹ್ಮ- ಮೊದಲಾದವರ ಸಭೆಗಳನ್ನು ವರ್ಣಿಸುತ್ತ ಪಾಂಡುರಾಜನು ಯಮಸಭೆಯಲ್ಲಿ ಇದ್ದಾನೆಂದು ತಿಳಿಸುತ್ತಾರೆ. ಇದನ್ನು ಕೇಳಿ ಕಳವಳಗೊಂಡ ಯುಧಿಷ್ಠಿರನನ್ನು ಕುರಿತು, “ನಿನ್ನ ತಂದೆಗೆ ಸದ್ಗತಿ ದೊರೆಯಬೇಕಾದರೆ ನೀನು ರಾಜಸೂಯಯಾಗವನ್ನು ಮಾಡಬೇಕು” ಎನ್ನುತ್ತಾರೆ. ಹೀಗೆ ನಾರದರಿಂದ ದೊರೆತ ಸಲಹೆಯಂತೆ ಯುಧಿಷ್ಠಿರನು ನಡೆಸಿದ ರಾಜಸೂಯಯಾಗವೇ ಮುಂದಿನ ದ್ಯೋತ-ಅನುದ್ಯೋತ-ವನವಾಸ-ಕುರುಕ್ಷೇತ್ರ ಯುದ್ಧಗಳಿಗೂ ಕಾರಣವಾಗುತ್ತದೆ. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-೧ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಯಾಯಾವರ ವಂಶದ ಉಗ್ರ ತಪಸ್ವಿಗಳಾದ ಜರತ್ಕಾರು ಮಹರ್ಷಿ ವ್ಯಂಗ್ಯವಾಡಿ, ತೊಡೆ ತಟ್ಟಿ ಕಣ್ವ ಮಹರ್ಷಿಗಳಿಗೆ ಅಪಮಾನ ಮಾಡಿದ್ದ ದುರ್ಯೋಧನ