ಜರತ್ಕಾರು ಮಹರ್ಷಿಗಳು ಬ್ರಹ್ಮಚರ್ಯದಿಂದಿದ್ದು ನಿಯತಾಹಾರರಾಗಿ ಉಗ್ರ ತಪಸ್ಸಿನಲ್ಲಿ ನಿರತರಾಗಿದ್ದವರು. ಅವರದು ಯಾಯಾವರವೆಂಬ ವಂಶ. ಈ ವಂಶ ದವರು ಒಂದೊಂದು ಹಳ್ಳಿಯಲ್ಲಿ ಒಂದೊಂದು ರಾತ್ರಿಯನ್ನು ಕಳೆಯುತ್ತ ಪ್ರತಿಯೊಂದು ಪಕ್ಷದಲ್ಲಿಯೂ ಅಗ್ನಿಹೋತ್ರಾದಿಗಳನ್ನು ಮಾಡುತ್ತ ಸಂಚರಿಸುತ್ತಿದ್ದವರು. ಧಾರ್ಮಿಕರೂ ಕಠೋರ ವ್ರತಾಚರಣೆಯುಳ್ಳವರೂ ಆದ ಜರತ್ನಾರುಮಹರ್ಷಿಗಳೂ ಹೀಗೆಯೇ ಪ್ರಪಂಚಪರ್ಯಟನೆ ಮಾಡುತ್ತ ತೀರ್ಥಕ್ಷೇತ್ರಗಳನ್ನು ಸಂದರ್ಶಿಸುತ್ತ ಪ್ರಯಾಣ ಮಾಡುತ್ತಿದ್ದರು. ಅವರಿಗೆ ಇಂತಹುದೇ ಆಹಾರವು ಬೇಕೆಂದಾಗಲೀ ಇಂತಹ ಸ್ಥಳವೇ ತಂಗಲು ಆಗಬೇಕೆಂದಾಗಲೀ ಆಸೆಯಿರಲಿಲ್ಲ, ಅವರು ನಿದ್ರಾಹಾರಗಳನ್ನು ವರ್ಜಿಸಿ ಜಿತೇಂದ್ರಿಯರಾಗಿ ಕಠಿಣ ಜೀವನ ನಡೆಸುತ್ತಿದ್ದರು. ಅದೊಂದು ದಿನ ಸಂಚಾರದಲ್ಲಿದ್ದ ಜರತ್ತಾರು ಮಹರ್ಷಿ ಒಮ್ಮೆ ಒಂದು ಸುರಂಗದಲ್ಲಿ ತಲೆಕೆಳಗಾಗಿ ನೇತಾಡುತ್ತಿದ್ದ ಕೆಲವರನ್ನು ಕಂಡರು. ನೇತಾಡುತ್ತಿದ್ದವರು ಹಿಡಿದಿದ್ದ ವೀರಣಸ್ತಂಭವನ್ನು ಒಂದು ಇಲಿಯು ಕಡಿಯುತ್ತಿದ್ದಿತು. ಅಂತಹವರನ್ನು ಕಂಡು, ಜರತ್ಕಾರು ಮಹರ್ಷಿಗಳು, “ನೀವು ಯಾರು? ನೀವು ಹಿಡಿದಿರುವ ಆಧಾರವನ್ನು ಇಲಿಯು ಕಡಿಯುತ್ತಿದೆ. ಕೆಲವು ದಿನಗಳಲ್ಲಿಯೇ ಅದು ಬಿದ್ದು ಹೋಗಬಹುದು. ಆಗ ನಿಮ್ಮ ಪಾಡೇನು?” ಎಂದು ಪ್ರಶ್ನಿಸಿದರು. ಆಗ ಅಲ್ಲಿದ್ದವರು. “ನಾವು ಯಾಯಾವರ ವಂಶಕ್ಕೆ ಸೇರಿದ ಪಿತೃಗಳು. ನಮ್ಮ ವಂಶದಲ್ಲಿ ಜರತ್ಕಾರುವೆಂಬ ಒಬ್ಬನೇ ಒಬ್ಬನು ಉಳಿದುಕೊಂಡಿದ್ದಾನೆ. ಅವನು ಯಾವಾಗಲೂ ತಪೋನಿರತನಾಗಿರುವುದರಿಂದ ಅವನ ನಂತರ ನಾವೆಲ್ಲ ಅಧಃಪತಿತರಾಗುತ್ತೇವೆ” ಎಂದು ಹೇಳಿದರು. ಆಗ ಜರತ್ಕಾರು ತಮ್ಮ ಪಿತೃಗಳನ್ನು ಉದ್ಧರಿಸಲು ಮನಸ್ಸು ಮಾಡಿದರು. ಸಂಸಾರದಲ್ಲಿ ಸಿಕ್ಕಿಹಾಕಿಕೊಳ್ಳುವುದು, ತಮಗಾಗಿ ಧನಸಂಚಯ ಮಾಡುವುದು ಅವರಿಗೆ ಷ್ಟವಿರಲಿಲ್ಲ. ಆದುದರಿಂದ ತಮ್ಮ ವಿವಾಹಕ್ಕೆ ತಾವೇ ಕೆಲವು ನಿಬಂಧನೆಗಳನ್ನು ಹಾಕಿಕೊಂಡರು: ಕನೈಯೂ ‘ಜರತ್ಕಾರು’ ಎಂಬ ಹೆಸರಿನವಳೇ ಆಗಿರಬೇಕು; ಅವಳ ಉದೆತಾಯಿಯರೇ ಹುಡುಕಿಕೊಂಡು ಬಂದು ಕನ್ಯಾದಾನ ಮಾಡಬೇಕೇ ಹೊರತು, ಸಾವು ಹುಡುಕಿಕೊಂಡು ಹೋಗಬಾರದು; ಹುಡುಗಿಯನ್ನು ಬಂಧುಗಳು ಭಿಕ್ಷೆಯ ರೂಪದಲ್ಲಿ ಕೊಡಬೇಕೇ ಹೊರತು ತಮ್ಮಿಂದ ಏನನ್ನೂ ಅಪೇಕ್ಷಿಸಕೂಡದು. ಹೀಗೇ ಕೆಲವು ಕಾಲ ಕಳೆಯಿತು. ಒಂದು ದಿನ ಜರತ್ಕಾರುಮಹರ್ಷಿ ಅರಣ್ಯ ಮಧ್ಯದಲ್ಲಿ ನಿಂತು ಗಟ್ಟಿಯಾಗಿ ‘ಕನ್ಯಾಭಿಕ್ಷೆಯನ್ನು ಬೇಡುತ್ತಿದ್ದೇನೆ, ನೀಡಿರಿ’ ಎಂದು ಮೂರು ಬಾರಿ ಕೂಗಿದರು. ಇದನ್ನೇ ಕಾಯುತ್ತಿದ್ದ ವಾಸುಕಿಸರ್ಪನು ತನ್ನ ತಂಗಿಯನ್ನು ಕರೆದುಕೊಂಡು ಅಲ್ಲಿಗೆ ಬಂದನು. ಮಹರ್ಷಿಗಳನ್ನು ಕುರಿತು “ಬ್ರಾಹ್ಮಣೋತ್ರಮ ನಿನ್ನ ಅಪೇಕ್ಷೆಯಂತೆ ಈ ನನ್ನ ತಂಗಿಯೂ ‘ಜರತ್ನಾರು’ ಎಂಬ ಹೆಸರಿನವಳೇ ಆಗಿರುತ್ತಾಳೆ. ನಿನಗೆ ಭಿಕ್ಷಾರೂಪವಾಗಿ ಕೊಡಲೆಂದೇ ನಾನಿವಳನ್ನು ಇದುವರೆಗೂ ಸಂರಕ್ಷಿಸಿರುವೆನು” ಎಂದು ಹೇಳಿದನು. ಈ ಸಂದರ್ಭಕ್ಕಾಗಿ ವಾಸುಕಿಯೂ ಬಹಳ ಕಾಲದಿಂದ ಕಾದಿದ್ದನು. ಅದಕ್ಕೊಂದು ಬಲವಾದ ಕಾರಣವೂ ಇತ್ತು. ಕಶ್ಯಪರ ಪತ್ನಿಯರಾದ ಕದ್ರು ಮತ್ತು ವಿನತೆ ಇಬ್ಬರೂ ಒಮ್ಮೆ ಉಚ್ಚೆ ಶ್ರವಸ್ ಎಂಬ ಕುದುರೆಯನ್ನು ನೋಡಲು ಹೋದರು. ದಾರಿಯಲ್ಲಿ ಹೋಗುವಾಗ ಕುದುರೆಯ ಬಣ್ಣವನ್ನು ಕುರಿತು ಇಬ್ಬರಲ್ಲೂ ಚರ್ಚೆ ನಡೆಯಿತು. ಈ ಸಂದರ್ಭದಲ್ಲಿ ಕುದುರೆ ಬಿಳಿಯ ಬಣ್ಣದ್ದೆಂದು ವಿನತೆಯೂ ಕುದುರೆಯ ಬಾಲ ಕಪ್ಪು ಎಂದು ಕದ್ರುವೂ ಪರಸ್ಪರ ವಾದಿಸಿದರು. ವಾದ ತೀವ್ರಸ್ವರೂಪ ಪಡೆದು ಅಂತಿಮವಾಗಿ ಇಬ್ಬರೂ ಈ ವಿಷಯವಾಗಿ ಪಂದ್ಯ ಕಟ್ಟಿದರು. ಇಷ್ಟೆಲ್ಲ ಆಗುವಷ್ಟರಲ್ಲಿ ಅಂದು ಅವರಿಗೆ ಕುದುರೆಯು ನೋಡಲು ಸಿಗಲಿಲ್ಲ. ಕುದುರೆಯು ಬಿಳಿಯ ಬಣ್ಣದ್ದೆಂದು ಕದ್ರುವಿಗೂ ತಿಳಿದಿತ್ತು. ಆದರೂ ಅವಳು ಹೇಗಾದರೂ ಮಾಡಿ ಕುದುರೆಯ ಬಾಲ ಕಪ್ಪೆಂದು ಸಾಧಿಸಿ, ವಿನತೆಯನ್ನು ತನ್ನ ದಾಸಿಯನ್ನಾಗಿ ಮಾಡಿಕೊಳ್ಳಲೇಬೇಕೆಂದು ನಿಶ್ಚಯಿಸಿದ್ದಳು. ಅದಕ್ಕಾಗಿ ಅವಳು ತನ್ನ ಮಕ್ಕಳಾದ ಸರ್ಪಗಳನ್ನು ಕರೆದು, “ಮಕ್ಕಳಿರಾ! ನೀವೆಲ್ಲರೂ ಸೇರಿ ನಾನು ನನ್ನ ಸವತಿಯ ದಾಸಿಯಾಗುವುದನ್ನು ತಪ್ಪಿಸಬೇಕು. ಅದಕ್ಕಾಗಿ ನೀವೆಲ್ಲರೂ ಹೋಗಿ ಕುದುರೆಯ ಬಾಲಕ್ಕೆ ಅಂಟಿಕೊಳ್ಳಿರಿ. ನಾವು ನೋಡಲು ಹೋದಾಗ ಕುದುರೆಯ ಬಾಲ ಕಪ್ಪಾಗಿ ಕಂಡರೆ ವಿನತೆಯು ನನ್ನ ದಾಸಿಯಾಗುವಳು” ಎಂದು ಆದೇಶಿಸಿದಳು. ಆದರೆ ಸರ್ಪಗಳು, “ಇಂತಹ ಅಕಾರ್ಯಕ್ಕೆ ನಮ್ಮನ್ನು ಪ್ರೇರೇಪಿಸಬೇಡಮ್ಮ” ಎಂದು ಹೇಳಿ, ಅವಳ ಆದೇಶವನ್ನು ಧಿಕ್ಕರಿಸಿಬಿಟ್ಟವು. ಕದ್ರುವಿಗೆ ನಿರಾಶೆಯಾಯಿತು. ಕೋಪವೂ ಉಂಟಾಯಿತು. ಅವಳು, “ನೀವೆಲ್ಲರೂ ಜನಮೇಜಯನ ಯಾಗದಲ್ಲಿ ಬಿದ್ದು ಭಸ್ಮ ವಾಗಿರಿ” ಎಂದು ತನ್ನ ಮಕ್ಕಳಿಗೇ ಶಾಪಕೊಟ್ಟಳು. ಇದನ್ನು ಕೇಳಿ ಭಯಗೊಂಡ ಸರ್ಪಗಳು, ತಾಯಿಯ ಆದೇಶವನ್ನು ಪಾಲಿಸಿದರೆ ತಮ್ಮನ್ನು ಶಾಪದಿಂದ ವಿಮುಕ್ತ ಗೊಳಿಸಬಹುದೆಂದು ಭಾವಿಸಿ, ಆಕೆಯ ಅಪೇಕ್ಷೆಯಂತೆ ಉಚ್ಛಿಶ್ರವಸ್ಸಿನ ಬಾಲಕ್ಕೆ ಅಂಟಿಕೊಂಡವು. ಮರುದಿನ ಕದ್ರು-ವಿನತೆಯರು ಕುದುರೆಯನ್ನು ನೋಡಲು ಹೋದಾಗ ಅದರ ಬಾಲವು ಕದ್ರು ಹೇಳಿದ್ದಂತೆಯೇ ಕಪ್ಪು ಬಣ್ಣದ್ದಾಗಿತ್ತು. ವಿನತೆ ಪಂದ್ಯದಲ್ಲಿ ಸೋತು, ಕದ್ರುವಿನ ದಾಸಿಯಾದಳು̤ ಇತ್ತ, ಸರ್ಪಗಳಿಗೆಲ್ಲ ತಾಯಿಯ ಶಾಪ ಫಲಿಸುವ ಭೀತಿ ಕಾಡತೊಡಗಿತು. ಸರ್ಪಗಳ ಪ್ರಮುಖನಾದ ಆದಿಶೇಷನು ತಾಯಿಯ ಶಾಪವಿಮೋಚನೆಗಾಗಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡಿದನು. ಅವನ ತಪಸ್ಸಿಗೆ ಮೆಚ್ಚಿದ ಬ್ರಹ್ಮನು “ಯಾಯಾವರಕುಲದ ಜರತ್ಕಾರುಮಹರ್ಷಿಯಿಂದ ವಾಸುಕಿಯ ತಂಗಿಯಾದ ಜರತ್ಕಾರುವಿನಲ್ಲಿ ಜನಿಸುವ ಆಸ್ತಿಕನು ಸರ್ಪಯಾಗವನ್ನು ನಿಲ್ಲಿಸುವನು” ಎಂದು ಹೇಳಿದನು. ಈ ಕಾರಣಕ್ಕಾಗಿಯೇ ವಾಸುಕಿಯು ಜರತ್ಕಾರು ಮಹರ್ಷಿಗಾಗಿ ಕಾದಿದ್ದನು. ಅವನ ಅಪೇಕ್ಷೆ ಈಡೇರುವ ಸಮಯ ಈಗ ಸನ್ನಿಹಿತವಾಯಿತು. ವಿವಾಹವು ನಡೆದ ನಂತರ ಜರತ್ಕಾರುಮಹರ್ಷಿ ಸಂಸಾರಕ್ಕಾಗಿ ಧನಸಂಗ್ರಹ ಮಾಡಲು ಸಿದ್ಧರಿರಲಿಲ್ಲ. ಅವರ ಜತೆಯಲ್ಲಿಯೇ ಪತ್ನಿ ಜರತ್ಕಾರುವೂ ತಪಸ್ವಿನಿಯಂತೆ ಇರಬೇಕಾಗಿತ್ತು. ಅವರ ಅಪೇಕ್ಷೆಯಂತೆ ತಂಗಿಯ ಸಂಸಾರದ ಹೊಣೆಯನ್ನು ವಾಸುಕಿಯೇ ಹೊರಲು ಸಿದ್ಧನಾದನು. ಜೊತೆಗೆ ಮತ್ತೊಂದು ನಿಯಮ ವನ್ನು ಜರತ್ಕಾರುಗಳು ಮುಂದಿಟ್ಟರು. ಪತ್ನಿಯು ತಮಗೆ ಅಪ್ರಿಯವಾದ ಕಾರ್ಯವನ್ನು ಮಾಡಿದ ಕೂಡಲೇ ಅವಳನ್ನು ತ್ಯಜಿಸುವುದಾಗಿ ಹೇಳಿದರು. ವಾಸುಕಿಯು ಅದಕ್ಕೂ ಒಪ್ಪಿಕೊಂಡನು. ಅನಂತರ ಮಂತ್ರವಿದರಲ್ಲಿ ಶ್ರೇಷ್ಠರಾದ ಜರತ್ಕಾರುಗಳು, ನಾಗಕನೈಯಾದ ಜರತ್ಕಾರುವನ್ನು ವಿಧಿಪೂರ್ವಕ ವಿವಾಹವಾದರು. ಆಕೆಯಾದರೋ ಪತಿಯ ಆಶಯವನ್ನು ಅನುಸರಿಸಿಕೊಂಡು, ಅವರ ಇಂಗಿತದಂತೆ ನಡೆದುಕೊಳ್ಳುತ್ತ, ತನ್ನಿಂದ ಯಾವುದೇ ಅಪರಾಧವು ನಡೆಯದಂತೆ ಎಚ್ಚರವಾಗಿದ್ದಳು. ಆಕಾರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಭಾಗ-೧ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಹೆಬ್ಬೆರಳಿನ ಗಾತ್ರದಷ್ಟು ದೇಹವನ್ನು ಹೊಂದಿದ್ದ ವಾಲಖಿಲ್ಯ ಮಹರ್ಷಿಗಳು ನಾರದ ಜಯಂತಿ: ದಾಸಿಪುತ್ರ ದೇವರ್ಷಿಯಾಗಿ ವಾಲ್ಮೀಕಿ ಮಹರ್ಷಿಗಳಿಗೆ ರಾಮಾಯಣ ಬೋಧಿಸಿದ ನಾರದರು