ಆಚಾರ್ಯಶ್ಚ ಪಿತಾ ಚೈವ ಮಾತಾ ಭ್ರಾತಾ ಚ ಪೂರ್ವಜಃ| ನಾರ್ತೇನಾಪ್ಯವಮಾನ್ತವ್ಯಾ ಬ್ರಹ್ಮಣೇನ ವಿಶೇಷತಃ|| ಈ ಶ್ಲೋಕವು ವ್ಯಕ್ತಿಯ ಜೀವನದಲ್ಲಿನ ವಿವಿಧ ಪ್ರಮುಖ ವ್ಯಕ್ತಿಗಳಿಗೆ ಗೌರವವನ್ನು ಒತ್ತಿಹೇಳುವ ನೈತಿಕ ಮಾರ್ಗಸೂಚಿಯನ್ನು ವಿವರಿಸುತ್ತದೆ, ಇದರಲ್ಲಿ ಶಿಕ್ಷಕರು, ಕುಟುಂಬ ಸದಸ್ಯರು, ಪೂರ್ವಜರು ಮತ್ತು ವಿಶೇಷವಾಗಿ ಬ್ರಾಹ್ಮಣರನ್ನು ಸಾಮಾನ್ಯವಾಗಿ ಜ್ಞಾನ ಮತ್ತು ಆಧ್ಯಾತ್ಮಿಕ ಬುದ್ಧಿವಂತಿಕೆಯ ಪಾಲಕ ಎಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ನೈತಿಕ ಬೆಳವಣಿಗೆ ಮತ್ತು ಸಾಮಾಜಿಕ ಕಾರ್ಯಚಟುವಟಿಕೆಯಲ್ಲಿ ಈ ವ್ಯಕ್ತಿಗಳ ಪಾತ್ರ ನಿರ್ಣಾಯಕವಾಗಿದೆ. ಹೀಗಾಗಿ, ಇಂದಿನಿಂದ ನಮ್ಮ ಭಾರತದ ಮಹಾನ್ ಮಹರ್ಷಿಗಳನ್ನು ನೆನೆಯೋಣ. ಅವರ ಬಗ್ಗೆ ತಿಳಿಯೋಣ. ಪ್ರತಿದಿನ ಒಬ್ಬೊಬ್ಬ ಮಹರ್ಷಿಯ ಕಥೆಯನ್ನು ಹೇಳಲಾಗುತ್ತದೆ. ಈ ಕಥೆಗಳನ್ನು ಡಾ. ಎಸ್ ಹೇಮಲತಾ ಅವರು ಬರೆದ ಪ್ರಾಚೀನ ಭಾರತದ ಮಹರ್ಷಿಗಳು ಪುಸ್ತಕದಿಂದ ತೆಗೆದುಕೊಳ್ಳಲಾಗಿದೆ. ಅಗಸ್ತ್ಯ ಮಹರ್ಷಿ ವಿಂಧ್ಯಪರ್ವತದ ಬೆಳವಣಿಗೆಯನ್ನು ತಡೆದದ್ದು ಅಗಸ್ವರ ಮಹಿಮಾನ್ವಿತ ಪರಿಕ್ರಮಿಸುವುದನ್ನು ವಿಂಧನು ಅನುದಿನವೂ ನೋಡುತ್ತಲೇ ಇದ್ದನು. ದಿನಕಳೆದಂತೆ ಕಾರ್ಯಗಳಲ್ಲಿ ಒಂದು. ಸೂರ್ಯನು ಉದಯಾಸಗಳಲ್ಲಿ ಮೇರುಪರ್ವತವನ್ನು ವಿಂಧನಿಗೆ, ಸೂರ್ಯನು ಮೇರುಪರ್ವತವನ್ನು ಮಾತ್ರ ಗೌರವಿಸುವುದನ್ನು ನೋಡಿ ಖೇದವಾಯಿತು. ಸೂರ್ಯನನ್ನೇ ಸಂಧಿಸಿ. “ಮೇರುವಿನಂತೆಯೇ ನನಗೂ ಪ್ರದಕ್ಷಿಣೆ ಮಾಡಿ ಗೌರವಿಸು” ಎಂದು ಕೇಳಿದನು. ಅದಕ್ಕೆ ಸೂರ್ಯನು “ನಾನು ಸ್ಟೇಚ್ಛೆಯಿಂದ ಮೇರುವಿನ ಪ್ರದಕ್ಷಿಣೆ ಮಾಡುತ್ತಿಲ್ಲ, ಗೌರವಿಸುತ್ತಲೂ ಇಲ್ಲ, ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣರಾದವರು ನನ್ನ ಮಾರ್ಗವನ್ನು ನಿರ್ಣಯಿಸಿ ಬಿಟ್ಟಿದ್ದಾರೆ” ಎಂದನು. ಸೂರ್ಯನ ಮಾತು ಕೇಳಿ ವಿಂಧನಿಗೆ ಬಹಳ ಕೋಪ ಬಂತು. ಸೂರ್ಯನ ಗತಿಯನ್ನೇ ತಡೆಯುವೆನೆಂದು ಎತ್ತರವಾಗಿ ಬೆಳೆಯಲು ಆರಂಭಿಸಿದನು. ದೇವತೆಗಳು ಭೀತರಾಗಿ, ಸೃಷ್ಟಿಕ್ರಮವನ್ನು ಮುರಿಯಬಾರದೆಂದು ಹೇಳಿದರೂ ವಿಂಧ್ಯನು ಕೇಳಲಿಲ್ಲ. ಮೇರುವಿನಂತೆ ತಾನೂ ಆಗಬೇಕೆಂದು ವಿಂಧ್ಯ ಎತ್ತರಕ್ಕೆ ಬೆಳೆಯತೊಡಗಿದ. ಬೆಳೆಯುತ್ತ ಬೆಳೆಯುತ್ತ ಸೂರ್ಯನ ಸಂಚಾರಕ್ಕೇ ಅಡ್ಡಿಯಾದ. ಉತ್ತರದಲ್ಲಿದ್ದ ಸೂರ್ಯ ದಕ್ಷಿಣಕ್ಕೆ ಬರಲೇ ಇಲ್ಲ. ವಿಂಧ್ಯಪರ್ವತದ ದಕ್ಷಿಣಕ್ಕೆ ಹಗಲು-ಇರುಳು ಎಂಬ ವ್ಯತ್ಯಾಸ ಉಳಿಯಲಿಲ್ಲ; ಕತ್ತಲೆ ಕಳೆದು ಬೆಳಗಾಗಲೇ ಇಲ್ಲ. ಸೂರ್ಯನೇ ಇಲ್ಲದೆ ಯಜ್ಞಯಾಗಾದಿಕರ್ಮಗಳೆಲ್ಲ ನಿಂತುಹೋದವು. ಋಷಿಗಳೆಲ್ಲ ಇಂದ್ರನ ಬಳಿಗೆ ಓಡಿದರು. ಇಂದ್ರನು ಬ್ರಹ್ಮನನ್ನು ಪ್ರಾರ್ಥಿಸಿದನು. ಆಗ ಬ್ರಹ್ಮನು “ದೇವೇಂದ್ರ! ಅಗಸ್ತ್ಯರು ಕಾಶಿ ಪಟ್ಟಣದಲ್ಲಿರುವನು. ಅವನನನ್ನು ದಕ್ಷಿಣದಿಕ್ಕಿಗೆ ಕಳುಹಿಸಬೇಕ, ಶಿಷ್ಯನಾದ ವಿಂದ್ಯನು ಗುರುವಾ ಅಗಸ್ತ್ಯ ಬಂದೊಡನೆ ಶರಣಾಗುವನು. ಆಗ ಗುರುವು ಶಿಷ್ಯನಿಗೆ ಎತ್ತರಕ್ಕೆ ಬೆಳೆಯಬೇಡವೆಂದು ಹೇಳಬಹುದು” ಎಂದನು. ದೇವತೆಗಳೂ ಋಷಿಮುನಿಗಳೂ ಇಂದ್ರನ ಜೊತೆಗೆ ಅಗಸ್ತ್ಯರ ಬಳಿಗೆ ಬಂದರು. ದೇವತೆಗಳು ವಿಂಧ್ಯನಿಂದಾಗುತ್ತಿರುವ ಉಪಟಳವನ್ನು ವಿವರಿಸಿ, ಅವನನ್ನು ಮಣಿಸಬೇಕೆಂದು ಪ್ರಾರ್ಥಿಸಿದರು. ಅವರ ಅಪೇಕ್ಷೆಯಂತೆ ಅಗಸ್ಥರು ದಕ್ಷಿಣದಿಕ್ಕಿಗೆ ಹೊರಟರು. ವಿಂಧ್ಯನ ಬಳಿಗೆ ಬಂದಾಗ ಅವನು ಗುರುಗಳಿಗೆ ನಮಸ್ಕರಿಸಿದನು. ವಿಂದನಿಗೆ ಆದೇಶ ಮಾಡಿದರು. ಗುರುವಿನ ಆಜ್ಞೆಯನ್ನು ಮನ್ನಿಸಿದ ವಿಂಧನು ತನ್ನ ಆಗ ಅಗಸ್ಯರು, ತಾವು ಹಿಂದಿರುಗಿ ಬರುವವರೆಗೂ ಬೆಳೆಯಬಾರದೆಂದು ದುಃಸಾಹಸವನ್ನು ನಿಲ್ಲಿಸಿದನು. ಸೂರ್ಯನು ದಕ್ಷಿಣದಿಕ್ಕಿಗೆ ಬರಲು ಸಾಧ್ಯವಾಯಿತು. ಎಂದಿನಂತೆ ಯಜ್ಞಯಾಗಾದಿಗಳು ಪ್ರಾರಂಭವಾದವು. ಅಂದಿನಿಂದ ದಕ್ಷಿಣದಿಕ್ಕು ‘ಆಗಸ್ವರ ದಿಕ್ಕು’ ಎಂದೇ ಪ್ರಸಿದ್ದವಾಯಿತು. ಈಗಲೂ ಉತ್ತರಭಾರತಕ್ಕೂ ದಕ್ಷಿಣಭಾರತಕ್ಕೂ ನಡುವೆ ಹನ್ನೆರಡು ಸಂವತ್ಸರಗಳ ಅಂತರವಿದೆ. ಹೀಗೆ ದಕ್ಷಿಣಕ್ಕೆ ಬಂದ ಆಗಸ್ಯರು ಮತ್ತೆ ಉತ್ತರಕ್ಕೆ ಹೋಗಲೇ ಇಲ್ಲ: ವಿಂಧ್ಯನಿಗೂ ಮತ್ತೆ ಬೆಳೆಯಲು ಅವಕಾಶವಾಗಲಿಲ್ಲ. ಹೀಗಾಗಿ ‘ಆಗಂ’ ಎಂದರೆ ಪರ್ವತವನ್ನು ‘ಸ್ವಾಯತಿ’ ಎಂದರೆ ‘ಸ್ಥಿರಗೊಳಿಸಿದವರು’ ಎಂಬುದೇ ಅವರ ಹೆಸರಿನ ಅರ್ಥವೂ ಆಗಿದೆ. ಅವರ ಪತ್ನಿಯಾದ ಲೋಪಾಮುದ್ರೆಯೇ ಜಗತ್ತಿನ ಉಪಕಾರಕ್ಕಾಗಿ ಅವರ ಕಮಂಡಲದಲ್ಲಿ ಸೇರಿ, ಅಲ್ಲಿಂದ ಹೊರಟು, ಕಾವೇರಿನದಿಯಾಗಿ ಪ್ರವಹಿಸಿದಳು. ದಕ್ಷಿಣದಲ್ಲಿ ಅವರು ತಮಿಳುಭಾಷೆಯ ಮೂಲಪುರುಷರಾಗಿ ಹಲವು ಕೃತಿಗಳನ್ನೂ ಅದರ ವ್ಯಾಕರಣವನ್ನೂ ರಚಿಸಿದರು. ತಮಿಳು ವಿದ್ವಾಂಸರ ಮೊದಲ ಸಭೆಗೆ ಅವರು ಅಧ್ಯಕ್ಷರಾಗಿದ್ದರೆಂದೂ ಹೇಳುತ್ತಾರೆ. ದಕ್ಷಿಣಕಾಶಿಯೆನಿಸಿದ ರಾಮನಾಥಪುರದಲ್ಲಿ ಅಗಸ್ತೇಶ್ವರ ಲಿಂಗವಿದೆ. ಆಕರ ಗ್ರಂಥ: ಪ್ರಾಚೀನ ಭಾರತದ ಮಹರ್ಷಿಗಳು ಪುಸ್ತಕ ಭಾಗ -1 ಲೇಖಕರು: ಡಾ. ಎಸ್. ಹೇಮಲತಾ ಮತ್ತುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Post navigation ಗುರು ಆಜ್ಞೆ ಶಿರಸಾವಹಿಸಿ ಪಾಲಿಸಿ ಆರುಣಿಯು ಉದ್ದಾಲಕ ಮಹರ್ಷಿಯಾದ ಕಥೆ